Just In
- 8 hrs ago
ವಾರ ಭವಿಷ್ಯ- ಡಿಸೆಂಬರ್ 8ರಿಂದ ಡಿಸೆಂಬರ್ 13ರ ತನಕ
- 10 hrs ago
ಭಾನುವಾರದ ದಿನ ಭವಿಷ್ಯ (08-12-2019)
- 1 day ago
ರುದ್ರಾಕ್ಷಿ ಮಾಲೆ ಧರಿಸುವವರು ಗಮನಿಸಲೇಬೇಕಾದ ಅಂಶಗಳಿವು
- 1 day ago
ಶನಿವಾರದ ದಿನ ಭವಿಷ್ಯ (07-12-2019)
Don't Miss
- News
ಸಿಎಂ ಕುರ್ಚಿ ಬಗ್ಗೆ ಕನಸಿನ ಮಾತು ಹೇಳಿದ ಜಗದೀಶ್ ಶೆಟ್ಟರ್!
- Sports
ಮೈಸೂರಲ್ಲಿ ಟೂರ್ ಆಫ್ ನೀಲಗಿರೀಸ್ ಸೈಕಲ್ ಯಾತ್ರೆಗೆ ಚಾಲನೆ
- Movies
ಅಮೀರ್ ಬಹು ವರ್ಷದ ಆಸೆಯನ್ನು ಈಡೇರಿಸಿದ್ದು ಕನ್ನಡದ ಈ ಕಲಾವಿದ
- Technology
ಗರ್ಭಿಣಿಯರಿಗೆ ಮುದ ನೀಡುವ ಆಪ್- ನಿಮ್ಮ ಮಗು ಹೇಗಿರುತ್ತದೆ ಎಂದು ತಿಳಿಸುವ ಆಪ್
- Finance
ಈ ಜೈಲಲ್ಲಿ ಇರುವ ನಲವತ್ತು ಕೈದಿಗಳಿಗೆ ವರ್ಷಕ್ಕೆ 3,900 ಕೋಟಿ ಖರ್ಚು
- Automobiles
ಟಾಟಾ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ
- Education
ರೆಪ್ಕೊ ಬ್ಯಾಂಕ್ ನಲ್ಲಿ 15 ಹುದ್ದೆಗಳ ನೇಮಕಾತಿ
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ಕೃತಕ ಕನ್ಯತ್ವದ ವಸ್ತು ಮಾರುತ್ತಿರುವ ಅಮೆಜಾನ್, ಇದನ್ನ ಕೇಳಿದವರಿಗೆ ಫುಲ್ ಶಾಕ್
ಇದೀಗ ಕೃತಕ ಕನ್ಯತ್ವದ ಬಗ್ಗೆ ವಿಷಯವೊಂದು ಕೇಳಿ ಬಂದಿದ್ದು, ಇದನ್ನು ಕೇಳಿದವರೂ ಹೀಗೂ ಉಂಟೇ ಎಂದು ಅಚ್ಚರಿಗೊಳಗಾಗುತ್ತಿದ್ದಾರೆ. ಹೌದು ಇತ್ತೀಚೆಗೆ ಕೆಲವರಿಗೆ ಅಮೇಜಾನ್ ಕೃತಕ ಕನ್ಯತ್ವಕ್ಕೆ ಸಂಬಂಧಿಸಿದ ಮಾತ್ರೆ(i virigin blood for first night)ಯನ್ನು ಮಾರುತ್ತಿರುವ ವಿಷಯ ತಿಳಿದು ಬಂದಿದ್ದೇ ಆ ಕುರಿತ ಟ್ವೀಟ್ಗಳೇ ಇದೀಗ ಹೆಚ್ಚು ಸದ್ದು ಮಾಡುತ್ತಿವೆ. ಈ ಟ್ವೀಟ್ ಭರಾಟೆ ಜೋರಾಗುತ್ತಿದ್ದಂತೆ ಅಮೇಜಾನ್ನಲ್ಲಿ ಆ ವಸ್ತು ಇದೀಗ ಕಾಣೆಯಾಗಿದೆ.
