For Quick Alerts
ALLOW NOTIFICATIONS  
For Daily Alerts

ಏಲಿಯನ್ ವೀಡಿಯೋ ವೈರಲ್: ಜನರು ಏಲಿಯನ್‌ ಅಂದುಕೊಂಡಿದ್ದ ಈ ಜೀವಿಗಳು ಏಲಿಯನ್‌ ಅಲ್ಲ!

|

ಎರಡು ವಿಚಿತ್ರವಾದ ಜೀವಿಗಳು ಪಿಳಿ-ಪಿಳಿ ಕಣ್ಣು ಬಿಟ್ಟು ನೋಡುತ್ತಿರುವಾದ ವೀಡಿಯೊವೊಂದು ಸಾಮಾಜಿಕ ತಾಣದಲ್ಲಿ ಅಪ್ಲೋಡ್‌ ಆಗಿದ್ದೇ ಕ್ಷಣಾರ್ಧದಲ್ಲಿ ವೈರಲ್ ಆಯ್ತು. ಆ ಎರಡು ಜೀವಿಗಳನ್ನು ನೋಡಿದಾಗ ಯಾರಿಗಾದರೂ ಅದು ಏಲಿಯನ್ ಇರಬಹುದು ಎಂದು ಅನಿಸಿರುವುದರಿಂದ ಭೂಮಿ ಮೇಲೆ ಏಲಿಯನ್ ಕಂಡು ಬಂತೆಂದು ಜನರು ಶೇರ್‌ ಮಾಡಿದ್ದೇ ಮಾಡಿದ್ದು, ಆದರೆ ನಿಜವಾಗಿ ನಡೆದಿದ್ದೇ ಬೇರೆ.

ಇದೀಗ ಟ್ವಿಟರ್‌ನಲ್ಲಿ ಆ ವಿಚಿತ್ರಗಳ ಜೀವಿಗಳು ಯಾವುದು? ಎಂಬ ಸತ್ಯ ತಿಳಿಯುತ್ತಿದ್ದಂತೆ ಟ್ವಿಟರ್‌ ಬಳಕೆದಾರರು ಹೌದಾ? ಎಂದು ಅಚ್ಚರಿ ವ್ಯಕ್ತಪಡಿಸಿ, ಛೇ! ನಾವು ಸುಮ್ಮನೆ ಏಲಿಯನ್ ಅಂದುಕೊಂಡಿದ್ದೆವು ಎಂದು ಸುಮ್ಮನಾಗುತ್ತಿದ್ದಾರೆ.

Aliens in viral video
 

ಅಷ್ಟಕ್ಕೂ ನಡೆದಿದ್ದು ಏನಪ್ಪಾ ಅಂದರೆ ಡೇನಿಯಲ್ ಹೋಲಂಡ್‌ ಎಂಬ ಟ್ವಿಟರ್ ಬಳಕೆದಾರರು ಹೃದಯ ರೀತಿಯ ಆಕಾರವಿರುವ, ದೊಡ್ಡ-ದೊಡ್ಡ ಕಪ್ಪು ಕಣ್ಣುಗಳಿರುವ ಫೋಟೊವನ್ನು ಶೇರ್‌ ಮಾಡಿದ್ದರು, ಆ ಜೀವಿಗಳು ನೋಡಲು ವಿಚಿತ್ರವಾಗಿದ್ದು ಎಲ್ಲರು ಏಲಿಯನ್‌ ಎಂದೇ ಭಾವಿಸಿದ್ದರು.

ಆದರೆ ಅವುಗಳು ಹೊರಲೋಕದ ಜೀವಿಗಳಾದ ಏಲಿಯನ್‌ ಅಲ್ಲ, ಅವು ನಾವು ನೋಡಿರದ ಜೀವಿಯಂತೂ ಅಲ್ಲವೇ ಅಲ್ಲ, ಆ ವಿಚಿತ್ರ ಜೀವಿಗಳು ಏನಪ್ಪಾ ಅಂದರೆ ಪುಟಾಣಿ ಗೂಬೆ ಮರಿಗಳು. ಪಿಳಿ-ಪಿಳಿ ಕಣ್ಣು ಬಿಡುತ್ತಿರುವ ಗೂಬೆ ಮರಿಗಳು ನೋಡಲು ಫೋಟೊದಲ್ಲಿ ವಿಚಿತ್ರವಾದ ಜೀವಿಗಳಂತೆ ಕಂಡು ಬಂದಿದ್ದೆವು.

ಇದೀಗ ಡೇನಿಯಲ್ ಹೋಲಂಡ್ ಆ ವಿಡಿಯೋದ ಸತ್ಯಾಸತ್ಯತೆ ಬಗ್ಗೆ ತಿಳಿಸಲು ಗೂಬೆ ಮರಿಗಳ ವೀಡಿಯೋ ಶೇರ್ ಮಾಡಿದ್ದಾರೆ. ಆದರೆ ಈ ವೀಡಿಯೋ ಶೇರ್‌ ಆಗುತ್ತಿದ್ದಂತೆ ಮಿಲಿಯನ್‌ಗಟ್ಟಲೆ ವೀಕ್ಷಣೆಯಾಗಿದೆ ಹಾಗೂ ನೂರಾರು ಸಾವಿರಕ್ಕೂ ಅಧಿಕ ಮರುಟ್ವೀಟ್‌ ಆಗಿದ್ದು, ಆ ಗೂಬೆ ಮರಿಗಳು ಸಾಮಾಜಿಕ ತಾಣದಲ್ಲಿ ಸಕತ್‌ ಸದ್ದು ಮಾಡುತ್ತಿವೆ. ಅಂತೂ ವೈರಲ್ ಆಗುವ ಭಾಗ್ಯ ಗೂಬೆಗಳಿಗೂ ಬಂತು.

English summary

Aliens in viral video, But In Reality It Is Not A Alien

video of two mysterious creatures goes viral soon after being shared in social media. whoever see that short clip thought that those creatures are two aliens. However, the reality is something else.
Story first published: Wednesday, November 20, 2019, 17:45 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more