For Quick Alerts
ALLOW NOTIFICATIONS  
For Daily Alerts

ತೇರಿ... ಮೇರಿ ಅಂತ ಹಾಡಿದ ನಾಯಿ, ನೆಟ್ಟಿಗರು ಫುಲ್ ಫಿದಾ

|

ಇತ್ತೀಚೆಗೆ ರೈಲ್ವೆ ಸ್ಟೇಷನ್‌ವೊಂದರಲ್ಲಿ ತೇರಿ.. ಮೇರಿ ಕಹಾನಿ ಹೈ ಅಂತ ಹಾಡಿದ ರಾನು ಮಂಡಲ್ ಹಾಡಿಗೆ ಫಿದಾ ಆದ ನೆಟ್ಟಿಗರು ಆಕೆಯನ್ನು ಸೆಲೆಬ್ರಿಟಿ ಸ್ಥಾನಕ್ಕೇರಿಸಿದರು. ಇದೀಗ ಅದೇ ಹಾಡೊಂದನ್ನು ನಾಯಿವೊಂದು ಹಾಡುವ ಮೂಲಕ ಸಾಮಾಜಿಕ ತಾಣದಲ್ಲಿ ಸೆನ್ಸೇಷನ್ ಉಂಟು ಮಾಡಿದೆ.


ನಾಯಿಯ ತೇರಿ... ಮೇರಿ ಜಾನ್ ಹಾಡಿಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ಸುಬೀರ್ ಖಾನ್ ಎಂಬ ವ್ಯಕ್ತಿ ಹಾರ್ಮೋನಿಯಂ ಹಿಡಿದು ತೇರಿ.. ಮೇರಿ ಎಂದು ಹಾಡುತ್ತಿದ್ದರೆ ನಾಯಿ ಅದಕ್ಕೆ ತಕ್ಕಂತೆ ಶಬ್ದ ಹೊರಡಿಸುವ ವೀಡಿಯೋ ನೋಡಲು ಸಕತ್ ಮಜಾವಾಗಿದೆ. ಈ ವೀಡಿಯೋ ನೋಡಿದವರು ಹೊಟ್ಟೆ ಹುಣ್ಣಾಗುವಂತೆ ನಗುವುದು ಗ್ಯಾರಂಟಿ, ಹಾಗಿದೆ ಈ ನಾಯಿಯ ಪರ್‌ಫಾರ್ಮೆನ್ಸ್.

ಸುಬೀರ್‌ ತಮ್ಮ ಫೇಸ್‌ಬುಕ್‌ನಲ್ಲಿ ಈ ವೀಡಿಯೋ ಹಾಕಿದ್ದು, ಹಾಡು ಹಾಡಿದ ನಾಯಿಯ ಹೆಸರು ಬಘಾ ಎಂದಿದ್ದಾರೆ. ಈ ವೀಡಿಯೋವನ್ನು ಸಾಮಾಜಿಕ ತಾಣದಲ್ಲಿ ಎರಡು ಮಿಲಿಯನ್‌ಗೂ ಅಧಿಕ ಬಾರಿ ವೀಕ್ಷಿಸಲಾಗಿದೆ, ನಾಯಿಯ ಹಾಡಿಗೆ ನೆಟ್ಟಿಗರು ಮೆಚ್ಚುಗೆಯನ್ನೂ ಸೂಚಿಸುತ್ತಿದ್ದಾರೆ.

ಈ ಹಾಡಿನಲ್ಲಿ ನಾಯಿ ಹಾಡುವುದನ್ನು ನೋಡಿ ವೀಡಿಯೋದಲ್ಲಿರುವ ಆ ವ್ಯಕ್ತಿ ಹಾಡಿರುವುದಕ್ಕಿಂತ ಚೆನ್ನಾಗಿ ನಾಯಿ ಹಾಡುತ್ತಿದೆ, ನಾಯಿ ಆತನಿಗೆ ನೀ ಸುಮ್ನಿರಪ್ಪಾ ಎಂದು ಹೇಳುತ್ತಿದೆ ಎಂದೆಲ್ಲಾ ಕಮೆಂಟ್‌ ಮಾಡಿದ್ದಾರೆ. ಒಟ್ಟಿನಲ್ಲಿ ತೇರಿ... ಮೇರಿ ಹಾಡಿ ನಾಯಿ ಕೂಡ ರಾಕ್ ಸ್ಟಾರ್ ಆಗಿದೆ.

English summary

Talented Dog Joining His Owner to 'Sing' Teri Meri Song Video Viral

The man was playing in the harmonium and singing song , his dog also howling to the song, This funny video goes viral.
Story first published: Tuesday, February 4, 2020, 17:15 [IST]
X
Desktop Bottom Promotion