For Quick Alerts
ALLOW NOTIFICATIONS  
For Daily Alerts

ಜ್ಯೋತಿಷ್ಯ: ಈ ರಾಶಿಯವರು ಜಗಳ ಎಂದರೆ ಸಾಕು ಮೂರಡಿ ದೂರ ಇರ್ತಾರಂತೆ

|

ಯಾವುದೇ ಸಂದರ್ಭ ಬಂದರೂ ಎಲ್ಲರ ಎದುರು ಗಟ್ಟಿ ಧ್ವನಿಯಲ್ಲಿ ಉತ್ತರ ಕೊಡುವುದು, ಘರ್ಷಣೆಗಳನ್ನು ಎದುರಿಸುವುದು, ಸಂದರ್ಭಗಳನ್ನು ತಿಳಿಗೊಳಿಸುವುದು ಎಲ್ಲರಿಗೂ ಸಾಧ್ಯವಿಲ್ಲ, ಇದಕ್ಕೆ ಸಾಕಷ್ಟು ಧೈರ್ಯ ಮತ್ತು ನಿಮ್ಮ ಮೇಲಿನ ನಂಬಿಕೆ ಬೇಕು.

123

ಎಲ್ಲರೂ ನೇರ ಮತ್ತು ದೃಢವಾದ ವ್ಯಕ್ತಿತ್ವವನ್ನು ಹೊಂದಿರುವುದಿಲ್ಲ. ವಿಷಯಗಳು ಕೆಟ್ಟದಾದಾಗ, ಜಗಳಗಳು ಆದಾಗ ಪರಸ್ಪರ ಮುಖಾಮುಖಿಯಾಗುವುದು ಸಮಸ್ಯೆಯನ್ನು ಪರಿಹರಿಸುವ ಏಕೈಕ ಮಾರ್ಗವಾಗಿದೆ. ಆದರೆ, ಕೆಲವರಿಗೆ ಯಾರನ್ನಾದರೂ ಎದುರಿಸಬೇಕು, ಇಂಥಾ ಸಂದರ್ಭಗಳು ಬಂದರೆ ಸಾಕು ಹೆದರುತ್ತಾರೆ, ಸಾಕಷ್ಟು ದೂರ ಉಳಿದುಬಿಡುತ್ತಾರೆ.

ಇದರ ಬಗ್ಗೆ ಜ್ಯೋತಿಷ್ಯ ಸಹ ಏನು ಹೇಳುತ್ತದೆ ಗೊತ್ತಾ?.

ಜ್ಯೋತಿಷ್ಯಾಸ್ತ್ರದ ಪ್ರಕಾರ ಈ ಐದು ರಾಶಿಯವರು ಗಲಾಟೆ, ಘರ್ಷಣೆಗಳಿಂದ ಸದಾ ದೂರ ಉಳಿಯುತ್ತಾರೆ, ಈ ಮುಖಾಮುಖಿ ಸಂದರ್ಭಗಳನ್ನು ಎದುರಿಸುವ ಪರಿಸ್ಥಿತಿ ಬಂದರೆ ತುಂಆಬ ಹಿಂದೆ ಬೀಳುತ್ತಾರೆ ಎನ್ನುತ್ತದೆ. ಯಾವ ರಾಶಿಚಕ್ರಗಳು ಮುಂದೆ ನೋಡೋಣ:

