For Quick Alerts
ALLOW NOTIFICATIONS  
For Daily Alerts

ಇನ್ನು ಗರ್ಭಾವಸ್ಥೆಯಲ್ಲಿ ಕಾಡುವ ಆತಂಕಕ್ಕೆ ಗುಡ್ ಬೈ ಹೇಳಿ

By jaya subramanya
|

ಸ್ತ್ರೀಯ ಜೀವನದಲ್ಲಿ ಅಮ್ಮನಾಗುವ ಸಂದರ್ಭ ಹೆಚ್ಚು ಮಹತ್ತರ ಮತ್ತು ಕಾತರಮಯವಾದುದು. ತನ್ನ ರಕ್ತ ಮಾಂಸ ಹಂಚಿಕೊಂಡು ತನ್ನ ಉದರದಲ್ಲಿ ಬೆಳೆಯುವ ಕಂದಮ್ಮನ ಬಗೆಗೆ ಆಕೆಗೆ ಹಲವಾರು ಆಸೆ ಆಕಾಂಕ್ಷೆಗಳಿರುತ್ತವೆ. ಇದರ ಜೊತೆಗೆ ಆತಂಕ ಮತ್ತು ಕಳವಳ ಚಿಂತೆ ಕೂಡ ಬೆನ್ನು ಹತ್ತುತ್ತಿರುತ್ತದೆ. ತಾಯಿಯ ಈ ತಳಮಳ ಕೆಲವೊಮ್ಮೆ ಮಗುವಿಗೆ ತೊಂದರೆಯನ್ನುಂಟು ಮಾಡಬಹುದು ಅಂತೆಯೇ ಪ್ರಸವ ಸಮಯದಲ್ಲಿ ಆಕೆಗೆ ಸಂಕಷ್ಟವನ್ನು ತಂದೊಡ್ಡಬಹುದು.

ಗರ್ಭಾವಸ್ಥೆಯಲ್ಲಿ ಆತಂಕವು ಹೆಚ್ಚು ಸಾಮಾನ್ಯವಾಗಿದ್ದು, ತಾಯಿಯು ತನ್ನ ತಲೆಯಲ್ಲಿ ಹಲವಾರು ಯೋಚನೆಗಳನ್ನು ಮಾಡುತ್ತಿರುತ್ತಾಳೆ. ಅದೂ ಕೂಡ ಆಕೆಯದು ಪ್ರಥಮ ಪ್ರಸವ ಎಂದಾದಲ್ಲಿ ಈ ಆತಂಕ ಇನ್ನಷ್ಟು ಹೆಚ್ಚಾಗಿರುತ್ತದೆ. ಅದಾಗ್ಯೂ ಈ ಸಂದರ್ಭದಲ್ಲಿ ಆತಂಕವನ್ನು ಉದ್ದೀಪನಗೊಳಿಸುವುದು ಅಷ್ಟೊಂದು ಒಳ್ಳೆಯದಲ್ಲ, ಈ ಆತಂಕವನ್ನು ನಿವಾರಿಸಲು ಸರಿಯಾದ ಚಿಕಿತ್ಸೆಯನ್ನು ಗರ್ಭಿಣಿಯು ಪಡೆದುಕೊಳ್ಳಬೇಕು ಇಲ್ಲದಿದ್ದರೆ ಅಕಾಲಿಕ ಜನನ ಮತ್ತು ಗರ್ಭಪಾತ ಉಂಟಾಗುವ ಸಂಭವ ಇರುತ್ತದೆ.

ಹಾಗಿದ್ದರೆ ಗರ್ಭಧಾರಣೆಯ ಸಮಯದಲ್ಲಿ ಉಂಟಾಗುವ ಆತಂಕವನ್ನು ನಿವಾರಿಸಿಕೊಳ್ಳಲು ಇಂದಿನ ಲೇಖನದಲ್ಲಿ ನಾವು ಕೆಲವೊಂದು ಸಲಹೆಗಳನ್ನು ನೀಡುತ್ತಿದ್ದು ಇದು ಗರ್ಭಿಣಿಗೆ ಸಾಂತ್ವಾನವನ್ನು ನೀಡಿ ಆಕೆಗೆ ಧೈರ್ಯವನ್ನು ಒದಗಿಸುತ್ತದೆ. ಹಾಗಿದ್ದರೆ ಅದೇನು ಎಂಬುದನ್ನು ಈ ಕೆಳಗಿನ ಸ್ಲೈಡರ್‌ಗಳಲ್ಲಿ ನೋಡೋಣ...

