For Quick Alerts
ALLOW NOTIFICATIONS  
For Daily Alerts

ರಣ ಬಿಸಿಲು: ಸ್ಕೂಟರ್‌ ಸೀಟ್‌ ಮೇಲೆ ದೋಸೆ ಮಾಡಿದ ವ್ಯಕ್ತಿಯ ವೀಡಿಯೋ ಫುಲ್‌ ವೈರಲ್

|

ಈಗೀನ ಕಾಲಾವಸ್ಥೆನೇ ಒಂಥರಾ ವಿಚಿತ್ರವಾಗಿದೆ, ಏನು ಸೆಕೆಯಪ್ಪಾ, ಸಹಿಸಲು ಆಗ್ತಾನೇ ಇಲ್ಲ ಎಂದು ಜನರು ಮಾತನಾಡಿಕೊಳ್ಳುತ್ತಿರುವುದನ್ನು ನೀವು ಕೇಳಿರಬಹುದು, ಆದರೆ ಕೆಲವರು ಅದರಲ್ಲೂ ಏನೋ ಹೊಸದು ಟ್ರೈ ಮಾಡಲು ಹೋಗುವವರು ಇದ್ದಾರೆ. ಹೌದು ಅಂಥದೊಂದು ಪ್ರಯತ್ನದ ವೀಡಿಯೋ ವೈರಲ್ ಆಗಿದೆ.

Viral Video: Man cooks dosa on Seat Of Scooter as temperature touches 40 degree celsius in Hyderabad

ಮೇ ತಿಂಗಳಿನಲ್ಲಿ ಹಲವ ಕಡೆ ರಣ ಬಿಸಿಲು ಇತ್ತು, ಇನ್ನು ಜೂನ್‌ ತಿಂಗಳಿನಲ್ಲಿ ಕೆಲವು ಕಡೆ ಮಳೆ ಸುರಿಯುತ್ತಿದ್ದರೆ ಇನ್ನು ಕೆಲವು ಕಡೆ ಹೀಟ್‌ ವೇವ್‌ ಇದೆ. ಅಂದರೆ ಉಷ್ಣಾಂಶ 45 ಡಿಗ್ರಿC ಹಾಗೂ ಅದಕ್ಕಿಂತ ಅಧಿಕವಿದ್ದರೆ ಅದಕ್ಕೆ ಹೀಟ್‌ ವೇವ್‌ ಎಂದು ಕರೆಯಲಾಗುವುದು. ಇಂಥ ಉರಿ ಬಿಸಿಲಿನಲ್ಲಿ ಏನಪ್ಪಾ ಮಾಡುವುದು ಜನ ಕೂತರೆ ಇಲ್ಲೊಬ್ಬ ಬೈಕ್‌ ಸೀಟ್‌ ಮೇಲೆ ದೋಸೆ ಮಾಡಿಕೊಂಡು ತಿಂದಿದ್ದಾನೆ. ಆ ವೀಡಿಯೋ ಇದೀಗ ಸಕತ್‌ ವೈರಲ್‌ ಆಗಿದೆ.

ಹರ್ಷಾ ಗೋಯೆಂಕಾ ಎಂಬವವರು ಈ ವೀಡಿಯೋ ಶೇರ್‌ ಮಾಡಿದ್ದು ಬೈಕ್ ಮೇಲೆ ದೋಸೆ ಮಾಡಿದ ವ್ಯಕ್ತಿಯ ಕ್ರಿಯೇಟಿವಿಟಿ ನೆಟ್ಟಿಗರ ಗಮನ ಸೆಳೆದಿದೆ. ಈ ವೀಡಿಯೋ ಮೂವತ್ತು ಸಾವಿರಕ್ಕೂ ಅಧಿಕ ವ್ಯೂವ್ಸ್ ಪಡೆದಿದೆ. ಇದನ್ನು ನೋಡಿ ಹಲವು ಜನ ಹಲವು ರೀತಿಯಲ್ಲಿ ಕಮೆಂಟ್‌ ಮಾಡುತ್ತಿದ್ದಾರೆ. ಹೀಗೆ ಮಾಡಿ ಗ್ಯಾಸ್‌ ಉಳಿಸಬಹುದು ಎಂದು ಹೇಳಿದರೆ ಇನ್ನು ಕೆಲವರು ನವೀಕರಿಸಬಹುದಾದ ಶಕ್ತಿಯನ್ನು ಈ ರೀತಿಯೆಲ್ಲಾ ಬಳಸುವುದು ಉತ್ತಮ ಐಡಿಯಾ ಎಂದೆಲ್ಲಾ ಹೇಳುತ್ತಿದ್ದಾರೆ.

ವೀಡಿಯೋದಲ್ಲಿ ವ್ಯಕ್ತಿ ದೋಸೆ ಹಿಟ್ಟು ಹಾಕಿ, ಅದರಿಂದ ದೋಸೆ ಸುಟ್ಟು ಮಗುಚಿ ಹಾಕುವುದನ್ನು ಕಾಣಬಹುದು.

ದೆಹಲಿ, ಹರಿಯಾಣ, ಪಂಜಾಬ್‌, ಉತ್ತರ ರಾಜಾಸ್ಥಾನ ಮುಂತಾದ ಕಡೆ ರಣ ಬಿಸಿಲು ಇದೆ, ಎಷ್ಟೋ ಜನರಿಗೆ ಇದರಿಂದ ಆರೋಗ್ಯ ಸಮಸ್ಯೆ ಉಂಟಾಗುತ್ತಿದೆ. ಭಾರತದಲ್ಲಿ ಮಾನ್ಸೂನ್‌ ಜೂನ್ 15ರಿಂದ ಪ್ರಾರಂಭವಾಗಲಿದೆ.

ಹೀಟ್‌ವೇವ್‌ ಎಂದರೇನು?

ಉಷ್ಣಾಂಶ ಅಧಿಕವಾದಾಗ ಆ ಪ್ರದೇಶವನ್ನು ಹೀಟ್‌ವೇವ್‌ ಪ್ರದೇಶ ಎಂದು ಕರೆಯಲಾಗುವುದು. ಸಮತಟ್ಟಾದ ಪ್ರದೇಶದಲ್ಲು ಉಷ್ಣಾಂಶ 40 ಡಿಗ್ರಿ C ತಲುಪಿದಾಗ, ಕರಾವಳಿ ಭಾಗದಲ್ಲಿ 37 ಡಿಗ್ರಿ C, ಬೆಟ್ಟ ಪ್ರದೇಶಗಳಲ್ಲಿ ಉಷ್ಣಾಂಶ 30 ಡಿಗ್ರಿ C ತಲುಪಿದರೆ ಅದಕ್ಕೆ ಹೀಟ್‌ವೇವ್‌ ಎಂದು ಕರೆಯಲಾಗುವುದು.

English summary

Viral Video: Man cooks dosa on Seat Of Scooter as temperature touches 40 degree celsius in Hyderabad

Viral Video: Man cooks dosa on Seat Of Scooter as temperature touches 40 degree celsius in Hyderabad, Read on...
X
Desktop Bottom Promotion