For Quick Alerts
ALLOW NOTIFICATIONS  
For Daily Alerts

Mirabai Chanu : ಒಲಿಂಪಿಕ್ಸ್‌ನಲ್ಲಿ ಮೊದಲ ಪದಕ ಗೆದ್ದ ಮೀರಾಬಾಯಿ ಚಾನು ಕುರಿತ ಆಸಕ್ತಿಕರ ಸಂಗತಿಗಳು

|

ಭಾರತೀಯರು ಹರ್ಷೋದ್ಗಾರದಿಂದ ಕೂಗುತ್ತಿರುವ ಹೆಸರು ಮೀರಾಬಾಯಿ ಚಾನು. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ ತಂದ ಸಾಧಕಿ.

ವೇಯ್ಟ್‌ ಲಿಫ್ಟಿಂಗ್‌ 49 ಕೆಜಿ ವಿಭಾಗದಲ್ಲಿ ಬೆಳ್ಳಿ ಗೆಲ್ಲುವ ಮೂಲಕ ಭಾರತಕ್ಕೆ ಮೊದಲ ಪದಕ ತಂದುಕೊಟ್ಟಿದ್ದಾರೆ. ಇದೀಗ ಸಾಮಾಜಿಕ ತಾಣದಲ್ಲಿ ಭಾರತೀಯರು ಮೀರಾಭಾಯಿ ಅಭಿನಂದನೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.

ಯಾರು ಮೀರಾಬಾಯಿ ಚಾನು, ಬಿಲ್ಲುಗಾರಿಕೆಯಲ್ಲಿ ಆಸಕ್ತಿ ಹೊಂದಿದ್ದ ಮೀರಾಬಾಯಿ ವೇಯ್ಟ್‌ಲಿಫ್ಟಿಂಗ್‌ ಆಯ್ಕೆ ಮಾಡಿರುವ ಕಾರಣವಾದರೂ ಎಂಬೆಲ್ಲಾ ಆಸಕ್ತಿಕರ ಮಾಹಿತಿಗಳು ಇಲ್ಲಿವೆ ನೋಡಿ:

ಭಾರ ಎತ್ತುವ ಸ್ಪರ್ಧೆಯಲ್ಲಿ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಪದಕ ತಂದ 2ನೇ ಮಹಿಳಾ ಕ್ರೀಡಾಪಟು

ಭಾರ ಎತ್ತುವ ಸ್ಪರ್ಧೆಯಲ್ಲಿ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಪದಕ ತಂದ 2ನೇ ಮಹಿಳಾ ಕ್ರೀಡಾಪಟು

26 ವರ್ಷದ ಮಣಿಪುರದ ಮೀರಾಬಾಯಿ ಚಾನು 2016ರಲ್ಲಿ ನಡೆದ ರಿಯೋ ಒಲಿಂಪಿಕ್ಸ್‌ನಲ್ಲಿ ಸೋತಾಗ ತುಂಬಾ ನೋವು ಅನುಭವಿಸಿದ್ದರು. ಅವರಿಗೆ ಆ ನೋವು ತುಂಬಾ ಕಾಡಿತ್ತು. ಇದೀಗ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಕರ್ಣ ಮಲೇಶ್ವರಿ ಬಳಿಕ ಭಾರತಕ್ಕೆ ಭಾರ ಎತ್ತುವ ವಿಭಾಗದಲ್ಲಿ ಪದಕ ತಂದ ಎರಡನೇ ಮಹಿಳಾ ಕ್ರೀಡಾಪಟು ಎಂಬ ಹೆಗ್ಗಳಿಕೆ ಇವರದ್ದು.

