Just In
- 20 min ago
ಈ 5 ಪ್ರಮುಖ ಪ್ರಯೋಜನ ಮಣ್ಣಿನ ಪಾತ್ರೆಯಲ್ಲಿ ಅಡುಗೆ ಮಾಡಿದರೆ ಮಾತ್ರ ಸಿಗುವುದು
- 2 hrs ago
ವೈರಲ್: ಮುನಿಸಕೊಂಡ ತಮ್ಮನಿಗಾಗಿ 432ಮೀ ಉದ್ದ, 5ಕೆಜಿ ತೂಕದ ಪತ್ರ ಬರೆದ ಅಕ್ಕ, ಕೇರಳದ ನಡೆದ ಸುಂದರ ಘಟನೆ
- 4 hrs ago
ಜ್ಯೋತಿಷ್ಯ: ಜುಲೈ 2022 ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದಿದೆ..!
- 7 hrs ago
ಇಂಥಾ ಸಿಲ್ಲಿ ಕಾರಣಗಳಿಂದಲೇ ಮದುವೆಯಾಗಿ ವರ್ಷದಲ್ಲೇ ವಿವಾಹ ವಿಚ್ಛೇದನ ಆಗುವುದು
Don't Miss
- Sports
ಜೋ ರೂಟ್ಗೆ ಬೆಳ್ಳಿ ಬ್ಯಾಟ್ ಗಿಫ್ಟ್ ನೀಡಿದ ECB: ಕಾರಣ ಏನು ಗೊತ್ತಾ?
- News
ನಿಮ್ಮಿಂದಲೇ ಈ ದ್ವೇಷ, ಕೋಪ: ಬಿಜೆಪಿಯನ್ನು ಕುಟುಕಿದ ರಾಹುಲ್ ಗಾಂಧಿ
- Movies
ಸಹನಾ ಮನಸ್ಸನ್ನು ಅರ್ಥ ಮಾಡಿಕೊಳ್ಳುತ್ತಾರಾ ಪುಟ್ಟಕ್ಕ?
- Automobiles
ಬೆಂಗಳೂರಿನಲ್ಲಿ ಸ್ಫಾಟ್ ಟೆಸ್ಟ್ ನಡೆಸಿದ ಹೊಸ ಹೋಂಡಾ ಎಲೆಕ್ಟ್ರಿಕ್ ಸ್ಕೂಟರ್
- Technology
ವಿದ್ಯುತ್ ಬಿಲ್ ಪಾವತಿಸುವ ಮುನ್ನ ಎಚ್ಚರ? ವಂಚಕರಿದ್ದಾರೆ?
- Finance
ವಿ APP ಬಳಸಿ ನೆಚ್ಚಿನ ಹಾಡು ಕಾಲರ್ ಟ್ಯೂನ್ ಮಾಡ್ಕೊಳ್ಳೋದು ಹೇಗೆ?
- Education
Essay On Eid Al Adha 2022 : ಈದ್-ಅಲ್-ಅಧಾ ಹಬ್ಬದ ಕುರಿತು ಪ್ರಬಂಧ ಬರೆಯಲು ಮಾಹಿತಿ
- Travel
ಶಿವಗಂಗೆಯ ಸೌಂದರ್ಯತೆಯ ಒಂದು ಅನಾವರಣ - ಬೆಂಗಳೂರಿನಿಂದ ಶಿವಗಂಗೆಗೆ ಒಂದು ಪ್ರಯಾಣ
ನವಜಾತ ಶಿಶುವಿನ ಉದರ ಶೂಲೆಗೆ ಕೆಲವು ನೈಸರ್ಗಿಕ ಪರಿಹಾರಗಳು
ನವಜಾತ ಶಿಶುಗಳು ಅಳುವುದು ಸಾಮಾನ್ಯ ವಿಚಾರ. ಮಗು ಏನಾದರೂ ಸಮಸ್ಯೆಯಾದರೆ ಅಥವಾ ಹಸಿವಾದರೆ ಅದು ಅಳುತ್ತದೆ. ಅದಕ್ಕೆ ಅಳುವುದನ್ನು ಬಿಟ್ಟು ಬೇರೆ ಯಾವುದೇ ಭಾಷೆ ಬರುವುದಿಲ್ಲ. ಹೀಗಾಗಿ ತನ್ನೆಲ್ಲಾ ಬೇಕುಬೇಡಗಳನ್ನು ಅದು ಅಳುವಿನ ಮೂಲಕವೇ ಸೂಚಿಸುತ್ತದೆ. ಇದರಿಂದ ಮಗುವಿನ ತಾಯಿ ಕೂಡ ಮಗು ಅಳುವುದು ಯಾಕೆ ಎನ್ನುವುದನ್ನು ಸರಿಯಾಗಿ ತಿಳಿದುಕೊಂಡು ಅದಕ್ಕೆ ಬೇಕಾದಂತೆ ಕೆಲಸ ಮಾಡಬೇಕು. ಅದರಲ್ಲೂ ಸಣ್ಣ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವಂತಹ ಉದರಶೂಲೆ ಸಮಸ್ಯೆಯು ಮಗು ಅಳುತ್ತಿರುವುದಕ್ಕೆ ಪ್ರಮುಖ ಕಾರಣವಾಗಿರಬಹುದು. ಮಗು ದಿನದಲ್ಲಿ ಮೂರು ಗಂಟೆಗಿಂತಲೂ ಹೆಚ್ಚಿನ ಸಮಯ ಅಳುತ್ತಲಿದ್ದರೆ ಆಗ ಇದನ್ನು ಮಗುವಿನ ಉದರಶೂಲೆ ಎಂದು ಕರೆಯಲಾಗುತ್ತದೆ. ಉದರಶೂಲೆಯಿಂದಾಗಿ ಮಗು ಅಳುತ್ತಲಿದ್ದರೆ ಆಗ ನೀವು ಕೆಲವೊಂದು ಕ್ರಮಗಳನ್ನು ಅಳವಡಿಸಿಕೊಂಡು ಮಗು ಅಳುವುದನ್ನು ನಿಲ್ಲಿಸಬಹುದು.
