For Quick Alerts
ALLOW NOTIFICATIONS  
For Daily Alerts

ಕಂದಮ್ಮನ ನಿದ್ದೆಯ ಅವಧಿ ಹೇಗಿರಬೇಕು? ಇತ್ತ ಗಮನಿಸಿ...

By Jayasubramanya
|

ನವಮಾಸಗಳನ್ನು ಕಳೆದು ಹೆಣ್ಣು ತನ್ನ ಮಗುವಿಗೆ ಜನನ ನೀಡಿದ ನಂತರ ತನ್ನ ಕಂದಮ್ಮನ ಸಂಪೂರ್ಣ ಆರೋಗ್ಯ ಅಭಿವೃದ್ಧಿಯ ಕಡೆಗೆ ಗಮನಹರಿಸಬೇಕಾಗುತ್ತದೆ. ಮಗುವನ್ನು ಹೆತ್ತ ನಂತರ ಕೂಡ ತಾಯಿಯು ತನ್ನ ಆಹಾರ ಮತ್ತು ಆರೋಗ್ಯದ ಮೇಲೆ ಗಮನ ಕೊಟ್ಟಲ್ಲಿ ಮಾತ್ರವೇ ಮಗುವೂ ಆರೋಗ್ಯವಾಗಿರುತ್ತದೆ. ತಾಯಿಯ ದೇಹವು ಹಸಿಯಾಗಿರುವುದರಿಂದ ಆದಷ್ಟು ದೇಹದಲ್ಲಿ ನಂಜು ಉಂಟಾಗದಂತೆ ಕಾಪಾಡಿಕೊಳ್ಳಬೇಕು ಇಲ್ಲದಿದ್ದರೆ ಇದು ತಾಯಿಯ ಎದೆಹಾಲಿನ ಮೂಲಕ ಮಗುವನ್ನು ತಲುಪುವ ಸಾಧ್ಯತೆ ಇರುತ್ತದೆ.

How many hours of sleep does your baby need?

ಮಗುವಿನ ಆರೋಗ್ಯದೊಂದಿಗೆ ಅದರ ನಿದ್ದೆ ಕೂಡ ಮುಖ್ಯವಾಗಿರುತ್ತದೆ. ಮಗು ಸಾಕಷ್ಟು ನಿದ್ದೆ ಮಾಡುವುದರ ಕಡೆಗೂ ಹೆತ್ತವರು ಗಮನ ನೀಡಬೇಕಾಗುತ್ತದೆ. ಮಗು ಎಷ್ಟು ನಿದ್ದೆ ಮಾಡಬೇಕು? ಬೆಳಗ್ಗಿನ ಸಮಯ ಮತ್ತು ಸಂಜೆಯ ಸಮಯ ಅದರ ನಿದ್ದೆಯ ಪ್ರಮಾಣ ಮೊದಲಾದ ಅಂಶಗಳ ಬಗ್ಗೆ ಹೆತ್ತವರು ಚಿಂತಿತರಾಗಿರುತ್ತಾರೆ.

ಮಗು ಸಾಕಷ್ಟು ನಿದ್ದೆ ಮಾಡುತ್ತಿಲ್ಲ ಎಂದಾದಲ್ಲಿ ಅದು ಎಚ್ಚರವಿರುವ ಸಂದರ್ಭದಲ್ಲಿ ಹೆಚ್ಚು ಕಿರಿಕಿರಿಯನ್ನುಂಟು ಮಾಡುತ್ತಿರುತ್ತದೆ. ಆದ್ದರಿಂದ ನಿಮ್ಮ ಮಗು ಎಷ್ಟು ಗಂಟೆಗಳ ಕಾಲ ನಿದ್ದೆ ಮಾಡಬೇಕು ಎಂಬುದನ್ನು, ಮುಂದೆ ಓದಿ...

*0 - 6 ತಿಂಗಳು
ಮಗುವಿನ ಜೀವನದಲ್ಲಿ ಹೆಚ್ಚು ಶಾಂತಿಯುತವಾಗಿರುವ ಸಮಯ ಇದಾಗಿದೆ. ದಿನದಲ್ಲಿ 16 ರಿಂದ 20 ಗಂಟೆಗಳ ನಡುವೆ ನಿಮ್ಮ ಮಗು ಮಲಗಿರಬೇಕು. ಮಕ್ಕಳಲ್ಲಿ ಇದು ಭಿನ್ನವಾಗಿರುತ್ತದೆ. ಇದು ಹೆಚ್ಚು ದೀರ್ಘವಾಗಿರುವುದಿಲ್ಲ, ಎರಡು ಅಥವಾ ಮೂರು ಗಂಟೆಗಳಿಗೊಮ್ಮೆ ನಿಮ್ಮ ಮಗು ಆಹಾರಕ್ಕಾಗಿ ಏಳಬಹುದು.

