For Quick Alerts
ALLOW NOTIFICATIONS  
For Daily Alerts

2021ರಲ್ಲಿ ಭಾರತದಲ್ಲಿ ಸಕತ್ ವೈರಲ್ ಆದ ಟಾಪ್ 10 ವೀಡಿಯೋಗಳಿವು

|

ಡಿಸೆಂಬರ್ ಬಂತೆಂದರೆ ಎಲ್ಲಿರಿಗೂ ಏನೋ ಒಂಥರಾ ಎಮೋಷನ್ಸ್ ಅಲ್ವಾ? ಈ ವರ್ಷ ಎಷ್ಟು ಬೇಗ ಮುಗೀತಾ ಬಂತಲ್ಲಾ ಅಂತ ಅನಿಸುತ್ತಿರುತ್ತದೆ, ಅದರ ಜೊತೆಗೆ ಹೊಸ ವರ್ಷವನ್ನು ಸ್ವಾಗತಿಸಲು ಮನಸ್ಸು ಪುಳಕಿತವಾಗಿರುತ್ತದೆ. ಡಿಸೆಂಬರ್‌ ತಿಂಗಳಿನಲ್ಲಿ ಪ್ರತಿಯೊಬ್ಬರೂ ಕೆಲವೊಂದು ಪ್ರಮುಖ ಘಟನೆಗಳನ್ನು ಮೆಲುಕು ಹಾಕಲು ಬಯಸುತ್ತೇವೆ.

ಗೂಗಲ್‌ ಕೂಡ 2021ರಲ್ಲಿ ಜನರು ಹೆಚ್ಚು ಸರ್ಚ್‌ ಮಾಡಿದ ವಿಷಯಗಳು, ನೋಡಿದ ವೀಡಿಯೋಗಳು, ವೈರಲ್‌ ಆದ ವೀಡಿಯೋಗಳು ಎಲ್ಲದರ ಲಿಸ್ಟ್‌ ನೀಡಿದೆ.

ಗೂಗಲ್ ಪ್ರಕಾರ 2021ರಲ್ಲಿ ಅತಿಯಾಗಿ ಟ್ರೆಂಡ್‌ ಆದ ಟಾಪ್‌ ವೀಡಿಯೋಗಳು ಇವುಗಳಾಗಿವೆ, ನೀವು ಈ ಎಲ್ಲಾ ವೀಡಿಯೋ ನೋಡಿದ್ದೀರಿ ತಾನೆ?

1. ಪೌರಿ ಹೋರಿ ಹೈ

2021ರ ಮೋಸ್ಟ್‌ ಪಾಪ್ಯೂಲರ್ ವೀಡಿಯೋ ಅಂದ್ರೆ ಇದಾಗಿದೆ. ಪೌರಿ ಹೋರಿ ಹೈ ಎಂಬುವುದು ಪಾಕಿಸ್ತಾನಿ ಇನ್‌ಫ್ಲೂನ್ಸರ್‌ ದನಾನೀರ್ ಮೊಬಿನ್‌ನ ಶಾರ್ಟ್ ಕ್ಲಿಪ್ ಆಗಿಎ. ಈ ವೀಡಿಯೋ ತುಂಬಾ ಜನಪ್ರಿಯ ಗಳಿಸಿದ್ದು ಮ್ಯೂಸಿಯನ್ ಯಶ್‌ರಾಜ್ ಮುಖಾಟೆ ಅವರು ವೀಡಿಯೋ ಮಾಡಿದ ಮೇಲೆ ಅದು ತುಂಬಾನೇ ಜನಪ್ರಿಯವಾಗಿದೆ. ಈ ವೀಡಿಯೋ ಸೋಷಿಯಲ್ ಮೀಡಿಯಾ ಬಳಕೆದಾರರಿಗೆ ತುಂಬಾನೇ ಇಷ್ಟವಾಗಿದೆ. ಇದರ ಬಗ್ಗೆ ಅನೇಕ ಮೀಮ್ಸ್ ಕ್ರಿಯೇಟ್‌ ಮಾಡಲಾಗಿದೆ.

2. ಬಚ್ಪನ್‌ ಕಾ ಪ್ಯಾರ್‌
ಈ ಒಂದು ವೀಡಿಯೋ ತುಂಬಾನೇ ಫನ್ನಿಯಾಗಿದೆ. ಚತ್ತೀಸ್‌ಘಡದ ಸಹದೇವ್‌ ಡಿರ್ಡೊ ಎಂಬ ಬಾಲಕ ಹಾಡಿದ ಬಚ್ಪನ್‌ ಕಾ ಪ್ಯಾರ್ ಹಾಡು ಇಂಟರ್‌ನೆಟ್‌ ಸೆನ್ಸೇಷನ್ ಆಗಿತ್ತು. ಮಿಲಿಯನ್‌ಗಟ್ಟಲೆ ಜನರು ಈ ವೀಡಿಯೋ ವೀಕ್ಷಿಸಿದ್ದಾರೆ.