ಮದುವೆಯಾಗುವ ಹೆಣ್ಣು ಕನ್ಯೆಯಾಗಿರಬೇಕೆಂದು ಪುರುಷರು ಬಯಸುತ್ತಾರೆ. ಭಾರತದಲ್ಲಿ ಕೆಲವರು ಮದುವೆಯಾಗಿ ಮೊದಲ ರಾತ್ರಿಯಂದು ಹೆಣ್ಣು ಕನ್ಯತ್ವ ಪರೀಕ್ಷೆಗೆ ಒಳಗಾಗಬೇಕೆಂದು ಬಯಸುವುದು ಈಗಲೂ ಇದೆ. ಮೊದಲ ರಾತ್ರಿಯಂದು ರಕ್ತಸ್ರಾವವಾದರೆ ಮಾತ್ರ ಆಕೆ ಕನ್ಯೆ, ಇಲ್ಲದಿದ್ದರೆ ಆಕೆ ಮದುವೆಗೆ ಮೊದಲೇ ದೈಹಿಕ ಸಂಪರ್ಕ ಹೊಂದಿದ್ದಾಳೆ ಎಂದು ಬಲವಾಗಿ ನಂಬುವವರು ಇದ್ದಾರೆ.
ಎಷ್ಟೋ ಕಡೆ ಹೆಣ್ಣು ಕನ್ಯೆ ಎಂದು ತಿಳಿಯಲೆಂದೇ ಮೊದಲ ರಾತ್ರಿಯ ಶಾಸ್ತ್ರ ಅಂತ ಮಾಡುವ ಪದ್ಧತಿ ಇದೆ. ಇದರಲ್ಲಿ ಹೆಣ್ಣಿಗೆ ಆ ದಿನ ಒಳ ಉಡುಪುಗಳು ಬಿಳಿ ಅಥವಾ ತೆಳು ಬಣ್ಣದ್ದು ಧರಿಸಲು ತಿಳಿಸುತ್ತಾರೆ, ಇನ್ನು ಬೆಡ್ಶೀಟ್ ಅಷ್ಟೇ ತೆಳುಬಣ್ಣದ್ದು ಹಾಸುತ್ತಾರೆ. ಹೆಣ್ಣು-ಗಂಡಿನ ಸಮಾಗಮ ಆದಾಗ ರಕ್ತದ ಕಲೆ ಕಂಡರೆ ಮಾತ್ರ ಆಕೆ ಕನ್ಯೆ, ಆ ಕಲೆ ಕಾಣಿಸದಿದ್ದರೆ ಸಂಶಯದ ವಕ್ರ ದೃಷ್ಟಿ ಆಕೆಯ ಮೇಲೆ ಬಿದ್ದು, ಅಲ್ಲಿಂದ ಆಕೆಯ ಜೀವನ ನರಕವಾಗಿ ಬಿಡುತ್ತದೆ. ಗಂಡು-ಹೆಣ್ಣು ಕೂಡಿದಾಗ ರಕ್ತಸ್ರಾವವಾದರೆ ಮಾತ್ರ ಕನ್ಯೆ ಎಂದು ಭಾವಿಸುವುದು ಸರಿಯೇ? ಖಂಡಿತ ಅಲ್ಲ ಏಕೆಂದರೆ ಗಂಡು-ಹೆಣ್ಣು ಕೂಡಿದಾಗ ರಕ್ತಸ್ರಾವ ಎಲ್ಲರಿಗೆ ಆಗುವುದಿಲ್ಲ, ರಕ್ತಸ್ರಾವ ಯಾರಿಗೆ ಆಗುವುದಿಲ್ಲ, ಇದೇನಿದು ಕೃತಕ ಕನ್ಯತ್ವಕ್ಕಾಗಿ ಬಳಸುವ ವಸ್ತು ಇವುಗಳ ಬಗ್ಗೆ ಹೆಚ್ಚಿನ ಮಾಹಿತಿ ನೋಡಿ ಇಲ್ಲಿದೆ.
