ಅವಳಿ ಮಕ್ಕಳ 'ಆಯಸ್ಸಿನ ಗುಟ್ಟು', ಸಂಶೋಧನೆಯಿಂದ ರಟ್ಟು!

By: Arshad
Subscribe to Boldsky

ಇತ್ತೀಚಿನ ಸಂಶೋಧನೆಯೊಂದರ ಪ್ರಕಾರ ಅವಳಿ ಸಹೋದರ ಅಥವಾ ಅವಳಿ ಸಹೋದರಿ ಇರುವ ವ್ಯಕ್ತಿಗಳು ಒಂಟಿ ಮಕ್ಕಳಾಗಿ ದೊಡ್ಡವರಾದ ಮಕ್ಕಳಿಗಿಂತ ಹೆಚ್ಚು ಆಯಸ್ಸು ಹೊಂದಿರುತ್ತಾರೆ ಎಂದು ಕಂಡುಬಂದಿದೆ. ಅಲ್ಲದೇ ಹುಟ್ಟುವಾಗ ಮತ್ತು ಇಡಿಯ ಜೀವಮಾನದವರೆಗೂ ಸಾವಿಗೀಡಾಗುವ ಸಂಭವ ಇತರರಿಗಿಂತ ಕಡಿಮೆಯಾಗಿದೆ.

ಈ ಬಗ್ಗೆ ಸಂಶೋಧನೆ ನಡೆಸಿದ ತಜ್ಞರು ಅವಳಿಗಳು ಸಾಮಾನ್ಯವಾಗಿ ತಮ್ಮೆಲ್ಲಾ ವಿಷಯಗಳನ್ನು ಪರಸ್ಪರ ಹಂಚಿಕೊಳ್ಳುವ ಮೂಲಕ ಇತರರಿಗಿಂತ ಹೆಚ್ಚು ನಿರಾಳರಾಗಿರುತ್ತಾರೆ ಎಂದು ಕಂಡುಕೊಂಡಿದ್ದಾರೆ. ಬೊಜ್ಜುಳ್ಳ ಅವಳಿ ಮಕ್ಕಳಿಗೆ, ಮಧುಮೇಹದ ಆತಂಕ!

ವಾಷಿಂಗ್ಟನ್ ವಿಶ್ವವಿದ್ಯಾಲಯದ ಸಂಶೋಧಕ ಮತ್ತು ಈ ವಿಷಯದ ಮೇಲೆ ಬರೆದ ಪುಸ್ತಕದ ಪ್ರಮುಖ ಲೇಖಕರಾದ ಡೇವಿಡ್ ಶಾರೋರವರ ಪ್ರಕಾರ ತದ್ರೂಪಿ ಅವಳಿಗಳು ತದ್ರೂಪಿಯಲ್ಲದ ಅವಳಿಗಳಿಗಿಂತಲೂ, ಎಲ್ಲಾ ವಯಸ್ಸುಗಳಲ್ಲಿಯೂ ಇತರರಿಗಿಂತ ಹೆಚ್ಚು ಆಯಸ್ಸು ಹೊಂದಿರುತ್ತಾರೆ ಹಾಗೂ ತದ್ರೂಪಿಗಳಲ್ಲದ ಅವಳಿಗಳು ಇತರರಿಂಗ ಹೆಚ್ಚು ಆದರೆ ತದ್ರೂಪಿ ಅವಳಿಗಳಿಗಿಂತ ಕೊಂಚ ಕಡಿಮೆ ಆಯಸ್ಸುಹೊಂದಿರುತ್ತಾರೆ.

Live Longer Than Singletons
  

ಈ ವಿಷಯವನ್ನು ಅವಳಿಗಳ ಬಗ್ಗೆ ಬಹಳ ಹಿಂದಿನಿಂದ ಸಂಶೋಧನೆ ನಡೆಸುತ್ತಾ ಬಂದಿರುವ ಡೆನ್ಮಾರ್ಕ್ ನ ಡ್ಯಾನಿಶ್ ಟ್ವಿನ್ ರೆಜಿಸ್ಟ್ರಿ ಎಂಬ ಸಂಸ್ಥೆ ಬಹಿರಂಗಪಡಿಸಿದೆ.

