For Quick Alerts
ALLOW NOTIFICATIONS  
For Daily Alerts

ಕೆಜಿಗೆ 2.7 ಲಕ್ಷ ಬೆಲೆಯ ಮಾವಿನ ಹಣ್ಣು: ನೆಟ್ಟು ಬೆಳೆಸಿದವರಿಗೆ ಅದು ದುಬಾರಿಯೆಂದೇ ತಿಳಿದಿರಲಿಲ್ಲ!

|

ಈಗಾಗಲೇ ನೀವು ಸೋಷಿಯಲ್‌ ಮೀಡಿಯಾಗಳಲ್ಲಿ ಹರಿದಾಡುತ್ತಿರುವ ದುಬಾರಿ ಮಾವಿನ ಹಣ್ಣಿನ ಬಗ್ಗೆ ನೋಡಿರಬಹುದು. ಆ ಮಾವಿನ ಹಣ್ಣಿನ ಬಣ್ಣ ನೋಡಿದರನೇ ಬಾಯಲ್ಲಿ ನೀರೂರುತ್ತೆ, ಇನ್ನು ಅದನ್ನು ರುಚಿ ನೋಡುವ ಅಂದರೆ ಸ್ವಲ್ಪ ಮಟ್ಟಿಗೆ ದುಡ್ಡಿರುವವನು ಕೂಡ ಯೋಚಿಸಬೇಕಾಗಿದೆ, ಏಕೆಂದರೆ ಇದರ ಬೆಲೆ ಕೆಜಿ 2 ಲಕ್ಷ 70 ಸಾವಿರ! ಇಂಥ ಒಂದು ಮರವಿದ್ದರೆ ಸಾಕು ಲೈಫ್‌ ಸೆಟ್ಲ್‌ ಎಂದು ಯೋಚಿಸುತ್ತಿರಬಹುದು ಅಲ್ವಾ? ಆದರೆ ಈ ಹಣ್ಣು ಬೆಳೆದವರಿಗೆ ಇದು ಇಷ್ಟು ದುಬಾರಿ ಬೆಲೆಯ ಹಣ್ಣೆಂಬುವುದು ಗೊತ್ತೇ ಇರಲಿಲ್ಲ ಅಂತೆ.

ದುಬಾರಿ ಹಣ್ಣಿನ ಮರ

ದುಬಾರಿ ಹಣ್ಣಿನ ಮರ

ಮಧ್ಯ ಪ್ರದೇಶದ ಜಬಲ್‌ ಪುರದ ಕೃಷಿ ದಂಪತಿ ರಾಣಿ ಹಾಗೂ ಸಂಕಲ್ಪ್‌ ಪರಿಹಾರ್‌ಗೆ ತಾವು ಬೆಳೆಸಿರುವುದು ವಿಶ್ವದ ದುಬಾರಿ ಮಾವಿನ ಹಣ್ಣಿನ ಮರಗಳನ್ನು ಎಂಬುವುದು ಗೊತ್ತೇ ಇರಲಿಲ್ಲ. ಆದರೆ ಅವರು ಬೆಳೆದದ್ದು ಜಪಾನಿನ ಮಿಯಾಜಾಕಿ ಎಂಬ ಮಾವಿನ ತಳಿಯ ಗಿಡಗಳನ್ನು. ಕೆಂಪು ಬಣ್ಣದ ಈ ಮಾವಿನ ಬೆಲೆ ಚಿನ್ನಕ್ಕಿಂತ ದುಬಾರಿಯಾಗಿದೆ.

