For Quick Alerts
ALLOW NOTIFICATIONS  
For Daily Alerts

ಮಗುವಿಗೆ ನೆಗಡಿ, ಕೆಮ್ಮು ಇದ್ದಾಗ ಲಸಿಕೆಯನ್ನು ಹಾಕಿಸಬಹುದೇ?

By Sushma Chathra
|

ಪ್ರತಿಯೊಬ್ಬ ತಂದೆತಾಯಿಯೂ ತಮ್ಮ ಮಗು ಆರೋಗ್ಯಾಗಿರಬೇಕು, ಜೀವನದಲ್ಲಿ ಬರುವ ಸಣ್ಣಪುಟ್ಟ ಕಾಯಿಲೆಗಳನ್ನು ಎದುರಿಸುವ ತಾಕತ್ತು ಹೊಂದಿರಬೇಕು ಎಂದು ಬಯಸುವುದು ಸರ್ವೇಸಾಮಾನ್ಯ. ಆದರೆ ಕಾಯಿಲೆ ಅನ್ನೋದು ಮನುಷ್ಯನಿಗೆ ಬರುವುದು ಸರ್ವೇಸಾಮಾನ್ಯ.ಆದರೆ ಪೋಷಕರ ಕರ್ತವ್ಯವೇನೆಂದರೆ ಸಣ್ಣಪುಟ್ಟ ಕಾಯಿಲೆಗಳಿಗೆ ಹೆದರದಂತೆ ಮತ್ತು ಜಗ್ಗದಂತೆ ಮಕ್ಕಳನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ದೃಢರಾಗಿರುವಂತೆ ಬೆಳೆಸುವುದು. ಉತ್ತಮ ಜೀವನ ಶೈಲಿ ರೂಢಿಸಿಕೊಳ್ಳುವುದು ಮತ್ತು ಪೋಷಕಾಂಶ ಭರಿತವಾದ ಸಮತೋಲನ ಆಹಾರ ಸೇವನೆಯಿಂದ ಕೂಡ ನಾವು ಮತ್ತು ನಮ್ಮ ಕುಟುಂಬ ಆರೋಗ್ಯವಾಗಿ ಇರಬಹುದು.ಆದರೆ ಮಕ್ಕಳ ವಿಚಾರದಲ್ಲಿ ಲಸಿಕೆಗಳನ್ನು ಸರಿಯಾದ ಸಮಯಕ್ಕೆ ಹಾಕಿಸುವುದು ಕೂಡ ಅಷ್ಟೇ ಪ್ರಮುಖವಾದ ವಿಷಯ.

ನಿಮ್ಮ ಮಗು ಹುಟ್ಟಿದ ಕೂಡಲೇ, ಮಕ್ಕಳ ತಜ್ಞರು ನಿಮ್ಮ ಮಗುವಿಗೆ ಯಾವಯಾವ ಸಮಯಕ್ಕೆ ಚುಚ್ಚುಮದ್ದನ್ನು ಕೊಡಿಸಬೇಕು ಅನ್ನುವ ಪಟ್ಟಿಯನ್ನು ನೀಡುತ್ತಾರೆ. ನಿಮ್ಮ ಮಗುವಿನ ಭವಿಷ್ಯ ಮತ್ತು ಆರೋಗ್ಯದ ಹಿತದೃಷ್ಟಿಯಿಂದಾಗಿ ನೀವು ಈ ಬಗ್ಗೆ ಜಾಗೃತೆ ವಹಿಸಿ ಎಷ್ಟೇ ಹಣವೇ ಆಗಿದ್ದರೂ ಸರಿಯಾದ ಸಮಯಕ್ಕೆ ಆಯಾ ಲಸಿಕೆಗಳನ್ನು ನೀಡಲೇಬೇಕು. ಬೇರೆಬೇರೆ ಕಾರಣಗಳಿಂದಾಗಿ ಅವರು ಹೇಳಿದ ದಿನಾಂಕಕ್ಕೆ ಚುಚ್ಚುಮದ್ದು ನೀಡಲು ಸಾಧ್ಯವಾಗದೇ ಇರಬಹುದು. ಅದಕ್ಕೆ ಕಾರಣ ಕೇವಲ ಪೋಷಕರು ಮಾತ್ರ ಆಗಿರಬೇಕೆಂದೇನೂ ಇಲ್ಲ. ಲಸಿಕೆಯ ಲಭ್ಯತೆ, ವೈದ್ಯರ ಲಭ್ಯತೆ ಹಾಗೂ ಮಗುವಿನ ಆರೋಗ್ಯ ಹೀಗೆ ಬೇರೆಬೇರೆ ಕಾರಣಗಳಿರಬಹುದು. ಒಂದು ವೇಳೆ, ನಿಮ್ಮ ಮಗುವಿಗೆ ಯಾವುದಾದರೂ ಕಾಯಿಲೆ ಇದ್ದಲ್ಲಿ ಅಂದರೆ ಸಾಮಾನ್ಯವಾಗಿ ಕಂಡುಬರುವ ನೆಗಡಿ, ಕೆಮ್ಮು ಇದ್ದಾಗ ಲಸಿಕೆ ಹಾಕಿಸಬೇಕೇ ಅಥವಾ ಬೇಡವೇ ಅನ್ನುವುದೊಂದು ದೊಡ್ಡ ಪ್ರಶ್ನೆ? ಇಂತಹ ಸಂದರ್ಬದಲ್ಲಿ ಪೋಷಕರಾಗಿರುವ ನೀವು ಏನು ಮಾಡಬೇಕು ಅನ್ನುವುದೊಂದು ಗೊಂದಲಮಯವಾಗಿರುವ ಪರಿಸ್ಥಿತಿ.