1870 ಮತ್ತು 1900 ರ ನಡುವೆ ಡೆನ್ಮಾರ್ಕ್ ನಲ್ಲಿ ಹುಟ್ಟಿದ, ಹತ್ತು ವರ್ಷ ವಯಸ್ಸು ದಾಟಿದ 2,932 ತದ್ರೂಪಿ ಜೋಡಿ, ಮತ್ತು ಸಮಾನವಾದ ಲಿಂಗದ ಮಕ್ಕಳ ಆರೋಗ್ಯವನ್ನು ಗಮನಿಸಿ ಹಲವು ಅಂಕಿ ಅಂಶಗಳನ್ನು ಕಲೆಹಾಕಲಾಯಿತು.

ಬಳಿಕ ಈ ಮಕ್ಕಳು ದೊಡ್ಡವರಾಗಿ ತಮ್ಮ ಜೀವನವನ್ನು ಸವೆಸಿ ಇಹಲೋಕ ತ್ಯಜಿಸುವವರೆಗೂ ಅವರ ಆರೋಗ್ಯ ಮತ್ತು ಭಾವನಾತ್ಮಕ ಜೀವನದ ಬಗ್ಗೆ ಹಲವು ಮಾಹಿತಿಗಳನ್ನು ಸಂಗ್ರಹಿಸುತ್ತಾ ಬರಲಾಯಿತು. ಈ ಅಂಕಿ ಅಂಶಗಳನ್ನು ಡೆನ್ಮಾರ್ಕ್‌ನ ಸಾಮಾನ್ಯ ಜನತೆಯ ಅಂಕಿ ಅಂಶಗಳ ಜೊತೆಗೆ ಹೋಲಿಸಿ ನೋಡಿದಾಗ ಕೆಲವು ರೋಚಕ ಸಂಗತಿಗಳು ಕಂಡುಬಂದವು.

1940ರ ವೇಳೆಗೆ ಕಂಡುಬಂದ ಈ ಮಾಹಿತಿಗಳ ಪ್ರಕಾರ ಪುರುಷರಿಗೆ ಅವಳಿ ಸಹೋದರನೊಬ್ಬ ಇದ್ದರೆ ಅವರ ಜೀವನ ಹೆಚ್ಚು ಸಂತೋಷಕರ ಹಾಗೂ ಆರೋಗ್ಯ ಇತರಿಗಿಂತ ಹೆಚ್ಚು ಉತ್ತಮವಾಗಿರುವುದು ಕಂಡುಬಂದಿತ್ತು.

Live Longer Than Singletons
  

ಇದರ ವ್ಯತ್ಯಾಸ ಆರು ಶೇಖಡಾದಷ್ಟು ಸ್ಪಷ್ಟವಾಗಿತ್ತು. ಅಂದರೆ ನೂರು ಸಾಮಾನ್ಯ ಜನರಲ್ಲಿ 84 ಜನರು ತಮ್ಮ ನಲವತ್ತೈದನೇ ವಯಸ್ಸಿನಲ್ಲಿ ಜೀವಂತವಾಗಿದ್ದರೆ ಅವಳಿಗಳಲ್ಲಿ ಅದು 90 ಇತ್ತು.

ಇದೇ ಪ್ರಕಾರ ಮಹಿಳೆಯರಲ್ಲಿ ಹೆಚ್ಚಿನ ಸಾವುಗಳು ಅವರ ಅರವತ್ತನೇ ವಯಸ್ಸಿನ ಪ್ರಾರಂಭಿಕ ವರ್ಷಗಳಲ್ಲಿ ಕಂಡುಬಂದರೆ ಇತರರು ಐವತ್ತೊಂದನೆಯ ವಯಸ್ಸಿನಲ್ಲಿ ಹೆಚ್ಚು ಸಾವಿಗೀಡಾಗುತ್ತಿದ್ದರು. ಅಂದರೆ ಶೇಖಡಾ ಹತ್ತರಷ್ಟು ಹೆಚ್ಚು ವ್ಯತ್ಯಾಸ ದಾಖಲಾಗಿತ್ತು. ಅವಳಿ ಮಕ್ಕಳ ಕುರಿತ ರಹಸ್ಯಗಳು ನಿಮಗೆ ತಿಳಿದಿದೆಯೇ?  

