For Quick Alerts
ALLOW NOTIFICATIONS  
For Daily Alerts

Solar Eclipse 2022 : ಅ. 25ಕ್ಕೆ ಸೂರ್ಯಗ್ರಹಣ: ಎಲ್ಲೆಲ್ಲಿ ಗೋಚರಿಸಲಿದೆ, ಸೂತಕದ ಸಮಯ ಯಾವಾಗ?

|

ಖಗೋಳದಲ್ಲಿನಡೆಯುವ ಹಲವು ವಿಸ್ಮಯಗಳಲ್ಲಿ ಸೂರ್ಯಗ್ರಹಣ ಕೂಡ ಒಂದು. ಸೂರ್ಯಗ್ರಹಣ ವಿದ್ಯಾಮಾನ ವೈಜ್ಞಾನಿಕ ಹಾಗೂ ಜ್ಯೋತಿಷ್ಯ ದೃಷ್ಟಿಯಿಂದ ತುಂಬಾನೇ ಮಹತ್ವದ್ದಾಗಿದೆ. ವಿಜ್ಞಾನಗಳು ಈ ದಿನ ಖಗೋಳದಲ್ಲಿ ನಡೆಯುವ ಕುತೂಹಲವನ್ನು ತಿಳಿಯಲು ಮುಂದಾದರೆ ವೈದಿಕ ಶಾಸ್ತ್ರ ಈ ದಿನ ಏನು ಮಾಡಬಾರದು ಎಂಬುವುದು ಹೇಳುತ್ತೆ. ಈ ವರ್ಷದ 2ನೇ ಸೂರ್ಯಗ್ರಹಣ ಅಕ್ಟೋಬರ್‌ 25ರಂದು ಸಂಭವಿಸಲಿದೆ.

ಸೂರ್ಯಗ್ರಹಣ ಎಂದರೇನು?
ಸೂರ್ಯ ಹಾಗೂ ಭೂಮಿ ನಡುವೆ ಚಂದ್ರ ಬಂದಾಗ ಸೂರ್ಯಗ್ರಹಣ ಸಂಭಇಸುತ್ತದೆ. ಇದನ್ನು ಆಡುಭಾಷೆಯಲ್ಲಿ ಸೂರ್ಯನಿಗೆ ಗ್ರಹಣ ಹಿಡಿಯವುದು ಎಂದು ಹೇಳಲಾಗುವುದು.

ಈ ಬಾರಿಯ ಸೂರ್ಯಗ್ರಹಣದ ಸಮಯ ಯಾವಾಗ, ಎಲ್ಲೆಲ್ಲಿ ಗೋಚರಿಸಲಿದೆ ಎಂದು ನೋಡೋಣ ಬನ್ನಿ:

ಸೂರ್ಯಗ್ರಹಣ ಸಮಯ

ಸೂರ್ಯಗ್ರಹಣ ಸಮಯ

ಸೂರ್ಯಗ್ರಹಣವು UTC ಸಮಯ ಬೆಳಗ್ಗೆ 8:58ಕ್ಕೆ ಗೋಚರಿಸಲಿದೆ. (IST ಸಮಯ ಪ್ರಕಾರ ಮಧ್ಯಾಹ್ನ 02:28ಕ್ಕೆ)ರಿಂದ UTC ಸಮಯ ಮಧ್ಯಾಹ್ನ 1 ಗಂಟೆಯವರೆಗೆ ಇರುತ್ತದೆ (IST ಸಮಯ ಪ್ರಕಾರ ಸಂಜೆ 06:32ರವರೆಗೆ). ನಿಮಗೆ UTC ಸಮಯ ಬೆಳಗ್ಗೆ 11 ಗಂಟೆಗೆ ಸೂರ್ಯನಿಗೆ ಹೆಚ್ಚಾಗಿ ಗ್ರಹಣ ಹಿಡಿದಿರುವುದು ಗೋಚರಿಸುವುದು).

ಎಲ್ಲೆಲ್ಲಿ ಸೂರ್ಯಗ್ರಹಣ ಗೋಚರಿಸಲಿದೆ?