ಚುಚ್ಚುಮದ್ದಿನ ಸಮಯವಾಗಿದೆ ಆದರೆ ಹಾಕಿಸಲು ಮಗುವಿನ ಆರೋಗ್ಯ ಆಗಲೇ ಹದಗೆಟ್ಟಿದೆ, ಹೀಗಿರುವಾಗ ಆ ಪುಟ್ಟ ಕಂದಮ್ಮ ಚುಚ್ಚುಮದ್ದಿನ ನೋವನ್ನು ಹೇಗೆ ಸಹಿಸಿಕೊಳ್ಳುತ್ತೆ ಎಂದು ನಿಮಗೆ ಅನ್ನಿಸುತ್ತಿದ್ಯಾ.. ಹಾಗಿದ್ದರೆ ನಿಮ್ಮ ಗೊಂದಲದ ಎಲ್ಲಾ ಪ್ರಶ್ನೆಗಳಿಗೆ ಈ ಲೇಖನದಿಂದ ಉತ್ತರ ದೊರಕಲಿದೆ. ನಿಮ್ಮ ಪರಿಸ್ಥಿತಿಗೆ ಉತ್ತರ ಏನು, ಯಾರು ನಿಮಗೆ ಸಹಾಯ ಮಾಡಬಲ್ಲರು?

vaccination during cold and cough

ಮಗು ಅನಾರೋಗ್ಯದಿಂದ ಇದ್ದರೆ ಏನಾಗುತ್ತೆ?

ನೇರನುಡಿಯಲ್ಲಿ ಹೇಳಬೇಕೆಂದರೆ , ನಿಮ್ಮ ಮಗು ಅನಾರೋಗ್ಯದಿಂದ ಇದೆ ಎಂದರೆ ಅದಕ್ಕೆ ಕಾರಣ ಮಗುವಿನ ದೇಹಕ್ಕೆ ಸೇರಿಕೊಳ್ಳುವ ಸೂಕ್ಷ್ಮಜೀವಿಗಳು. ಇಂತಹ ಸಂದರ್ಬದಲ್ಲಿ, ರೋಗ ನಿರೋಧಕ ಶಕ್ತಿ ನೈಸರ್ಗಿಕವಾಗಿಯೇ ಮನುಷ್ಯನ ದೇಹದಲ್ಲಿ ವರ್ತಿಸಿ ಅಂತಹ ಬ್ಯಾಕ್ಟೀರಿಯಾಗಳನ್ನು ಹೊಡೆದೋಡಿಸಲು ಸಹಕರಿಸಬೇಕು. ಆದರೆ ಈ ಪ್ರಕ್ರಿಯೆಯು ಮನುಷ್ಯನಿಂದ ಮನುಷ್ಯನಿಗೆ ಬೇರೆಬೇರೆಯಾಗಿರುತ್ತೆ.