3. ಡಾ. ಕೆಕೆ ಅಗರ್‌ವಾಲ್ ಲೈವ್‌ನಲ್ಲಿ ಇರುವಾಗ ಅವರ ಪತ್ನಿ ಬೈಯ್ದ ವೀಡಿಯೋ
ಐಎಂಎನ ರಾಷ್ಟ್ರೀಯ ಅಧ್ಯಕ್ಷ ಸೀನಿಯರ್ ಕಾರ್ಡಿಯಾಲಾಜಿಸ್ಟ್ ಸೋಷಿಯಲ್‌ ಮೀಡಿಯಾ ಲೈವ್‌ ಮಾಡುತ್ತಿರುವಾಗ ಅವರ ಪತ್ನಿ ಫೋನ್ ಮಾಡಿ ಬೈಯ್ದದ್ದು ಲೈವ್‌ ಹೋಗಿತ್ತು. ಈ ವಿಡಿಯೋ ನೋಡಿ ಜನರು ಬಿದ್ದು-ಬಿದ್ದು ನಕ್ಕಿದ್ದರು. ಸೋಷಿಯಲ್‌ ಮೀಡಿಯಾ ಲೈವ್‌ನಲ್ಲಿ ಇರುವಾಗ ಪತ್ನಿ ಫೋನ್ ಅಟೆಂಡ್‌ ಮಾಡ್ಬೇಡಿ ಎಂಬ ಮೀಮ್ಸ್ ಹುಟ್ಟಿಕೊಂಡಿತ್ತು. ಡಾ. ಒಬ್ಬರೇ ಹೋಗಿ ಲಸಿಕೆ ಪಡೆದರು, ನನ್ನನ್ನು ಕರೆದುಕೊಂಡು ಹೋಗಿಲ್ಲ ಎಂಬುವುದು ಪತ್ನಿಯ ಕೋಪಕ್ಕೆ ಕಾರಣವಾಗಿತ್ತು. ಈ ವೀಡಿಯೋ ತುಂಬಾನೇ ವೈರಲ್ ಆಯ್ತು, ದುರಾದೃಷ್ಟವೆಂದರೆ ಇದಾದ ಕೆಲವು ತಿಂಗಳು ಕಳೆದ ಮೇಲೆ ಕೊರೊನಾವೈರಸ್‌ನಿಂದಾಗಿ ಸಾವನ್ನಪ್ಪಿದರು.

4. ಶ್ವೇತಾ ಯುರ್ ಮೈಕ್‌ ಈಸ್‌ ಆನ್
ಕೊರೊನಾ ಕಾಲದಲ್ಲಿ ಆನ್‌ಲೈನ್‌ ಕ್ಲಾಸ್‌ನಲ್ಲಿ ನಡೆದ ಹಲವು ಫನ್ನಿ ಘಟನೆಗಳನ್ನು ನೋಡಿದ್ದೇವೆ, ಅವುಗಳಲ್ಲಿ ಟಾಪ್‌ ವೈರಲ್‌ ಆಗಿದ್ದು ಶ್ವೇತಾ ಯುರ್ ಮೈಕ್ ಈಸ್ ಆನ್. #Shweta ಟ್ರೆಂಡ್‌ ಕೂಡ ಆಗಿತ್ತು. ಝೂಮ್‌ ಕಾಲ್‌ನಲ್ಲಿ ಶ್ವೇತಾ ಎಂಬ ಹುಡುಗಿ ಅವಳ ಮೈಕ್‌ ಆಫ್‌ ಮಾಡಲು ಮರೆತಳು, ಅವಳು ಫ್ರೆಂಡ್ ಹತ್ರ ತುಂಬಾ ಖಾಸಗಿ ವಿಷಯ ಹಂಚಿಕೊಂಡಳು, ಇದನ್ನು ಫ್ರೆಂಡ್ ಹತ್ರ ಸೀಕ್ರೆಟ್ ಆಗಿಡಲು ಹೇಳಿದ್ದಳು. ಬಾಯ್‌ಫ್ರೆಂಡ್‌ ಕುರಿತು ಆಕೆ ಹೇಳಿದ ಮಾತುಗಳನ್ನು ಅವಳ ಫ್ರೆಂಡ್ ಯಾರಿಗೂ ಹೇಳಲಿಲ್ಲ, ಆದರೆ ಮೈಕ್‌ ಆನ್‌ ಆಗಿದ್ದಕ್ಕೆ ಎಲ್ಲರಿಗೂ ಕೇಳಿಸಿತ್ತು. ಅದನ್ನು ಕೇಳಿಸಿಕೊಂಡ ಒಂದು ಹುಡುಗಿ ಶ್ವೇತಾ ಯುರ್‌ ಮೈಕ್‌ ಈಸ್ ಆನ್‌ ಎಂದು ಹೇಳಿದ್ದಾಳೆ.

