For Quick Alerts
ALLOW NOTIFICATIONS  
For Daily Alerts

ಶಿಶುಗಳಿಗೆ ಮೇಕೆ ಹಾಲು ತುಂಬಾ ಆರೋಗ್ಯಕಾರಿ

|

ಮೇಕೆ ಹಾಲು ಕುಡಿದರೆ ಮಕ್ಕಳು ತುಂಬಾ ಬುದ್ಧಿವಂತರಾಗುತ್ತಾರೆ ಎಂದು ಹಿರಿಯರು ಹೇಳುತ್ತಿದ್ದರು. ಎಮ್ಮೆ ಹಾಲು ಮಂದ ಬುದ್ಧಿಗೆ ಕಾರಣವಾದರೆ, ಆಡಿನ ಹಾಲು ಚುರುಕು ಬುದ್ಧಿ ನೀಡುವುದು ಎಂದು ಹೇಳಲಾಗುತ್ತದೆ. ಇತ್ತೀಚಿನ ಅಧ್ಯಯನ ವರದಿಯೊಂದು ಹೇಳಿರುವ ಪ್ರಕಾರ ಮೇಕೆ ಹಾಲು ಸಣ್ಣ ಮಕ್ಕಳಲ್ಲಿ ಹೊಟ್ಟೆಯ ಸೋಂಕನ್ನು ತಡೆಯುವುದು. ಶಿಶುವಿಗೆ ಮೇಕೆ ಹಾಲನ್ನು ಬಳಸುವ ಮತ್ತು ಅದರ ಲಾಭಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ.

ಮೇಕೆ ಹಾಲು ಮಕ್ಕಳಿಗೆ ಆರೋಗ್ಯಕಾರಿಯೇ?

ಪ್ರತಿಯೊಬ್ಬ ಪೋಷಕರು ವೈದ್ಯರಲ್ಲಿ ಹೇಳುವಂತಹ ಸಾಮಾನ್ಯ ಪ್ರಶ್ನೆಯು ಇದಾಗಿದೆ. ಕಲಬೆರಕೆಯ ವಿಶ್ವದಲ್ಲಿ ಮಗುವಿಗೆ ಯಾವುದು ಒಳ್ಳೆಯದು ಮತ್ತು ಯಾವುದು ಕೆಟ್ಟದು ಎಂದು ತಿಳಿಯುವುದು ತುಂಬಾ ಕಷ್ಟವಾಗಿರುವುದು. ಪೋಷಕರಾಗಿದ್ದುಕೊಂಡು ನೀವು ಮಗುವಿಗೆ ಅತ್ಯುತ್ತಮವಾಗಿರುವುದನ್ನು ನೀಡಲು ಬಯಸುತ್ತೀರಿ. ಇದು ತುಂಬಾ ದುಬಾರಿಯಾಗಿ ಇರಲಿ ಅಥವಾ ಅಗ್ಗವಾಗಿಯೇ ಸಿಗಲಿ, ಅದನ್ನು ನೀಡಲು ನೀವು ಬಯಸುವಿರಿ. ಪ್ರತಿಯೊಂದು ವಸ್ತುವು ತುಂಬಾ ಪರಿಶುದ್ಧ ಮತ್ತು ಸ್ವಚ್ಛವಾಗಿರುವ ದಿನಗಳು ಈಗಿಲ್ಲ. ಹಿಂದೆ ನೀರಿಗೆ ಫಿಲ್ಟರ್ ಬೇಕಿರಲಿಲ್ಲ ಮತ್ತು ಹಾಲು ಕೂಡ ಗಾಳಿಯಷ್ಟೇ ಶುದ್ಧವಾಗಿತ್ತು. ಆದರೆ ಇಂದಿನ ದಿನಗಳಲ್ಲಿ ಮನುಷ್ಯನಿಂದಲೇ ಆಗಿರುವಂತಹ ಕೆಲವೊಂದು ಮಾಲಿನ್ಯಗಳು ಮಾರುಕಟ್ಟೆಯಲ್ಲಿನ ಪ್ರತಿಯೊಂದನ್ನು ಧ್ವಂಸ ಮಾಡಿದೆ. ಇದೇ ಅಂಶ ಹಾಲಿಗೂ ಅನ್ವಯವಾಗುವುದು. ಇಂದು ಪ್ರತಿಯೊಂದು ಮನೆಯವರು ಒಂದು ಗಿಡ ನೆಡಲು ಬಯಸುವರು ಅಥವಾ ಮೇಕೆ ಹಾಲಿನ ಬದಲಿಗೆ ಹಸುವಿನ ಹಾಲನ್ನು ಬಳಸಲು ಇಚ್ಛಿಸುವರು.