*6 ರಿಂದ 12 ತಿಂಗಳು
ನಿಮ್ಮ ಮಗು ದೊಡ್ಡದಾಗುತ್ತಿದ್ದಂತೆ, ತನ್ನ ಸುತ್ತಲಿನ ಜಗತ್ತನ್ನು ಅನ್ವೇಷಿಸಲು ಆರಂಭಿಸುತ್ತದೆ. ಈಗ ಮಗುವಿನ ನಿದ್ದೆಯ ಅವಧಿ 12 ರಿಂದ 15 ಅವಧಿಗಳಾಗಿರುತ್ತದೆ, ಮಧ್ಯಾಹ್ನದಲ್ಲಿ ಮೂರು ಗಂಟೆಗಳಷ್ಟು ನಿದ್ದೆ ಹೋಗುತ್ತದೆ.

*1 ರಿಂದ 3 ವರ್ಷ
ನಿಮ್ಮ ಮಗು ಈ ಸಮಯಗಳಲ್ಲಿ ಹೆಚ್ಚು ಚಟುವಟಿಕೆಯಿಂದ ಇರುತ್ತದೆ. ತೆವಳಿಕೊಂಡು ಹೋಗುವುದು, ಮಲಗುವುದು ಮೊದಲಾದ ಚಟುವಟಿಕೆಗಳನ್ನು ಮಗು ಮಾಡುತ್ತಿರುತ್ತದೆ. ಈ ಸಂದರ್ಭದಲ್ಲಿ ಮಗು 13 ಗಂಟೆಗಳಷ್ಟು ನಿದ್ದೆ ಮಾಡುತ್ತದೆ ಮಧ್ಯದಲ್ಲಿ ಮೂರು ಗಂಟೆಗಳಷ್ಟು ಕಾಲ ದೀರ್ಘ ಅವಧಿಯ ನಿದ್ದೆಯನ್ನು ಮಾಡುತ್ತದೆ.

*3 ರಿಂದ 5 ವರ್ಷ
ಈ ವಯಸ್ಸಿನಲ್ಲಿ ನಿಮ್ಮ ಮಗು ಆಟ ಪಾಠಗಳಲ್ಲಿ ಹೆಚ್ಚು ತನ್ಮಯನಾಗಿರುತ್ತದೆ. ಅಭಿವೃದ್ಧಿಯ ಸಾಮಾನ್ಯ ಹಂತ ಇದಾಗಿದೆ. ಈ ಸಮಯದಲ್ಲಿ ನಿದ್ದೆ ಕೂಡ ಹೆಚ್ಚು ಸಾಮಾನ್ಯವಾಗಿರುತ್ತದೆ. ಈ ವಯಸ್ಸಿನಲ್ಲಿ 12 ಗಂಟೆಗಳ ನಿದ್ದೆ ಆವಶ್ಯಕವಾಗಿರುತ್ತದೆ.

5 ರಿಂದ 10 ವರ್ಷಕ್ಕಿಂತ ಮೇಲ್ಪಟ್ಟು
ನಿಮ್ಮ ಮಗು ಬೆಳೆದಂತೆ, ಮಗುವಿನ ನಿದ್ದೆಯ ಅವಧಿ ಕಡಿಮೆಯಾಗುತ್ತದೆ. ಆದರೆ ಮಗುವಿನ ಶಾಲಾ ಸಮಯಗಳಲ್ಲಿ ನಿದ್ದೆ ಅಗತ್ಯವಾಗಿರುವುದರಿಂದ ಆಕೆ ಕನಿಷ್ಟ ಪಕ್ಷ 10 ರಿಂದ 12 ಗಂಟೆಗಳ ನಿದ್ದೆಯನ್ನು ಮಗು ಮಾಡಬೇಕಾಗುತ್ತದೆ.

English summary

How many hours of sleep does your baby need?

Obsessing over how much your baby sleeps is every parents’ inherent job. Is your baby sleeping enough? Should I calculate her nap time more meticulously? Should I be concerned that she doesn’t sleep through the night? A major part of a parent’s waking hours are spent wondering whether their baby is getting enough sleep. Here are experts tells you how many hours of sleep your child actually needs....
Story first published: Tuesday, June 28, 2016, 20:45 [IST]
X
Desktop Bottom Promotion