ಮೈ ಕೆಸರಾಗದ ಆಟ ಆಡಬೇಕೆಂದು ಬಯಸಿ ಬಿಲ್ಲುಗಾರಿಕೆಯಲ್ಲಿ ಆಸಕ್ತಿ ತೋರಿದ್ದ ಮೀರಾಬಾರಿ

ಮೈ ಕೆಸರಾಗದ ಆಟ ಆಡಬೇಕೆಂದು ಬಯಸಿ ಬಿಲ್ಲುಗಾರಿಕೆಯಲ್ಲಿ ಆಸಕ್ತಿ ತೋರಿದ್ದ ಮೀರಾಬಾರಿ

ಅವರೇ ಹೇಳುವಂತೆ ' ನನ್ನ ಸಹೋದರರು. ಕಸಿನ್ಸ್ ಫುಟ್ಬಾಲ್ ಆಟ ಆಡಿ ಕೆಸರು ಮೆತ್ತಿದ ಬಟ್ಟೆಯಲ್ಲಿ ಹಿಂತಿರುಗುತ್ತಿದ್ದರು. ಅವರನ್ನು ನೋಡುವಾಗ ಮೈ ಕೆಸರಾಗದ, ಸ್ಟೈಲಿಷ್‌ ಆಗಿರುವ ಆಟ ಆಡಬೇಕೆಂದು ಬಯಸಿದ್ದೆ, ಹಾಗಾಗಿ ಬಿಲ್ಲುಗಾರಿಕೆ ಮಾಡಬೇಕೆಂದಿದ್ದೆ, ಏಕೆಂದರೆ ಅದು ಮೈ-ಕೈ ಕೆಸರಾಗದ ತುಂಬಾ ಸ್ಟೈಲಿಷ್ ಆದ ಕ್ರೀಡೆಯಾಗಿದೆ' .

ಪುಟ್ಟ ಹಳ್ಳಿಯಲ್ಲಿ, ಬಡ ಕುಟುಂಬದಲ್ಲಿ ಜನಿಸಿದ ಮೀರಾಬಾಯಿ

ಪುಟ್ಟ ಹಳ್ಳಿಯಲ್ಲಿ, ಬಡ ಕುಟುಂಬದಲ್ಲಿ ಜನಿಸಿದ ಮೀರಾಬಾಯಿ

ಮಣಿಪುರದ ರಾಜಧಾನಿ ಇಂಪಾಲ್‌ನಿಂದ 20 ಕಿ. ಮೀ ದೂರದಲ್ಲಿರುವ ನೋಗ್‌ಪೋಕ್ ಕಾಕ್‌ಚಿಂಗ್ ಹಳ್ಳಿಯಲ್ಲಿ ಬಡ ಕುಟುಂಬದಲ್ಲಿ ಜನಿಸುತ್ತಾರೆ. 13 ವರ್ಷ ಇರುವಾಗಲೇ ತಾನೊಬ್ಬ ಪ್ರಸಿದ್ಧ ಕ್ರೀಡಾಪಟುವಾಗಬೇಕೆಂದು ಬಯಸುತ್ತಾರೆ. ಆ ಹಂಬಲದಿಂದಲೇ ತನ್ನ ಕಸಿನ್‌ಯೊಂದಿಗೆ 2008ರಲ್ಲಿ ಇಂಪಾಲ್‌ನ ಖುಮಾನ್ ಲಂಪಾಕ್‌ನಲ್ಲಿರುವ ಸಾಯಿ ಸೆಂಟರ್‌ಗೆ (Sports Authority of India)ಬರುತ್ತಾರೆ. ಆದರೆ ಆಗ ಅವರಿಗೆ ಬಿಲ್ಲುಗಾರಿಕೆ ಕಲಿಸಲು ಯಾವುದೇ ಮೆಂಟರ್‌ ಸಿಗುವುದಿಲ್ಲ. ಆಗ ಅವರು ಮಣಿಪುರದ ಪ್ರಸಿದ್ಧ ಕ್ರೀಡಾಪಟು ಕುಂಜರಾಣಿ ದೇವಿಯವರ ಭಾರ ಎತ್ತುವ ಸ್ಪರ್ಧೆಗಳ ಕ್ಲಿಪ್ಪಿಂಗ್‌ಗಳನ್ನು ನೋಡುತ್ತಾರೆ. ಆಗ ವೇಯ್ಟ್‌ಲಿಫ್ಟಿಂಗ್‌ನಲ್ಲಿ ಆಸಕ್ತಿ ಮೂಡುತ್ತದೆ. ಅಲ್ಲಿಂದ ವೇಯ್ಟ್‌ಲಿಫ್ಟಿಂಗ್‌ ಟ್ರೈನಿಂಗ್‌ ಸೆಂಟರ್‌ಗೆ ಹೋಗುತ್ತಾರೆ, ಅಲ್ಲದೆ ಮಾಜಿ ಅಂತರರಾಷ್ಟ್ರೀಯ ಕ್ರೀಡಾಪಟು ಮತ್ತು ಕೋಚ್‌ ಅನಿತಾ ಚಾನು ಸಿಗುತ್ತಾರೆ, ಅವರು ಮೀರಾಬಾಯಿಗೆ ಮಾರ್ಗದರ್ಶನ ನೀಡುತ್ತಾರೆ.