Goat milk for babies

ಹೊಸ ಅಧ್ಯಯನಗಳ ಪ್ರಕಾರ ಮೇಕೆ ಹಾಲು ಮಕ್ಕಳಿಗೆ ತುಂಬಾ ಆರೋಗ್ಯಕಾರಿ ಆಗಿದೆ. ಮೇಕೆ ಹಾಲು ಮಕ್ಕಳಲ್ಲಿ ಕಂಡುಬರುವಂತಹ ಕೆಲವೊಂದು ಹೊಟ್ಟೆಯ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ ಎಂದು ಅಧ್ಯಯನಗಳು ದೃಢಪಡಿಸಿದೆ. ಸಂಶೋಧನೆಯ ಪ್ರಮುಖರಾಗಿದ್ದ ಹರ್ ಶರಣ್ ಗಿಲ್ ಅವರು ಹೇಳುವ ಪ್ರಕಾರ, ಫ್ಯೂಕೋಸೈಲೇಟೆಡ್ ಮಾನವ ಹಾಲಿನಲ್ಲಿ ಹೇರಳವಾಗಿರುವ ಆಲಿಗೋಸ್ಯಾಕರೈಡ್ ಗಳಾಗಿವೆ. ಈ ಫ್ಯೂಕೋಸೈಲೇಟೆಡ್ ಗಳು ಇಂದು ಕೆಲವೊಂದು ವಾಣಿಜ್ಯ ಮತ್ತು ನಿಯಂತ್ರಕಗಳ ಹಿತಾಸಕ್ತಿಗೆ ಬಲಿಯಾಗಿದೆ. ಅದಾಗ್ಯೂ, ಆಲಿಗೋಸ್ಯಾಕರೈಡ್ ಸ್ತನ ಹಾಲಿನ ಸಾಂಕ್ರಾಮಿಕ ವಿರೋಧಿ ಗುಣಳಲ್ಲಿ ತುಂಬಾ ಪ್ರಮುಖ ಪಾತ್ರ ವಹಿಸುತ್ತದೆ.

ಸಂಶೋಧನೆಗಳು ಹೇಳಿರುವ ಪ್ರಕಾರ ಮೇಕೆ ಹಾಲಿನಿಂದ ಮಕ್ಕಳಿಗೆ ಸಿಗುವ ಲಾಭಗಳ ಬಗ್ಗೆ ನಾವು ನಿಮಗೆ ತಿಳಿಸಿಕೊಡಲಿದ್ದೇವೆ. ಆ ಲಾಭಗಳು ಇಲ್ಲಿವೆ.

Most Read: ಆಡಿನ ಹಾಲು ಆರೋಗ್ಯಕ್ಕೆ ಎಷ್ಟು ಉತ್ತಮ?

ಮೇಕೆ ಹಾಲು ಶಿಶುಗಳಿಗೆ ಜೀರ್ಣಗೊಳಿಸಲು ತುಂಬಾ ಸುಲಭವಾಗಿ ಇರಲಿದೆ. ಯಾಕೆಂದರೆ ಇದರಲ್ಲಿ ಅಗ್ಲುಟಿನಿನ್ ಎನ್ನುವುದು ಇರಲ್ಲ. ಅದಾಗ್ಯೂ, ಹಸುವಿನ ಹಾಲಿನಲ್ಲಿ ಕಂಡುಬರುವಂತಹ ಸಂಯುಕ್ತ ಅಂಶವು ಭಾರೀ ಪ್ರಮಾಣದಲ್ಲಿ ಕೊಬ್ಬಿನ ಉಂಡೆಗಳನ್ನು ಸೃಷ್ಟಿ ಮಾಡುತ್ತದೆ.

ಮೇಕೆ ಹಾಲಿನಲ್ಲಿ ತುಂಬಾ ತೆಳುವಾದ ಕೊಬ್ಬಿನ ಅಂಶಗಳು ಮತ್ತು ಮೆತ್ತಗಿನ ಪ್ರೋಟೀನ್ ಅಂಶವು ಪತ್ತೆಯಾಗುವುದು. ಈ ಅಂಶಗಳು ಶಿಶುಗಳಲ್ಲಿ ವಾಕರಿಕೆ ಸಮಸ್ಯೆಯನ್ನು ಕಡಿಮೆ ಮಾಡಲು ನೆರವಾಗುವುದು.