ಶಾಮಕ ಬಳಸಿಕೊಳ್ಳಿ
ಇದು ಸಣ್ಣ ಮಗುವನ್ನು ಶಾಂತಗೊಳಿಸಲು ಇದು ತುಂಬಾ ನೆರವಾಗುವುದು. ಇದರಿಂದಾಗಿ ಮಗು ಶಾಂತವಾಗುವುದು. ಶಾಮಕವು ಮಗುವನ್ನು ಶಮನಗೊಳಿಸುವುದು ಮತ್ತು ತುಂಬಾ ಬಿಸಿಯಾಗಿ ಇಡುತ್ತದೆ. ಇದರಿಂದ ಮಗುವಿಗೆ ಯಾವುದೇ ಕೀಟಗಳು ಕಚ್ಚದಂತೆ ಸುರಕ್ಷೆ ಕೂಡ ಸಿಗುವುದು. ಉದರಶೂಲೆಯಿಂದ ಬಳಲುತ್ತಿರುವಂತಹ ಮಗುವಿಗೆ ಶಾಮಕವನ್ನು ಬಳಸಿಕೊಂಡು ಶಮನ ನೀಡಬಹುದು ಮತ್ತು ರಕ್ಷಣೆ ನೀಡಬಹುದು. ಇದರಿಂದಾಗಿ ನವಜಾತ ಮಗು ಅಳುವುದು ಕಡಿಮೆ ಆಗುವುದು.
ಮಗುವನ್ನು ಸರಿಯಾಗಿ ಹಿಡಿದುಕೊಳ್ಳಿ
ಮಗುವನ್ನು ಸರಿಯಾಗಿ ಹಿಡಿದುಕೊಳ್ಳುವುದು ಕೂಡ ಅತೀ ಅಗತ್ಯವಾಗಿರುವುದು. ನೀವು ಮಗುವನ್ನು ಹಿಡಿದುಕೊಳ್ಳುವ ಭಂಗಿಯು ಅಳುತ್ತಿರುವ ಮಗುವನ್ನು ಶಾಂತಗೊಳಿಸಲು ತುಂಬಾ ನೆರವಾಗುವುದು. ಹಲವಾರು ರೀತಿಯ ಅಧ್ಯಯನಗಳು ಹೇಳಿರುವ ಪ್ರಕಾರ ನವಜಾತ ಶಿಶುವನ್ನು ಸರಿಯಾಗಿ ಹಿಡಿದಿಕೊಂಡರೆ ಆಗ ಅದು ಸರಿಯಾಗಿ ನಿದ್ರೆ ಮಾಡುವುದು. ಮಗುವನ್ನು ಸರಿಯಾದ ಕ್ರಮದಲ್ಲಿ ಹಿಡಿದರೆ ಆಗ ಮಗು ಅಳುವುದು ತಪ್ಪುವುದು. ಮಗುವನ್ನು ಅದರ ಬೆನ್ನಿನಲ್ಲಿ ಹಿಡಿಯಬೇಡಿ. ಮಗು ಹಾಲು ಕುಡಿದ ತಕ್ಷಣವೇ ಅದನ್ನು ಎತ್ತಿ ಹಿಡಿಯಬೇಡಿ. ಇದರಿಂದ ಮಗುವಿನ ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರಬಹುದು. ಹಾಲುಣಿಸಿದ ಬಳಿಕ ಮಗುವಿಗೆ ತೇಗು ಬರುವಂತೆ ಮಾಡಬೇಕು. ಇದರಿಂದ ಮಗು ಅಳುವುದನ್ನು ನಿಲ್ಲಿಸುತ್ತದೆ.
