For Quick Alerts
ALLOW NOTIFICATIONS  
For Daily Alerts

ಜೋ ಬೈಡನ್ ಕುರಿತು ಹೆಚ್ಚಿನವರಿಗೆ ಗೊತ್ತಿಲ್ಲದ ಸ್ವಾರಸ್ಯಕರ ವಿಷಯಗಳಿವು

|

ವಿಶ್ವವೇ ಕುತೂಹಲದಿಂದ ಎದುರು ನೋಡುತ್ತಿದ್ದ ಅಮೇರಿಕಾದ ಅಧ್ಯಕ್ಷೀಯ ಚುನಾವಣೆ ಅಂತೂ ಇಂತೂ ಮುಗಿದಿದೆ. ಫಲಿತಾಂಶವೂ ಹೊರಬಿದ್ದಿದೆ. ಹಾಲಿ ಅಧ್ಯಕ್ಷರಾದ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಅವರಿಗೆ ತೀವ್ರ ಸ್ಪರ್ಧೆಯನ್ನೊಡ್ಡಿದ್ದ ಡೆಮಾಕ್ರಟಿಕ್ ಪಕ್ಷದ ಜೋ ಬೈಡನ್ ಅವರು ಕೊನೆಗೂ ವಿಜಯದ ಪತಾಕೆ ಹಾರಿಸಿದ್ದಾರೆ. ಅಮೇರಿಕಾ ಸಂಯುಕ್ತ ಸಂಸ್ಥಾನಗಳ 46 ನೆಯ ಅಧ್ಯಕ್ಷರಾಗಿ 77 ರ ಹರೆಯದ ಜೋ ಬೈಡನ್ ಅವರು ದೊಡ್ಡಣ್ಣನ ಅಧ್ಯಕ್ಷ ಗಾದಿ ಏರಲಿದ್ದಾರೆ.

ಅಮೇರಿಕಾದ ಮಾಜಿ ಉಪಾಧ್ಯಕ್ಷರಾಗಿರುವ ಜೋ ಬೈಡೆನ್ ಅವರು ಸರಿಸುಮಾರು ಐದು ದಶಕಗಳಿಂದ ಜನಪ್ರತಿನಿಧಿಯಾಗಿರುವರು. ಪೆನ್ಸಿಲ್ವೇನಿಯಾದಲ್ಲಿ ಇಸವಿ 1942 ರಲ್ಲಿ ಜನಿಸಿದ ಇವರು 1972 ರಲ್ಲಿ ಪ್ರಥಮ ಬಾರಿ ಸೆನೆಟ್ ಗೆ ಆಯ್ಕೆಯಾದರು. ಇದಾದ ಬಳಿಕ ಆರು ಬಾರಿ ಅವರು ಸೆನೆಟ್ ಗೆ ಆಯ್ಕೆಯಾದರು. ಒಬಾಮಾ ಅವರು ಅಧ್ಯಕ್ಷರಾಗಿದ್ದಾಗ ಬೈಡನ್ ಅವರು ಎಂಟು ವರ್ಷಗಳವರೆಗೆ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದರು.

ಇಂತಿಪ್ಪ ಬೈಡೆನ್ ಅವರ ಕುರಿತಾದ ಕೆಲವು ಸ್ವಾರಸ್ಯಕರ ಸಂಗತಿಗಳು ಇಲ್ಲಿವೆ ನೋಡಿ:

Unknown Fact About US President-Elect Joe Biden

1. ಬಾಲ್ಯದಲ್ಲಿ ಬೈಡೆನ್ ಅವರು ತೊದಲುತ್ತಿದ್ದುದರಿಂದ ಅವರಿಗೆ ಸರಿಯಾಗಿ ಮಾತನಾಡಲು ಆಗುತ್ತಿರಲಿಲ್ಲ

ಬಾಲ್ಯದ ಬಹುಕಾಲವನ್ನು ಫಿಲಡೆಲ್ಪಿಯಾದಲ್ಲಿ ಕಳೆದ ಬೈಡೆನ್ ಅವರು ಹತ್ತರ ಹರೆಯದವರಾಗಿದ್ದಾಗ ಮಾತನಾಡಲು ಕಷ್ಟ ಪಡುತ್ತಿದ್ದರು. ಮಾತನಾಡುವಾಗ ಅವರು ತೊದಲುತ್ತಿದ್ದುದರಿಂದ ತನ್ನ ಸಹಪಾಠಿಗಳಿಂದ ಅಪಹಾಸ್ಯಕ್ಕೀಡಾಗಿದ್ದರು.