ಕನ್ಯಾಪೊರೆ ಹಾಗೂ ವರ್ಜಿನಿಟಿ ಬಗ್ಗೆ ಇರುವ ತಪ್ಪು ಕಲ್ಪನೆಗಳು

ಮೊದಲ ಬಾರಿ ಕೂಡಿದಾಗ ರಕ್ತಸ್ರಾವವಾಗುತ್ತದೆ ಎಂಬುವುದು ಎಷ್ಟು ಸರಿ?
ವೈಜ್ಞಾನಿಕವಾಗಿ ಹೇಳಬೇಕೆಂದರೆ ಮೊದಲ ಬಾರಿ ಹೆಣ್ಣು-ಗಂಡು ಕೂಡಿದಾಗ ರಕ್ತಸ್ರಾವವಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ, ಕೆಲವರಲ್ಲಿ ಆಗುತ್ತದೆ, ಮತ್ತೆ ಕೆಲವರಲ್ಲಿ ಆಗುವುದಿಲ್ಲ. ಕನ್ಯತ್ವದ ಬಗ್ಗೆ ತಿಳಿಯಬೇಕೆಂದರೆ ಕನ್ಯಾಪೊರೆ ಬಗ್ಗೆ ತಿಳಿದುಕೊಳ್ಳಬೇಕು. ಕನ್ಯಾಪೊರೆ ಎನ್ನುವುದು ಯೋನಿಯ ಹೊರಭಾಗವನ್ನು ಮುಚ್ಚಿರುವ ಒಂದು ಪೊರೆ. ಈ ಪೊರೆಯ ಮಧ್ಯ ಭಾಗದಲ್ಲಿ ಯೋನಿ ಕಿಂಡಿವಿರುತ್ತದೆ. ಯೋನಿಯು ಋುತುಸ್ರಾವಕ್ಕೆ, ಸಂಭೋಗಕ್ಕೆ ಮತ್ತು ಮಗುವಿನ ಜನನಕ್ಕೆ ಇರುವ ಒಂದು ಕೊಳವೆಯಂಥ ಸ್ನಾಯುಯುಕ್ತ ಮಾರ್ಗವಾಗಿದೆ. ಯೋನಿ ಪೊರೆ ಹುಟ್ಟಿನಿಂದಲೂ ಇರುತ್ತದೆ, ಆದರೆ ಕೆಲವರಲ್ಲಿ ತೆಳ್ಳಗಿರಬಹುದು, ಸಡಿವಿರಬಹುದು, ಮತ್ತೆ ಕೆಲವರಲ್ಲಿ ದಪ್ಪವಾಗಿ , ಗಟ್ಟಿಯಾಗಿರಬಹುದು. ಕೆಲವರಲ್ಲಿ ಕನ್ಯಾಪೊರೆಯ ಯೋನಿ ಕಿಂಡಿಯೂ ತುಂಬಾ ಚಿಕ್ಕದಾಗಿರಬಹುದು ಇಲ್ಲಾ ದೊಡ್ಡದಾಗಿರಬಹುದು, ಕೆಲವರಲ್ಲಿ ಬಿಗಿಯಾಗಿರಬಹುದು, ಇನ್ನು ಕೆಲವರಲ್ಲಿ ಪೂರ್ತಿ ಮುಚ್ಚಿಕೊಂಡಿರಬಹುದು. ಕನ್ಯಾಪೊರೆ ಸಡಿಲವಾಗಿದ್ದರೆ ಮೊದಲ ಬಾರಿ ಲೈಂಗಿಕ ಕ್ರಿಯೆ ನಡೆದಾಗ ರಕ್ತಸ್ರಾವವಾಗದೇ ಇರಬಹುದು. ಆದ್ದರಿಂದ ಹೆಣ್ಣಿನ ಕನ್ಯತ್ವವನ್ನು ರಕ್ತಸ್ರಾವ ಆಧಾರದ ಮೇಲೆ ಅಳೆಯಲು ಸಾಧ್ಯವೇ ಇಲ್ಲ.

