For Quick Alerts
ALLOW NOTIFICATIONS  
For Daily Alerts

ವೈರಲ್ ವೀಡಿಯೋ: ಕಂದನಿಗೆ ಅಂಬೆಗಾಲಿನಲ್ಲಿ ಓಡಾಡಲು ಕಲಿಸುತ್ತಿರುವ ನಾಯಿ

|

ಮನೆಯಲ್ಲಿ ಮಗುವೊಂದಿದ್ದರೆ ಮನೆಮಂದಿಯೆಲ್ಲಾ ಮಗುವಾಗಿ ಬಿಡುತ್ತೇವೆ. ಅದು ಆಡಿದಂತೆ ನಾವೂ ಆಡುತ್ತೇವೆ. ಅದು ಮುದ್ದಾಗಿ ನಕ್ಕಾಗ ನಾವು ನಗುತ್ತೇವೆ, ಅತ್ತಾಗ ಅತ್ತಂತೆ ನಟಿಸುತ್ತೇವೆ. ಇನ್ನು ಅಂಬೆಗಾಲಿನಲ್ಲಿ ಓಡಾಡುವಾಗ ನಾವೂ ಕೂಡ ಅದೇ ರೀತಿ ಅದರ ಜತೆ ಓಡಾಡುತ್ತೇವೆ ಅಲ್ವಾ?

ಆದರೆ ಇಲ್ಲೊಂದು ನಾಯಿಯನ್ನು ನೋಡಿ ಅಂಬೆಗಾಲಿನ ಮಗುವಿನ ಜತೆ ಆಟವಾಡುತ್ತಾ ಮಗುವಿಗೆ ಅಂಬೆಗಾಲಿನಲ್ಲಿ ಹೋಗುವುದು ಹೇಗೆ ಎಂದು ಹೇಳಿ ಕೊಡುತ್ತಿದೆ.


ಮಗು ಮೆಲ್ಲಮೆಲ್ಲನೆ ಅಂಬೆಗಾಲಿನಲ್ಲಿ ಹೋಗುವಾಗ ತಾನು ಕೂಡ ಅಷ್ಟೇ ನಿಧಾನವಾಗಿ ತೆವಳುತ್ತಾ ಮಗುವಿನ ಜತೆ ಆಡುತ್ತಿರುವ ವೀಡಿಯೋ ನೋಡಲು ತುಂಬಾ ಮುದ್ದಾಗಿದ್ದು ಆ ನಾಯಿಯ ಬುದ್ಧಿ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ.

ನಾಯಿಗಳು ಸಾಮಾನ್ಯವಾಗಿ ಮನುಷ್ಯರ ಜತೆ ತುಂಬಾ ಹೊಂದಿಕೊಂಡು ಬಾಳುತ್ತವೆ. ನಮ್ಮ ಭಾವನೆಗಳನ್ನು ಅರ್ಥ ಮಾಡಿಕೊಂಡು ಸ್ಪಂದಿಸುತ್ತವೆ. ನಾಯಿ ಒಂದು ಮನೆಯಲ್ಲಿದ್ದರೆ ಅದು ಬರೀ ನಾಯಿಯಾಗಿರದೆ ನಮ್ ಮನೆಯ ಕಾವಲುಗಾರ, ನಮ್ಮ ಒಡನಾಡಿ, ಮನೆ ಸದಸ್ಯ ಹೀಗೆ ಅದನ್ನು ತುಂಬಾ ಹಚ್ಕೊಂಡು ಬಿಡ್ತೀವಿ.

ಮನೆಯಲ್ಲಿ ಮಕ್ಕಳಿದ್ದರೆ ಕೆಲವೊಂದು ಸಾಕು ನಾಯಿ ಮಕ್ಕಳು ಅದರ ಜತೆಗೆ ಆಡುವಾಗ ಅದು ಕೂಡ ಆಡುತ್ತದೆ, ಮಕ್ಕಳು ಹೊಡೆದರೂ ಅದಕ್ಕೆ ನೋವಾದರೂ ಸುಮ್ಮನಾಗುತ್ತವೆ, ಆದರೆ ಇನ್ನೂ ಕೆಲವು ಹಾಗೆ ಇರುವುದಿಲ್ಲ, ಸ್ವಲ್ಪ ನೋವಾದರೂ ಕಚ್ಚಿ ಬಿಡುತ್ತವೆ. ಆದ್ದರಿಂದ ಮಕ್ಕಳ ಬಳಿ ನಾಯಿಯನ್ನು ಆಟವಾಡಲು ಬಿಡುವಾಗ ಎಚ್ಚರವಹಿಸುವುದು ಒಳ್ಳೆಯದು.

Read more about: baby dog ಮಗು ನಾಯಿ
English summary

Dog Playing With Baby Viral Video

At first, you may perceive the dog for having some problems in his limbs but then you realize that dog is actually training the toddler. The kid is seen moving behind the dog.
X
Desktop Bottom Promotion