2. ಶಾಲಾದಿನಗಳಲ್ಲಿ ಬೈಡೆನ್ ಅವರು ಫ಼ುಟ್ಬಾಲ್ ಪಟುವಾಗಿದ್ದರು

ಆರ್ಕ್ಮಿಯರ್ ಅಕಾಡೆಮಿಯಲ್ಲಿ ಬೈಡೆನ್ ಅವರು ಫ಼ುಟ್ಬಾಲ್ ಆಡುತ್ತಿದ್ದರು. 19 ಟಚ್ಡೌನ್ ಪಾಸ್ ಗಳನ್ನು ಹಿಡಿದಿದ್ದ ಅವರು ವೀಕ್ಷಕರ ಅಚ್ಚುಮೆಚ್ಚಿನ ಪುಟ್ಬಾಲ್ ಪಟು ಆಗಿದ್ದರು.

3. ಅಸ್ತಮಾದ ಕಾರಣದಿಂದಾಗಿ ವಿಯೆಟ್ನಾಂ ಕದನದಲ್ಲಿ ಸೇವೆ ಸಲ್ಲಿಸಲು ಸಾಧ್ಯವಾಗಲಿಲ್ಲ

ಬೈಡೆನ್ ಅವರು ಸಿರಾಕ್ಯೂಸ್ ವಿಶ್ವವಿದ್ಯಾಲಯದಲ್ಲಿ ಲಾ ಶಿಕ್ಷಣವನ್ನ ಪೂರ್ಣಗೊಳಿಸಿದರು. ಅವರು ವಿಯೆಟ್ನಾಂ ಕದನದ ಸೇವೆಗಾಗಿ ಆಯ್ಕೆಯಾಗಿದ್ದರು ಕೂಡ. ಆದರೆ, ಅಸ್ತಮಾದ ಕಾರಣದಿಂದಾಗಿ ಅವರು ಸೇವೆಯನ್ನು ಸಲ್ಲಿಸಲು ಸಾಧ್ಯವಾಗಲಿಲ್ಲ.

4. ಪತ್ನಿ ಮತ್ತು ಮಗಳನ್ನು ಕಾರು ಅಪಘಾತದಲ್ಲಿ ಕಳೆದುಕೊಂಡರು

ಇಸವಿ 1972 ರಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಬೈಡೆನ್ ಅವರು ತನ್ನ ಪ್ರಥಮ ಪತ್ನಿ ನೀಲಿಯಾ ಹಾಗೂ ಪುಟ್ಟ ಮಗಳು ನಯೋಮಿ ಅವರನ್ನ ಕಳೆದುಕೊಂಡರು. ಇಬ್ಬರು ಗಂಡು ಮಕ್ಕಳಾದ ಬಿಯೂ ಮತ್ತು ಹಂಟರ್ ಕಾರಿನಲ್ಲಿದ್ದರೂ ಅದೃಷ್ಟವಶಾತ್ ಅವರಿಬ್ಬರೂ ಪಾರಾದರು. ದೊಡ್ಡ ಮಗ ಬಿಯೂ ಇಸವಿ 2015 ರಲ್ಲಿ ಮೆದುಳಿನ ಕ್ಯಾನ್ಸರ್ ನ ಕಾರಣದಿಂದ ಮೃತಪಟ್ಟನು.

5. ಬೈಡೆನ್ ಅವರಿಗೆ ಐಸ್ ಕ್ರೀಮ್ ಅಂದರೆ ಪಂಚಪ್ರಾಣ

ಐಸ್ ಕ್ರೀಮ್ ಅಂದರೆ ಬೈಡೆನ್ ಅವರಿಗೆ ಬಲು ಇಷ್ಟ. "ನನ್ನ ಹೆಸರು ಜೋ ಬೈಡೆನ್ ಮತ್ತು ಐಸ್ ಕ್ರೀಮ್ ಅಂದರೆ ನನಗೆ ಬಲು ಇಷ್ಟ" ಅಂತಾ ಅವರೇ ಒಂದೆಡೆ ಹೇಳಿಕೊಂಡಿದ್ದಾರೆ. ಜೊತೆಗೆ, "ನಾನು ಮದ್ಯಪಾನ ಮಾಡುವುದಿಲ್ಲ, ಸಿಗರೇಟು ಸೇದುವುದಿಲ್ಲ, ಆದರೆ ಸಿಕ್ಕಾಪಟ್ಟೆ ಐಸ್ ಕ್ರೀಮ್ ತಿನ್ನುತ್ತೇನೆ" ಎಂದು ಸೇರಿಸುತ್ತಾರೆ.

