For Quick Alerts
ALLOW NOTIFICATIONS  
For Daily Alerts

ಕಡ್ಲೆ ಚಿಕ್ಕಿಯಂತೆ ಕಂಡ ಸೂರ್ಯನ ಫೋಟೋ ವೈರಲ್

|

ಸೂರ್ಯೋದಯ ಹಾಗೂ ಸೂರ್ಯಾಸ್ತದ ಸಮಯದಲ್ಲಿ ಸೂರ್ಯನ ನೋಡುವುದೇ ಕಣ್ಣಿಗೆ ಹಬ್ಬ, ಇನ್ನು ಅದೇ ಸೂರ್ಯವನ್ನು ಮಧ್ಯಾಹ್ನದ ಹೊತ್ತಿನಲ್ಲಿ ಬರಿ ಕಣ್ಣಿನಲ್ಲಿ ನೋಡಲು ಸಾಧ್ಯವಾಗದಷ್ಟು ಪ್ರಕಾಶ ಮಾನವಾಗಿ ಬೆಂಕಿಯ ಉಂಡೆಯ ರೀತಿ ಕಾಣಿಸುತ್ತಿರುತ್ತಾನೆ.

Viral Photo Of Sun

ಈ ಸೂರ್ಯನ ಮೇಲ್ಮೈ ಹೇಗಿರಬಹುದು ಎಂಬ ಯಾವುದೇ ಊಹೆ ಯಾರಿಗೂ ಇರಲಿಲ್ಲ. ಆದರೆ ಇದೀಗ ನಾಸಾ ಸೂರ್ಯನ ಕ್ಲೋಸ್‌ ಅಪ್‌ ಫೋಟೋವನ್ನು ಬಿಡುಗಡೆ ಮಾಡಿದ್ದು ಇದೀಗ ಆ ಫೋಟೋ ವೈರಲ್ ಆಗಿದೆ. ಆ ಫೋಟೋ ನೋಡುತ್ತಿದ್ದರೆ ಅಯ್ಯೋ ಸೂರ್ಯ ನಮ್ಮ ಕಡ್ಲೆ ಚಿಕ್ಕಿ ಕಂಡಂತೆ ಕಾಣುತ್ತಿದ್ದಾನೆ ಅಲ್ವಾ ಎಂದು ಖುಷಿಯಾಗಿದೆ ಇರಲ್ಲ. ಈ ಫೋಟೋವನ್ನು ಅತಿ ದೊಡ್ಡ ಸೌರ ದೂರದರ್ಶಕವಾದ ಡೇನಿಯಲ್ ಇನೊಯ್ ಸೋಲಾರ್‌ ಟೆಲಿಸ್ಕೋಪ್ ಮೂಲಕ ತಸೆರೆ ಹಿಡಿಯಲಾಗಿದೆ.

ಸೌರ ಮಂಡಲದಲ್ಲಿ ಕಣಗಳಂಥ ವಸ್ತುಗಳು ಒಂದಕ್ಕೊಂದು ಸವರಿಕೊಂಡಂತೆ ಅಡ್ಡಾಡುತ್ತಿರುವ ಚಿತ್ರವನ್ನು ಬುಧವಾರ ಬಿಡುಗಡೆ ಮಾಡಿದ್ದು ನೆಟ್ಟಿಗರು ಅದನ್ನು ಚಿಕ್ಕಿಗೆ ಹೋಲಿಸುತ್ತಿದ್ದಾರೆ.

ಇಷ್ಟು ದಿನ ನಮಗೆಲ್ಲಾ ಚಂದ್ರ ಮೇಲ್ಮೈಯ ಚಿತ್ರಣ ಮಾತ್ರ ಗೊತ್ತಿರುತ್ತಿತ್ತು. ಇದೀಗ ಈ ಚಿತ್ರದ ಮೂಲಕ ಚಂದ್ರನ ಮೇಲ್ಮೆ ಹೇಗಿರಬಹುದೆಂಬುವುದಕ್ಕೆ ಎಂಬುವುದಕ್ಕೆ ಸ್ಪಷ್ಟ ಚಿತ್ರಣ ಸಿಕ್ಕಿದೆ.

ಹುವೈಯ ಬಾಹ್ಯಾಕಾಶ ವಿಶ್ವವಿದ್ಯಾನಿಲಯದ ಪ್ರೊ. ಜೆಫ್‌ ಕುಹಾನ್ ಸೂರ್ಯನ ಫೋಟೋವನ್ನು ಸಮೀಪದಿಂದ ತೆಗೆದ ಸಂಶೋಧಕರ ತಂಡದ ಪ್ರಮುಖ ವ್ಯಕ್ತಿಯಾಗಿದ್ದು ಇವರು 'ಸೂರ್ಯನನ್ನು ತಿಳಿಯುವ ಪ್ರಯತ್ನ ಗೆಲಿಲಿಯೋ ಕಾಲದಿಂದಲೂ ನಡೆಯುತ್ತಿದ್ದು, ಸೂರ್ಯನ ಬಗ್ಗೆ ಹೆಚ್ಚಿನದ್ದು ತಿಳಿಯಲು ಇನ್ನೂ ಸಾಧ್ಯವಾಗಿಲ್ಲ. ಇದೀಗ ಡಿಕೆಐಎಸ್‌ಟಿ ಮೂಲಕ ಸೂರ್ಯನ ಮೇಲ್ಮೈ ಪೋಟೋ ತೆಗೆಯಲು ಸಾಧ್ಯವಾಗಿದ್ದು ಈ ಉಪಕರಣ ತಂತ್ರಜ್ಞಾನವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಿ ಭೂಮಿಯ ಮೇಲೆ ಸೂರ್ಯನ ವರ್ತನೆ ಬಗ್ಗೆ ಹೆಚ್ಚು ತಿಳಿಯುವ ಪ್ರಯತ್ನ ಮಾಡಲಾಗುವುದು ಎಂದಿದ್ದಾರೆ.

English summary

Close Up Photo Of the Sun's Surface

Researchers clicked suns close up photo in Daniel K. Inouye Solar Telescope (DKIST) in Haleakala,that photo going viral.
X
Desktop Bottom Promotion