ಮೊದಲ ರಾತ್ರಿಯಲ್ಲಿ ರಕ್ತಸ್ರಾವಕ್ಕೆ ಬಳಸುವ ವಸ್ತು
ನಮ್ಮಲ್ಲಿ ಕನ್ಯತ್ವಕ್ಕೆ ರಕ್ತಸ್ರಾವವೇ ಸಾಕ್ಷಿ ಎಂದು ಬಲವಾಗಿ ನಂಬಿರುವುದರಿಂದ ಈ ರೀತಿಯ ವಸ್ತುಗಳು ಮಾರುಕಟ್ಟೆಗೆ ಬಂದಿದೆ ಎಂದರೆ ತಪ್ಪಲ್ಲ. ನಮ್ಮಲ್ಲಿ ಈಗಲೂ ಲೈಂಗಿಕ ವಿಷಯವನ್ನು ಮುಕ್ತವಾಗಿ ಮಾತನಾಡುವ ಧೈರ್ಯ ಹೆಚ್ಚಿನವರಿಗೆ ಇರುವುದಿಲ್ಲ, ಅವೆಲ್ಲಾ ಹುಶ್...ಹುಶ್ ವಿಷಯಗಳಾಗಿರುತ್ತವೆ. ಇನ್ನು ಲೈಂಗಿಕ ಸಮಸ್ಯೆಯಿದ್ದರೂ ಅವುಗಳನ್ನು ವೈದ್ಯರ ಬಳಿ ಹೇಳಿಕೊಳ್ಳಲು ಸಂಕೋಚ ಪಡುವವರು ಎಷ್ಟೋ ಮಂದಿ ಇದ್ದಾರೆ. ಆದರೆ ಅಂಥ ದೇಶದಲ್ಲಿಯೇ ಕೃತಕ ಕನ್ಯತ್ವದ ವಸ್ತುಗಳು ಮಾರುಕಟ್ಟೆಯನ್ನು ಸೃಷ್ಟಿಸುತ್ತವೆ.
ಅಮೆಜಾನ್ನಲ್ಲಿ ಕೃತಕ ಕನ್ಯತ್ವದ ಮಾತ್ರೆ ದೊರೆಯುತ್ತಿತ್ತು ಎಂದು ತಿಳಿದು ಹಲವರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಒಂದು ಮಾತ್ರೆ ರೂಪದ ಈ ರಕ್ತ ಮಾತ್ರೆಯನ್ನು ಮೊದಲ ರಾತ್ರಿಯ ಕೆಲವು ಗಂಟೆಗಳ ಮುನ್ನ ಯೋನಿಯಲ್ಲಿ ಹಾಕಿದರೆ ದೈಹಿಕ ಸಂಫರ್ಕ ನಡೆಯುವಾಗ ರಕ್ತಸ್ರಾವ ರೀತಿ ಆಗುತ್ತದೆ, ಆದರೆ ಅದು ಕೃತಕ ರಕ್ತವಾಗಿರುತ್ತದೆ, ಈ ಮಾತ್ರೆಯಿಂದ ಯಾವುದೇ ಅಡ್ಡಪರಿಣಾಮವಿಲ್ಲ ಎಂದು ಕೂಡ ಆ ಮಾತ್ರೆಯ ಕವರ್ನಲ್ಲಿ ಹೇಳಲಾಗಿದೆ.

ಸಮಾಜದ ನಂಬಿಕೆಗೆ ಆಘಾತ ನೀಡಿದ ಕೃತಕ ಕನ್ಯತ್ವ ಮಾತ್ರೆ
ಈ ಕೃತಕ ಕನ್ಯತ್ವ ಮಾತ್ರೆ ದೊರೆಯುತ್ತದೆ ಎಂದು ಗೊತ್ತಾಗಿರುವುದು ಸಮಾಜ ಕನ್ಯತ್ವದ ಬಗ್ಗೆ ನಂಬಿಕೊಂಡು ಬಂದಿದ್ದ ನಂಬಿಕಗೆ ಬಲವಾದ ಪೆಟ್ಟು ನೀಡಿದೆ ಎಂದೇ ಹೇಳಬಹುದು. ಹೌದು ತಮ್ಮ ಪತ್ನಿ ಕನ್ಯೆಯಾಗಿದ್ದಾಳೆಯೇ ಎಂದು ಪರೀಕ್ಷಿಸುವ ಸಂಶಯದ ಮನಸ್ಥಿತಿ ಇದ್ದಂತಹ ವ್ಯಕ್ತಿಗೆ ಇಂತಹ ಸುದ್ದಿಗಳು ಕೇಳಿದರೆ ಆಕೆಗೆ ಮೊದಲ ರಾತ್ರಿಯಲ್ಲಿ ರಕ್ತಸ್ರಾವವಾಗಿದ್ದರೂ ಸಂಶಯ ಪಿಶಾಚಿ ಗುಣ ಹೆಚ್ಚಾಗಬಹುದು.
