For Quick Alerts
ALLOW NOTIFICATIONS  
For Daily Alerts

Aditi Ashok : ಅದಿತಿ ಆಶೋಕ್‌: ಒಲಿಂಪಿಕ್ಸ್‌ನಲ್ಲಿ ಗಮನ ಸೆಳೆದ ಈ ಗಾಲ್ಫ್‌ ಆಟಗಾರ್ತಿಯ ಕುರಿತ ಕೆಲ ಆಸಕ್ತಿಕರ ಸಂಗತಿಗಳು

|

ಟೋಕಿಯೋ ಒಲಿಂಪಿಕ್ಸ್‌ 2020 ಭಾರತದ ಪಾಲಿಗೆ ನಿರೀಕ್ಷಿತ ಮಟ್ಟದ ಪದಕ ದೊರೆಯದಿದ್ದರೂ ಹಲವಾರು ಅಚ್ಚರಿಯ ಸಂಗತಿಗಳಿಗೆ ಸಾಕ್ಷಿಯಾಗಿದೆ. ಆಟದಲ್ಲಿ ಭಾಗವಹಿಸಿದ ಎಲ್ಲರೂ ಪದಕ ಗೆಲ್ಲದಿದ್ದರೂ ನಮ್ಮ ಕ್ರೀಡಾಪಟುಗಳು ತೋರಿರುವ ಕ್ರೀಡಾ ಸ್ಪೂರ್ತಿಯಿಂದಾಗಿ ಮನ ಗೆದ್ದಿದ್ದಾರೆ.

ಹಾಕಿಯಲ್ಲಿ ಭಾರತದ ಮಹಿಳಾ ತಂಡಕ್ಕೆ ಸ್ವಲ್ಪವೇ ಅಂತರದಲ್ಲಿ ಕಂಚಿನ ಪದಕ ಕೈ ತಪ್ಪಿದರೂ ಪ್ರಧಾನಿ ಸೇರಿದಂತೆ ಇಡೀ ದೇಶ ಅವರ ಸಾಧನೆಯನ್ನು ಶ್ಲಾಘಿಸಿದೆ. ಆಟದಲ್ಲಿ ಸೋಲು-ಗೆಲುವು ಇದ್ದದ್ದೇ ಆದರೆ ತಾವು ಆಡುವ ಆಟದಲ್ಲಿ ಒಂದು ವಿಶಿಷ್ಠ ಛಾಪು ಮೂಡಿಸುವುದು ಇದೆಯೆಲ್ಲಾ ಅದು ತುಂಬಾ ಮುಖ್ಯವಾದದ್ದು. ಅಲ್ಲದೆ ಅವರೆಲ್ಲಾ ಈಗ ಆಗದಿದ್ದರೂ ಮುಂಬರುವ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದೇ ಗೆಲ್ಲುತ್ತಾರೆ ಎಂದು ಭವಿಷ್ಯದ ಒಂದು ಆಶಾ ಕಿರಣವಾಗಿದ್ದಾರೆ. ಈ ರೀತಿ ಗಮನ ಸೆಳೆದವರಲ್ಲಿ ಅದಿತಿ ಅಶೋಕ್ ಕೂಡ ಒಬ್ಬರು.

ಗಾಲ್ಫ್‌ ಕ್ರೀಡೆ ಭಾರತೀಯರಿಗೆ ಅಷ್ಟೊಂದು ಚಿರಪರಿಚಿತವಾದ ಆಟವಲ್ಲ.. ಕೆಲವೇ ಕೆಲವು ಜನರಷ್ಟೇ ಈ ಆಟ ಆಡುತ್ತಾರೆ, ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಗಾಲ್ಫ್‌ ಕ್ರೀಡೆಯಲ್ಲಿ ಆಡುವ ಮೂಲಕ ಅದಿತಿ ಅಶೋಕ್‌ ದೇಶದ ಗಮನ ಸೆಳೆದಿದ್ದಾರೆ.

