For Quick Alerts
ALLOW NOTIFICATIONS  
For Daily Alerts

ಎಂದಿಗೂ ತಮ್ಮ ತಪ್ಪನ್ನು ಒಪ್ಪಿಕೊಳ್ಳಲು ಇಷ್ಟಪಡದ ರಾಶಿಚಕ್ರಗಳಿವು

|

ತಪ್ಪುಗಳನ್ನು ಯಾರೂ ತಾನೇ ಮಾಡುವುದಿಲ್ಲ, ತಪ್ಪು ಜಗದ ನಿಯಮ ಆದರೆ ಆ ತಪ್ಪನ್ನು ಒಪ್ಪಿಕೊಳ್ಳುವವರು ಕೆಲವರಷ್ಟೇ ಇದ್ದರೂ ಅದನ್ನು ಒಪ್ಪಿಕೊಳ್ಳದವರ ಸಂಖ್ಯೆಯೇ ಅಧಿಕ. ಇನ್ನು ಹಲವರು ತಾವು ಮಾಡಿದ ತಪ್ಪನ್ನು ಇತರರ ಮೇಲೆ ಹೇರುವವರ ಸಂಖ್ಯೆಯೇಣೂ ಕಮ್ಮಿ ಇಲ್ಲ. ಯಾರಾದರೂ ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳಲು ನಿರಾಕರಿಸಿದಾಗ ನಿಜವಾಗಿಯೂ ನಿರಾಶೆಯಾಗುತ್ತದೆ. ಇವರಿಗೆ ತಮ್ಮ ಬಗೆಗಿನ ಅತೀವ ಆತ್ಮವಿಶ್ವಾಸವೇ ತಮ್ಮ ತಪ್ಪುಗಳನ್ನು ಎಂದಿಗೂ ಒಪ್ಪಿಕೊಳ್ಳದವರಂತೆ ಮಾಡುತ್ತದೆ.

ಇದರ ಬಗ್ಗೆ ಜ್ಯೋತಿಶಾಸ್ತ್ರ ಏನು ಹೇಳುತ್ತದೆ ಗೊತ್ತೆ?. ಸಾಮಾನ್ಯವಾಗಿ ಅಹಂಕಾರದ ಗುಣ ಮತ್ತು ಸ್ವ-ಕೇಂದ್ರಿತ ಮನೋಭಾವ ಹೊಂದಿರುವವರು ತಮ್ಮ ತಪ್ಪುಗಳನ್ನು ಒಪ್ಪಿಗೊಳ್ಳುವುದಿಲ್ಲವಂತೆ. ಆದ್ದರಿಂದ, ಅವರೊಂದಿಗೆ ಎಂದಿಗೂ ವಾದದಲ್ಲಿ ತೊಡಗಿಸಿಕೊಳ್ಳದಿರುವುದೇ ಉತ್ತಮ. ರಾಶಿಚಕ್ರದ ಪ್ರಕಾರ ಯಾವ ರಾಶಿಯವರು ಹೆಚ್ಚಾಗಿ ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವುದಿಲ್ಲ ಮತ್ತು ಇವರಲ್ಲಿರುವ ಯಾವ ಗುಣ ಇವರನ್ನು ತಪ್ಪು ಒಪ್ಪಿಕೊಳ್ಳದಂತೆ ಮಾಡುತ್ತದೆ ಎಂಬುದನ್ನು ಮುಂದೆ ತಿಳಿಯೋಣ:

