For Quick Alerts
ALLOW NOTIFICATIONS  
For Daily Alerts

ಜಪಾನಿನಲ್ಲಿ ಮತ್ಸ್ಯೆಕನ್ಯೆ ರೂಪದ ಮಮ್ಮಿ ಪತ್ತೆ: ಈ ಜೀವಿ ತಿಂದವರು 800 ವರ್ಷ ಬದುಕುತ್ತಿದ್ದರಂತೆ!

|

ಜಪಾನಿನಲ್ಲಿ ಮತ್ಸ್ಯೆಕನ್ಯೆ ಆಕೃತಿಯ ಒಂದು ಮಮ್ಮಿ ಸಿಕ್ಕಿದ್ದು , ೀ ಪ್ರಾಣಿಯ ಮಾಂಸದ ರುಚಿಯನ್ನು ಸೇವಿಸಿದವರು ದೀರ್ಘಾಯುಷಿಗಳಾಗಿರುತ್ತಾರೆ ಅಂದರೆ 800 ವರ್ಷಗಳಿಗಿಂತಲೂ ಅಧಿಕ ಕಾಲ ಜೀವಿಸಿರುತ್ತಾರೆ ಎಂದು ಹೇಳಲಾಗುತ್ತಿದ್ದು ಇದರ ಮೂಲದ ಕುರಿತು ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿದ್ದಾರೆ.

Japanese Scientists To Probe Origins Of Mermaid Shaped Mummy Said to Grant Immortality

ಈ ವಿಚಿತ್ರವಾದ ಜೀವಿಯು 12 ಇಂಚು (30 ಸೆ.ಮೀ) ಇದ್ದು ಫೆಸಿಫಿಕ್‌ ಸಮುದ್ರದಲ್ಲಿ 1736 ರಿಂದ 1741ರ ನಡುವೆ ಸಿಕ್ಕಿತ್ತು ಎಂದು ಹೇಳಲಾಗುತ್ತಿದೆ.

ಈ ಜೀವಿಯ ಪಳೆಯುಳಿಕೆಯನ್ನು ಒಕಯಾಮಾದ ಅಸಕುಚಿ ನಗರದಲ್ಲಿರುವ ದೇವಾಲಯದಲ್ಲಿ ಸಂರಕ್ಷಿಸಿ ಇಡಲಾಗಿದೆ.

ಈ ಪಳಿಯುಳಿಕೆಯಲ್ಲಿ ಉಗುರು, ಹಲ್ಲುಗಳು, ತಲೆಯಲ್ಲಿ ಕೂದಲು ಹಾಗೂ ಕೆಳಭಾಗದ ದೇಹ ಕಾಣ ಸಿಗುತ್ತಿದ್ದು, ಈ ಆಕೃತಿಯನ್ನು ನೋಡಿದರೆ ಮತ್ಸ್ಯೆ ಕನ್ಯೆಯ ಆಕೃತಿಯಲ್ಲಿದೆ. ಇದೀಗ ಈ ಆಕೃತಿಯ CT ಸ್ಕ್ಯಾನ್‌ ಮಾಡಿ ಹೆಚ್ಚಿನ ಅಧ್ಯಯನ ನಡೆಸುತ್ತಿದೆ.

ಜಪಾನ್‌ನ ಅಸಾಹಿ ಶಿಂಬುನ್ ಪತ್ರಿಕೆ ವರದಿ ಪ್ರಕಾರ ಈ ಪಳಿಯುಳಿಕೆ ಒಂದು ಬಾಕ್ಸ್‌ನಲ್ಲಿ ಹಾಕಿ ಫೆಸಿಫಿಕ್‌ ಸಾಗರದಲ್ಲಿ ಸಮರಕ್ಷಿಸಲಾಗಿತ್ತು. ಇದು ಮೀನು ಹಿಡಿಯುವವರ ಬಲೆಗೆ 1936ರಿಂದ 1741 ಒಳಗಡೆ ಸಿಕ್ಕಿರಬಹುದು ಎಂದು ಅಂದಾಜಿಸಲಾಗಿದೆ.

ಇದನ್ನು ದೇವಾಲಯವು ವಶಪಡಿಸಿಕೊಳ್ಳುವ ಮುನ್ನ ಒಂದು ಕುಟುಂಬವು ಇಟ್ಟುಕೊಂಡಿತ್ತು, ಅದು ಆ ಕುಟುಂಬದಲ್ಲಿ ಒಬ್ಬರ ನಂತರ ಮತ್ತೊಬ್ಬರಿಗೆ ಹಸ್ತಾಂತರವಾಗುತ್ತಿತ್ತು.

ಈ ವಿಚಿತ್ರ ಜೀವಿಯ ಬಗ್ಗೆ ಅನೇಕ ಸಂಶೋಧನೆಗಳು ನಡೆಯುತ್ತಿದೆ, ಇದಕ್ಕೆ ಧಾರ್ಮಿಕ ಮಹತ್ವವೂ ಇದೆ ಎನ್ನಲಾಗುತ್ತಿದೆ. ಇದರ ಮಾಂಸವನ್ನು ಸೇವಿಸಿದ ಲೆಜೆಂಡ್‌ಗಳು ಸುಮಾರು 800 ವರ್ಷಗಳಿಗಿಂತ ಅಧಿಕ ಕಾಲ ಜೀವಿಸಿದ್ದರು ಎನ್ನಲಾಗುತ್ತಿದೆ.

ವಿಜ್ಞಾನಿಗಳು ಈ ಜೀವಿಯ ಕುರಿತು ಹೆಚ್ಚಿನ ಸಂಶೋಧನೆ ನಡೆಸುತ್ತಿದ್ದು ಮುಂದಿನ ವರ್ಷದಲ್ಲಿ ಇದರ ಬಗ್ಗೆ ಹೆಚ್ಚಿನ ಅಧ್ಯಯನ ವರದಿ ನೀಡಲಿದೆ.

English summary

Japanese Scientists To Probe Origins Of Mermaid Shaped Mummy Said to Grant Immortality

Japanese scientists to probe origins of mermaid shaped Mummy said to grant immortality, read on...
X
Desktop Bottom Promotion