For Quick Alerts
ALLOW NOTIFICATIONS  
For Daily Alerts

ಬಟ್ಟೆ ಒಗೆಯುವುದನ್ನು ಈ ಚಿಂಪಾಂಜಿ ನೋಡಿ ಕಲಿಯಬೇಕು ನೋಡಿ

|

ಬಟ್ಟೆ ಒಗೆಯುವುದೇ ತುಂಬಾ ದೊಡ್ಡ ಸಮಸ್ಯೆಯಪ್ಪಾ? ಮೆಷಿನ್‌ ಇದ್ದರೂ ಎಲ್ಲಾ ಬಟ್ಟೆ ಅದರಲ್ಲಿ ಹಾಕಲು ಸಾಧ್ಯವಾಗುವುದಿಲ್ಲ, ಯಾರಾದರೂ ಸಹಾಯ ಮಾಡಿದರೆ ಒಳ್ಳೆಯದಿತ್ತು? ಎಂದು ಅಂದುಕೊಂಡಿದ್ದರೆ ಈ ಚಿಂಪಾಂಜಿ ನೋಡಿ ಛೇ.. ಈ ಚಿಂಪಾಜಿ ನನ್ನ ಮನೆಯಲ್ಲಾದರೂ ಇರಬಾರದಿತ್ತಾ ಎಂದು ಖಂಡಿತ ನೀವು ಅಂದುಕೊಳ್ಳುವಿರಿ.

Chimpanzee Washing A clothes

ಇನ್ನು ನಂಗೆ ಬಟ್ಟೆ ಒಗೆಯುವುದಕ್ಕೇ ಬರಲ್ಲ ಎನ್ನುವವರು ಈ ಚಿಂಪಾಂಜಿ ನೋಡಿ ಕಲಿಯುವುದು ಬಹಳಷ್ಟಿದೆ. ಕೊಳದ ಪಕ್ಕದಲ್ಲಿ ಕೂತು ಸೋಪನ್ನು ಚೆನ್ನಾಗಿ ಬಟ್ಟೆಗೆ ಹಾಕಿ ತಿಕ್ಕಿ ಅದು ಒಗೆಯುವ ರೀತಿಯಿದೆಲ್ಲಾ ಯಾವ ಅಗಸನಿಗೂ ಕಮ್ಮಿಯಿಲ್ಲ ಬಿಡಿ.

ಯಾವ ಪ್ರಾಣಿಗಳ ಮೆದುಳು ದೊಡ್ಡದಿರುತ್ತದೋ ಅದರ ಬುದ್ಧಿಶಕ್ತಿಯೂ ಅಧಿಕವಿರುತ್ತದೆ, ಮನುಷ್ಯನ ಮೆದುಳು ಇತರ ಪ್ರಾಣಿಗಳಿಗಿಂತ ದೊಡ್ಡದಾಗಿರುವುದರಿಂದ ತುಂಬಾ ಬುದ್ಧಿವಂತ, ಇನ್ನು ಚಿಂಪಾಂಜಿಗೆ ಮಂಗಗಳಿಗಿಂತ ಹೆಚ್ಚಿನ ಬುದ್ಧಿಶಕ್ತಿಯಿದೆ. ಚೈನಾದ ಲೆಹೆ ಲೆಡು ಥೀಮ್ ಪಾರ್ಕ್‌ನಲ್ಲಿ 18 ವರ್ಷದ ಯುಹಿ ಎಂಬ ಚಿಂಪಾಂಜಿ ಬಟ್ಟೆ ಒಗೆಯುತ್ತಿರುವ ವಿಡಿಯೋ ವೈರಲ್ ಆಗಿದೆ.

ಕೊಳದ ಬಳಿಗೆ ಬಂದ ಚಿಂಪಾಂಜಿ ಸೋಪ್‌ ನೋಡುತ್ತದೆ. ಅಲ್ಲೇ ಇರುವ ಟೀ ಶರ್ಟ್‌ ಕೂಡ ಕಾಣುತ್ತದೆ. ಅದನ್ನು ತೆಗೆದು ನೀರಿನಲ್ಲಿ ಅದ್ದಿ ನಂತರ ಸೋಪ್‌ ಹಾಕಿ ತಿಕ್ಕುತ್ತದೆ. ಆ ಪಾರ್ಕ್‌ನ ಕಾವಲುಗಾರ ಬಟ್ಟೆ ಒಗೆಯುವುದನ್ನು ನೋಡಿ ಚಿಂಪಾಂಜಿ ಕಲಿತುಕೊಂಡಿದೆ ಎನ್ನಲಾಗಿದೆ. ಚಿಂಪಾಜಿಗಳು ಮನುಷ್ಯ ಮಾಡಿದಂತೆ ಮಾಡುವುದನ್ನು ಈ ಹಿಂದೆಯೂ ನೋಡಲಾಗಿದೆ. ಚಿಂಪಾಂಜಿ ನಾಯಿಗೆ ಮನುಷ್ಯ ಮಾಡಿಸಿದಂತೆ ಸ್ನಾನ ಮಾಡಿಸುವುದು, ಮತ್ತೊಂದು ಚಿಂಪಾಜಿ ನೆಲ ಗುಡಿಸುವುದು ಇವೆಲ್ಲಾ ಸಿನಿಮಾಗಳಲ್ಲಿ ಕೂಡ ಚಿತ್ರೀಕರಣವಾಗಿದೆ.

ಯುಹಿ ಮನುಷ್ಯರನ್ನು ಅನುಕರಿಸುವಲ್ಲಿ ನಿಸ್ಸೀಮನಾಗಿದ್ದುಕೈ ಬೆರಳುಗಳಲ್ಲಿ ನಾವು ತೋರಿಸಿದಂತೆ ಹೃದಯವನ್ನು ತೋರಿಸುವುದು, ಒಂಟಿ ಕಾಲಿನಲ್ಲಿ ನಿಲ್ಲುವುದನ್ನು ಮಾಡುತ್ತದೆ ಎನ್ನುತ್ತಾರೆ ಅದನ್ನು ಆರೈಕೆ ಮಾಡುತ್ತಿರುವ ಸಿಬ್ಬಂದಿ.

English summary

This Viral Video Of Chimpanzee Washing A clothes

An 18-year-old chimpanzee called Yuhui was found washing clothes at the Lehe Ledu Theme Park in Chongqing, China.
X
Desktop Bottom Promotion