For Quick Alerts
ALLOW NOTIFICATIONS  
For Daily Alerts

ನದಿಯಲ್ಲಿ ಮುಳುಗುತ್ತಿದ್ದ ಮನುಷ್ಯನನ್ನು ರಕ್ಷಿಸಿದ ಮರಿಯಾನೆ

|

ಆನೆಯನ್ನು ಬುದ್ಧಿವಂತ ಪ್ರಾಣಿಯೆಂದು ಕರೆಯಲಾಗುವುದು ಅಲ್ಲದೆ ಇದು ತುಂಬಾ ಪ್ರೀತಿ ತೋರುವ ಪ್ರಾಣಿ ಎಂದು ಕೂಡ ಹೇಳಲಾಗುತ್ತದೆ. ಅದಕ್ಕೆ ಈ ವೀಡಿಯೋ ಸಾಕ್ಷಿಯಾಗಿದೆ. ಈ ವೀಡಿಯೋವನ್ನು 2016ರಲ್ಲಿ ತೆಗೆಯಲಾಗಿದ್ದು, ಈ ಹಳೆಯ ವೀಡಿಯೋ ಮತ್ತೊಮ್ಮೆ ಟ್ರೆಂಡ್‌ ಆಗುತ್ತಿದೆ.

Baby Elephant Saves Man From Drowning in River: Video Viral

ಮುಳುಗುತ್ತಿರುವ ಮನುಷ್ಯನನ್ನು ರಕ್ಷಿಸಿದ ಆನೆ ಮರಿಯ ವೀಡಿಯೋ ಇದಾಗಿದ್ದು, ಆನೆಯ ಬುದ್ಧಿವಂತಿಕೆ ಹಾಗೂ ಪ್ರೀತಿ ನೋಡಿ ವೀಕ್ಷಕರು Extremely intelligent and loving," ಎಂದೆಲ್ಲಾ ಪ್ರತಿಕ್ರಿಯಿಸುತ್ತಿದ್ದಾರೆ. ಇದು ಥಾಯ್ಲೆಂಡ್‌ನ ಎಲಿಫೆಂಟ್‌ ನೇಚರ್‌ ಪಾರ್ಕ್‌ನಲ್ಲಿ ತೆಗೆದಿರುವ ವೀಡಿಯೋ ಇದಾಗಿದೆ.

ವೀಡಿಯೋ ನೋಡುವಾಗ ನದಿಯಲ್ಲಿ ಒಬ್ಬ ಮನುಷ್ಯ ಮುಳುಗುತ್ತಿದ್ದಾನೆ, ಆತ ಸಹಾಯಕ್ಕಾಗಿ ಕೈಯನ್ನು ಆಡಿಸುತ್ತಿದ್ದಾನೆ, ಅದೇ ಸಮಯಕ್ಕೆ ಅಲ್ಲಿಗೆ ಆನೆಗಳ ಹಿಂಡು ಕೂಡ ಬಂದಿತ್ತು. ನೀರಿನಲ್ಲಿ ಮುಳುಗುತ್ತಿರುವ ಮನುಷ್ಯನನ್ನು ನೋಡಿದ ಮರಿಯಾನೆ ಆತನನ್ನ ಧಾವಿಸಿ ಬಂದು ಆತನಿಗೆ ನೀರಿನಲ್ಲಿ ಮುಳಗದಂತೆ ತನ್ನ ಸೊಂಡಿಲನ್ನು ಆಸರೆಯಾಗಿ ನೀಡಿ ದಡಕ್ಕೆ ತಲುಪಿಸುತ್ತೆ.

ಈ ಸುಂದರ ವೀಡಿಯೋ ಇದೀಗ ವೈರಲ್ ಆಗಿದ್ದು ನೆಟ್ಟಿಗರು ತುಂಬಾ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ.

English summary

Baby Elephant Saves Man From Drowning in River: Video Viral

Here is amazing video baby elephants saves man from drowning, video goes viral, have a look..
Story first published: Monday, July 18, 2022, 11:22 [IST]
X
Desktop Bottom Promotion