For Quick Alerts
ALLOW NOTIFICATIONS  
For Daily Alerts

ಕಂದನ ಕರೆಯೇ ಕೇಳದಿರಬಹುದು ಜೋಪಾನ!

|
ನಾವು ಆರೋಗ್ಯವಾಗಿರಬೇಕೆಂದರೆ ಆರೋಗ್ಯಕರ ಆಹಾರವನ್ನೇ ಸೇವಿಸಬೇಕು ಮತ್ತು ಉತ್ತಮ ಜೀವನಶೈಲಿ ರೂಢಿಸಿಕೊಳ್ಳಬೇಕು. ಅದರಲ್ಲೂ ಕಂದನನ್ನು ಹಡೆಯಲು ಬಯಸುವ ಮಹಿಳೆಯರಂತೂ ತಮ್ಮ ಆಹಾರದ ಬಗ್ಗೆ ತೀರಾ ನಿಗಾವಹಿಸಬೇಕು. ಇಲ್ಲದಿದ್ದರೆ ಮಕ್ಕಳಾಗದಿರುವಂತಹ ಸಮಸ್ಯೆಯನ್ನೂ ಎದುರಿಸಬೇಕಾದೀತು.
;

ಮಕ್ಕಳಾಗದ ಸಾಧ್ಯತೆಯನ್ನು ತಂದೊಡ್ಡುವ ಅನೇಕ ಕಾರಣಗಳು ಈಗಿನ ಜೀವನಶೈಲಿಯಲ್ಲಿ ಸೇರಿಕೊಂಡಿದೆ. ಆದರೆ ಅವುಗಳಿಂದ ದೂರವಿದ್ದು, ಕೆಲವು ಸಲಹೆಗಳನ್ನು ಪಾಲಿಸಿದರೆ ಮುಂದೆ ಈ ತೊಂದರೆಯಿಂದ ದೂರ ಉಳಿಯಬಹುದು.

* ಒತ್ತಡದಿಂದ ದೂರಾಗಿ: ಕೆಲಸದ ಒತ್ತಡವನ್ನು ಆದಷ್ಟು ತಗ್ಗಿಸಿಕೊಳ್ಳಿ, ಮನಸ್ಸು ಆರಾಮವಿದ್ದಷ್ಟು ಜೀವನ ಪ್ರೀತಿ ಹೆಚ್ಚುತ್ತದೆ. ಒತ್ತಡ ಹೆಚ್ಚಿದ್ದಷ್ಟೂ ಆರೋಗ್ಯದ ಮೇಲೆ ಪರಿಣಾಮ ಬೀರಿ ಅನೇಕ ಕಾಯಿಲೆಗಳನ್ನು ತಂದೊಡ್ಡುತ್ತದೆ. ಇದು ಗರ್ಭಧಾರಣೆಯ ಮೇಲೂ ಪರಿಣಾಮ ಬೀರಬಹುದು.

;

* ಸಧೃಡ ದೇಹಕ್ಕೆ ಪ್ರಯತ್ನಿಸಿ: ತುಂಬಾ ದಪ್ಪಗಾದರೆ ಮಕ್ಕಳಾಗುವ ಅವಕಾಶವನ್ನು ಕಡಿಮೆಗೊಳಿಸುತ್ತದೆ ಎಂಬುದು ವೈದ್ಯರ ಸಲಹೆ. ಆದ್ದರಿಂದ ಆದಷ್ಟು ಸೂಕ್ತ ಆಹಾರ ಪದ್ದತಿ ಅನುಸರಿಸಬೇಕು. ನಿಮ್ಮ ಎತ್ತರಕ್ಕೆ ತಕ್ಕಂತೆ ನಿಮ್ಮ ತೂಕ ಇದ್ದಲ್ಲಿ ನೀವು ಕಂದನನ್ನು ಹಡೆಯಲು ಸೂಕ್ತ. ದಪ್ಪಗಿದ್ದ ಮಾತ್ರಕ್ಕೆ ಚಿಂತಿಸುವ ಅವಶ್ಯಕತೆಯೂ ಇಲ್ಲ. ಆದರೆ ಪ್ರಯತ್ನ ಪಡುವುದನ್ನು ಮಾತ್ರ ಮರೆಯಬಾರದು.

;

* ಕಷ್ಟಕರ ವ್ಯಾಯಾಮ ಬೇಡ: ಅತಿಯಾದರೆ ಯಾವುದೂ ತೊಂದರೆಯೇ ಎಂಬಂತೆ ಅತಿಯಾಗಿ ವ್ಯಾಯಾಮ ಮಾಡದೆ ತಮಗೆ ಎಷ್ಟು ಸಾಧ್ಯವೋ ಅಷ್ಟು ಮಾತ್ರ ಮಾಡಬೇಕು. ಶಕ್ತಿ ಮೀರಿದ ವ್ಯಾಯಾಮ ಹಾರ್ಮೋನುಗಳ ಮೇಲೆ ಪ್ರಭಾವ ಬೀರುತ್ತದೆ. ಆದ್ದರಿಂದ ಸುಲಭವೆನಿಸುವ ವ್ಯಾಯಾಮ ಸಾಕು.

;

* ಕಾಫಿ ಕಡಿಮೆಗೊಳಿಸಿ: ಕಾಫಿಯ ಚಟ ಅಂಟಿಸಿಕೊಂಡಿದ್ದರೆ ಆದಷ್ಟು ಸೇವನೆ ಕಡಿಮೆಗೊಳಿಸಿದರೆ ಉತ್ತಮ. ಕಾಫಿ ಚೇತೋಹಾರಿಯಾಗಲು ಸಹಾಯ ಮಾಡುತ್ತದೆ ಎಂಬ ಅಂಶ ಎಲ್ಲರಿಗೂ ಗೊತ್ತು. ಆದರೆ ಎರಡು ಕಪ್ ಗಿಂತ ಹೆಚ್ಚು ಕಾಫಿ ಸೇವನೆ ಇನ್ನಿತರ ಹೆರಿಗೆ ಸಂಬಂಧಿ ತೊಂದರೆಗಳನ್ನೂ ತಂದೊಡ್ಡಬಹುದು.

;
English summary

Fertility and Pregnancy | Ways to avoid infertility | ಗರ್ಭಾವಸ್ಥೆ ಮತ್ತು ಬಂಜೆತನ | ಬಂಜೆತನ ತಡೆಯಲು ಸುಲಭೋಪಾಯ

To stay healthy we have to eat healthy and importantly follow healthy ways. There are some people who face a lot of problems when it comes to conceiving, however there are a few ways where you can actually boost your fertility chances.
Story first published: Friday, August 5, 2011, 17:09 [IST]
X
Desktop Bottom Promotion