Just In
- 1 hr ago
ವೈರಲ್: ಮುನಿಸಕೊಂಡ ತಮ್ಮನಿಗಾಗಿ 432ಮೀ ಉದ್ದ, 5ಕೆಜಿ ತೂಕದ ಪತ್ರ ಬರೆದ ಅಕ್ಕ, ಕೇರಳದ ನಡೆದ ಸುಂದರ ಘಟನೆ
- 3 hrs ago
ಜ್ಯೋತಿಷ್ಯ: ಜುಲೈ 2022 ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದಿದೆ..!
- 5 hrs ago
ಇಂಥಾ ಸಿಲ್ಲಿ ಕಾರಣಗಳಿಂದಲೇ ಮದುವೆಯಾಗಿ ವರ್ಷದಲ್ಲೇ ವಿವಾಹ ವಿಚ್ಛೇದನ ಆಗುವುದು
- 7 hrs ago
ಈ ರೀತಿ ಕಂಡು ಬಂದರೆ ರೋಗ ನಿರೋಧಕ ಶಕ್ತಿ ಕಡಿಮೆಯಾಗಿದೆ ಎನ್ನುವ ಸೂಚನೆಗಳಾಗಿವೆ
Don't Miss
- Movies
ಡ್ರಗ್ ಕೇಸ್: ಪಾಸ್ಪೋರ್ಟ್ ಹಿಂತಿರುಗಿಸುವಂತೆ ಮುಂಬೈ ಕೋರ್ಟ್ ಹೋದ ಆರ್ಯನ್
- Technology
ವಿದ್ಯುತ್ ಬಿಲ್ ಪಾವತಿಸುವ ಮುನ್ನ ಎಚ್ಚರ? ವಂಚಕರಿದ್ದಾರೆ?
- Automobiles
ಜೂನ್ ತಿಂಗಳ ಕಾರು ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಕಿಯಾ ಇಂಡಿಯಾ
- News
ಇವಿ ವಾಹನಗಳ ವೆಚ್ಚ ಜನರಿಗೆ ನಿಲುಕಲಿ: ಬಸವರಾಜ ಬೊಮ್ಮಾಯಿ
- Sports
ಭಾರತ ವರ್ಸಸ್ ಡರ್ಬಿಶೈರ್ ಟಿ20 ಅಭ್ಯಾಸ ಪಂದ್ಯ: ಪಂದ್ಯದ ಪ್ರಿವ್ಯೂ, ಸ್ಕ್ವಾಡ್
- Finance
ವಿ APP ಬಳಸಿ ನೆಚ್ಚಿನ ಹಾಡು ಕಾಲರ್ ಟ್ಯೂನ್ ಮಾಡ್ಕೊಳ್ಳೋದು ಹೇಗೆ?
- Education
Essay On Eid Al Adha 2022 : ಈದ್-ಅಲ್-ಅಧಾ ಹಬ್ಬದ ಕುರಿತು ಪ್ರಬಂಧ ಬರೆಯಲು ಮಾಹಿತಿ
- Travel
ಶಿವಗಂಗೆಯ ಸೌಂದರ್ಯತೆಯ ಒಂದು ಅನಾವರಣ - ಬೆಂಗಳೂರಿನಿಂದ ಶಿವಗಂಗೆಗೆ ಒಂದು ಪ್ರಯಾಣ
ವೈರಲ್ ಆಯ್ತು ಮುಖದಲ್ಲಿ ಬಾಲವಿರುವ ನಾಯಿಮರಿ
ಮುದ್ದಾದ ನಾಯಿಗಳ ಆಟ ನೋಡುವುದೇ ಚೆಂದ. ಮನೆಯಲ್ಲಿ ಒಂದು ನಾಯಿ ಸಾಕಿದರೆ ಕೆಲವೇ ದಿನಗಳಲ್ಲಿ ಮನೆ ಸದಸ್ಯರಲ್ಲಿ ಅದೂ ಕೂಡ ಒಂದು ಎಂಬ ಭಾವನೆ ಮೂಡಿಸುವಷ್ಟು ಮಟ್ಟಿಗೆ ನಮ್ಮೊಂದಿಗೆ ಬೆರೆತು ಬಿಡುತ್ತದೆ. ಕೆಲವು ನಾಯಿಗಳು ನಿಜವಾಗಿಯೂ ಅದೃಷ್ಟದ ನಾಯಿಗಳಾಗಿರುತ್ತವೆ. ಅವುಗಳಿಗೆ ಹೊತ್ತಿಗೆ ಸರಿಯಾಗಿ ರುಚಿ-ರುಚಿಯಾದ ಆಹಾರ, ಆರೈಕೆ ಎಲ್ಲವೂ ಸಿಗುತ್ತದೆ. ತಮ್ಮ ಮುದ್ದಿನ ನಾಯಿಯನ್ನು ಚಿಕ್ಕ ಮಗುವಿನ ಹಾಗೆ ನೋಡಿಕೊಳ್ಳುವ ಶ್ವಾನ ಪ್ರಿಯರನ್ನು ನೋಡುತ್ತೇವೆ.
