For Quick Alerts
ALLOW NOTIFICATIONS  
For Daily Alerts

ಝೂನಲ್ಲಿ ವ್ಯಕ್ತಿಯ ಟೀ ಶರ್ಟ್ ಎಳೆದು, ಕಾಲು ಗಟ್ಟಿಯಾಗಿ ಹಿಡಿದ ಒರಾಂಗುಟನ್‌: ವೀಡಿಯೋ ವೈರಲ್‌

|

ಎರಡು ಮೂರು ದಿನಗಳಿಂದ ಒರಾಂಗುಟನ್ (ಗೊರಿಲ್ಲಾ ಜಾತಿಗೆ ಸೇರಿದ ಪ್ರಾಣಿ)ಯ ಸಾಮಾಜಿಕ ತಾಣದಲ್ಲಿ ತುಂಬಾನೇ ವೈರಲ್‌ ಆಗ್ತಾ ಇದೆ. ಇದರ ಬಗ್ಗೆ ಅನೇಕ ಚರ್ಚೆಗಳು ಸಾಮಾಜಿಕ ತಾಣದಲ್ಲಿ ನಡೆಯುತ್ತಿದೆ. ಅದು ಇಂಡೋನೇಷ್ಯಾದ ಕಸಾಂಗ್‌ ಕುಲಿಮ್ ಮೃಗಾಲಯದಲ್ಲಿರುವ ಒರಾಂಗುಟನ್‌ ವೀಡಿಯೋ ಇದಾಗಿದೆ.

 Orangutan Pulls Mans T-shirt, Holds On To Leg ; Video goes Viral

ಆ ವೀಡಿಯೋ ಒಬ್ಬ ವ್ಯಕ್ತಿ ಒರಾಂಗುಟನ್‌ ಬಳಿ ಹೋಗುವುದನ್ನು ಕಾಣಬಹುದು, ಆದರೆ ಆ ಪ್ರಾಣಿಗದು ಇಷ್ಟವಾಗಲ್ಲ, ಅವನ ಟೀ ಶರ್ಟ್ ಹಿಡಿದು ಎಳೆಯುತ್ತೆ, ಅವನು ಬಿಡಿಸಿಕೊಳ್ಳಲು ನೋಡುವಾಗ ಬಿಡುವುದೇ ಇಲ್ಲ, ಮತ್ತೊಬ್ಬ ವ್ಯಕ್ತಿ ಅವನ ರಕ್ಷಣೆಗೆ ಬರುತ್ತಾರೆ, ಆದರೆ ಒರಾಂಗುಟನ್ ಬಿಡಲು ಸಿದ್ಧವಿರುವುದಿಲ್ಲ, ಅವನ ಕಾಲನ್ನು ಗಟ್ಟಿಯಾಗಿ ಹಿಡಿದುಕೊಳ್ಳುತ್ತೆ. ಈ ವೀಡಿಯೋ ಇದೀಗ ಸಕತ್ ವೈರಲ್‌ ಆಗಿದ್ದು ಇದರ ಬಗ್ಗೆ ತುಂಬಾ ಚರ್ಚೆ ನಡೆಯುತ್ತಿದೆ. ಈ ಮೃಗಾಲಯ ವೀಕ್ಷಕರಿಗೆ ಎಷ್ಟು ಸುರಕ್ಷಿತ ಎಂದು ಕೆಲವರು ಹೇಳಿದರೆ ಇನ್ನು ಕೆಲವರು ಇವನು ಅಧಿಪ್ರಸಂಗ ಮಾಡಿರಬಹುದು ಅದಕ್ಕೆ ಹೀಗಾಗಿದ್ದು ಅಂತಿದ್ದಾರೆ.

ಇದೀಗ ಮೃಗಾಲಯದ ಅಧಿಕಾರಿಗಳು ಊ ಕುರಿತು ಪ್ರತಿಕ್ರಿಯೆ ನೀಡಿದ್ದು ' ನಡೆದಿರುವ ಪ್ರಕರಣಕ್ಕೆ ವಿಷಾದ ವ್ಯಕ್ತಿಪಡಿಸುತ್ತೇವೆ, ಆ ವ್ಯಕ್ತಿ ಒರಾಂಗುಟನ್ ಜೊತೆ ಕ್ಲೋಸ್‌ಅಪ್‌ ಫೋಟೋ ತೆಗೆಯಲು ನಿರ್ಬಂಧದ ಗೆರೆಯನ್ನು ದಾಟಿ ಒಳ ಹೋಗಿರುವುದರಿಂದ ಈ ರೀತಿಯ ಘಟನೆ ಸಂಭವಿಸಿದೆ ಎಂದು ಹೇಳಿದೆ'.

ಮೈಗಾಲಯಕ್ಕೆ ಹೋದಾಗ ಪ್ರಾಣಿಗಳ ಹತ್ತಿರ ಹೋಗಬಾರದು, ಜಮೈಕಾದ ಮೃಗಾಲಯದಲ್ಲಿ ಇತ್ತೀಚೆಗೆ ಅಲ್ಲಿಯ ಕೆಲಸಗಾರರ ಕೈ ಬೆರಳನ್ನು ಸಿಂಹ ಕಚ್ಚಿ ತುಂಡರಿಸಿದ್ದು ಸುದ್ದಿಯಾಗಿತ್ತು.

ಮೃಗಾಲಯಕ್ಕೆ ಹೋದಾಗ ಪ್ರಾಣಿಗಳ ಹತ್ತಿರ ಹೋಗುವುದು, ಕುಚೇಷ್ಠೆ ಮಾಡುವುದು ಮಾಡಿದರೆ ಈ ರೀತಿಯ ಅಪಾಯಗಳಾಗಬಹುದು ಹುಷಾರ್!

English summary

Orangutan Pulls Man's T-shirt, Holds On To Leg ; Video goes Viral

Orangutan Pulls Man's T-shirt, Holds On To Leg ; Video goes Viral, Read on...
Story first published: Thursday, June 9, 2022, 9:33 [IST]
X
Desktop Bottom Promotion