ಯಾರು ಕೃತಕ ಕನ್ಯತ್ವ ಕೊಂಡು ಬಳಸುತ್ತಾರೋ ಅವರು ಮದುವೆಗೆ ಮೊದಲೇ ದೈಹಿಕ ಸಂಪರ್ಕ ಮಾಡಿರುತ್ತಾರೆ. ಎಲ್ಲಿ ನಾನು ಕನ್ಯೆ ಅಲ್ಲ ಎಂದು ಗೊತ್ತಾಗುವುದೋ ಎಂದು ಈ ರೀತಿಯ ವಸ್ತುಗಳ ಮೊರೆ ಹೋಗಿ, ಕೃತಕ ಕನ್ಯತ್ವ ಡ್ರಾಮಾ ಮಾಡುತ್ತಾರೆ. ಇಲ್ಲಿ ನಿಜವಾಗಲೂ ತೊಂದರೆಗೆ ಒಳಗಾಗುವವರು ಮುಗ್ಧ ಹೆಣ್ಣು ಮಕ್ಕಳು. ಮದುವೆಗೆ ಮೊದಲು ಯಾರ ಜತೆ ದೈಹಿಕ ಸಂಪರ್ಕ ಮಾಡದಿದ್ದರೂ ಮೊದಲ ರಾತ್ರಿ ರಕ್ತಸ್ರಾವ ಅಗಲಿಲ್ಲ ಎಂದಾದರೆ ಸಂಶಯಕ್ಕೆ ಗುರಿಯಾಗುತ್ತಾರೆ, ಇನ್ನು ಈ ರೀತಿಯ ವಸ್ತುಗಳಿಂದಾಗಿ ಸಂಶಯ ಪಿಶಾಚಿ ಗಂಡನಿಗೆ ಆಕೆಯ ಮೇಲೆ ಸಂಶಯಪಡಲು ಮತ್ತೊಂದು ಕಾರಣ ಸಿಕ್ಕಂತೆ ಆಗುತ್ತದೆ.

ಬದಲಾಗಬೇಕಿದೆ ಕನ್ಯತ್ವ ಪರೀಕ್ಷಿಸುವ ಪುರುಷರ ಮನಸ್ಥಿತಿ
ಪುರುಷರಿಗೆ ತಮ್ಮ ಕೈ ಹಿಡಿದವಳ ಬಗ್ಗೆ ನಂಬಿಕೆಯಿದ್ದರೆ ಇಂತಹ ವಸ್ತುಗಳಿಗೆ ಮಾರುಕಟ್ಟೆಯಲ್ಲಿ ಜಾಗವೇ ಇರುವುದಿಲ್ಲ. ಇನ್ನು ಹೆಣ್ಣಿನ ಕನ್ಯತ್ವವನ್ನು ಅವಳ ಮನಸ್ಸಿನಲ್ಲಿ ಅಳೆಯಿರಿ. ಮದುವೆಗೆ ಮೊದಲು ಹೆಣ್ಣು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗದರೆ ಆಕೆ ಕನ್ಯೆ ಅಲ್ಲ ಎಂದು ಭಾವಿಸುವುದು ತಪ್ಪು. ಹೆಣ್ಣು ಮನಸ್ಸು ಹಾಗೂ ದೇಹವನ್ನು ಯಾವಾಗ ಒಪ್ಪಿಸುತ್ತಾಳೋ ಆಗ ಮಾತ್ರ ಆಕೆಯ ಕನ್ಯತ್ವ ಇಲ್ಲವಾಗುವುದು.