For Quick Alerts
ALLOW NOTIFICATIONS  
For Daily Alerts

ರಕ್ಷಿಸಿದ ವ್ಯಕ್ತಿಗೆ ಧನ್ಯವಾದ ಹೇಳಿದ ಸ್ಲಾತ್ ಕರಡಿ ವೀಡಿಯೋ ವೈರಲ್

|

ಪ್ರಾಣಿಗಳಿಗೆ ಏನಾದರೂ ಸಹಾಯ ಮಾಡಿದರೆ ಅವು ಮನುಷ್ಯನಿಗಿಂತ ಹೆಚ್ಚು ನಿಯತ್ತು, ಕೃತಜ್ಞತೆ ತೋರಿಸುತ್ತವೆ ಎಂದು ಹೇಳುವುದು ಅಕ್ಷರಶಃ ನಿಜ ಎಂಬುವುದಕ್ಕೆ ಈ ವೀಡಿಯೋ ಸಾಕ್ಷಿಯಾಗಿದೆ ನೋಡಿ.

Man Helped Sloth

ಕರಡಿಗಳಲ್ಲಿ ಸ್ಲಾತ್‌ ಕರಡಿ ಎಎಂಬ ಬಗೆಯ ಕರಡಿಗಳಿವೆ. ಅವುಗಳನ್ನು ಭೂಮಿ ಮೇಲಿನ ಅತಿ ಹೆಚ್ಚಿನ ಆಲಸಿ ಪ್ರಾಣಿಯೆಂದೇ ಗುರುತಿಸಲಾಗಿದೆ. ಅದಕ್ಕೆ ಒಂದು ಎಲೆ ತಿಂದರೆ ಜೀರ್ಣವಾಗಲು 25 ದಿನಗಳು ಬೇಕಂತೆ ಅಂದ ಮೇಲೆ ಅದು ಎಷ್ಟರ ಮಟ್ಟಿಗೆ ಸೋಮಾರಿ ಪ್ರಾಣಿಯಿರಬಹುದು ಅಲ್ವಾ? ಒಂದು ಕಡೆಯಿಂದ ಮತ್ತೊಂದು ಕಡೆಗೆ ಒಂದು 50 ಮೀ ಸಾಗಲು ತಾಸುಗಟ್ಟಲೆ ಸಮಯ ತೆಗೆದುಕೊಳ್ಳುತ್ತದೆ, ಅದಕ್ಕೆ ಇದನ್ನು ಸೋಮಾರಿ ಪ್ರಾಣಿ ಎಂದು ಕರೆಯುತ್ತಾರೆ. ಇದನ್ನು ಜೇನು ತುಪ್ಪ ಕದಿಯುವ ಕರಡಿ, ಸೋಮಾರಿ ಕರಡಿ, ಸ್ಲಾತ್‌ ಕರಡಿ ಎಂದೆಲ್ಲಾ ಕರೆಯುತ್ತಾರೆ.

ಈ ಕರಡಿಯ ಕುರಿತ ಒಂದು ವೀಡಿಯೋ ವೈರಲ್ ಆಗಿದೆ. ಚಿಕ್ಕ ಸೋಮಾರಿ ಕರಡಿ ಮರಿ ರಸ್ತೆ ದಾಟಲು ಕಷ್ಟ ಪಡುತ್ತಿತ್ತು. ವಾಹನಗಳು ಓಡಾಡುವ ರಸ್ತೆಯಲ್ಲಿ ಮೆಲ್ಲನೆ ಚಲಿಸುತ್ತಿದ್ದರೆ ಯಾವುದಾದರೂ ವಾಹನ ಬಂದು ಅದರ ಮೇಲೆ ಹರಿದುಕೊಂಡು ಹೋಗುವ ಅಪಾಯವಿತ್ತು. ಇದನ್ನರಿತ ವ್ಯಕ್ತಿಯೊಬ್ಬರು ತಮ್ಮ ಗಾಡಿ ನಿಲ್ಲಿಸಿ, ಅದನ್ನು ಎತ್ತಿಕೊಂಡು ಹೋಗಿ ಮರದ ಮೇಲೆ ಬಿಟ್ಟು ಬರುತ್ತಾರೆ.

ತನ್ನನ್ನು ಮರದ ಮೇಲೆ ಬಿಟ್ಟ ತಕ್ಷಣ ಕರಡಿ ತನ್ನ ಪಾಡಿಗೆ ತಾನಿರುವುದಿಲ್ಲ, ಬದಲಿಗೆ ಆ ಕರಡಿ ಆ ಮನುಷ್ಯನ ಕಡೆಗೆ ತಿರುಗಿ ಧನ್ಯವಾದ ಹೇಳಿದ ರೀತಿಯಿದೆಯೆಲ್ಲಾ ನೋಡುವಾಗ ಮನಸ್ಸು ತುಂಬಿ ಬರುತ್ತದೆ. ಇದೊಂದು ಹಳೆಯ ವೀಡಿಯೋ ಆಗಿದ್ದರೂ ಪ್ರವೀಣ್‌ ಕಶ್ವಾನ್‌ ಎಂಬ ಪೊಲೀಸ್ ಅಧಿಕಾರಿ ಈ ಸುಂದರ ವೀಡಿಯೋ ಮತ್ತೆ ಹಂಚಿಕೊಂಡಿದ್ದೇ ತಡ ವೈರಲ್ ಆಗಿದೆ.

English summary

Viral: Man Helped Sloth, It Thanked Him

If gratitude has a face. This man helps a sloth in crossing the road. And look how sloth thanked him in this old video. Do good, it will grow someday.
Story first published: Saturday, December 14, 2019, 12:10 [IST]
X
Desktop Bottom Promotion