ಸಲಹೆ: 1

ಸಲಹೆ: 1

ಗರ್ಭಾವಸ್ಥೆಯಲ್ಲಿ ನೀವು ಆತಂಕವನ್ನು ಅನುಭವಿಸುತ್ತಿದ್ದೀರಿ ಎಂದಾದಲ್ಲಿ, ನಿಮ್ಮೊಳಗೆ ಅದನ್ನು ಬಚ್ಚಿಟ್ಟುಕೊಳ್ಳಬೇಡಿ. ನಿಮ್ಮ ಸಂಗಾತಿ ಅಥವಾ ಕುಟುಂಬ ಸದಸ್ಯರಿಗೆ ಇದರ ಬಗ್ಗೆ ತಿಳಿಸಿ, ಇದರಿಂದ ಮಾನಸಿಕವಾಗಿ ಆತಂಕದ ನಿವಾರಣೆಯನ್ನು ಮಾಡಿಕೊಳ್ಳಬಹುದಾಗಿದೆ.

ಸಲಹೆ:2

ಸಲಹೆ:2

ನೀವೊಂದು ಡೈರಿಯನ್ನು ನಿಮ್ಮ ಬಳಿ ಇರಿಸಿಕೊಂಡು ಅದರಲ್ಲಿ ನಿಮ್ಮ ಆತಂಕದ ಕುರಿತು ಬರೆಯಬಹುದಾಗಿದೆ. ನಿಮ್ಮ ಮನಸ್ಸಿನ ತುಮುಲಗಳನ್ನು ಅಕ್ಷರ ರೂಪದಲ್ಲಿ ಹೊರಹಾಕುವುದರಿಂದ ಮನಸ್ಸಿಗೆ ಸಾಂತ್ವಾನ ದೊರಕಿ ನಿಮಗೆ ಸಂದರ್ಭವನ್ನು ಇನ್ನಷ್ಟು ಅರಿತುಕೊಳ್ಳಬಹುದಾಗಿದೆ ಎಂಬುದು ಸಂಶೋಧಕರ ಮಾತಾಗಿದೆ.

ಸಲಹೆ:3

ಸಲಹೆ:3

ನಿಯಮಿತ ವ್ಯಾಯಾಮ ಅಭ್ಯಾಸಗಳನ್ನು ರೂಢಿಸಿಕೊಂಡು ನಿಮ್ಮ ಮನಸ್ಸನ್ನು ಮತ್ತು ದೇಹವನ್ನು ಹಗುರವಾಗಿರಿಸಿ ಕೊಳ್ಳಬಹುದಾಗಿದೆ. ವೈದ್ಯರೊಂದಿಗೆ ಸಮಾಲೋಚನೆಯನ್ನು ಮಾಡಿಕೊಂಡು ವ್ಯಾಯಾಮವನ್ನು ಮಾಡಿ. ಹಾರ್ಮೋನುಗಳ ಅನಿಯಂತ್ರಣವನ್ನು ವ್ಯಾಯಾಮವು ನಿಯಂತ್ರಿಸಿ ನಿಮ್ಮ ಮನಸ್ಸನ್ನು ಸುಧಾರಿಸುವ ಎಂಡೋರ್‎ಫಿನ್ಸ್ ಬಿಡುಗಡೆಗೆ ಸಹಾಯಕವಾಗಿದೆ.

