For Quick Alerts
ALLOW NOTIFICATIONS  
For Daily Alerts

12 ಲಕ್ಷ ಖರ್ಚು ಮಾಡಿ ನಾಯಿಯಾದ ಜಪಾನಿನ ವ್ಯಕ್ತಿ!

|

ಈ ಪ್ರಪಂಚದಲ್ಲಿ ಎಂತೆಂಥ ಮನುಷ್ಯರಿರುತ್ತಾರಪ್ಪಾ! ಸ್ವಾರಿ... ಸ್ವಾರಿ ಈತನನ್ನು ಮನುಷ್ಯ ಎನ್ನಬೇಕೋ, ನಾಯಿ ಅನ್ನಬೇಕೋ ಒಂದು ಗೊತ್ತಾಗ್ತ ಇಲ್ಲ, ನಾನು ಏನು ಹೇಳ್ತಾ ಇದ್ದೀನಿ ಎಂದು ಕನ್‌ಫ್ಯೂಸ್‌ ಆಗ್ತಾ ಇದೆಯೇ?

viral story of man become dog

ಈ ಫೋಟೋದಲ್ಲಿ ಕಾಣ್ತಾ ಇದೆಯೆಲ್ಲಾ ಅದು ಯಾವ ಬ್ರೀಡ್‌ನ ನಾಯಿ, ಮಸ್ತ್ ಆಗಿದೆಯಲ್ಲಾ ಎಂದು ನೀವು ಅಂದುಕೊಂಡಿದ್ದರೆ ಅದು ನಾಯಿಯಲ್ಲ ಮನುಷ್ಯ.

ನಾವು ಚೆನ್ನಾಗಿ ಕಾಣಬೇಕೆಂದು ಪ್ಲಾಸ್ಟಿಕ್ ಸರ್ಜರಿ ಮಾಡಿಸುವವರನ್ನು ನೋಡಿದ್ದೇವೆ, ಇನ್ನು ಏನೇನೋ ಮಾಡುವವರನ್ನು ನೋಡುತ್ತೇವೆ. ಆದರೆ ನಾಯಿಯಾಗಬೇಕೆಂದು ಹಣ ಖರ್ಚು ಮಾಡಿ ನಾಯಿಯಾಗಿದ್ದಾನೆ. ಹಾಗಂತ ಅವನೇ ತನ್ನ ಫೋಟೋಗಳನ್ನು ಸಾಮಾಜಿಕ ತಾಣದಲ್ಲಿ ಅಪ್‌ಲೋಡ್‌ ಮಾಡಿ ಹೇಳಿಕೊಂಡಿದ್ದಾನೆ. ಇದನ್ನು ನೋಡಿ ನೆಟ್ಟಿಗರು ಫುಲ್‌ ಶಾಕ್!

ನಾಯಿಯಾದ ಮನುಷ್ಯ

ನಾಯಿಯಾದ ಮನುಷ್ಯ

ಹೀಗೂ ಇರುತ್ತಾ, ಇದೆಲ್ಲಾ ಸಾಧ್ಯನಾ ಎಂದು ಮಾತನಾಡುತ್ತಿದ್ದಾರೆ. ಮನುಷ್ಯ ನಾಯಿಯಾದವನ ಟ್ವಿಟರ್‌ನಲ್ಲಿರುವ ಹೆಸರು @toco_eevee ಈತ ಕೋಲಿ (collie) ಬ್ರೀಡ್‌ನ ನಾಯಿಯಾಗಿ ಬದಲಾಗಿದ್ದಾನೆ, ಈತನನ್ನು ನಾಯಿಯಾಗಿ ಪರಿವರ್ತಿಸಿರುವುದು ಜೆಪ್ಪೆಟ್ ಎಂಬ ಪ್ರೊಫೆಷನಲ್ ಏಜೆನ್ಸಿ.

ಇದು ಜಪಾನಿನ ಕಾಸ್ಟ್ಯೂಮ್ ಏಜೆನ್ಸಿ ಆಗಿದೆ. ಜಪಾನಿನ ಸ್ಥಳೀಯ ಮಾಧ್ಯಮ news.mynavi ಪ್ರಕಾರ ಈ ಏಜೆನ್ಸಿ ಮೂವಿ, ಕಮರ್ಷಿಯಲ್‌ , ಟಿವಿ ಹಾಗೂ ಜಪಾನಿನ ಪ್ರಸಿದ್ಧ ಮ್ಯಾಸ್ಕಾಟ್ ಪಾತ್ರಗಳಿಗೆ ಕಾಸ್ಟ್ಯೂಮ್‌ ಡಿಸೈನ್ ಮಾಡಿದೆ.

ಈ ಕಾಸ್ಟ್ಯೂಮ್ ಮಾಡಲು ಬರೋಬರಿ 12 ಲಕ್ಷಕ್ಕೂ ಅಧಿಕ ಖರ್ಚಾಗಿದೆ, ಇದಕ್ಕೆ 12 ಲಕ್ಷ ರುಪಾಯಿಗೂ ಅಧಿಕ ಖರ್ಚಾಗಿದೆ. ಈ ಕಾಸ್ಟ್ಯೂಮ್ ಮಾಡಲು 40 ದಿನ ಸಮಯ ತೆಗೆದುಕೊಂಡಿತ್ತು.

ಏಕೆ ಆತ ನಾಯಿಯಂತೆ ಕಾಣ ಬಯಸಿದ?

ಏಕೆ ಆತ ನಾಯಿಯಂತೆ ಕಾಣ ಬಯಸಿದ?

ನೀವ್ಯಾಕೆ ನಾಯಿಯಂತೆ ಕಾಣಲು ಬಯಸಿದ್ದೀರಿ ಎಂದು ಕೇಳಿದಾಗ ನಾನು ನನಗಿಷ್ಟವಾದ ಕಾಸ್ಟ್ಯೂಮ್‌ ಹಾಕಿದಾಗ ಅದು ರಿಯಲ್‌ ಆಗಿ ಕಾಣಿಸುತ್ತಿತ್ತು. ನನ್ನ ಅಭಿರುಚಿಗೆ ತಕ್ಕದಾಗಿತ್ತು, ಆದ್ದರಿಂದ ಕೋಲಿ ನಾಯಿಯಂತೆ ಕಾಣ ಬಯಸಿದೆ ಎಂದಿದ್ದಾರೆ.

ನಡೆದಾಡುವಾಗ ನಾಯಿಯಂತೆಯೇ ಕಾಣುವುದೇ?

ನಡೆದಾಡುವಾಗ ನಾಯಿಯಂತೆಯೇ ಕಾಣುವುದೇ?

ಈ ಕಾಸ್ಟ್ಯೂಮ್‌ನಲ್ಲಿಷ್ಟೇ ನಾಯಿಯಂತೆ ಕಾಣುವುದು ಆದರೆ ನಡೆದಾಡುವಾಗ ನಾಯಿಯಂತೆ ಕಾಣುವುದಿಲ್ಲ. ಅಂತೂ ಇಂತೂ ನಾಯಿಯಂತೆ ಕಾಣಬೇಕೆಂಬ ಆತನ ಬಯಕೆ ಈಡೇರಿದೆ.

English summary

Viral Story: Japanese Man Spends ₹ 12 Lakh To "Become" A Dog

Viral Story: Japanese Man Spends ₹ 12 Lakh To "Become" A Dog, read on....
X
Desktop Bottom Promotion