ಒಂದು ಹಣ್ಣಿಗೆ 21 ಸಾವಿರ ರೂಪಾಯಿ

ಒಂದು ಹಣ್ಣಿಗೆ 21 ಸಾವಿರ ರೂಪಾಯಿ

ಜಪಾನಿನ ಮೀಡಿಯಾ ವರದಿ ಪ್ರಕಾರ ಈ ಹಣ್ಣು ಕೆಜಿಗೆ 2 ಲಕ್ಷದ 70 ಸಾವಿರ ಇದ್ದು ಒಂದು ಹಣ್ಣಿಗೆ 21 ಸಾವಿರಕ್ಕೂ ಅಧಿಕ ರೂಪಾಯಿ ಇದೆ. ಈ ಮಾವಿನ ಹಣ್ಣುಗಳಲ್ಲಿ ಐಲ್ಯಾಂಡ್‌ನ ಕ್ಯುಶು ದಕ್ಷಿಣ ಜಪಾನ್‌ ಭಾಗಗಳಲ್ಲಿ ಬೆಳೆಯಲಾಗುತ್ತದೆ.

ಈ ಹಣ್ಣುಗಳು ತುಂಬಾ ಬಿಡುವುದಿಲ್ಲ, ಅಲ್ಲದೆ ತುಂಬಾ ಸಿಹಿಯಾಗಿರುತ್ತದೆ. ಈ ಹಣ್ಣನ್ನು ವಿದೇಶಗಳಲ್ಲಿ ದುಬಾರಿ ಗಿಫ್ಟ್‌ ಆಗಿ ತಮ್ಮ ಪ್ರೀತಿ ಪಾತ್ರರರಿಗೆ ನೀಡುತ್ತಾರೆ.

ಈ ದಂಪತಿಗೆ ಈ ಹಣ್ಣಿನ ಗಿಡ ಹೇಗೆ ಸಿಕ್ಕಿತು?

ಈ ದಂಪತಿಗೆ ಈ ಹಣ್ಣಿನ ಗಿಡ ಹೇಗೆ ಸಿಕ್ಕಿತು?

ಇವರು ಗಿಡಗಳನ್ನು ತರಲು ಚೆನ್ನೈಗೆ ಹೋಗುತ್ತಿದ್ದಾಗ ಟ್ರೈನ್‌ನಲ್ಲಿ ಸಿಕ್ಕ ವ್ಯಕ್ತಿಯೊಬ್ಬರು ಎರಡು ಮಾವಿನ ಸಸಿ ನೀಡುತ್ತಾ ಮಕ್ಕಳಮತೆ ಜೋಪಾನ ಮಾಡಿ ಇದನ್ನು ಬೆಳೆಸಿ ಅಂದಿದ್ದರು. ಆದರೆ ಅವರು ಏಕೆ ಆ ರೀತಿ ಹೇಳಿದರು ಎಂದು ಗಿಡ ನೆಟ್ಟು, ಮರ ಫಸಲು ನೀಡುವವರಿಗೂ ಇವರಿಗೆ ತಿಳಿದಿರಲಿಲ್ಲ.

5-6 ಹಣ್ಣಿಗಾಗಿ ಸೆಕ್ಯೂರಿಟಿ ಗಾರ್ಡ್ ನೇಮಿಸಿದ್ದಾರೆ

5-6 ಹಣ್ಣಿಗಾಗಿ ಸೆಕ್ಯೂರಿಟಿ ಗಾರ್ಡ್ ನೇಮಿಸಿದ್ದಾರೆ

ಮಾರುಕಟ್ಟೆಯಲ್ಲಿ ಇದರ ಬೆಲೆ ಎಷ್ಟಿದೆ ಎಂದು ತಿಳಿದ ಮೇಲೆ ಮರದಲ್ಲಿರುವ 5-6 ಹಣ್ಣಿನ ರಕ್ಷಣೆಗೆ ಸೆಕ್ಯೂರಿಟಿ ಗಾರ್ಡ್ ನೇಮಿಸಿದ್ದಾರೆ.

ಒಟ್ಟಿನಲ್ಲಿ ತಿಳಿಯದೇ ಬೆಳೆದ ಗಿಡದಿಂದ ಬಂಪರ್‌ ಲಾಟರಿಯನ್ನೇ ಪಡೆದಿದ್ದಾರೆ ಅಲ್ವಾ?

English summary

Couple Cultivates World’s Most Expensive Mangoes; Hires Guards And Dogs To Protect The Trees

cultivates world’s most expensive mangoes; hires guards and dogs to protect the trees, read on.....
X
Desktop Bottom Promotion