For Quick Alerts
ALLOW NOTIFICATIONS  
For Daily Alerts

'ಮದುವೆಯಾಗಲು ಸಾಫ್ಟ್‌ವೇರ್‌ ಎಂಜಿನಿಯರ್‌ ಹುಡುಗ ಬೇಡ' ಎಂಬ ಮ್ಯಾಟ್ರಿಮೋನಿ ಜಾಹೀರಾತು ಸಿಕ್ಕಾಪಟ್ಟೆ ವೈರಲ್

|

ಮದುವೆಗೆ ವರಬೇಕು, ವಧುಬೇಕು ಎಂದು ಕೆಲವರು ನ್ಯೂಸ್‌ ಪೇಪರ್‌ನಲ್ಲಿ ಜಾಹೀರಾತು ನೀಡುತ್ತಾರೆ. ಹೀಗೆ ಜಾಹೀರಾತು ನೀಡುವವರು ಇಷ್ಟು ವರ್ಷದವರು ಬೇಕು, ಇಂಥ ಪದವಿಯಲ್ಲಿದ್ದರೆ ಒಳ್ಳೆಯದು ಎಂದೆಲ್ಲಾ ತಮ್ಮ ನಿರೀಕ್ಷೆಯ ಬಾಳಸಂಗಾತಿಗೆ ಬಗ್ಗೆ ಹೇಳಿರುತ್ತಾರೆ, ಆ ಪ್ರೊಫೈಲ್‌ಗೆ ಮ್ಯಾಚ್‌ ಆದವರು ಅವರನ್ನು ಸಂಪರ್ಕಿಸುತ್ತಾರೆ. ಆದರೆ ಇತ್ತೀಚೆಗೆ ಪೇಪರ್‌ನಲ್ಲಿ ನೀಡಲಾಗಿದ್ದ ವರಬೇಕೆಂಬ ಜಾಹೀರಾತು ಸಿಕ್ಕಾಪಟ್ಟೇ ವೈರಲ್‌ ಆಗಿದೆ.

Matrimonial ad with ‘software engineers, don’t call goes viral on internet

ಅಷ್ಟಕ್ಕೂ ಆ ಜಾಹೀರಾತು ಇಂಟರ್‌ನೆಟ್‌ನಲ್ಲಿ ವೈರಲ್‌ ಆಗಲು ಕಾರಣ ಸಾಫ್ಟ್‌ವೇರ್‌ ಎಂಜಿನಿಯರ್‌ ಹುಡುಗ ಎಂದು ಹೇಳಿರುವುದು. ಇದೀಗ ಟ್ವಿಟರ್‌ನಲ್ಲಿ ಆ ಜಾಹೀರಾತಿನ ಫೋಟೋ ವೈರಲ್‌ ಆಗುತ್ತಿದ್ದು ಟೆಕ್ಕಿಗಳಂತೂ ಆ ಜಾಹೀರಾತಿಗೆ ತಮ್ಮದೇ ಶೈಲಿನಲ್ಲಿ ಉತ್ತರಿಸುತ್ತಿದ್ದಾರೆ.

ಆ ಜಾಹೀರಾತು ಪ್ರಕಾರ ಹುಡುಗ ಐಎಎಸ್/ಐಪಿಎಸ್ ಅಥವಾ ಪಿಜಿ ಮಾಡಿರುವ ಡಾಕ್ಟರ್ ಅಥವಾ ಉದ್ಯಮಿಯಾಗಿರಬೇಕು ಎಂದಿದೆ. ಅದರ ಕೆಳಗಡೆ ಸಾಫ್ಟ್‌ವೇರ್‌ ಎಂಜಿನಿಯರ್‌ಗಳೇ ದಯವಿಟ್ಟು ಕರೆ ಮಾಡಬೇಡಿ ("Software engineers kindly do not call") ಎಂಬುವುದಾಗಿ ಬರೆಯಲಾಗಿದೆ.

ಈ ಫೋಟೋ ಶೇರ್‌ ಮಾಡಿರುವ ವ್ಯಕ್ತಿ ಇನ್ಮುಂದೆ ಐಟಿಯವರು ಭವಿಷ್ಯ ಏಕೋ ಅಷ್ಟು ಸರಿ ಕಾಣುತ್ತಿಲ್ಲ ಎಂಬುವುದಾಗಿ ಜೋಕ್‌ ಮಾಡಿದ್ದಾರೆ.

ಇದಕ್ಕೆ ಅನೇಕ ಜನರು ಪ್ರತಿಕ್ರಿಯಿಸಿದ್ದು 'ಏನೂ ಚಿಂತೆಯಿಲ್ಲ, ಎಂಜಿನಿಯರ್‌ಗಳು ನ್ಯೂಸ್‌ಪೇಪರ್‌ ಜಾಹೀರಾತು ನೋಡಿಕೊಂಡೇನು ಇಲ್ಲ, ಅವರಿಗೆ ಬೇಕಗಿದ್ದು ಪಡೆಯಲು ಗೊತ್ತಿದೆ' ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.

ಸಾಫ್ಟ್‌ವೇರ್‌ ಎಂಜಿನಿಯರ್‌ಗಳು ಎಲ್ಲವನ್ನು ಆನ್ಲೈನ್‌ನಲ್ಲಿ ಸರ್ಚ್ ಮಾಡುತ್ತಾರೆ,ಆದ್ದರಿಂದ ಈ ಜಾಹೀರಾತು ನೀಡಿವರು ಚಿಂತೆ ಮಾಡಬೇಕಾಗಿಲ್ಲ, ಅವರು ನ್ಯೂಸ್‌ಪೇಪರ್‌ ಜಾಹೀರಾತು ನೋಡುವುದೇ ಇಲ್ಲ ಎಂದು ಮತ್ತೊಬ್ಬರು ಪ್ರತಿಕ್ರಿಯಿಸದ್ದಾರೆ.

ಹೀಗೆ ಈ ವಿಚಿತ್ರವಾದ ಜಾಹೀರಾತಿಗೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದು ಸಾಫ್ಟ್‌ವೇರ್‌ ಬೇಡ ಎನ್ನುವ ಜಾಹೀರಾತು ಅಂತೂ ವೈರಲ್‌ ಆಗಿದೆ... ಅಂದ ಹಾಗೆ ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು, ಕಮೆಂಟ್ ಮಾಡಿ.

English summary

Matrimonial ad with ‘software engineers, don’t call goes viral on internet

Newspaper matrimonial ad with ‘software engineers, don’t call' goes viral on twitter, read on...
Story first published: Wednesday, September 21, 2022, 17:39 [IST]
X
Desktop Bottom Promotion