Most Read: ಶಿಶುವಿನ ಉದರಶೂಲೆಯ ಸಮಸ್ಯೆ-ಎಚ್ಚರಿಕೆ ಹೆಜ್ಜೆ ಅತ್ಯಗತ್ಯ
ಆಲಿವ್ ತೈಲದ ಮಸಾಜ್
ಆಲಿವ್ ತೈಲವು ಎಲ್ಲಾ ರೀತಿಯ ಜನರಿಗೆ ತುಂಬಾ ನೆರವಾಗುವುದು. ಅದರಲ್ಲೂ ಮಗುವಿಗೆ ಇದರಿಂದ ಮಸಾಜ್ ಮಾಡಿದರೆ ಅದು ಅದ್ಭುತವಾಗಿ ಕೆಲಸ ಮಾಡುವುದು. ಇದರಿಂದಾಗಿ ಮಗುವಿನ ಮೂಳೆಗಳು ಸರಿಯಾದ ಕ್ರಮದಲ್ಲಿ ಇರುತ್ತದೆ ಮತ್ತು ಮಗುವಿಗೆ ಕೂಡ ದೊಡ್ಡ ಮಟ್ಟದಲ್ಲಿ ಆರಾಮ ಸಿಗುವುದು. ಎಣ್ಣೆ ಮಸಾಜ್ ನಿಂದಾಗಿ ಮಗು ತುಂಬಾ ಬಿಸಿ ಹಾಗೂ ಸುರಕ್ಷಿತವಾಗಿ ಇರುವುದು. ಮಗುವಿನ ಜೀರ್ಣಕ್ರಿಯೆ ಉತ್ತಮವಾಗುವುದು ಮತ್ತು ಗ್ಯಾಸ್ ನಿಲ್ಲುವುದಿಲ್ಲ.
*ಸ್ವಲ್ಪ ಬಿಸಿಯಾಗಿರು ಆಲಿವ್ ಎಣ್ಣೆ ತೆಎದುಕೊಳ್ಳಿ ಮತ್ತು ಇದಕ್ಕೆ ಕೆಲವು ಹನಿ ಲ್ಯಾವೆಂಡರ್ ತೈಲ ಹಾಕಿಕೊಳ್ಳಿ.
*ಮಗುವಿನ ಹೊಟ್ಟೆಗೆ ಈ ತೈಲದಿಂದ ಸರಿಯಾಗಿ ಮಸಾಜ್ ಮಾಡಿಕೊಳ್ಳಿ.
*ಇದೇ ಮಗುವಿನ ಕಿಬ್ಬೊಟ್ಟೆ, ಪಕ್ಕೆಲುಬು, ಕೈ ಮತ್ತು ಕಾಲುಗಳಿಗೆ ಮಸಾಜ್ ಮಾಡಿ.
*ದಿನದಲ್ಲಿ ಹಲವು ಸಲ ಹೀಗೆ ಮಾಡಿ ಮಗುವಿಗೆ ಆರಾಮ ನೀಡಬಹುದು.
*ತಾಯಂದಿರು ಮೆಂತ್ಯೆ ಕಾಳು ಮತ್ತು ಪುದೀನಾವನ್ನು ತಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಬೇಕು.
*ಮೆಂತೆ ಕಾಳುಗಳು ತುಂಬಾ ಅದ್ಭುತವಾಗಿ ಮಗುವಿನ ಉದರಶೂಲೆ ನಿವಾರಣೆ ಮಾಡುವುದು. ಇದು ಮಗು ಹಾಗೂ ಹಾಲುಣಿಸುವ ತಾಯಿಗೆ ತುಂಬಾ ಲಾಭಕಾರಿ ಆಗಿದೆ. ಇದು ಗ್ಯಾಸ್ ನಿವಾರಣೆ ಮಾಡುವುದು. ಅದ್ಭುತ ಲಾಭ ನೀಡಬೇಕಾದರೆ ಆಗ ಒಂದು ಚಮಚ ಮೆಂತ್ಯೆ ಕಾಳುಗಳನ್ನು ನೀರಿಗೆ ಹಾಕಿ 10-15 ನಿಮಿಷ ಕಾಲ ನೆನೆಸಿಡಿ. ಇದರ ನೀರನ್ನು ಸೋಸಿಕೊಂಡು ತೆಗೆಯಿರಿ ಮತ್ತು ಅದನ್ನು ಚಾ ರೀತಿ ದಿನಕ್ಕೆ 2-3 ಮೂರು ಸಲ ಕುಡಿಯಿರಿ. ಪುದೀನಾವು ಮತ್ತೊಂದು ರೀತಿಯಲ್ಲಿ ಮಗುವಿನ ಉದರಶೂಲೆ ನಿವಾರಣೆ ಮಾಡುವುದು. ಪುದೀನಾ ಮದುವಿಗೆ ಶಾಂತ ನೀಡುವುದು ಮತ್ತು ಇದರಲ್ಲಿ ಉರಿಯೂತ ನಿವಾರಣೆ ಮಾಡುವ ಗುಣ ಇದೆ ಮತ್ತು ಜೀರ್ಣಕ್ರಿಯೆ ಕೂಡ ಸರಾಗವಾಗಿಸುವುದು.