For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿ 2021ರಲ್ಲಿ ಫ್ರೆಂಡ್‌ಶಿಪ್ ಡೇ ಯಾವಾಗ? ಜುಲೈ 30 ಅಥವಾ ಆಗಸ್ಟ್ 1?

|

ಫ್ರೆಂಡ್‌ಶಿಪ್ ಡೇ ಅಥವಾ ಸ್ನೇಹಿತರ ದಿನ ಈ ದಿನ ಪ್ರತಿಯೊಬ್ಬರ ಬದುಕಿನಲ್ಲಿ ತುಂಬಾ ವಿಶೇಷವಾದ ದಿನ.... ಪೋಷಕರು ಇಲ್ಲದೆ ಬೇಕಾದರೆ ಮಕ್ಕಳು ಬೆಳೆಯಬಹುದು, ಆದರೆ ಸ್ನೇಹಿತರು ಇಲ್ಲದೆ ಇರಲು ಯಾವ ವ್ಯಕ್ತಿಯಿಂದಲೂ ಸಾಧ್ಯವಿಲ್ಲ.

ಯಾರ ಜೊತೆ ಬೆರೆಯದೇ ಇರುವ ವ್ಯಕ್ತಿಗೆ ಕೂಡ ಒಬ್ಬರು ಸ್ನೇಹಿತ/ ಸ್ನೇಹಿತೆ ಇದ್ದೇ ಇರುತ್ತಾರೆ... ಸ್ನೇಹವೆಂಬುವುದು ರಕ್ತ ಸಂಬಂಧವಲ್ಲ ಆದರೆ ಕೆಲವೊಮ್ಮೆ ಎಲ್ಲಾ ಬಂಧಗಿಂತ ಮಿಗಿಲಾದದ್ದು ಅನಿಸುತ್ತದೆ. ಆದ್ದರಿಂದ ಸ್ನೇಹಕ್ಕೆ ಅಷ್ಟೊಂದು ಬೆಲೆಯಿದೆ.

ಭಾರತದಲ್ಲಿ ಫ್ರೆಂಡ್‌ಶಿಪ್ ಡೇ ಯಾವಾಗ ಆಚರಿಸಲಾಗುವುದು?

ಭಾರತದಲ್ಲಿ ಫ್ರೆಂಡ್‌ಶಿಪ್ ಡೇ ಯಾವಾಗ ಆಚರಿಸಲಾಗುವುದು?

ಫ್ರೆಂಡ್‌ಶಿಪ್ ಜುಲೈ 30ಕ್ಕೆ ಅಥವಾ ಆಗಸ್ಟ್‌ 1ಕ್ಕೆ ಎಂಬ ಗೊಂದಲ ಕೆಲವರಲ್ಲಿದೆ. ಆದರೆ ಭಾರತದಲ್ಲಿ ಫ್ರೆಂಡ್‌ಶಿಪ್‌ ಡೇಯನ್ನು ಆಗಸ್ಟ್‌ ತಿಂಗಳ ಮೊದಲ ಭಾನುವಾರದಂದು ಆಚರಿಸಲಾಗುವುದು. ಈ ವರ್ಷ ಆಗಸ್ಟ್ ತಿಂಗಳ ಮೊದಲ ಭಾನುವಾರ ಆಗಸ್ಟ್‌ 1ರಂದು ಬಂದಿದೆ. ಆದ್ದರಿಂದ ಭಾರತದಲ್ಲಿ ಆಗಸ್ಟ್‌ 1ರಂದು ಫ್ರೆಂಡ್‌ಶಿಪ್‌ ಡೇ ಆಚರಿಸಲಾಗುವುದು.

ಈ ದಿನ ನಮ್ಮ ಜೀವನದಲ್ಲಿ ತುಂಬಾ ಪ್ರಮುಖವಾಗಿರುವ ನಮ್ಮ ಸ್ನೇಹಿತರ ಜೊತೆ ಈ ದಿನವನ್ನು ಆಚರಿಸುತ್ತೇವೆ.

