For Quick Alerts
ALLOW NOTIFICATIONS  
For Daily Alerts

ಐಟಿ ಜಾಬ್‌ಗೆ ಗುಡ್‌ಬೈ, ಕತ್ತೆ ಹಾಲಿನಿಂದ 17 ಲಕ್ಷಕ್ಕೂ ಅಧಿಕ ದುಡಿಮೆ: ಮಂಗಳೂರಿನ ವ್ಯಕ್ತಿಯ ಯಶೋಗಾಥೆಯಿದು

|

ಅವರು ಸಾಫ್ಟ್‌ವೇರ್‌ ಎಂಜಿನಿಯರ್, ಆದರೆ ಆ ಕೆಲಸಕ್ಕೆ ಗುಡ್‌ಬೈ ಹೇಳಿ ಕತ್ತೆ ಫಾರ್ಮ್‌ ಮಾಡಿ ಯಶಸ್ವಿಯಾಗಿರುವ ಯಶೋಗಾಥೆಯಿದು.

ಅವರ ಹೆಸರು ಶ್ರೀನಿವಾಸ ಗೌಡ, ವಯಸ್ಸು 42. ಸಾಫ್ಟ್‌ವೇರ್‌ ಕೆಲಸದಲ್ಲಿದ್ದ ಅವರು ಆ ಕೆಲಸ ಬಿಟ್ಟು ಹಳ್ಳಿಗೆ ಮರಳಿ ಕತ್ತೆಗಳನ್ನು ಸಾಕುತ್ತಾರೆ, ಈಗ ಅದರಲ್ಲಿ ಸಕ್ಸಸ್‌ ಆಗುವ ಮೂಲಕ ಈಗ ಸಕತ್‌ ಸುದ್ದಿಯಲ್ಲಿದ್ದರೆ.

ಮಂಗಳೂರಿನ ಸಮೀಪದ ಹಳ್ಳಿಯಲ್ಲಿದೆ ಕತ್ತೆ ಫಾರ್ಮ್‌

ಮಂಗಳೂರಿನ ಸಮೀಪದ ಹಳ್ಳಿಯಲ್ಲಿದೆ ಕತ್ತೆ ಫಾರ್ಮ್‌

ಮಂಗಳೂರಿನ ಇರಾ ಗ್ರಾಮ ಪಂಚಾಯಿತಿಗೆ ಸೇರಿದ ಪರ್ಲೆಡ್ಕಾ ಹಳ್ಳಿಯಲ್ಲಿ ಕತ್ತೆ ಫಾರ್ಮ್‌ ಪ್ರಾರಂಭಿಸುತ್ತಾರೆ. ಈ ಹಳ್ಳಿ ಮಂಗಳೂರು ಸಿಟಿಯಿಂದ 37 ಕಿ.ಮೀ ದೂರದಲ್ಲಿದೆ.

ಶ್ರೀನಿವಾಸ ಗೌಡ ಮೂಲತಃ ರೈತ ಕುಟುಂಬದಿಂದ ಬಂದವರು. ಏನೋ ಭಿನ್ನವಾಗಿ ಮಾಡಬೇಕು ಎಂದು ಯೋಚಿಸುತ್ತಿರುವವರಿಗೆ ಹೊಳೆದಿದ್ದು ಕತ್ತೆ ಫಾರ್ಮ್‌ ಮಾಡುವುದು. ಭಾರತದಲ್ಲಿ ಒಟ್ಟು ಮೂರು ಕತ್ತೆ ಫಾರ್ಮ್‌ಗಳಿವೆ. ಮತ್ತೆರಡು ಫಾರ್ಮ್ ಒಂದು ಕೇರಳದ ಎರ್ನಾಕುಳಂನಲ್ಲಿ, ತಮಿಳುನಾಡಿನ ತಿರುನೆವೆಲ್ಲಯಲ್ಲಿದೆ.