ದೇಹದಲ್ಲಿ ಆಂಟಿಬ್ಯಾಕ್ಟೀರಿಯಾ ಅಂಶವು ಅಧಿಕವಾಗಿದ್ದಲ್ಲಿ ಕಾಯಿಲೆಗಳು ಕಾಡುವುದು ಬಹಳ ಕಡಿಮೆ. ಒಂದು ವೇಳೆ ಒಂದೇ ಸೂಕ್ಷ್ಮಜೀವಿ ಪದೇಪದೇ ದಾಳಿ ಮಾಡುತ್ತಿದ್ದರೆ, ದೇಹದಲ್ಲಿ ಸೋಂಕು ತಗುಲುವ ಸಾಧ್ಯತೆ ಇರುತ್ತೆ. ಅದೇ ಕಾರಣದಿಂದ ರೋಗನಿರೋಧಕ ಶಕ್ತಿ ಅರ್ಥಾತ್ ಸೂಕ್ಷ್ಮಜೀವಿಗಳ ಜೊತೆ ಹೋರಾಟ ನಡೆಸುವ ತಾಕತ್ತು ಹೆಚ್ಚಿರಬೇಕು.

ಮಗುವಿಗೆ ಲಸಿಕೆ ಕೊಡಿಸುವುದರಿಂದ ಏನಾಗುತ್ತೆ?

ಮೇಲೆ ಹೇಳಿದ ಪ್ರಕ್ರಿಯೆಗೆ ಇದು ಸಹಕಾರಿ. ಮಗು ಕಾಯಿಲೆ ಬೀಳುವ ಬದಲಾಗಿ ಮಗು ತನ್ನ ದೇಹದಲ್ಲಿ ತನ್ನಷ್ಟಕ್ಕೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತೆ. ಈ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಂಟಿಬ್ಯಾಕ್ಟೀರಿಯಾಗಳು ಲಸಿಕೆಗಳಿಂದ ಲಭ್ಯವಾಗುತ್ತೆ.

ಅಂದರೆ ಮಗು ಕಾಯಿಲೆಗಳಿಗೆ ತುತ್ತಾಗುವ ಬದಲು ಕಾಯಿಲೆಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಲಸಿಕೆಗಳಿಂದ ಪಡೆಯುತ್ತೆ. ಈ ಲಸಿಕೆಗಳನ್ನು ನೀಡುವ ಸಮಯ ಆ ಲಸಿಕೆಗಳ ಗುಣಲಕ್ಷಣಗಳನ್ನು ಅವಲಂಬಿಸಿರುತ್ತೆ. ಕೆಲವೊಂದು ಮಕ್ಕಳಿಗೆ ನೀಡುವ ಲಸಿಕೆಗಳು ಅವರ ಜೀವಮಾನ ಪರ್ಯಂತ ನಿರ್ಧಿಷ್ಟ ಕಾಯಿಲೆಯೊಂದು ಬರದಂತೆ ತಡೆಯುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ಬೇರೆಬೇರೆ ವಿಧಧ ಲಸಿಕೆಗಳನ್ನು ಅರ್ಥ ಮಾಡಿಕೊಳ್ಳಬೇಕು

ಎಲ್ಲಾ ಲಸಿಕೆಗಳು ಒಂದೇ ಅಲ್ಲ, ಮತ್ತು ಕೆಲವು ಲಸಿಕೆಗಳು ಮಕ್ಕಳಿಗೆ ಬಹಳ ಮುಖ್ಯವಾದದ್ದು ಅನ್ನುವುದನ್ನು ಪ್ರತಿಯೊಬ್ಬ ಪೋಷಕರು ಮರೆಯಬಾರದು. ಕೆಲವು ಲಸಿಕೆಗಳು ಒಂದು ನಿರ್ಧಿಷ್ಟ ಕಾಯಿಲೆ ಅದು ಮನುಷ್ಯನ ಜೀವವನ್ನೇ ಇಲ್ಲವೇ ಜೀವನವನ್ನೇ ಹಾಳು ಮಾಡುವ ಭಯಾನಕ ಕಾಯಿಲೆಯನ್ನು ಜೀವನ ಪರ್ಯಂತ ಬರದಂತೆ ತಡೆಯುವ ನಿಟ್ಟಿನಲ್ಲಿ ನೀಡಲಾಗುತ್ತೆ.