ಟ್ರೈನಿಂಗ್‌ ಬರುವಾಗ ಸ್ಕೂಲ್‌ ಸಮಯ ಹಾಗೂ ಟ್ರೈನಿಂಗ್‌ ಸಮಯ ಹೊಂದಿಸಲು ತುಂಬಾ ಕಷ್ಟಪಡುತ್ತಿದ್ದರು. 6 ಗಂಟೆಗೆ ಟ್ರೈನಿಂಗ್‌ ಸೆಂಟರ್‌ಗೆ ಬರಬೇಕಾಗಿತ್ತು. ತನ್ನ ಹಳ್ಳಿಯಿಂದ 22 ಕಿ.ಮೀ ದೂರದಲ್ಲಿರುವ ಟ್ರೈನಿಂಗ್‌ ಸೆಂಟರ್‌ಗೆ ಬರಲು 2 ಬಸ್‌ ಬದಲಾಯಿಸಬೇಕಾಗಿತ್ತು. ಅವರು 12-13 ವರ್ಷವಿದ್ದಾಗ ತನ್ನ ಹೊರೊಯ ಸಹೋದರನಿಗಿಂತ ಅಧಿಕ ತೂಕ ಸೌದೆಯ ದಿಮ್ಮಿಗಳನ್ನು ಹೊರುತ್ತಿದ್ದರು.

ರೈಲ್ವೆಯಲ್ಲಿ ಉದ್ಯೋಗ

ರೈಲ್ವೆಯಲ್ಲಿ ಉದ್ಯೋಗ

ಮೀರಾಬಾಯಿ ಭಾರತೀಯ ರೈಲ್ವೆಯಲ್ಲೊ ಚೀಫ್‌ ಟಿಕೆಟ್‌ ಇನ್ಸ್‌ಪೆಕ್ಟರ್ ಆಗಿ ಉದ್ಯೋಗದಲ್ಲಿದ್ದರು. 2014ರಲ್ಲಿ ಗ್ಲಾಸ್ಗೋದಲ್ಲಿ ನಡೆದಿದ್ದ ವೇಯ್ಟ್ ಲಿಫ್ಟ್‌ 170ಕೆಜಿ ವಿಭಾಗದಲ್ಲಿ ಬೆಳ್ಳಿ ಗೆದ್ದಿದ್ದರು, ರಿಯೋದಲ್ಲಿ ಸೋತ ಬಳಿಕ ಸೀನಿಯರ್‌ ನ್ಯಾಷನಲ್‌ನಲ್ಲಿ ಭಾಗವಹಿಸಿ 2016ರಲ್ಲಿ ವೇಯ್ಟ್‌ ಲಿಫ್ಟಿಂಗ್ 189 ಕೆಜಿಯಲ್ಲಿ ಚಿನ್ನ ಗೆದ್ದಿದ್ದರು.

ಇದೀಗ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ ತಂದಿದ್ದಾರೆ. ಮೊದಲಿಗೆ ಬೆಳ್ಳಿ ಸಿಕ್ಕರೆ ಶುಭ ಅಂತಾರೆ... ಇನ್ನು ಹೆಚ್ಚಿನ ಪದಕಗಳು ಭಾರತಕ್ಕೆ ಲಭಿಸುವಂತಾಗಲಿ....

English summary

Who is Mirabai Chanu? Know The Success Story of India's Weightlifting Silver Medalist at Tokyo Olympics in Kannada

Who is Mirabai Chanu? Know The Success Story of India's Weightlifting Silver Medalist at Tokyo Olympics , read on...
X
Desktop Bottom Promotion