ಎಲ್ಲೆಲ್ಲಿ ಸೂರ್ಯಗ್ರಹಣ ಗೋಚರಿಸಲಿದೆ?

ಯುರೋಪ್‌, ಪಾಸ್ಚಾತ್ಯ ಸೈಬೇರಿಯಾ, ಮಧ್ಯ ಏಷ್ಯಾ, ಉರಲ್ ಪರ್ವತಗಳು, ಪಶ್ಚಿಮ ಏಷ್ಯಾ ಮತ್ತು ಆಫ್ರಿಕಾದ ಈಶಾನ್ಯ ಭಾಗಗಳಲ್ಲಿ ಹೆಚ್ಚಾಗಿ ಗೋಚರಿಸಲಿದೆ.

ರಷ್ಯಾದ ಪಶ್ಚಿಮ ಸೈಬೇರಿಯಾದಲ್ಲಿ ಸಂಪೂರ್ಣ ಸೂರ್ಯಗ್ರಹಣ ನೋಡಬಹುದಾಗಿದೆ.

ಭಾರತದ ಕಾಲಾಮಾನ ಪ್ರಕಾರ ಸೂರ್ಯಗ್ರಹಣ ಯಾವಾಗ ಕಂಡು ಬರುವುದು?

ಭಾರತದ ಕಾಲಾಮಾನ ಪ್ರಕಾರ ಸೂರ್ಯಗ್ರಹಣ ಯಾವಾಗ ಕಂಡು ಬರುವುದು?

ಪಾರ್ಶ್ವ ಸೂರ್ಯಗ್ರಹಣ ಅಕ್ಟೋಬರ್ 25 ಸಂಜೆ 6:29ಕ್ಕೆ ಪ್ರಾರಂಭ

ಸಂಜೆ 05:42ಕ್ಕೆ ಮುಕ್ತಾಯವಾಗಲಿದೆ.

ಸಮಯ: 1 ಗಂಟೆ 13 ನಿಮಿಷ

ಭಾರತದಲ್ಲಿ ಸೂರ್ಯಾಸ್ತದ ಸಮಯವಾಗಿರುವುದರಿಂದ ಇದರ ಪ್ರಭಾವ ಅಷ್ಟಾಗಿ ಇರುವುದಿಲ್ಲ.

ಭಾರತದ ಯಾವೆಲ್ಲಾ ನಗರಗಳಲ್ಲಿ ಪಾರ್ಶ್ವ ಸುರ್ಗ್ರಹಣ ಗೋಚರಿಸಲಿದೆ?

ಭಾರತದಲ್ಲಿ ನವ ದೆಹಲಿ, ಕೋಲ್ಕತ್ತಾ, ಚೆನ್ನೈ, ಉಜ್ವೈನ್, ಮಥುರಾಗಳಲ್ಲಿ ಗೋಚರಿಸಲಿದೆ.

ಸೂತಕಕಾಲ ಯಾವಾಗ

ಸೂತಕಕಾಲ ಯಾವಾಗ

ಸೂತಕ ಪ್ರಾರಂಭ: ಬೆಳಗ್ಗೆ 03:17ರಿಂದ

ಸೂತಕ ಮುಕ್ತಾಯ: ಸಂಜೆ 05:42

ಮಕ್ಕಳು, ವಯಸ್ಸಾದವರು ಹಾಗೂ ಕಾಯಿಲೆ ಇರುವವರಿಗೆ ಸೂತಕ ಪ್ರಾರಂಭ: ಮಧ್ಯಾಹ್ನ 12:05ರಿಂದ

ಸೂತಕ ಮುಕ್ತಾಯ ಸಂಜೆ 05:42ಕ್ಕೆ

English summary

Solar Eclipse 2022 in October : Know Date, Time and Second Surya Grahan Visibility in India in Kannada

Solar Eclipse October 2022: The second Surya Grahan of the year 2022 will occur on Tuesday, 25 October 2022. Know Date, Time and second Surya Grahan Visibility in India in Kannada,
X
Desktop Bottom Promotion