For Quick Alerts
ALLOW NOTIFICATIONS  
For Daily Alerts

ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಕುರಿತ ಆಸಕ್ತಿಕರ ಸಂಗತಿಗಳು

|

2020ರ ಅಮೇರಿಕ ಅಧ್ಯಕ್ಷೀಯ ಚುನಾವಣೆ ಹೊಸತನಕ್ಕೆ ಸಾಕ್ಷಿಯಾಗಿದೆ. ಅಮೆರಿಕದ ಅಧ್ಯಕ್ಷರ ಕಚೇರಿಗೆ ಮಹಿಳೆಯೊಬ್ಬರು ಆಯ್ಕೆ ಆಗುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ ಕಮಲಾ ಹ್ಯಾರಿಸ್.

ಕಮಲ ಹ್ಯಾರಿಸ್‌ ಅಮೆರಿಕದ ಪ್ರಜೆಯಾದರೂ ಅವರ ತಾಯಿ ಭಾರತೀಯಳು. ಆದ್ದರಿಂದ ಅಮೆರಿಕದ ಉಪಾಧ್ಯಕ್ಷೆಗೆ ಭಾರತದ ಜೊತೆಗೂ ಸಂಬಂಧವಿದೆ.

ನಾವಿಲ್ಲಿ ಕಮಲಾ ಹ್ಯಾರಿಸ್‌ ಕುರಿತ ಕೆಲ ಸ್ಪೂರ್ತಿದಾಯಕ ಆಸಕ್ತಿಕರ ಸಂಗತಿಗಳನ್ನು ಹೇಳಿದ್ದೇವೆ ನೋಡಿ.

ಭಾರತದೊಂದಿಗಿನ ಸಂಪರ್ಕ

ಭಾರತದೊಂದಿಗಿನ ಸಂಪರ್ಕ

ಕಮಲಾ ಚಿಕ್ಕ ಹುಡುಗಿಯಾಗಿದ್ದಾಗ ಭಾರತಕ್ಕೆ ಬಂದಿದ್ದರು. ಕಮಲಾ ತನ್ನ ಅಜ್ಜನ ನೋಡಿ ಪ್ರಭಾವಿತರಾಗಿದ್ದರು. ಇವರ ತಾತ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರು ಅಲ್ಲದೆ ಅಜ್ಜಿ ಹಳ್ಳಿಯ ಮಹಿಳೆಯರಿಗೆ ಗರ್ಭನಿರೋಧಕ ಕುರಿತು ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದರು.

ಹಿಂದೂ-ಕ್ರಿಶ್ಚಿಯನ್ ಹುಡುಗಿ

ಹಿಂದೂ-ಕ್ರಿಶ್ಚಿಯನ್ ಹುಡುಗಿ

ಕಮಲಾ ಅವರ ತಾಯಿ ಹಿಂದೂ ತಂದೆ ಕ್ರಿಶ್ಚಿಯನ್. ಈ ಎರಡೂ ಸಂಪ್ರದಾಯದಲ್ಲಿ ಬೆಳೆದವರು ಕಮಲಾ ಹ್ಯಾರಿಸ್. ಇವರು ಬ್ಲ್ಯಾಕ್ ಬ್ಯಾಪ್ಟಿಸ್ ಚರ್ಚ್‌ ಹಾಗೂ ದೇವಾಲಯಕ್ಕೆ ಭೇಟಿ ಕೊಡುತ್ತಿದ್ದರು. ತನ್ನನ್ನು ಹಾಗೂ ತನ್ನ ಸಹೋದರಿಯನ್ನು ಗಟ್ಟಿ ಮಹಿಳೆಯನ್ನಾಗಿಸಿದ್ದಕ್ಕೆ ತಾಯಿ ಕಾರಣ ಎಂದಿದ್ದಾರೆ.

ವಿದ್ಯಾಭ್ಯಾಸ

ವಿದ್ಯಾಭ್ಯಾಸ

ಹಾರ್ವಾಡ್ ವಿಶ್ವವಿದ್ಯಾನಿಲಯದ ವಿದ್ಯಾಭ್ಯಾಸ ಮಾಡಿರುವ ಇವರು ರಾಜ್ಯಶಾಸ್ತ್ರ ಮತ್ತು ಅರ್ಥಶಾಸ್ತ್ರವನ್ನು ಐಚ್ಛಿಕವಾಗಿ ತೆಗೆದುಕೊಂಡಿದ್ದರು.

ಅಡುಗೆಯಲ್ಲಿ ಆಸಕ್ತಿ

ಕಮಲಾ ಅವರಿಗೆ ಅಡುಗೆಯಲ್ಲಿ ತುಂಬಾನೇ ಆಸಕ್ತಿ. ಇವರಿಗೆ ಭಾರತೀಯ ಆಹಾರ ಅದರಲ್ಲೂ ದಕ್ಷಿಣ ಭಾರತದ ಆಹಾರ ಕೂಡ ಪರಿಚಯವಿದೆ.

 ಅಮೆರಿಕದ ಉಪಾಧ್ಯಕ್ಷೆ ಆಗುವ ಮೊದಲು ಏನಾಗಿದ್ದರು?

ಅಮೆರಿಕದ ಉಪಾಧ್ಯಕ್ಷೆ ಆಗುವ ಮೊದಲು ಏನಾಗಿದ್ದರು?

ಕಾನೂನು ಪದವಿ ಪಡೆದಿರುವ ಇವರು ಸಹಾಯಕ ಜಿಲ್ಲಾ ವಕೀಲೆಯಾಗಿ ಕಾರ್ಯನಿರ್ವಹಿಸಿದ್ದರು. ವಕೀಲೆಯಾಗಿದ್ದಾಗ ಇವರು ವೇಶ್ಯೆ ವೃತ್ತಿ ಮಾಡುವವರ ಧ್ವನಿ ಎತ್ತಿದ್ದರು.

ಒಬಾಮ ಅವರ ಸ್ನೇಹಿತೆ

ಅಮೆರಿಕದ ಮಾಜಿ ಅಧ್ಯಕ್ಷರಾದ ಬರಾಕ್ ಒಬಾಮ ಅವರ ಜೊತೆ 2004ರಿಂದ ಸ್ನೇಹಿತರಾಗಿರುವ ಕಮಲಾ ಕ್ಯಾಲಿಫೋರ್ನಿಯಾದಿಂದ 2008ರಲ್ಲಿ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.

ಕಮಲಾ ಹ್ಯಾರಿಸ್ ವಿಕಿಪೀಡಿಯಾ 408 ಬಾರಿ ಎಡಿಟ್ ಮಾಡಲಾಗಿತ್ತು

ಈ ಜೂನ್ ತಿಂಗಳಿನಲ್ಲಿ ಕಮಲಾ ಹ್ಯಾರಿಸ್ ಅವರ ವಿಕಿಪೀಡಿಯಾ ಪೇಜ್ 408 ಬಾರಿ ಎಡಿಟ್ ಆಗಿದೆ . ಯಾವ ನಾಯಕರ ವಿಕಿಪೀಡಿಯಾ ಪ್ರೊಫೈಲ್ ಇಷ್ಟೊಂದು ಬಾರಿ ಎಡಿಟ್ ಆಗಿರಲಿಲ್ಲ.

English summary

Interesting Facts About The US Vice President-Elect Kamala Harris

Here are interesting facts about US Vice President-Elect Kamala Harris, read on..
Story first published: Monday, November 9, 2020, 17:55 [IST]
X
Desktop Bottom Promotion