For Quick Alerts
ALLOW NOTIFICATIONS  
For Daily Alerts

ಎಂಟ್ರಿ ಸಾಂಗ್ ಇಲ್ಲದಿರುವುದಕ್ಕೆ ಮದುವೆ ಮಂಟಪ ಹತ್ತದೆ ಹಠ ಹಿಡಿದ ವಧು: ವೀಡಿಯೋ ವೈರಲ್

|

ಮದುವೆ ಬಗ್ಗೆ ಪ್ರತಿಯೊಬ್ಬರಿಗೆ ನೂರೆಂಟು ಕನಸುಗಳಿರುತ್ತದೆ. ನನ್ನ ಮದುವೆಗೆ ಈ ರೀತಿ ಅರೇಂಜ್‌ಮೆಂಟ್ ಇರಬೇಕು, ಇಷ್ಟು ಜನರನ್ನು ಕರೆಯಬೇಕು, ಡ್ರೆಸ್ಸಿಂಗ್ ಹೀಗೇ ಇರಬೇಕು ಎಂಬೆಲ್ಲಾ ಆಸೆಗಳಿರುತ್ತದೆ. ಮದುವೆಯೆಂಬುವುದು ಜೀವನದಲ್ಲಿ ಒಮ್ಮೆ ಮಾತ್ರ ಆಗುವುದರಿಂದ (ಬಹುತೇಕರ ಜೀವನದಲ್ಲಿ) ಮದುವೆ ಎಂದರೆ ಸಡಗರ-ಸಂಭ್ರಮ ಹೆಚ್ಚಿರುತ್ತದೆ.

ಇನ್ನೂ ಮದುವೆಯಲ್ಲಿ ಎಂಟ್ರಿ ಸಾಂಗ್ ಟ್ರೆಂಡ್‌ ಆಗಿದೆ, ಅದಕ್ಕೆ ವಧು ಹಾಗೂ ವರ ಪ್ರಿಪರೇಷನ್ ಕೂಡ ಮಾಡಿರುತ್ತಾರೆ, ವಧು-ವರ ನೃತ್ಯ ಮಾಡುವುದು, ಗ್ರ್ಯಾಂಡ್ ಆಗಿ ಎಂಟ್ರಿ ಕೊಡುವುದು ಇವೆಲ್ಲಾ ಅಲ್ಲಿ ನೆರೆದವರಿಗೆ ತುಂಬಾನೇ ಖುಷಿ ನೀಡುವುದು. ಆದರೆ ಇಲ್ಲೊಂದು ಮದುವೆಯಲ್ಲಿ ಪಾಪ ಹುಡುಗಿ ಗ್ರ್ಯಾಂಡ್ ಆಗಿ ಎಂಟ್ರಿ ಕೊಡಬೇಕೆಂದು ಬಯಸಿರುತ್ತಾಳೆ, ಆದ್ರೆ ಎಂಟ್ರಿ ಸಾಂಗ್ ಅವಳು ಬಯಸಿದ್ದು ಆಗಿರಲಿಲ್ಲ.. ಮದುಮಗಳಿಗೆ ನಿರಾಸೆ ತಾಳಲಾರದೆ ಜೋರಾಗಿ ಅತ್ತಿದ್ದಾಳೆ ಅಲ್ಲದೆ ಎಂಟ್ರಿ ಸಾಂಗ್ ಇಲ್ಲದೆ ಮಂಟಪಕ್ಕೆ ಬರಲ್ಲ ಎಂದು ಹಠ ಹಿಡಿದಿದ್ದಾಳೆ.

ಇದೀಗ ಈ ವೀಡಿಯೋ ಸಕತ್ ವೈರಲ್ ಆಗಿದೆ. ಹುಡುಗಿ ಮದುವೆ ಮಂಟಪಕ್ಕೆ ಏಕೆ ಹೋಗುತ್ತಿಲ್ಲ ಎಂದು ನೋಡಿ, ಮದುವೆ ಸಿದ್ಧತೆಯಲ್ಲಿರುವ ಹೆಣ್ಮಕ್ಕಳೇ ನಿಮ್ಮ ಎಂಟ್ರಿ ಸಾಂಗ್ ಮೊದಲೇ ರೆಡಿ ಮಾಡಿ, ಲಾಸ್ಟ್‌ ಮಿನಿಟ್‌ ತೊಂದರೆಯಾಗುವುದು ಬೇಡ ಎಂದೆಲ್ಲಾ ಕಮೆಂಟ್‌ ಮಾಡುತ್ತಿದ್ದಾರೆ...

ಮದುವೆಯಲ್ಲಿ ನಡೆಯುವ ಫನ್ನಿ ಸನ್ನಿವೇಶಗಳು ಆಗಾಗ ವೈರಲ್ ಆಗುತ್ತಿರುತ್ತವೆ, ಇಲ್ಲಿ ಕೂಡ ಒಂದು ಎಂಟ್ರಿ ಸಾಂಗ್‌ಗೋಸ್ಕರ ಮಂಟಪಕ್ಕೆ ಹೋಗದೆ ಹಠ ಹಿಡಿದ ಮದುಮಗಳನ್ನು ನೋಡಿ ನಗು ಬಂದ್ರೂ ಅವಳ ಕಣ್ಣೀರು ನೋಡಿ ಪಾಪ ಅನಿಸುತ್ತಿದೆ ಅಲ್ವಾ?

English summary

Bride Refuses To Enter Wedding Venue Until Her Favorite Entry Song Plays; Video Goes Viral

Bride refuses to enter wedding venue until her favorite entry song plays; video goes viral, read on....
Story first published: Tuesday, August 24, 2021, 14:15 [IST]
X