6. "ಚಾರಿಯೋಟ್ಸ್ ಆಫ಼್ ಫ಼ಯರ್" - ಇದು ಬೈಡನ್ ಅವರ ಅಚ್ಚುಮೆಚ್ಚಿನ ಚಲನಚಿತ್ರ

"ಚಾರಿಯೋಟ್ಸ್ ಆಫ಼್ ಫ಼ಯರ್ ಬಹುಶ: ನನ್ನ ಅಚ್ಚುಮೆಚ್ಚಿನ ಚಲನಚಿತ್ರವೆಂದು ನಾನು ಭಾವಿಸುವೆ" ಎಂದು ಸಂದರ್ಶನವೊಂದರಲ್ಲಿ ಬೈಡೆನ್ ಹೇಳಿಕೊಂಡಿದ್ದಾರೆ.

7. ಅಮೇರಿಕಾ ಸಂಯುಕ್ತ ಸಂಸ್ಥಾನಗಳ ಇತಿಹಾಸದಲ್ಲಿ ಇವರು ಎರಡನೆಯ ಕ್ಯಾಥೋಲಿಕ್ ಅಧ್ಯಕ್ಷರು

ಮೊದಲನೆಯವರು ಜಾನ್. ಎಫ಼್. ಕೆನಡಿ ಅವರಾಗಿದ್ದರು.

8. ಶ್ವೇತಭವನದಲ್ಲಿ ಎಂಟು ವರ್ಷಗಳ ಕಾಲ ಬೈಡನ್ ಅವರು ಸೇವೆಯಲ್ಲಿದ್ದಾಗ ಆಗಿನ ಅಧ್ಯಕ್ಷ ಬರಾಕ್ ಒಬಾಮಾ ಅವರೊಂದಿಗೆ ಸಾಪ್ತಾಹಿಕ ಭೋಜನಕೂಟಗಳಲ್ಲಿ ತಪ್ಪದೇ ಭಾಗವಹಿಸುತ್ತಿದ್ದರು.

9. ಇಸವಿ 1987 ರಲ್ಲಿ ಹಾಗೂ ಇಸವಿ 2008 ರಲ್ಲಿ ಎರಡು ಬಾರಿ ಬೈಡೆನ್ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು

10. ಬೈಡೆನ್ ಅವರು ಅಮೇರಿಕಾ ಸಂಯುಕ್ತ ಸಂಸ್ಥಾನಗಳ ಅತ್ಯಂತ ಹಿರಿಯ ಅಧ್ಯಕ್ಷರಾಗಿದ್ದಾರೆ

ಪ್ರಸ್ತುತ 77 ರ ಹರೆಯದ ಬೈಡೆನ್ ಅವರು ಅಮೇರಿಕಾದ ಅತ್ಯಂತ ಹಿರಿವಯಸ್ಸಿನ ಅಧ್ಯಕ್ಷರು. ಅವರು 78 ರ ಹರೆಯದವರಾದಾಗ ಓವಲ್ ಕಛೇರಿಯಲ್ಲಿ ಸೇವೆ ಸಲ್ಲಿಸುತ್ತಿರುವ ಅತ್ಯಂತ ಹಿರಿಯ ವ್ಯಕ್ತಿಯೂ ಆಗಿರಲಿದ್ದಾರೆ. ಕಳೆದ ನವೆಂಬರ್ 3 ರಂದು ಬೈಡೆನ್ ಅವರ ವಯಸ್ಸು 77 ವರ್ಷ, 11 ತಿಂಗಳು, 14 ದಿನಗಳಾಗಿದ್ದು, ಕರಾರುವಕ್ಕಾಗಿ ಇದೇ ವಯೋಮಾನದ ದಿನದಂದು ಅಮೇರಿಕಾದ ಮಾಜಿ ಅಧ್ಯಕ್ಷ ರೊನಾಲ್ಡ್ ರೇಗನ್ ಅವರು ಅಧ್ಯಕ್ಷ ಸ್ಥಾನದಿಂದ ಹೊರನಡೆದಿದ್ದರು.

English summary

Unknown Fact About US President-Elect Joe Biden

Here are unknown fact about US President-Elect Joe Biden,Read On,
X
Desktop Bottom Promotion