ಕನ್ಯಾ ರಾಶಿ

ಕನ್ಯಾ ರಾಶಿ

ಕನ್ಯಾ ರಾಶಿಯವರು ಪರಿಪೂರ್ಣತಾವಾದಿಗಳಾಗಿ ಜನಿಸಿದವರು, ಆದ್ದರಿಂದ ಅವರು ಇತರ ಜನರ ಕೆಲಸವನ್ನು ಇಷ್ಟಪಡುವುದಿಲ್ಲ. ಅವರು ಎಂದಿಗೂ ಯಾರಿಗೂ ತಮ್ಮ ತಪ್ಪನ್ನು ಹೇಳಲು ಬಿಡುವುದಿಲ್ಲ, ಮುಖ್ಯವಾಗಿ ಅವರು ಕಷ್ಟಪಟ್ಟು ಕೆಲಸ ಮಾಡುವ ಮೂಲಕ ತಮ್ಮನ್ನು ತಾವು ಪರಿಪೂರ್ಣಗೊಳಿಸಲು ಪ್ರಯತ್ನಿಸುತ್ತಾರೆ. ಇವರ ಈ ಪ್ರಯತ್ನ ನಿಂತರವಾಗಿರುತ್ತದೆ. ಸಾಮಾನ್ಯ ಇವರು ತಪ್ಪು ಮಾಡುವುದಿಲ್ಲ ಅಪ್ಪಿತಪ್ಪಿ ಮಾಡಿದರೂ ಆ ತಪ್ಪನ್ನು ಒಪ್ಪಿಕೊಳ್ಳಲು ಇವರು ಹಿಂದೇಟು ಹಾಕುತ್ತಾರೆ.

ಸಿಂಹ ರಾಶಿ

ಸಿಂಹ ರಾಶಿ

ಸಿಂಹ ರಾಶಿಯಲ್ಲಿ ಜನಿಸಿದ ಬಹುತೇಕರು ಅಹಂ ಹಾಗೂ ಅಹಂಕಾರ ಗುಣವನ್ನು ಹೊಂದಿದ್ದಾರೆ. ಅವರು ತಮ್ಮ ಬಗ್ಗೆ ಬಹಳ ಹೆಮ್ಮೆ ಪಡುತ್ತಾರೆ ಮತ್ತು ಯಾರಾದರೂ ಅವರಿಗೆ ಸವಾಲು ಹಾಕಿದಾಗ ಬಹಳ ರಕ್ಷಣಾತ್ಮಕರಾಗುತ್ತಾರೆ. ಅವರು ತಪ್ಪನ್ನು ಎಂದಿಗೂ ದ್ವೇಷಿಸುತ್ತಾರೆ, ತಪ್ಪನ್ನು ಮಾಡದಂತೆ ಬಹಳ ಜಾಗರೂಕರಾಗಿರುತ್ತಾರೆ ಆದ್ದರಿಂದ ಅವರು ಇತರರಿಗೆ ಕ್ಷಮೆಯಾಚಿಸುವಷ್ಟು ದುರ್ಬಲರಲ್ಲ. ಸಿಂಹ ರಾಶಿಯವರು ತಪ್ಪು ಮಾಡಿದರೂ ಅದನ್ನು ಒಪ್ಪಿಕೊಳ್ಳುವ ಬದಲು ತನ್ನ ತಪ್ಪನ್ನೇ ತಾನೇ ಸರಿಪಡಿಸುವ ವಿಶಿಷ್ಟ ಗುಣದವರು.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರು ತಪ್ಪಾಗಬಹುದು ಎಂದು ಎಂದಿಗೂ ನಂಬುವುದಿಲ್ಲ. ಅವರು ಬಲವಾದ ಅಭಿಪ್ರಾಯವನ್ನು ಹೊಂದಿರುವ ವ್ಯಕ್ತಿಗಳಾಗಿದ್ದು, ಅವರು ಏನು ಮಾಡುತ್ತಾರೆ ಎಂಬುದರ ಬಗ್ಗೆ ತುಂಬಾ ಉತ್ಸುಕರಾಗಿರುತ್ತಾರೆ. ಆದ್ದರಿಂದ, ಅವರು ತಪ್ಪು ಮಾಡುತ್ತಾರೆ ಎಂಬುದು ಅಸಾಧ್ಯದ ಮಾತಾಗಿದೆ. ಅವರು ತಾವು ಮಾಡುವ ಯಾವುದೇ ಕೆಲಸದಕ್ಕೂ ಸರಿಯೇ, ತಪ್ಪೇ ಎಂದು ಇತರರಿಂದ ಅಭಿಪ್ರಾಯಗಳನ್ನು ತೆಗೆದುಕೊಳ್ಳಲು ನಿರಾಕರಿಸುತ್ತಾರೆ. ಆದ್ದರಿಂದ ಈ ರಾಶಿಯ ಜನರೊಂದಿಗೆ ವಾದಿಸಲು ಸಾಕಷ್ಟು ಕಿರಿಕಿರಿಯೇ ಆಗಬಹುದು.