ಇನ್ನೊಂದು ಪ್ರಮುಖ ವಿಚಾರವೆಂದರೆ ಲಸಿಕೆಯ ಡೋಸೇಜ್ ಅಂದರೆ ಪ್ರಮಾಣದ ಬಗೆಗಿನ ಮಾಹಿತಿ. ಕೆಲವು ಲಸಿಕೆಗಳು ಒಂದೇ ಕಾಯಿಲೆಗೆ ಬೇರೆಬೇರೆ ಸಮಯದಲ್ಲಿ ಬೇರೆಬೇರೆ ಡೋಸೇಜ್ ನೀಡುವ ಮೂಲಕ ತಡೆಯಾಗುತ್ತೆ. ಅದರ ಒಂದು ಡೋಸೇಜನ್ನು ಮಗುವಿಗೆ ಕೊಡಿಸಿ, ಇನ್ನೊಂದು ಲಸಿಕೆಯನ್ನು ಕೊಡಿಸದೇ ಇದ್ದಲ್ಲಿ ಆ ಲಸಿಕೆಯು ಯಾವುದೇ ಪರಿಣಾಮವನ್ನು ಮಾಡದೇ ಇರಬಹುದು.

ಉದಾಹರಣೆಗೆ ಹೆಪಟೈಟೀಸ್, ಥೈರಾಯಿಡ್,ಪೋಲಿಯೋ, ಹೀಗೆ ಕೆಲವು ಲಸಿಕೆಗಳನ್ನು ಆಗಾಗ ಮಕ್ಕಳಿಗೆ ನೀಡಬೇಕಾಗುತ್ತದೆ. ಪೋಲಿಯೋದಂತ ಲಸಿಕೆಗಳಲ್ಲಿ ಆಯಾ ಸಮಯಕ್ಕೆ ಸರಿಯಾಗಿ ಲಸಿಕೆಯನ್ನು ಹಾಕಿಸಿಬಿಡುವುದು ಸೂಕ್ತ. ಒಂದು ವೇಳೆ ನಿಮ್ಮ ಮಗುವಿಗೆ ಸಣ್ಣಪ್ರಮಾಣದಲ್ಲಿ ಕೆಮ್ಮು-ಶೀತವಿದ್ದರೂ ಪೋಲಿಯೋ ಲಸಿಕೆಯನ್ನು ಹಾಕಿಸುವುದರಲ್ಲಿ ಹಿಂಜರಿಕೆ ಬೇಡಿ.

ಯಾವಾಗ ಲಸಿಕೆಗಳನ್ನು ಹಾಕಿಸಬಾರದು

ನಿಮ್ಮ ಮಗು ಈಗಾಗಲೇ ತನ್ನ ರೋಗನಿರೋಧಕ ಶಕ್ತಿಯಿಂದ ಕಾಯಿಲೆಗಳ ವಿರುದ್ಧ ದೊಡ್ಡ ಪ್ರಮಾಣದಲ್ಲಿ ಹೋರಾಡುತ್ತಿರುವ ಸಮಯದಲ್ಲಿ ಮತ್ತೆ ಆ ಮಗುವಿಗೆ ತೊಂದರೆ ನೀಡುವಂತೆ ಲಸಿಕೆಗಳನ್ನು ಹಾಕಿಸುವುದು ಸೂಕ್ತವಲ್ಲ.

ಕೆಲವು ದಿನಗಳಿಂದ ನಿಮ್ಮ ಮಗುವಿಗೆ ವೈರಲ್ ಸೋಂಕು,ಕೆಮ್ಮು, ನೆಗಡಿ, ಜ್ವರ ಇದ್ದಲ್ಲಿ , ಮತ್ತು ಲಸಿಕೆ ನೀಡಬೇಕಾಗಿರುವ ದಿನವೂ ಕೂಡ ನಿಮ್ಮ ಮಗು ಕಾಯಿಲೆಯಿಂದ ಬಳಲುತ್ತಿದ್ದಲ್ಲಿ ಖಂಡಿತ ಆ ದಿನ ನಿಮ್ಮ ಮಗುವಿಗೆ ಲಸಿಕೆ ಕೊಡಿಸದಿರುವುದೇ ಸೂಕ್ತ.