ಇವರ ಕುರಿತ ಆಸಕ್ತಿಕರ ಸಂಗತಿಗಳು ಇಲ್ಲಿವೆ ನೋಡಿ:

* ಅದಿತಿ ಅತೀ ಕಿರಿಯ ವಯಸ್ಸಿನಲ್ಲಿ ( ಪುರುಷ ಹಾಗೂ ಮಹಿಳೆಯರಲ್ಲಿ) ಅಂದ್ರೆ 18ನೇ ವಯಸ್ಸಿನಲ್ಲಿ ರಿಯೋ ಒಲಿಂಪಿಕ್ಸ್‌ನಲ್ಲಿ ಆಡಿದ್ದಾರೆ.
* ಆಕೆ ಗಾಲ್ಫ್‌ ಆಟಗಾರರ ಕುಟುಂಬದಿಂದ ಬಂದಿಲ್ಲ, 5 ವರ್ಷ ಪ್ರಾಯದವರಾಗಿದ್ದಾಗ ತಮ್ಮ ರೆಸ್ಟೋರೆಂಟ್‌ನ ಕಿಟಕಿ ಮೂಲಕ ಗಾಲ್ರ್ಪ್ ಆಡುವುದನ್ನು ನೋಡುತ್ತಿದ್ದರು.
* ಮಗಳ ಗಾಲ್ಫ್‌ ಆಟಕ್ಕೆ ಬೆಂಬಲ ನಿಂತರು ತಂದೆ.
* ಏಷ್ಯಾನ್ ಯೂತ್‌ ಗೇಮ್ಸ್ (2013), ಯೂತ್‌ ಒಲಿಂಪಿಕ್ಸ್ ಗೇಮ್ಸ್(2014), ಏಷ್ಯಾನ್ ಗೇಮ್ಸ್‌ (2014) ಹಾಗೂ ರಿಯೋ ಒಲಿಂಪಿಕ್ಸ್ (2016)ರಲ್ಲಿ ಆಡಿರುವ ಅತೀ ಕಿರಿಯ ವಯಸ್ಸಿನ ಗಾಲ್ಫ್‌ ಆಟಗಾರ್ತಿ ಎಂಬ ಹೆಗ್ಗಳಿಕೆ ಅವರದ್ದು.

ಅದಿತಿ ಅಶೋಕ್‌ ನಮ್ಮ ಬೆಂಗಳೂರಿನವರು. 1998ರಲ್ಲಿ ಜನಿಸಿದ ಅದಿತಿ 5ನೇ ವಯಸ್ಸಿನಲ್ಲಿಯೇ ಗಾಲ್ಫ್‌ ಆಡಲು ಪ್ರಾರಂಭಿಸಿದರು. ಇವರ ಪೋಷಕರು ಕರ್ನಾಟಕ ಗಾಲ್ಫ್‌ ಅಸೋಸಿಯೇಶನ್‌ ಡ್ರೈವಿಂಗ್‌ ರೇಂಜ್‌ಗೆ ಕರೆದುಕೊಂಡು ಹೋಗಿ ಅಭ್ಯಾಸ ಮಾಡಿಸುತ್ತಿದ್ದರು. ಇದೀಗ ಅದಿತಿ ಒಲಿಂಪಿಕ್ಸ್‌ನಲ್ಲಿ ಅತ್ಯುತ್ತಮವಾದ ಪ್ರದರ್ಶನ ತೋರಿರುವ ಭಾರತೀಯ ಗಾಲ್ಫ್‌ ಆಟಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ.

ಇನ್ನು ಒಲಿಂಪಿಕ್ಸ್‌ ಇತಿಹಾಸದಲ್ಲಿ 1900, 1904ರಲ್ಲಿ ಗಾಲ್ಫ್‌ ಆಡಿಸಲಾಗಿತ್ತು, ಅದಾದ ಬಳಿಕ 2016ರಲ್ಲಿ ಮತ್ತೆ ಪ್ರಾರಂಭಿಸಿದರು. ಅದಿತಿ 2016ರ ರಿಯೋ ಒಲಿಂಪಿಕ್ಸ್, 2020ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿ ತಮ್ಮದೇ ಆದ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

English summary

Who is Aditi Ashok? All you need to know about the Golf champion in Kannada

Who is Aditi Ashok? All you need to know about the Golf champion in Kannada,
X