ಮೇಷ ರಾಶಿ

ಮೇಷ ರಾಶಿ

ಮೇಷ ರಾಶಿಯವರು ಬಹಳಷ್ಟು ಮೊಂಡುತನದ ರಾಶಿಗಳಲ್ಲಿ ಒಂದಾಗಿದೆ. ಇತರರು ಅವರನ್ನು ಒಪ್ಪಿದಾಗ ಮಾತ್ರ ಅವರು ಇಷ್ಟಪಡುತ್ತಾರೆ ಮತ್ತು ಯಾರಾದರೂ ಅವರನ್ನು ಧಿಕ್ಕರಿಸಲು ಧೈರ್ಯ ಮಾಡಿದರೆ, ಮೇಷ ರಾಶಿಯವರು ತಕ್ಷಣವೇ ಅವರೊಂದಿಗೆ ಸಂಪರ್ಕವನ್ನೇ ಕಡಿತಗೊಳಿಸುತ್ತಾರೆ. ಇತರರು ಅವರ ತಪ್ಪನ್ನು ಹೇಳಿದರೆ ಅವರು ಅದನ್ನು ಸಂಪೂರ್ಣವಾಗಿ ದ್ವೇಷಿಸುತ್ತಾರೆ.

ಕುಂಭ ರಾಶಿ

ಕುಂಭ ರಾಶಿ

ಕುಂಭ ರಾಶಿಯವರು ಇತರರಿಗೆ ಕ್ಷಮೆಯಾಚಿಸಲು ಇಷ್ಟಪಡುವುದಿಲ್ಲ ಏಕೆಂದರೆ ಅವರು ತಮ್ಮನ್ನು ತಾವು ಸತ್ಯವಂತರು, ಯಾವುದೇ ತಪ್ಪುಗಳನ್ನು ಮಾಡದ ಸರ್ವೋಚ್ಚ ವ್ಯಕ್ತಿ ಎಂದು ಪರಿಗಣಿಸುತ್ತಾರೆ. ಇತರರು ಬಲವಾಗಿ ಪ್ರತಿಭಟಿಸಿದರೂ ಕುಂಭ ರಾಶಿಯವರು ಸದ್ದಿಲ್ಲದೆ ಅವರ ಮಾತನ್ನು ಕೇಳುತ್ತಾರೆ ಆದರೆ ನಂತರ ತಮ್ಮ ತಪ್ಪುಗಳನ್ನು ಮುಚ್ಚಿಡಲು ಇತರರ ತಪ್ಪುಗಳನ್ನು ಮಸುಕುಗೊಳಿಸುತ್ತಾರೆ. ಆದಾಗ್ಯೂ, ಅವರು ಸಮಸ್ಯೆಯನ್ನು ಪರಿಹರಿಸಬಹುದಾದ ಪರಿಹಾರಗಳನ್ನು ಹುಡುಕಲು ಪ್ರಯತ್ನಿಸುತ್ತಾರೆ, ಅದು ಸಾಮಾನ್ಯವಾಗಿ ಕ್ಷಮೆ ಕೇಳುವ ಕೊರತೆಯನ್ನು ಎತ್ತಿ ತೋರಿಸುತ್ತದೆ.

English summary

Zodiac signs who never admit their mistakes in kannada

Here we are discussing about Lukcy Zodiac signs in November 2021. Read more.
Story first published: Friday, October 29, 2021, 12:54 [IST]
X
Desktop Bottom Promotion