5. ಝೂಮ್‌ ಕಾಲ್‌ನಲ್ಲಿರುವಾಗ ಪತಿಗೆ ಪತ್ನಿ ಕಿಸ್‌ಕೊಟ್ಟ ವೀಡಿಯೋ
ವರ್ಕ್‌ ಫ್ರಂ ಹೋಂ ತಂದ ಅವಾಂತರಗಳಲ್ಲಿ ಇದೂ ಒಂದು. ಗಂಡ ಆಫೀಸ್‌ನವರ ಜೊತೆ ಝೂಮ್‌ ಮೀಟಿಂಗ್‌ನಲ್ಲಿರುತ್ತಾನೆ, ಪತ್ನಿ ಬಂದು ಗಂಡನಿಗೆ ಮುತ್ತಿಕ್ಕಲು ಪ್ರಯತ್ನಿಸುತ್ತಾಳೆ, ಈ ವೀಡಿಯೋ ವೈರಲ್ ಆಗಿತ್ತು, ಆನಂದ್‌ ಮಹೇಂದ್ರಾ ವೈಫ್‌ ಆಫ್‌ ದಿ ಇಯರ್ ಎಂದು ರೀಟ್ವೀಟ್ ಮಾಡಿದ್ದರು.

6. ಕೇರಳದ ವೈದ್ಯಕೀಯ ವಿದ್ಯಾರ್ಥಿಗಳ ಡ್ಯಾನ್ಸ್
ಇದನ್ನು ಕೇರಳದ ತ್ರಿಶೂರ್‌ನ ವೈದ್ಯಕೀಯ ಕಾಲೇಜಿನಲ್ಲಿ ಶೂಟ್‌ ಮಾಡಲಾಗಿದೆ. ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಬೋನಿ M's 1978 ಹಿಟ್ ಸಾಂಗ್‌ಗೆ ನೃತ್ಯ ಮಾಡಿದ್ದರು. ಇನ್‌ಸ್ಟಾಗ್ರಾಮ್‌ನಲ್ಲಿ ಮಿಲಿಯನ್‌ಗಟ್ಟಲೆ ವ್ಯೂವ್ಸ್ ಬಂದಿತ್ತು, ಇವರು ಡ್ಯಾನ್ಸ್ ಮಾಡಿದ್ದು ಕಾಂಟ್ರವರ್ಸಿ ಉಂಟು ಮಾಡಿತ್ತು.

7. ಕೋವಿಡ್‌ ರೋಗಿಗಳನ್ನು ಖುಷಿ ಪಡಿಸಲು ವೈದ್ಯರ PPE ಕಿಟ್ಸ್ ಡ್ಯಾನ್ಸ್
ಈ ವೀಡಿಯೋ ಹೆಚ್ಚು ವೀಕ್ಷಣೆ ಕಂಡಿದ್ದು ಮಾತ್ರವಲ್ಲ ಸಾಕಷ್ಟು ಮೆಚ್ಚುಗೆಯನ್ನು ಪಡೆದಿತ್ತು. ನರ್ಸ್ ಹಾಗೂ ಡಾಕ್ಟರ್ಸ್ ಪಿಪಿಇ ಕಿಟ್ ಧರಿಸಿ ಕೋವಿಡ್‌ 19 ರೋಗಿಗಳ ಎದುರು ಡ್ಯಾನ್ಸ್ ಮಾಡಿ ಅವರಲ್ಲಿ ಮಾನಸಿಕ ಧೈರ್ಯ ತುಂಬುವ ಕೆಲಸ ಮಾಡಡಿದ್ದರು, ಇವರು ಡ್ಯಾನ್ಸ್ ಮಾಡುವಾಗ ಕೆಲವೊಂದು ರೋಗಿಗಳು ಕೂಡ ಡ್ಯಾನ್ಸ್ ಮಾಡಿದ್ದರೆ.

