For Quick Alerts
ALLOW NOTIFICATIONS  
For Daily Alerts

Ravi Kumar Dahiya : ಭಾರತಕ್ಕೆ ಬೆಳ್ಳಿ ತಂದ ರವಿ ಕುಮಾರ್ ದಾಹಿಯಾ ಕುರಿತ ಆಸಕ್ತಿಕರ ಸಂಗತಿಗಳು

|

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಎರಡನೇ ಬೆಳ್ಳಿ ಪದಕ ಲಭಿಸಿದೆ. ಕುಸ್ತಿ ಸ್ಪರ್ಧೆಯಲ್ಲಿ ಅಮೋಘ ಪ್ರದರ್ಶನ ನೀಡಿದ ರವಿ ಕುಮಾರ್ ದಹಿಯಾ ಪುರುಷರ 57 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದಾರೆ.

ಇವರು ರಷ್ಯಾದ ಝವೂರ್ ಉಗೆವ್‌ ಎದುರು ಸೆಣಸಿ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದಾರೆ. ಸ್ವಲ್ಪವೇ ಅಂತರದಲ್ಲಿ ಚಿನ್ನದ ಪದಕ ಕೈ ತಪ್ಪಿದೆ. ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆಲ್ಲುವ ಮೂಲಕ ಭಾರತದ ಸ್ಟಾರ್‌ ಆಗಿ ಹೊರಹೊಮ್ಮಿದ್ದಾರೆ, ಕೋಟ್ಯಾಂತರ ಭಾರತೀಯರು ಇವರ ಗೆಲುವನ್ನು ಸಂಭ್ರಮಿಸಿದ್ದಾರೆ.

Ravi Kumar Dahiya

ಒಲಿಂಪಿಕ್ಸ್ ಕುಸ್ತಿ ವಿಭಾಗದಲ್ಲಿ ಭಾರತಕ್ಕೆ ಸತತ ನಾಲ್ಕನೇ ಭಾರಿ ಪದಕ ಗೆದ್ದಿದೆ
* 2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಸುಶೀಲ್‌ ಕುಮಾರ್‌ ಭಾರತಕ್ಕೆ ವಬೆಳ್ಳಿ ತಂದುಕೊಟ್ಟರು.
* 2012ರಲ್ಲಿ ಯೋಗೀಶ್ವರ್ ದತ್‌ ಕಂಚಿನ ಪದಕ ಗೆದ್ದರು.
* 2016ರ ರಿಯೋ ಒಲಿಂಪಿಕ್‌ನಲ್ಲಿ ಸಾಕ್ಷಿ ಮಲಿಕ್ ಕಂಚಿನ ಪದಕ ಗೆದ್ದರು.
* 2020ರಲ್ಲಿ ರವಿ ದಹಿಯಾ ಬೆಳ್ಳಿ ತಂದು ಕೊಟ್ಟಿದ್ದಾರೆ.

ಭಾರತಕ್ಕೆ ಕುಸ್ತಿ ವಿಭಾಗದಲ್ಲಿ ಮೊಟ್ಟ ಮೊದಲಿಗೆ 1952ರಲ್ಲಿ ಪದಕ ಗೆದ್ದು ಕೊಟ್ಟದ್ದು ಕೆ.ಡಿ. ಜಾಧವ್‌. ಯಾವ ಕ್ರೀಡಾಧಿಕಾರಿಗಳ ಸಹಾಯವು ಇಲ್ಲದೆ ಸಾಧನೆ ಮಾಡಿದ್ದರು.

ಪದಕ ಗೆಲ್ಲುವ ಮೊದಲೇ ಭಾರತೀಯರ ಮನ ಗೆದ್ದಿದ್ದ ರವಿ ದಹಿಯಾ
ಸೆಮಿಫೈನಲ್‌ನಲ್ಲಿ ರೋಚಕ ಸೆಣಸಾಟದಲ್ಲಿ ಅವರ ಎದುರಾಳಿ ಕಝಾಕಿಸ್ತಾನ್‌ನ ನುರಿಸ್ಲಾಮ್‌ ಸನಯೆವ್‌ ಹೇಗಾದರೂ ಸರಿ ಫೈನಲ್‌ ಗೆಲ್ಲಬೇಕೆಂಬ ಹಠದಲ್ಲಿ ರವಿ ಕುಮಾರ್‌ ಅವರ ಬಲ ತೋಳಿಗೆ ಕಚ್ಚಿದ್ದರು. ಈ ದೃಶ್ಯ ವೈರಲ್ ಆಗಿತ್ತು. ರವಿ ಕುಮಾರ್ ಅಷ್ಟೊಂದು ನೋವು ಅನುಭವಿಸಿದರೂ ತಮ್ಮ ಗುರಿಯಲ್ಲಿ ಸ್ವಲ್ಪವೂ ವಿಚಲಿತರಾಗದೆ ಫೈನಲ್‌ ಟಿಕೆಟ್‌ ತಮ್ಮದಾಗಿಸಿದ್ದರು. ಈ ಮೂಲಕ ಭಾರತೀಯರ ಮನದಲ್ಲಿ ಕ್ರೀಡಾಪಟುವೆಂದರೆ ಹೀಗಿರಬೇಕು ಎಂಬ ಗೌರವ ಮೂಡಿದ್ದರು. ಇದೀಗ ಬೆಳ್ಳಿ ಗೆದ್ದು ತರುವ ಮೂಲಕ ಅವರ ಮೇಲಿನ ಪ್ರೀತಿ, ಅಭಿಮಾನ ದುಪ್ಪಟ್ಟಾಗಿದೆ.

ರವಿ ಕುಮಾರ್‌ ದಾಹಿಯಾ ಅವರ ಕಿರು ಪರಿಚಯ
ಪೂರ್ಣ ಹೆಸರು: ರವಿ ಕುಮಾರ್ ದಹಿಯಾ
ಕ್ರೀಡೆ: ಕುಸ್ತಿ
ಪ್ರಾಯ: 23
ಜನನ: 1997ರಲ್ಲಿ ಹರಿಯಾಣದ ಸೋನಿಪತ್‌ ಜಿಲ್ಲೆಯ ನಹ್ರಿ ಗ್ರಾಮದಲ್ಲಿ ಜನಿಸಿದರು.
ಸಾಧನೆ:
*2018ರ ಅಂಡರ್ 23 ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ
* 2019ರ ವಿಶ್ವ ಚಾಂಪಿಯನ್‌ಶಿಪ್‌ನ 57 ಕೆಜಿ ವಿಭಾಗದಲ್ಲಿ ಕಂಚು
* 2020ರ ಏಷ್ಯಾನ್‌ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ
* 2021ರ ಏಷ್ಯಾನ್‌ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ
* 2020ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ.

English summary

Who is Ravi Kumar Dahiya? Inspiring Story of Wrestler Won Silver Medal At Tokyo Olympics in Kannada

Who is Ravi Kumar Dahiya? Inspiring Story of Wrestler Won Silver Medal At Tokyo Olympics in Kannada, read on..
X
Desktop Bottom Promotion