ಸಲಹೆ:4

ಸಲಹೆ:4

ಉಸಿರಾಟದ ತಂತ್ರಗಳನ್ನು ಅಭ್ಯಾಸ ಮಾಡುವುದರಿಂದ, ಜೊತೆಗೆ ಯೋಗ ಮತ್ತು ಪ್ರಾಣಾಯಾಮಗಳನ್ನು ಮಾಡುವುದು ನಿಮ್ಮ ಸ್ನಾಯುಗಳನ್ನು ಹಗುರಗೊಳಿಸಿ ನಿಮ್ಮ ನರವನ್ನು ಶಾಂತಗೊಳಿಸುತ್ತದೆ.

ಸಲಹೆ: 5

ಸಲಹೆ: 5

ನೀವು ಸಾಕಷ್ಟು ವಿಶ್ರಾಂತಿಯನ್ನು ತೆಗೆದುಕೊಳ್ಳುತ್ತಿದ್ದೀರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ, ವಿಶೇಷವಾಗಿ 2 ನೇ ತ್ರೈಮಾಸಿಕದ ಆರಂಭದಲ್ಲಿ, ನಿಮ್ಮ ಹೊಟ್ಟೆಯು ಗಾತ್ರದಲ್ಲಿ ಹಿರಿದಾಗುತ್ತಾ ಹೋಗುತ್ತದೆ ಮತ್ತು ನಿಮ್ಮ ದೇಹವು ಸಾಕಷ್ಟು ಶಕ್ತಿಯನ್ನು ಬಳಸಿಕೊಳ್ಳುತ್ತದೆ. ಇದರಿಂದ ನಿಮ್ಮ ದೇಹಕ್ಕೆ ಸಾಕಷ್ಟು ಶಕ್ತಿಯ ಅವಶ್ಯಕತೆ ಇದೆ. ಸುಸ್ತಿನಿಂದ ಕೂಡ ಆತಂಕವುಂಟಾಗುತ್ತದೆ.

ಸಲಹೆ: 6

ಸಲಹೆ: 6

ಗರ್ಭಾವಸ್ಥೆಯಲ್ಲಿ ಸುರಕ್ಷಿತ ಎಂದೆನಿಸುವ ಹವ್ಯಾಸಗಳನ್ನು ರೂಢಿಸಿಕೊಳ್ಳಿ ಉದಾಹರಣೆಗೆ ಚಿತ್ರಕಲೆ, ಸಂಗೀತ ಇತ್ಯಾದಿ. ನಿಮ್ಮನ್ನು ಕೊಂಚ ಚಟುವಟಿಕೆಯಿಂದ ಇರಿಸಿಕೊಳ್ಳುವುದು ನಿಮ್ಮ ಆತಂಕವನ್ನು ಕಡಿಮೆ ಮಾಡಿ ನಿಮ್ಮನ್ನು ನಿರಾಳಗೊಳಿಸುತ್ತದೆ.

ಸಲಹೆ: 7

ಸಲಹೆ: 7

ನಿಮ್ಮ ವೈದ್ಯರನ್ನು ಆಗಾಗ್ಗೆ ಭೇಟಿಯಾಗುತ್ತಿರಿ. ನಿಮ್ಮ ಆತಂಕ ಇನ್ನೂ ಪರಿಹಾರವಾಗಿಲ್ಲ ಎಂದಾದಲ್ಲಿ ಪರಿಣಿತರ ಸಲಹೆಯನ್ನು ಪಡೆದುಕೊಂಡು ಅಗತ್ಯ ಸೂಚನೆಗಳನ್ನು ಪಾಲಿಸಿಕೊಳ್ಳಿ. ಇದರಿಂದ ಒತ್ತಡ ಮತ್ತು ಆತಂಕದಿಂದ ನಿಮಗೆ ಹೊರಬರಬಹುದಾಗಿದೆ.

English summary

7 Tips To Control Anxiety During Pregnancy

A pregnant woman is already in a fragile physical state, so when that is coupled with all the mental stress and anxiety, it may lead to certain negative outcomes. Anxiety during pregnancy is quite common, as the to-be mother has a lot on her mind, especially if it is her first pregnancy.So, here are some tips on how to keep anxiety under control during pregnancy, have a look.
Story first published: Monday, June 6, 2016, 20:25 [IST]
X
Desktop Bottom Promotion