8. ರೆಮೆಡಿಸಿವಿರ್ ಎಂದು ಹೇಳುವ ಬದಲಿಗೆ ರೆಮೊ ಡಿಸೋಜ ಅಂತ ಹೇಳಿದ ವೀಡಿಯೋ
ಕೋವಿಡ್ 19 ಎರಡನೇ ಅಲೆಯಲ್ಲಿ ರೆಮಿಡಿಸಿವಿರ್‌ಗೆ ತುಂಬಾನೇ ಬೇಡಿಕೆ ಬಂದಿತ್ತು, ಕೆಲವರು ಇದನ್ನು ದಂಧೆಯಾಗಿ ಮಾಡಿದ್ದರು. ಜನರು ಹಣವನ್ನು ಪೀಕಿದ ರಾಕ್ಷಸರೂ ಇದ್ದಾರೆ. ಇದರ ಬಗ್ಗೆ ನೊಂದುಕೊಂಡು ವ್ಯಕ್ತಿಯೊಬ್ಬರು ಮೀಡಿಯಾದ ಮುಂದೆ ಹೇಳುವಾಗ Ciplaದ ರೆಮಿಡಿಸಿವರ್‌ಗೆ 5 ಸಾವಿರ ಕೊಟ್ಟೆ ಎನ್ನುವ ಬದಲಿಗೆ ರೆಮೊ ಡಿಸೋಜಾ ಅಂದಿದ್ದಾರೆ, ಈ ವೀಡಿಯೋ ಸಾಕಷ್ಟು ವೈರಲ್ ಆಗಿತ್ತು. ರೆಮೊ ಡಿಸೋಜಾ ಕೊರೊಯಾಗ್ರಾಫರ್ ಹಾಗೂ ಫಿಲ್ಮಂ ಮೇಕರ್ ಆಗಿದ್ದಾರೆ.

9. ಕ್ಯೂನಲ್ಲಿ ನಿಂತು ಮದ್ಯ ಪಡೆಯುವಾಗ ದೆಹಲಿ ಆಂಟಿ ಹೇಳಿದ ಮಾತು
ದೆಹಲಿ ಸಿಎಂ ವಾರದವರೆಗೆ ಲಾಕ್‌ಡೌನ್‌ ಘೋಷಿಸಿದಾಗ ಜನರು ಮದ್ಯದ ಅಂಗಡಿ ಮುಂದೆ ಕ್ಯೂ ನಿಂತಿದ್ದರು. ಆ ಮದ್ಯ ಪಡೆಯಲು ಕ್ಯೂನಲ್ಲಿ ನಿಂತಿದ್ದ ಮಹಿಳೆಯ ಬಳಿ ಟಿವಿಯವರು ಮಾತನಾಡಿಸಿದಾಗ ಯಾವುದೇ ಔಷಧಿ ಮದ್ಯಕ್ಕೆ ಸಮವಾಗಲ್ಲ ಎಂದು ಹೇಳಿರುವ ವೀಡಿಯೋ ಸಕತ್ ವೈರಲ್ ಆಗಿತ್ತು.

10. ಲವ್‌ ಯೂ ಜಿಂದಗಿ
ಈ ವೀಡಿಯೋವನ್ನು ಮೋನಿಕಾ ಎಂಬ ಡಾಕ್ಟರೊಬ್ಬರು ಪೋಸ್ಟ್ ಮಾಡಿದಾಗ ಹುಡುಗಿಯ ಧೈರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದರು. 30 ವರ್ಷದ ಹುಡುಗಿಯೊಬ್ಬಳಿಗೆ ಕೋವಿಡ್‌ 19 ತಗುಲಿ ಪರಿಸ್ಥಿತಿ ತುಂಬಾ ಗಂಭೀರವಾಗಿತ್ತು, ಐಸಿಯು ಬೆಡ್‌ ಕೂಡ ಸಿಕ್ಕಿರಲಿಲ್ಲ. NIV ಸಪೋರ್ಟ್‌ನಲ್ಲಿ ಇದ್ದುಕೊಂಡು ಚಿಕಿತ್ಸೆ ಪಡೆಯುತ್ತಿದ್ದಳು. ಅವಳಿಗೆ ಪ್ಲಾಸ್ಮಾ ಥೆರಪಿ, ರೆಮಿಡಿಸಿವಿರ್‌ ನೀಡಲಾಗಿತ್ತು, ಕೋವಿಡ್‌ 19ನಿಂದ ಸಂಪೂರ್ಣ ಬಳಲಿದ್ದರೂ ಡಾಕ್ಟರ್‌ ಬಳಿ ಹಾಡು ಹಾಕಲು ಹೇಳುತ್ತಾಳೆ. ಲವ್‌ ಯೂ ಜಿಂದಗಿ ಹಾಡಿಗೆ ತನಗೆ ಏನೂ ಆಗಿಲ್ಲ ಎಂಬಷ್ಟು ಆರಾಮವಾಗಿ ಹಾಡನ್ನು ಕೇಳುತ್ತಾಳೆ. ಈ ಹುಡುಗಿಯ ಧೈರ್ಯ ಹಲವರಲ್ಲಿ ಧೈರ್ಯ ತುಂಬಿತ್ತು, ದುರಾದೃಷ್ಟವಶಾತ್‌ ಈ ಹುಡುಗಿಯನ್ನುಕೊರೊನಾ ಬಲಿ ಪಡೆಯಿತು.

English summary

Top Viral Videos Of 2021 That Create Sensation In India

Top Viral Videos Of 2021 That Create Sensation In India, Read on...
X