ಯಾಕೆಂದರೆ ಈಗಾಗಲೇ ನಿಮ್ಮ ಮಗು ಕಾಯಿಲೆಯಲ್ಲಿದ್ದು, ರೋಗದ ವಿರುದ್ಧ ಸೆಣಸಾಡುತ್ತಿರುತ್ತೆ. ಮತ್ತೆ ದೇಹಕ್ಕೆ ಇನ್ನಷ್ಟು ರೋಗನಿರೋಧಕ ಚುಚ್ಚುಮದ್ದುಗಳನ್ನು ಕೊಡಿಸಿದರೆ ಆ ದೇಹ ಅದನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿರದೇ ಇರಬಹುದು. ಮಗು ಹುಷಾರಾಗುವವರೆಗೆ ಕಾದು ನಂತರ ಲಸಿಕೆಯನ್ನು ಕೊಡಿಸುವುದು ಸೂಕ್ತವಾದದ್ದು.

ಯಾವಾಗ ಲಸಿಕೆಗಳನ್ನು ಕೊಡಿಸಲು ಸೂಕ್ತ ಸಂದರ್ಬವಾಗಿರುತ್ತದೆ?

ಮಗು ಆರಾಮಾಗಿದ್ದಾಗ ಲಸಿಕೆಯನ್ನು ಹಾಕಿಸುವುದು ಸೂಕ್ತ ಅನ್ನುವುದು ಎಲ್ಲರಿಗೂ ತಿಳಿದಿದೆ ಅಷ್ಟೇ ಅಲ್ಲ, ಒಂದು ವೇಳೆ ಇವತ್ತು ಇಂಜಕ್ಷನ್ ಕೊಡಿಸಲು ನೀವು ಹೋಗಬೇಕು ಮಗು ಬೆಳಿಗ್ಗೆಯಿಂದ ಯಾಕೋ ಒಂದೆರಡು ಬಾರಿ ಕೆಮ್ಮಿದಂತೆ ಇಲ್ಲವೆ ನೆಗಡಿ ಕಾಣಿಸಿಕೊಂಡಿದ್ದರೆ ಅಂದು ಮಗುವಿಗೆ ಲಸಿಕೆ ಕೊಡಿಸುವುದರಲ್ಲಿ ಯಾವುದೇ ಅಭ್ಯಂತರವಿಲ್ಲ.

ಇತರೆ ಯಾವುದೇ ಸಂದರ್ಬವಿದ್ದರೂ ಒಮ್ಮೆ ವೈದ್ಯರ ಬಳಿ ಸಲಹೆ ಪಡೆದು ಮುಂದುವರಿಯುವುದು ಸೂಕ್ತ. ಒಂದು ವರ್ಷದ ಒಳಗಿನ ಮಕ್ಕಳಾಗಿದ್ದರೆ, ಸಣ್ಣಪುಟ್ಟ ಕಾಯಿಲೆಗಳಿಗೆ ಆಗಾಗ ತುತ್ತಾಗುತ್ತಾ ಇರುವುದು ಸರ್ವೇಸಾಮಾನ್ಯ.

ಇದು ಸಣ್ಣಮಟ್ಟದ ಶೀತ, ಕೆಮ್ಮು ಯಾವುದೇ ಆಗಿರಬಹುದು. ಜ್ವರದಂತ ಕಾಯಿಲೆಗಳು ಒಂದೆರಡು ದಿನ ಹೊರತುಪಡಿಸಿದರೆ ಹೆಚ್ಚು ದಿನ ಇರಲಾರದು. ಪೋಷಕರಾದ ನೀವು ಸ್ವಲ್ಪ ಜಾಗರೂಕತೆಯಿಂದ ಇಂತಹ ಮಕ್ಕಳನ್ನು ನೋಡಿಕೊಳ್ಳಬೇಕಾಗುತ್ತದೆ.