ಮೇಕೆ ಹಾಲು ಶಿಶುಗಳಿಗೆ ಹೆಚ್ಚಿನ ಪ್ರಮಾಣದ ಸೆಲೆನಿಯಂ, ನಿಯಾಸಿನ್ ಮತ್ತು ವಿಟಮಿನ್ ಎ ಯನ್ನು ಒದಗಿಸುವುದು

ಮೇಕೆ ಹಾಲಿನಿಂದ ತೆಗೆಯುವಂತಹ ಪ್ರೋಟೀನ್ ತುಂಬಾ ಕಡಿಮೆ ಅತೀಸೂಕ್ಷ್ಮತೆಯ ಅಂಶಗಳನ್ನು ಹೊಂದೆ ಮತ್ತು ಈ ಹಾಲಿನಲ್ಲಿ ಲ್ಯಾಕ್ಟೋಸ್ ಪ್ರಮಾಣವು ಹಸುವಿನ ಹಾಲಿಗಿಂತ ತುಂಬಾ ಕಡಿಮೆ ಇದೆ. ಮೇಕೆ ಹಾಲಿನಲ್ಲಿ ಸಂಯೋಜಿತ ಲಿನೋಲಿಕ್ ಆಮ್ಲವಿದ್ದು, ಇದು ಮೆದುಳಿನ ಆರೋಗ್ಯಕ್ಕೆ ತುಂಬಾ ಸಹಕಾರಿ ಆಗಿರಲಿದೆ.

ಮೇಕೆ ಹಾಲು ಒಳ್ಳೆಯ ರೀತಿಯಲ್ಲಿ ಕಬ್ಬಿನಾಂಶವನ್ನು ಹೀರಿಕೊಳ್ಳಲು ನೆರವಾಗುವುದು ಎಂದು ಅಧ್ಯಯನಗಳು ಹೇಳೀವೆ. ಇದು ಕಬ್ಬಿನಾಂಶ ಮತ್ತು ಇತರ ಕೆಲವೊಂದು ಖನಿಜಾಂಶಗಳಾಗಿರುವಂತಹ ಕ್ಯಾಲ್ಸಿಯಂ, ಪೋಸ್ಪರಸ್ ಮತ್ತು ಮೆಗ್ನಿಶಿಯಂನ ಮಧ್ಯಪ್ರವೇಶವನ್ನು ಕಡಿಮೆ ಮಾಡುವುದು.

Most Read:ಹಸು ಹಾಲಿಗಿಂತ ಆಡಿನ ಹಾಲು ಪರಿಪೂರ್ಣ ಏಕೆ?

ಆರೋಗ್ಯ ಸಲಹೆಗಳು

*ಶಿಶು ಕೇಂದ್ರದ ಪ್ರಕಾರ ಶಿಶುವಿಗೆ ಹುಟ್ಟಿದ ಬಳಿಕ ಮಗುವಿಗೆ ಮೇಕೆ ಹಾಲನ್ನು ನೀಡಲಾಗುತ್ತದೆ. ಆದರೆ ಶಿಶುವಿಗೆ ಆರು ತಿಂಗಳ ತನಕ ಮೇಕೆ ಹಾಲು ನೀಡಬಾರದು ಎನ್ನುವುದನ್ನು ಗಮನಿಸಬೇಕು.

*ಒಂದು ವರ್ಷದ ತನಕ ಮಕ್ಕಳಿಗೆ ದಿನಾಲೂ ಮೇಕೆ ಹಾಲು ನೀಡಬೇಡಿ. ನೀವು ಯಾವುದೇ ಬದಲಾವಣೆ ಮಾಡಲು ಬಯಸುವುದಿದ್ದರೂ ಮೊದಲಿಗೆ ಮಕ್ಕಳ ತಜ್ಞರ ಸಲಹೆ ಪಡೆದುಕೊಳ್ಳಿ.

*ಒಂದು ವರ್ಷಕ್ಕಿಂತ ಸಣ್ಣ ಮಗು ಸ್ತನಪಾನ ಮಾಡುತ್ತಲಿದ್ದರೆ ಆಗ ಮಗುವಿಗೆ ಮೇಕೆ ಹಾಲು ನೀಡುವ ಮೊದಲು ವೈದ್ಯರ ಸಲಹೆ ಅಗತ್ಯ.

English summary

Health benefits of Goat milk for babies

Is goat milk healthy for babies? This is the first question every parent asks a doctor or a physician. In this world of adulteration, it is really difficult for a parent to understand what is good or bad for their child. Being a parent you always want the best thing for your kids, whether it is expensive or not. Gone were the times, when everything was pure and clean. There was no need for water filter in the kitchen and milk was as pure as air. Nowadays, manmade pollution has destroyed everything in the market.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more