ಇನ್ನು ಕೆಲವು ನಾಯಿಗಳು ಪಾಪ, ಅವುಗಳು ಬೀದಿಯಲ್ಲಿ ಬೆಳೆಯುತ್ತವೆ, ಬೀದಿ ನಾಯಿಗಳು ಎಂದ ಹೇಳಬೇಕೆ? ಎಲ್ಲರ ನಿರ್ಲಕ್ಷ್ಯಕ್ಕೆ ಒಳಗಾಗುತ್ತಾವೆ. ಯಾರೂ ನೋಡಿಕೊಳ್ಳುವವರು ಇಲ್ಲದೆ ಅನಾಥವಾಗಿದ್ದ ನಾಯಿ ಮರಿಯೊಂದು ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದೆ. ಇಷ್ಟಕ್ಕೂ ಈ ನಾಯಿ ಮರಿಯ ವಿಶೇಷ ಏನಪ್ಪಾಅಂದರೆ ಅದರ ಮುದ್ದಾದ ಮುಖದ ಮೇಲೆ ಮುಟ್ಟದೊಂದು ಬಾಲವಿದೆ. ಈ ಬಾಲವಿರುವ ನಾಯಿ ಇದೀಗ ಎಲ್ಲರ ಗಮನ ಸೆಳೆಯುತ್ತದೆ.
ಮಿಸೌರಿಯ ಕನ್ಸಾಸ್ ಸಿಟಿಯಲ್ಲಿ ಒಂದು ದೊಡ್ಡ ನಾಯಿಮರಿ ಹಾಗೂ ಈ ಚಿಕ್ಕ ನಾಯಿ ಬೀದಿ ಪಾಲಾಗಿದ್ದನ್ಉ ನೋಡಿದ ಯಾರೋ ಒಬ್ಬರು ಈ ನಾಯಿಗಳನ್ನು ದತ್ತು ತೆಗೆದುಕೊಳ್ಳಲು ಯಾರಾದರೂ ಸಿದ್ಧವಿದ್ದಾರೆಯೇ? ಎಂದು ಸಾಮಾಜಿಕ ತಾಣದಲ್ಲಿ ಹಾಕುತ್ತಾರೆ. ಈ ಪೋಸ್ಟ್ ನೋಡಿ ಸ್ಟೀಫನ್ ಎಂಬವರು ಆ ಎರಡೂ ನಾಯಿಯನ್ನು ದತ್ತು ಸ್ವೀಕರಿಸಿದ್ದಾರೆ.
ಸ್ಟೀಫನ್ ಆ ನಾಯಿ ಮರಿಯ ವೀಡಿಯೋ ಸಾಮಾಜಿಕ ತಾಣದಲ್ಲಿ ಹಾಕುತ್ತಿದ್ದಂತೆ ತಲೆಯಲ್ಲಿ ಪುಟ್ಟ ಬಾಲವಿರುವ ಆ ನಾಯಿಮರಿ ವೈರಲ್ ಆಗಿದೆ. ಆ ನಾಯಿಮರಿಗೆ ನರ್ವಾಲ್ ಎಂದು ಹೆಸರಿಡಲಾಗಿದೆ.