For Quick Alerts
ALLOW NOTIFICATIONS  
For Daily Alerts

ವೀಡಿಯೋ: ವ್ಯಕ್ತಿಯನ್ನು ಅಪ್ಪಿ ಮುತ್ತಿಕ್ಕುತ್ತಿರುವ ಸಿಂಹಗಳು!

|

ಕಾಡಿನ ರಾಜ ಸಿಂಹ ವ್ಯಕ್ತಿಯನ್ನು ಸ್ವಾಗತಿಸುವುದು, ಅದರ ತಂಡದ ಉಳಿದ ಸದಸ್ಯರು ಆ ಮನುಷ್ಯನನ್ನು ಅಪ್ಪಿ ಮುದ್ದಾಡುವುದು ಇವೆಲ್ಲಾ ಕತೆಗಳಲ್ಲಿ, ಸಿನಿಮಾಗಳಲ್ಲಿ ನೋಡಿರುತ್ತೀರಿ. ಆದರೆ ನಿಜವಾಗಲು ಆ ರೀತಿ ನಡೆಯಲು ಸಾಧ್ಯವೇ? ಹೂಂ... ಖಂಡಿತ ಸಾಧ್ಯವಿಲ್ಲ ಎನ್ನುವಿರಿ. ಆದರೆ ಸಿನಿಮಾ, ಕತೆಯಲ್ಲಿ ಬರುತ್ತಿದ್ದ ಅಂಥ ಕಾಲ್ಪನಿಕ ಪಾತ್ರಕ್ಕೆ ಇಲ್ಲಿ ಜೀವ ಬಂದಿದೆ.

ಸಿಂಹಗಳು ಪ್ರೀತಿಯಿಂದ ಆ ವ್ಯಕ್ತಿಯನ್ನು ಸ್ವಾಗತಿಸುವುದು ಅವುಗಳ ಜೊತೆ ಆಡುವ ವೀಡಿಯೋವೊಂದು ಇಂಟರ್‌ನೆಂಟ್‌ನಲ್ಲಿ ವೈರಲ್ ಆಗಿದೆ. ಇದನ್ನು ಮ್ಯಾಕೈ ಎಂಬ ಟ್ವಿಟರ್ ಬಳಕೆದಾರರು ಹಾಕಿದ್ದು, ಈ ವೀಡಿಯೋ ನೋಡಿ ಅಚ್ಚರಿಗೊಳಗಾದೆ ಎಂದಿದ್ದಾರೆ. ಇದೀಗ ಆ ಅದ್ಭುತ ವೀಡಿಯೋ ವೈರಲ್ ಆಗಿದೆ.

Lions Hugging Man Video

ವೀಡಿಯೋದಲ್ಲಿ ಡೀನ್ ಷ್ನೇಯ್ಡರ್ ಎಂಬವರನ್ನು ಕಾಡಿನಲ್ಲಿ ಸಿಂಹ ಹಾಗೂ ಅದರ ಕುಟುಂಬ ಸದಸ್ಯರು ಸ್ವಾಗತಿಸುವ ರೀತಿ ನೀವು ಊಹಿಸಲೂ ಸಾಧ್ಯವಿಲ್ಲ, ಅಷ್ಟು ಅದ್ಭುತವಾಗಿದೆ ನೋಡಿ. ಡೀನ್ ಷ್ನೇಯ್ಡರ್ ಕೂಡ ಈ ವೀಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಾಕಿ ಕೊಂಡಿದ್ದು 'ದೂರವಿರುವಾಗಲೇ ನಾವೆಷ್ಟು ಪ್ರೀತಿಸುತ್ತಿದ್ದೇವೆ ಎಂದು ಗೊತ್ತಾಗುವುದು, ಈ ರೀತಿಯ ಗೌರವದ ಸ್ವಾಗತ ಸಿಕ್ಕಿರುವುದು ತೃಪ್ತಿ ತಂದಿದೆ' ಎಂದಿದ್ದಾರೆ.

ಆ ವೀಡಿಯೋದಲ್ಲಿ ಡೀನ್ 'ಇದಕ್ಕಿಂತ ವಿಶ್ವದಲ್ಲಿ ನನಗೇನು ಬೇಕಾಗಿಲ್ಲ. ಸುಮಾರು ಎರಡೂವರೆ ವಾರಗಳ ಬಳಿಕ ನಾನು ನನ್ನ ಕುಟುಂಬದವರನ್ನು ನೋಡುತ್ತಿದ್ದೇನೆ, ಕೊನೆಗೂ ನಾವೆಲ್ಲಾ ಜೊತೆಗಿದ್ದೇವೆ' ಎಂದು ಸಂತಸ ವ್ಯಕ್ತ ಪಡಿಸುತ್ತಿದ್ದಾರೆ. ಹೀಗೂ ನಡೆಯಲು ಸಾಧ್ಯನಾ ಎಂದು ಪ್ರತಿಯೊಬ್ಬರಿಗೆ ಅಚ್ಚರಿ ಮೂಡಿಸುವ ಈ ವೀಡಿಯೋಗಳು ಇಂಟರ್‌ನೆಟ್‌ನಲ್ಲಿ ತುಂಬಾ ಸದ್ದು ಮಾಡುತ್ತಿದ್ದಾರೆ. ಡೀನ್ ಹಾಗೂ ಸಿಂಹಗಳ ನಡುವಿನ ಪ್ರೀತಿ ನೋಡಿ ನೆಟ್ಟಿಗರು ಮೂಕವಿಸ್ಮಿತರಾಗಿದ್ದಾರೆ.

English summary

lions Hugging and Kissing Man Video Goes Viral

the viral video here we are talking about was shared by Twitter user Mackie with the caption, "I literally stalked this guy’s IG stories/page until he posted this video.
Story first published: Tuesday, January 14, 2020, 17:44 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X