ತುಲಾ ರಾಶಿ

ತುಲಾ ರಾಶಿ

ಕೆಲವು ಕ್ಲಿಷ್ಟ ಪರಿಸ್ಥಿತಿಯನ್ನು ಚರ್ಚಿಸುವ ಸಂದರ್ಭ ಬಂದಾಗ ತುಲಾ ರಾಶಿಯವರಿಗೆ ಅದು ನಿರ್ಧರಿಸಲು ಸಾಧ್ಯವೇ ಇಲ್ಲ ಎನ್ನಬಹುದು. ಕಾರಣ, ಒಂದು ಘರ್ಷಣೆಯ ಸನ್ನಿವೇಶದಲ್ಲಿ ಒಬ್ಬರನ್ನು ಬೆಂಬಲಿಸುವ ಅಗತ್ಯವಿರುತ್ತದೆ ಆದರೆ ತುಲಾ ರಾಶಿಯವರಿಗೆ ಹಾಗೆ ಮಾಡಲು ಇಷ್ಟವಿಲ್ಲ, ಆಗ ಇವರು ಬಹಳ ರಾಜತಾಂತ್ರಿಕರಾಗಿ ವರ್ತಿಸುತ್ತಾರೆ. ಅವರು ಎಲ್ಲಾ ಸಂದರ್ಭಗಳಲ್ಲೂ ಮುಖಾಮುಖಿಗಳನ್ನು ದ್ವೇಷಿಸುತ್ತಾರೆ. ಇಂಥಾ ಮುಖಾಮುಖಿ, ಇಬ್ಬರ ನಡುವೆ ತೀರ್ಪು ನೀಡುವ ಸಂದರ್ಭಗಳು ಅವರಿಗೆ ತುಂಬಾ ಅಸಹನೀಯವಾಗುತ್ತದೆ.

ಮೀನ ರಾಶಿ

ಮೀನ ರಾಶಿ

ಜನರನ್ನು ಎದುರಿಸುವ ಒತ್ತಡವನ್ನು ಮೀನ ರಾಶಿಯವರಿಗೆ ನಿಭಾಯಿಸಲು ಸಾಧ್ಯವಿಲ್ಲ. ಅಪ್ಪಿತ್ಪಪಿ ಅವರೇನಾದರೂ ಜನರೊಂದಿಗೆ ಬಿಸಿಯಾದ ವಾದ, ಜಗಳದಲ್ಲಿ ತೊಡಗಿಸಿಕೊಳ್ಳಲು ಪ್ರಯತ್ನಿಸಿದರೆ ಅವರು ಪ್ರಕೋಪವನ್ನು ಹೊಂದಿರುತ್ತಾರೆ, ಸಿಕ್ಕಾಪಟ್ಟೆ ಕೋಪಗೊಳ್ಳುತ್ತಾರೆ. ಅದಕ್ಕಾಗಿಯೇ ಅವರು ಸಂಪೂರ್ಣವಾಗಿ ತೀರಾ ಅಗತ್ಯ ಎನಿಸದ ಹೊರತು ಮುಖಾಮುಖಿಯಾಗುವುದನ್ನು ತಪ್ಪಿಸುತ್ತಾರೆ.

ಸಿಂಹ ರಾಶಿ

ಸಿಂಹ ರಾಶಿ

ಇದು ಅಚ್ಚರಿ ಎನಿಸಿದರೂ ಸತ್ಯ, ಬಹಳ ರಾಜಗಾಂಭೀರ್ಯದ, ತುಂಬಾ ವಿಚಾರಗಳಲ್ಲಿ ದೃಢನಿಸ್ಚಯಿಗಳಾದ ಈ ರಾಶಿಯವರು ಮುಂದೆ ಘರ್ಷಣೆಗಳು ನಡೆಯುತ್ತಿದೆ ಎಂದು ತಿಳಿದಾಗ ಬಹಳ ಆತಂಕಕ್ಕೊಳಗಾಗುತ್ತಾರೆ. ಮೀನ ರಾಶಿಯಂತೆಯೇ, ಇವರು ಸಹ ನಿರೀಕ್ಷೆಯ ಒತ್ತಡವನ್ನು ನಿಭಾಯಿಸುವುದಿಲ್ಲ. ಅವರು ಯಾವುದೇ ಸಂದರ್ಭದಲ್ಲೂ ಆದಷ್ಟು ಮುಖಾಮುಖಿಯಾಗುವುದನ್ನು ತಪ್ಪಿಸುತ್ತಾರೆ ಆದರೆ ಒಮ್ಮೆ ಅವರು ಸಿದ್ಧರಾದ ನಂತರ ಖಂಡಿತವಾಗಿಯೂ ಎದ್ದುನಿಂತು ತಮ್ಮಷ್ಟಕ್ಕೇ ತಾವೇ ಮುಂದೆ ಬಂದು ಮಾತನಾಡುತ್ತಾರೆ.