ಸಾಫ್ಟ್‌ವೇರ್‌ ಕೆಲಸಕ್ಕೆ ಗುಡ್‌ ಬೈ, ಕತ್ತೆ ಫಾರ್ಮ್‌ಗೆ ಹಾಯ್

ಸಾಫ್ಟ್‌ವೇರ್‌ ಕೆಲಸಕ್ಕೆ ಗುಡ್‌ ಬೈ, ಕತ್ತೆ ಫಾರ್ಮ್‌ಗೆ ಹಾಯ್

2020ರಲ್ಲಿ ಕೆಲಸವನ್ನು ಬಿಟ್ಟು 2.3 ಎಕರೆ ಜಾಗದಲ್ಲಿ ಕತ್ತೆ ಫಾರ್ಮ್‌ ಮಾಡಿ, 20 ಕತ್ತೆಗಳನ್ನು ತಂದು ಸಾಕುತ್ತಾರೆ. ಈಗ ದೋಬಿಗಳು ಕತ್ತೆ ಬಳಕೆ ಕಡಿಮೆ ಮಾಡಿದ್ದಾರೆ, ಆದರೆ ಇವರು ಕತ್ತೆ ಫಾರ್ಮ್‌ ಮಾಡಿ ಸಕ್ಸಸ್‌ ಮೂಲಕ ಕತ್ತೆಗಳಿಗೆ ಮತ್ತೆ ಡಿಮ್ಯಾಂಡ್‌ ಬರುವಂತೆ ಮಾಡಿದ್ದಾರೆ.

ಆಡಿಕೊಂಡವರಿಗೆ ಉತ್ತರ ಕೊಟ್ಟ ಶ್ರೀನಿವಾಸ ಗೌಡ

ಆಡಿಕೊಂಡವರಿಗೆ ಉತ್ತರ ಕೊಟ್ಟ ಶ್ರೀನಿವಾಸ ಗೌಡ

ಇವರು ಪ್ರಾರಂಭದಲ್ಲಿ ಕತ್ತೆ ಫಾರಂ ಮಾಡುವಾಗ ಜನ ಆಡಿಕೊಂಡಿದ್ದರು. ಎಲ್ಲಾ ಕೆಲಸದಲ್ಲೂ ಆಡಿಕೊಳ್ಳುವವರು ಇದ್ದೇ ಇರ್ತಾರೆ ಅಲ್ವಾ? ಆದರೆ ಶ್ರೀನಿವಾಸ ತಲೆ ಕೆಡಿಸಿಕೊಳ್ಳದೆ ಈಗ ಆಡಿಕೊಂಡವರಿಗೆ ಸಾಧನೆ ಮೂಲಕ ಉತ್ತರ ಕೊಟ್ಟಿದ್ದಾರೆ.

ತಾಯಿ ಎದೆ ಹಾಲಿಗೆ ಪರ್ಯಾಯವಾದ ಹಾಲು: ಕತ್ತೆ ಹಾಲು

ತಾಯಿ ಎದೆ ಹಾಲಿಗೆ ಪರ್ಯಾಯವಾದ ಹಾಲು: ಕತ್ತೆ ಹಾಲು

ಇವರು 30ಮಿಲೀ ಹಾಲಿನ ಪ್ಯಾಕೆಟ್‌ ಗೆ ರೂ. 150ಕ್ಕೆ ಮಾರಾಟ ಮಾಡುತ್ತಿದ್ದಾರೆ. ಒಂದು ಲೀಟರ್‌ ಹಾಲಿನಿಂದ ರೂ. 500ರಿಂದ 600ರೂ ದುಡಿಯುತ್ತಿದ್ದಾರೆ. ಈಗಾಗಲೇ ಬ್ಯುಟಿ ಪ್ರಾಡೆಕ್ಟ್ ಕಂಪನಿಯಿಂದ 17 ಲಕ್ಷ ರುಪಾಯಿ ಮೌಲ್ಯದ ಕತ್ತೆ ಹಾಲಿಗೆ ಆರ್ಡರ್‌ ಬಂದಿದೆಯಂತೆ.

ತಾಯಿಯ ಎದೆ ಹಾಲಿಗೆ ಪರ್ಯಾಯವಾದ ಹಾಲೆಂದರೆ ಅದು ಕತ್ತೆ ಹಾಲು. ಶ್ರೀನಿವಾಸ ಗೌಡ ಈಗ ಕತ್ತೆ ಹಾಲಿನ ಬ್ಯುಸ್‌ನಿಂದ 17 ಲಕ್ಷಕ್ಕೂ ಅಧಿಕ ದುಡಿಯುತ್ತಿದ್ದಾರೆ, ಈ ಮೂಲಕ ಮತ್ತೊಂದಿಷ್ಟು ಜನರಿಗೆ ಸ್ಪೂರ್ತಿಯಾಗಿದ್ದಾರೆ.

English summary

Mangalore Man Quits IT Job to Open Donkey Milk Farm, Gets Orders worth Rs 17 lakh

Mangalore man quits IT job to open donkey milk farm, gets orders worth Rs 17 lakh, read on,
Story first published: Monday, June 13, 2022, 17:30 [IST]
X
Desktop Bottom Promotion