For Quick Alerts
ALLOW NOTIFICATIONS  
For Daily Alerts

Lunar Eclipse 2021 : ಮೇ. 26ಕ್ಕೆ ಸಂಭವಿಸಲಿದೆ ರಕ್ತ ಚಂದ್ರಗ್ರಹಣ: ಇದು ಎಲ್ಲೆಲ್ಲಿ ಗೋಚರಿಸಲಿದೆ

|

ನಮಲ್ಲಿ ಗ್ರಹಣ ಎಂದರೆ ಏನೋ ಕುತೂಹಲ. ಕೆಲವರು ಅದನ್ನು ವೈಜ್ಞಾನಿಕ ದೃಷ್ಟಿಯಿಂದ ನೋಡಿದರೆ, ಇನ್ನು ಕೆಲವರು ವೈದಿಕ ದೃಷ್ಟಿಯಿಂದ ನೋಡುತ್ತಾರೆ. ಗ್ರಹಣ ಎನ್ನುವುದು ನಭೋಮಂಡಲದಲ್ಲಿ ನಡೆಯುವ ಒಂದು ಕೌತುಕ ಪ್ರಕ್ರಿಯೆ. ಗ್ರಹಣ ಎನ್ನುವುದು ಭೂಮಿ, ಸೂರ್ಯ ಮತ್ತು ಚಂದ್ರನ್ನೊಳಗೊಂಡ ಒಂದು ಖಗೋಳ ಪ್ರಕ್ರಿಯೆಯಾಗಿದೆ. 2021 ವರ್ಷದ ಮೊದಲ ಚಂದ್ರಗ್ರಹಣ ಮೇ.26ಕ್ಕೆ ಸಂಭವಿಸಲಿದೆ.

ಮೇ. 26ರ ಚಂದ್ರಗ್ರಹಣ ಬ್ಲಡ್‌ ಮೂನ್ ಅಂದ್ರೆ ರಕ್ತ ಚಂದ್ರಗಹಣವಾಗಿದೆ. ಭಾರತದ ಸಮಯ ಪ್ರಕಾರ ಮಧ್ಯಾಹ್ನ 2.17- ಸಂಜೆ 7.19ರವರೆಗೆ ಇರಲಿದೆ. ಈ ಅವಧಿಯ ನಡುವೆ ಚಂದ್ರ ಕೆಂಪಾಗಿ 14 ನಿಮಿಷ, 30 ಸೆಕೆಂಡ್‌ ಗೋಚರಿಸಲಿದೆ. ಈ ಸಮಯದಲ್ಲಿ ಈ ಚಂದ್ರಗ್ರಹಣ ಯಾವ ಸಮಯಕ್ಕೆ ಗೋಚರಿಸಲಿದೆ, ಏನಿದು ಕೆಂಪು ಚಂದ್ರಗ್ರಹಣ, ಈ ಗ್ರಹಣ ಯಾವ ದೇಶಗಳಲ್ಲಿ ಗೋಚರಿಸಲಿದೆ ಎಂಬುವುದರ ಬಗ್ಗೆ ಮಾಹಿತಿ ಇಲ್ಲಿದೆ.

ಚಂದ್ರಗ್ರಣ ಎಂದರೇನು?

ಚಂದ್ರಗ್ರಣ ಎಂದರೇನು?

ಚಂದ್ರಗ್ರಹಣವನ್ನು ವೈಜ್ಞಾನಿಕವಾಗಿ ಹೇಳುವುದಾದರೆ ಸೂರ್ಯ ಮತ್ತು ಚಂದ್ರನ ಮಧ್ಯೆ ಭೂಮಿ ಬಂದಾಗ ಚಂದ್ರಗ್ರಹಣವು ನಡೆಯುವುದು. ಯಾಕೆಂದರೆ ಈ ವೇಳೆ ಸೂರ್ಯನ ಬೆಳಕು ಚಂದ್ರನ ಮೇಲೆ ಬೀಳುವುದಿಲ್ಲ, ಭೂಮಿಯ ನೆರಳು ಚಂದ್ರನ ಮೇಲೆ ಬೀಳುತ್ತದೆ. ಆಗ ಗ್ರಹಣ ಸಂಭವಿಸುತ್ತದೆ. ಈ ಗ್ರಹಣದ ವೇಳೆ ಚಂದ್ರನು ತುಂಬಾ ಕೆಂಪಾಗಿ ಕಾಣಿಸಿಕೊಳ್ಳಬಹುದು.