ಈ ವ್ಯತ್ಯಾಸಕ್ಕೆ ಮತ್ತು ಅವಳಿಗಳು ಹೊಂದಿರುವ ಉತ್ತಮ ಆರೋಗ್ಯಕ್ಕೆ ಅವರ ಪರಸ್ಪರ ಸಹಬಾಳ್ವೆ, ಮಾಹಿತಿ ಹಂಚಿಕೊಳ್ಳುವಿಕೆ ಮತ್ತು ಸಾಮಾಜಿಕ ಬಾಂಧವ್ಯವೇ ಕಾರಣವಾಗಿದೆ ಎಂದು ಲೇಖಕ ಶಾರೋರವರು ಅಭಿಪ್ರಾಯಪಡುತ್ತಾರೆ. ಅಂದರೆ ಉತ್ತಮ ಆಯಸ್ಸು ಪಡೆಯಲು ಸಾಮಾಜಿಕ ಒಡನಾಟ ಮತ್ತು ಸಹಯೋಗ ಅತ್ಯಂತ ಅಗತ್ಯವಾಗಿದೆ. ಇದಕ್ಕೆ ಅತ್ಯಂತ ಪ್ರಮುಖ ಕಾರಣರು ಎಂದರೆ ಸ್ನೇಹಿತರು ಮತ್ತು ಬಂಧುಗಳು.

ಸ್ನೇಹಿತರ ಒಡನಾಟದಲ್ಲಿ ನಡೆಸುವ ಚಟುವಟಿಕೆಗಳ ಮೂಲಕ ದೈಹಿಕ ಮತ್ತು ಮಾನಸಿಕ ಆರೋಗ್ಯ ಉತ್ತಮಗೊಳ್ಳುತ್ತಾ ಹೋಗುತ್ತದೆ. ಒಂದು ವೇಳೆ ಕೆಟ್ಟ ಅಭ್ಯಾಸಗಳನ್ನು ಬಿಡಲು ಇಚ್ಛಿಸಿದಾಗ ಸ್ನೇಹಿತರು ನೀಡುವ ಪ್ರೇರಣೆ ಮತ್ತು ಪ್ರೋತ್ಸಾಹ ನೆರವಿಗೆ ಬರುತ್ತವೆ.

ದುಃಖದ ಸಮಯದಲ್ಲಿ ಸ್ನೇಹಿತರು ಅಥವಾ ಬಂಧುಗಳು ನೀಡುವ ಆಸರೆ, ಅನಾರೋಗ್ಯದ ಸಮಯದಲ್ಲಿ ನೀಡುವ ಕಾಳಜಿ, ಯಾವುದೇ ಸಹಾಯಕ್ಕೆ ಕರೆದರೂ ಬರಲು ನಾನಿದ್ದೇನೆ ಎಂದು ಯಾರಾದರೊಬ್ಬರಿದ್ದರೆ ಇದು ಆರೋಗ್ಯ ವೃದ್ದಿಗೆ ಪೂರಕವಾಗಿದೆ ಎಂದು ಅವರು ತಿಳಿಸುತ್ತಾರೆ.

ಸಮಾಜದಲ್ಲಿ ನಿಮಗೆ ಆಪ್ತರು ಯಾರಾದರೂ ಇದ್ದು ನಿಮ್ಮ ಬಗ್ಗೆ ಕಾಳಜಿ ವಹಿಸುವಂತಹವರಾಗಿದ್ದರೆ ಇದು ಒಂದು ನಿಜವಾದ ಐಶ್ವರ್ಯವಾಗಿದ್ದು ಇದರಿಂದ ಭಾವನಾತ್ಮಕವಾಗಿ ಉತ್ತಮ ಆರೋಗ್ಯ ಪಡೆಯಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸುತ್ತಾರೆ.

ಸಾಮಾನ್ಯವಾಗಿ ಅವಳಿ ಮಕ್ಕಳು ಅತಿಹೆಚ್ಚು ಆಪ್ತರಾಗಿರುವ ಕಾರಣ ಇವರ ಆರೋಗ್ಯವೂ ಇತರರಿಗಿಂತ ಸ್ವಾಭಾವಿಕವಾಗಿಯೇ ಹೆಚ್ಚಾಗಿದೆ ಎಂದು ಡೆನ್ಮಾರ್ಕ್‌ನ ಪ್ರಮುಖ ಪತ್ರಿಕೆ PLOS ONE ನಲ್ಲಿ ಪ್ರಕಟಿಸಿದ ಲೇಖನದಲ್ಲಿ ವಿವರಿಸಲಾಗಿದೆ.

English summary

Twins Live Longer Than Singletons

Having a twin brother or sister increases your chances of living a life longer than singletons, new research has found. Twins have lower mortality rates for both sexes throughout their lifetimes, the findings showed. The researchers believe their results reflect the benefits of close social connections that twins generally share.
Story first published: Tuesday, August 23, 2016, 8:09 [IST]
Please Wait while comments are loading...
Subscribe Newsletter