ಸರಿಯಾದ ವೈದ್ಯಕೀಯ ಸಲಹೆ

ಪ್ರತಿಯೊಬ್ಬ ಪೋಷಕರೂ ಅರ್ಥ ಮಾಡಿಕೊಳ್ಳಬೇಕಾದ ಒಂದು ಪ್ರಮುಖ ವಿಚಾರವೇನೆಂದರೆ ಪ್ರತಿಯೊಂದು ಮಗುವೂ ಕೂಡ ಒಂದಕ್ಕಿಂತ ಒಂದು ಭಿನ್ನವಾಗಿರುತ್ತದೆ. ನಿಮ್ಮ ಮಗುವಿನ ಆರೋಗ್ಯ,ನಡವಳಿಕೆಯ ಬಗ್ಗೆ ಜನರಲ್ ಆಗಿ ಒಂದು ಹೇಳಿಕೆ ಕೊಡುವುದು ಅಷ್ಟು ಸುಲಭದ ವಿಚಾರವಲ್ಲ.

ಪ್ರತಿ ಮಗುವೂ ತನಗೆ ಎದುರಾದ ಕಾಯಿಲೆಗೆ ತನ್ನದೇ ಆದ ಭಿನ್ನ ಶೈಲಿಯಲ್ಲಿ ವರ್ತಿಸುತ್ತದೆ. ಒಂದೇ ವೈದ್ಯಕೀಯ ಚಿಕಿತ್ಸಾ ಪದ್ದತಿ ಆಗಿದ್ದರೂ ಕೂಡ ಮಗುವಿನ ದೈಹಿಕ ಸ್ಥಿತಿಗತಿಯ ಆಧಾರದ ಮೇಲೆ ಮಗುವು ಪ್ರತಿಕ್ರಿಯೆಯನ್ನು ನೀಡುತ್ತದೆ ಮತ್ತು ವರ್ತಿಸುತ್ತದೆ. ಹಾಗಾಗಿ ಜನರಲ್ ಆಗಿ ಯಾವುದೇ ಪ್ರಶ್ನೆಗೂ ಮಕ್ಕಳ ವಿಚಾರದಲ್ಲಿ ಉತ್ತರಿಸಲು ಅಸಾಧ್ಯ.

ಹಾಗಾಗಿ ನಿಮ್ಮ ಮಗುವಿನ ಬಗ್ಗೆ ಯಾವುದೇ ಸಂದರ್ಬದಲ್ಲಿ ನಿಮಗೆ ಅನುಮಾನ ಕಾಡಿದ್ದಲಿ ಕೂಡಲೇ ಮಕ್ಕಳ ತಜ್ಞರನ್ನು ಭೇಟಿ ಮಾಡಿ ಸಲಹೆ ಪಡೆಯಿರಿ. ಅದರಲ್ಲೂ ಲಸಿಕೆಯ ವಿಚಾರದಲ್ಲಿ ನಿಮಗೆ ಯಾವುದೇ ಅನುಮಾನವಿದ್ದರೂ ಕೂಡಲೇ ತಜ್ಞರ ಸಲಹೆ ಪಡೆದು ಮಕ್ಕಳಿಗೆ ಕೊಡಿಸುವುದು ಬಹಳ ಸೂಕ್ತವಾದದ್ದು.

ಲಸಿಕೆ ಹಾಕಿಸಬೇಕಾಗಿರುವ ದಿನ ನಿಮಗೆ ಮಗುವಿಗೆ ಲಸಿಕೆ ಕೊಡಿಸುವುದು ಸೂಕ್ತವೇ ಅಥವಾ ಇಲ್ಲವೇ ಎಂದು ನಿಮಗೆ ಅನುಮಾನವಿದ್ದರೆ ಮೊದಲು ವೈದ್ಯರ ಬಳಿ ಪರೀಕ್ಷಿಸಿ ನಂತರ ಲಸಿಕೆಯ ಬಗ್ಗೆ ನಿರ್ಧಾರ ಕೈಗೊಳ್ಳಿ.

Read more about: health baby fever vaccination
English summary

Can Vaccination Be Given If Your Baby Has Cold Or Cough?

Every parent wants that his or her little one should be well immune to deal with the challenges of life. The most common challenge that affect almost everyone (from the cradle to the deathbed) is that of illness.
X
Desktop Bottom Promotion