ನಮ್ಮನ್ನು ತುಂಬಾ ಚೆನ್ನಾಗಿ ಬಲ್ಲವರೇ ಸ್ನೇಹಿತರು

ನಮ್ಮನ್ನು ತುಂಬಾ ಚೆನ್ನಾಗಿ ಬಲ್ಲವರೇ ಸ್ನೇಹಿತರು

ಪೋಷಕರಿಗೆ ತಮ್ಮ ಮಗ ಅಥವಾ ಮಗಳ ಬಗ್ಗೆ ಎಲ್ಲವೂ ಗೊತ್ತಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ, ಪೋಷಕರು ಮಕ್ಕಳ ಜೊತೆ ಸ್ನೇಹಿತರಂತೆ ಇದ್ದರೂ ಕೂಡ ಕೆಲವೊಂದು ವಿಚಾರಗಳನ್ನು ನಾವು ಪೋಷಕರ ಜೊತೆ ಹಂಚಿಕೊಳ್ಳುವುದಿಲ್ಲ, ಇನ್ನು ಒಡ ಹುಟ್ಟಿದವರ ಬಳಿಯೂ ಹೇಳದೇ ಇರುವ ಅನೇಕ ವಿಷಯಗಳಿರುತ್ತದೆ, ಮದುವೆಯಾದ ಮೇಲೆ ತಮ್ಮ ಸಂಗಾತಿ ಬಳಿಯೂ ಕೆಲವೊಂದು ವಿಚಾರಗಳನ್ನು ಹೇಳುವುದಿಲ್ಲ... ಆದರೆ ನಮ್ಮ ಬೆಸ್ಟ್‌ ಫ್ರೆಂಡ್‌ ಮುಂದೆ ನಾವು ಎಲ್ಲಾ ವಿಷಯಗಳನ್ನು ಹೇಳುತ್ತೇವೆ. ಮನೆಯ ವಿಷಯವಾಗಿರಲಿ, ನಮ್ಮ ವಿಷಯವಾಗಿರಲಿ ಎಲ್ಲವೂ ನಾವು ನಮ್ಮ ಸ್ನೇಹಿತರ ಬಳಿ ಹೇಳಿ ಕೊಳ್ಳುತ್ತೇವೆ. ಇನ್ನು ನಮ್ಮ ಒಳ್ಳೆಯ ಹಾಗೂ ಕೆಟ್ಟ ಗುಣಗಳು ಎಲ್ಲರಿಗಿಂತ ಚೆನ್ನಾಗಿ ಸ್ನೇಹಿತರಿಗಷ್ಟೇ ಗೊತ್ತಿರುತ್ತದೆ ಅಲ್ವಾ?

ಜುಲೈ 30 ಅಂತರರಾಷ್ಟ್ರೀಯ ಸ್ನೇಹಿತರ ದಿನ

ಜುಲೈ 30 ಅಂತರರಾಷ್ಟ್ರೀಯ ಸ್ನೇಹಿತರ ದಿನ

ವಿಶ್ವ ಸಂಸ್ಥೆಯು ಜುಲೈ 30ನ್ನು ಅಂತರರಾಷ್ಟ್ರೀಯ ಸ್ನೇಹಿತರ ದಿನ ಎಂದು ಘೋಷಿಸಿದೆ. 1998ರಲ್ಲಿ ಸ್ನೇಹಿತರ ದಿನಕ್ಕೆ ವಿಶೇಷ ಗೌರವ ಸಲ್ಲಿಸುವ ಅಂಗಾಗಿ ವಿಶ್ವಸಂಸ್ಥೆಯ ಕಾರ್ಯದರ್ಶಿಯಾಗಿದ್ದ ಕೊಫಿ ಅನ್ನನ್ ಅವರ ಪತ್ನಿ ನಾನೆ ಅನ್ನನ್ ಅವರು ಸ್ನೇಹಿತರ ದಿನದ ರಾಯಭಾರಿಯಾಗಿ ವಿನ್ನಿ ದ ಪೂವನ್ನು ಸೂಚಿಸಿದ್ದರು. ಕೆಲವು ಕಡೆ ಜುಲೈ 30 ರಂದು ಆಚರಿಸಿದರೆ ಭಾರತದಲ್ಲಿ ಆಗಸ್ಟ್‌ ತಿಂಗಳ ಮೊದಲ ಭಾನುವಾರದಂದು ಆಚರಿಸಲಾಗುವುದು.

ವಿಶ್ವದ ಬೇರೆ-ಬೇರೆ ಕಡೆ ಯಾವಾಗ ಸ್ನೇಹಿತರ ದಿನವನ್ನು ಆಚರಿಸಲಾಗುವುದು?

ವಿಶ್ವದ ಬೇರೆ-ಬೇರೆ ಕಡೆ ಯಾವಾಗ ಸ್ನೇಹಿತರ ದಿನವನ್ನು ಆಚರಿಸಲಾಗುವುದು?

ಅರ್ಜೆಂಟೀನಾ: ಜುಲೈ 20

ಬೊಲಿವಿಯಾ: ಜುಲೈ 23

ಬ್ರೆಜಿಲ್: ಜುಲೈ 20

ಕೊಲಂಬಿಯಾ: ಮಾರ್ಚ್ ತಿಂಗಳ ಎರಡನೇ ಶನಿವಾರ

ಈಕ್ವಡೋರ್: ಜುಲೈ 14

ಈಸ್ಟೊನಿಯಾ: ಜುಲೈ 14

ಫಿನ್ ಲ್ಯಾಂಡ್: ಜುಲೈ 30

ಭಾರತ: ಆಗಸ್ಟ್ ತಿಂಗಳ ಮೊದಲ ಭಾನುವಾರ

ಮಲೇಶಿಯಾ: ಆಗಸ್ಟ್ ತಿಂಗಳ ಮೊದಲ ಭಾನುವಾರ

ಮೆಕ್ಸಿಕೋ: ಜುಲೈ 14

ಪಾಕಿಸ್ತಾನ: ಜುಲೈ 19

ಸ್ಪೇನ್: ಜುಲೈ 20

ಉರುಗ್ವೆ: ಜುಲೈ 20

ಅಮೆರಿಕ: ಫೆಬ್ರವರಿ 15

ವೆನೆಜುವೆಲ್: ಜುಲೈ 14

English summary

When Is Friendship Day 2021 in India? July 30 Or August 1?

When is friendship day 2021 in India? July 30 or August 1?, read on...
X
Desktop Bottom Promotion