ರಕ್ತ ಚಂದ್ರ ಅಥವಾ ಕೆಂಪು ಚಂದ್ರ

ರಕ್ತ ಚಂದ್ರ ಅಥವಾ ಕೆಂಪು ಚಂದ್ರ

ಗ್ರಹಣದ ಸಮಯದಲ್ಲಿ ಸೂರ್ಯ ಮತ್ತು ಚಂದ್ರ ನಡುವೆ ಭೂಮಿ ಅಡ್ಡ ಬಂದಾಗ ಭೂಮಿಯ ನೆರಳು ಚಂದ್ರನ ಮೇಲೆ ಬಿದ್ದು ಚಂದ್ರ ಕಾಂತಿ ಕಳೆದುಕೊಳ್ಳುತ್ತಾನೆ. ಖಗ್ರಾಸ ಚಂದ್ರ ಗ್ರಹಣದಲ್ಲಿ ಭೂಮಿಯ ಸಂಪೂರ್ಣ ನೆರಳು ಚಂದ್ರನ ಮೇಲೆ ಬಿದ್ದು, ನಂತರ ಭೂಮಿ ಕೊಂಚ ಸರಿದಾಗ ಸೂರ್ಯ ಕಿರಣಗಳು ಭೂಮಿಯ ಅಂಚಿನಿಂದ ಚಂದ್ರನ ಮೇಲೆ ಬೀಳುತ್ತವೆ. ಆಗ ವಾತಾವರಣದ ಧೂಳಿನ ಕಣಗಳು ಸೂರ್ಯನ ಬೆಳಕಿಗೆ ಅಡ್ಡಬಂದು ಚಂದ್ರ ರಕ್ತವರ್ಣದಲ್ಲಿ ಕಾಣಿಸುತ್ತಾನೆ. ಇದನ್ನು 'ಬ್ಲಡ್ ಮೂನ್ ಅಥವಾ ರಕ್ತ ಚಂದ್ರ ಎಂದು ಕರೆಯಲಾಗುವುದು. ಆದ್ದರಿಂದ ಬಣ್ಣದ ಕಾರಣಕ್ಕೆ ಆತಂಕ ಪಡಬೇಕಾಗಿಲ್ಲ.

ಮೇ. 26 ಚಂದ್ರಗ್ರಹಣವನ್ನು ಎಲ್ಲೆಲ್ಲಿ ಕಾಣಬಹುದು?

ಮೇ. 26 ಚಂದ್ರಗ್ರಹಣವನ್ನು ಎಲ್ಲೆಲ್ಲಿ ಕಾಣಬಹುದು?

ಆಸ್ಟ್ರೇಲಿಯಾದ ಕೆಲವು ಭಾಗಗಳಲ್ಲಿ, ನ್ಯೂಜಿಲ್ಯಾಂಡ್, ಅಮೆರಿಕದ ಪೂರ್ವ ಭಾಗಗಳಲ್ಲಿ, ದಕ್ಷಿಣ ಅಮೆರಿಕ, ಹಿಂದೂ ಮಹಾ ಸಾಗರ, ಪೆಸಿಫಿಕ್ ಸಾಗರ, ಅಂಟ್ಲಾಟಿಕ ಸಾಗರ, ಏಷ್ಯಾದ ಆಗ್ನೇಯ ಭಾಗಗಳಲ್ಲಿ ಕಂಡು ಬರಲಿದೆ.

2021ರಲ್ಲಿ ಸಂಭವಿಸಲಿರುವ ಗ್ರಹಣಗಳು

2021ರಲ್ಲಿ ಸಂಭವಿಸಲಿರುವ ಗ್ರಹಣಗಳು

ಮೇ. 26ಕ್ಕೆ ಬ್ಲಡ್‌ ಮೂಡ್‌

ಜೂನ್ 10ಕ್ಕೆ ವಾರ್ಷಿಕ ಸೂರ್ಯಗ್ರಹಣ

ನವೆಂಬರ್‌ 19ಕ್ಕೆ ಭಾಗಶಃ ಚಂದ್ರಗ್ರಹಣ

ಡಿಸೆಂಬರ್‌ 4ಕ್ಕೆ ಪೂರ್ಣ ಸೂರ್ಯಗ್ರಹಣ ಸಂಭವಿಸಲಿದೆ

English summary

Lunar Eclipse 2021: Date, Time, Where to Watch First Blood Moon of the Year?

Lunar Eclipse 2021: date, time, where to watch first blood moon of the Year, read on...
X