ಕರ್ಕ ರಾಶಿ

ಕರ್ಕ ರಾಶಿ

ಕರ್ಕ ರಾಶಿಯವರು ಯಾವುದೇ ಸೂಕ್ಷ್ಮ ವಿಷಯದಲ್ಲಿ ತೊಡಗಿಸಿಕೊಂಡಾಗ ವಿಷಯಗಳು ಬಹಳ ಜಟಿಲ ಅಥವಾ ಕೊಳಕು ಆಗುತ್ತವೆ. ಅವರು ತುಂಬಾ ಸೂಕ್ಷ್ಮವಾಗಿರುತ್ತಾರೆ ಆದರೆ ತಮ್ಮ ಪ್ರೀತಿಪಾತ್ರರಿಗೆ ಏನಾದರೂ ಸಂಭವಿಸಿದರೆ ಅವರು ಬಹಳ ಕೋಪಗೊಳ್ಳಬಹುದು. ಅವರು ಸಾರ್ವಜನಿಕ ಘರ್ಷಣೆಗಳಿಗೆ ಸದಾ ಇಲ್ಲವೇ ಇಲ್ಲ ಎಂದು ಹೇಳುತ್ತಾರೆ ಮತ್ತು ಸಮಸ್ಯೆಯನ್ನು ಖಾಸಗಿಯಾಗಿ ಪರಿಹರಿಸಲು ಭರವಸೆ ನೀಡುತ್ತಾರೆ.

ಧನು ರಾಶಿ

ಧನು ರಾಶಿ

ಘರ್ಷಣೆಯ ಚೆಂಡು ಅವರ ಅಂಕಣದಲ್ಲಿ ಇಲ್ಲದಿದ್ದಾಗ ಅವರು ತುಂಬಾ ಆಕ್ರಮಣಕಾರಿಯಾಗುತ್ತಾರೆ. ಆದರೆ ಅದೇ ಚೆಂಡು ಅವರ ಅಂಕಣಕ್ಕೆ ಬಂದರೆ ಅವರು ನಿಷ್ಕ್ರಿಯ-ಆಕ್ರಮಣಕಾರಿಯಾಗಬಹುದು, ಕುಶಲ ಪದಗಳು ಮತ್ತು ಕ್ರಿಯೆಗಳೊಂದಿಗೆ ಪರಿಸ್ಥಿತಿಯನ್ನು ತಿರುಗಿಸಬಹುದು. ಅವರು ಒತ್ತಡದ ಸಂದರ್ಭಗಳಲ್ಲಿ ವ್ಯವಹರಿಸುವುದನ್ನು ದ್ವೇಷಿಸುತ್ತಾರೆ ಏಕೆಂದರೆ ಅವರು ವಿನೋದವನ್ನು ಇಷ್ಟಪಡುವ ಮುಕ್ತ ಮನೋಭಾವದ ಜನರು.

ಹೋರಾಟಕ್ಕೆ ಸಿದ್ಧ ಇರುವ ರಾಶಿಚಕ್ರ ಚಿಹ್ನೆಗಳಿವು

ಮೇಷ, ವೃಷಭ, ಮಿಥುನ, ಕನ್ಯಾ, ವೃಶ್ಚಿಕ, ಮಕರ ಮತ್ತು ಕುಂಭ ರಾಶಿಯವರು ತಲೆ ಕೆಡಿಸಿಕೊಳ್ಳುವವರು, ಅವರು ಸಂದರ್ಭಗಳು ಬಂದಂತೆ ಎದುರಿಸಲು ಸಿದ್ಧರಿರುತ್ತಾರೆ. ಯಾವುದೇ ಘಟನೆಗಳಿಗೂ ಅವರು ಹಿಂದೆ ಬೀಳುವುದಿಲ್ಲ.

English summary

Zodiac signs who cannot handle confrontation in Kannada

Here we are discussing about Zodiac signs who cannot handle confrontation in Kannada.When things get bad, confronting one another about the mistakes is the only way to resolve the problem.Read more.
X
Desktop Bottom Promotion