Just In
Don't Miss
- Movies
ಪುನೀತ್ ಕೊನೆಯ ಸಿನಿಮಾ 'ಜೇಮ್ಸ್' ನಿರ್ಮಾಪಕ ಆರೋಗ್ಯ ಸ್ಥಿತಿ ಗಂಭೀರ
- News
Breaking; ಅಕ್ರಮ ಹಣ ವರ್ಗಾವಣೆ, ವಿವೋ ಕಂಪನಿ ಮೇಲೆ ಇಡಿ ದಾಳಿ
- Sports
ನೆಟ್ ಅಭ್ಯಾಸ ಆರಂಭಿಸಿದ ರೋಹಿತ್; ಆದರೂ ಇಂಗ್ಲೆಂಡ್ ವಿರುದ್ಧ ಟಿ20 ಆಡುವುದು ಅನುಮಾನ ಎಂದ ಬಿಸಿಸಿಐ!
- Automobiles
ಮ್ಯಾಗ್ನೈಟ್ ಕಾರು ಮಾದರಿಯಲ್ಲಿ ಪ್ರಮುಖ ವೆರಿಯೆಂಟ್ಗಳನ್ನು ತೆಗೆದುಹಾಕಿದ ನಿಸ್ಸಾನ್
- Technology
ಶಿಯೋಮಿ 12S ಸರಣಿಯಲ್ಲಿ ಮೂರು ಹೊಸ ಸ್ಮಾರ್ಟ್ಫೋನ್ಗಳ ಅನಾವರಣ!
- Education
Mysore University Recruitment 2022 : ಜ್ಯೂನಿಯರ್ ರಿಸರ್ಚ್ ಫೆಲೋ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಷೇರು ಪೇಟೆ ಶುಭಾರಂಭ: ಮತ್ತೆ ಎಲ್ಐಸಿ ಸ್ಟಾಕ್ ಜಿಗಿತ
- Travel
ಪಶ್ಚಿಮಘಟ್ಟಗಳಲ್ಲಿ ಮಾನ್ಸೂನ್ ನಲ್ಲಿ ಅನ್ವೇಷಿಸಬಹುದಾದ ಸ್ಥಳಗಳು
ಈ 4 ರಾಶಿಯವರನ್ನು ಜನ ಸುಲಭವಾಗಿ ಯಾಮಾರಿಸುತ್ತಾರೆ...ನೀವು ಈ ರಾಶಿಯವರೇ? ಹುಷಾರು ಕಣ್ರಿ!
ನಿಮ್ಮನ್ನು ಯಾರಾದರೂ ಸುಲಭವಾಗಿ ಫೂಲ್ ಮಾಡಬಹುದೇ? ಅವರು ಹೇಳಿದ್ದೆಲ್ಲಾ ನಿಜವೆಂದು ನಂಬಿ ಬೇಗನೆ ಮೋಸ ಹೋಗುವ ಗುಣ ನಿಮ್ಮಲ್ಲಿದೆಯೇ? ಹಾಗಾದರೆ ಅದು ನಿಮ್ಮ ತಪ್ಪಲ್ಲ ಬಿಡಿ, ನಿಮ್ಮ ರಾಶಿಯ ತಪ್ಪು.
ಹೌದು ನಮ್ಮ ಗುಣಕ್ಕೂ ನಮ್ಮ ರಾಶಿಗೂ ಸಂಬಂಧವಿದೆಯೆಂದು ಜ್ಯೋತಿಷ್ಯ ಹೇಳುತ್ತದೆ. ಎಷ್ಟೋ ಬಾರಿ ನಾವು ಇತರರ ಮಾತು ನಂಬಿ ಮೋಸ ಹೋಗುತ್ತೇವೆ, ಆದರೆ ಒಮ್ಮೆ ಮೋಸ ಹೋದ ಮೇಲೆ ಎಚ್ಚೆತ್ತುಕೊಂಡು ಬಿಡುತ್ತೇವೆ. ಇನ್ನು ಕೆಲವರು ಇರುತ್ತಾರೆ ಎಷ್ಟು ಬಾರಿ ಮೋಸ ಹೋದರೂ ಪದೇ ಪದೇ ಜನ ಅವರನ್ನು ಯಾಮಾರಿಸುತ್ತಲೇ ಇರುತ್ತಾರೆ, ಅವರ ಮುಗ್ಧತೆಯನ್ನು ದುರುಪಯೋಗಗೊಳಿಸುತ್ತಾರೆ. ಅವರು ತಾನು ಮೋಸ ಹೋದೆ ಎಂದು ತಿಳಿದ ಮೇಲೆ ತುಂಬಾ ನೋವು ಉಂಟಾಗುತ್ತದೆ, ಇನ್ನು ನಾನು ಈ ರೀತಿ ಇರಬಾರದು ಎಂದು ಭಾವಿಸುತ್ತಾರೆ, ಆದರೆ ಮತ್ತೆ ಮೋಸ ಹೋಗುತ್ತಾರೆ, ನಿಮ್ಮನ್ನು ಸುಲಭವಾಗಿ ಯಾಮಾರಿಸಬಹುದು ಎಂದಾದರೆ ಅದಕ್ಕೆ ನಿಮ್ಮ ರಾಶಿ ಕಾರಣ.
ಜ್ಯೋತಿಷ್ಯ ಪ್ರಕಾರ ಕೆಲವೊಂದು ರಾಶಿಯವರು ಬೇಗನೆ ಯಾಮಾರುತ್ತಾರಂತೆ, ಅವರಿಗೆ ಜನರು ಸುಲಭವಾಗಿ ಮೋಸ ಮಾಡುತ್ತಾರಂತೆ, ನೀವು ಆ ರಾಶಿಯವರಾದರೆ ಇನ್ನು ಮುಂದೆ ಸ್ವಲ್ಪ ಹುಷಾರಾಗಿರಲು ಪ್ರಯತ್ನಿಸಿ:

ಕುಂಭ ರಾಶಿ
ಕುಂಭ ರಾಶಿಯವರು ಇತರರ ಮಾತುಗಳನ್ನು ಸುಲಭವಾಗಿ ನಂಬಿ ಮಾಡುತ್ತಾರಂತೆ. ಯಾರಾದರೂ ಏನಾದರೂ ಹೇಳಿದರು ಅದು ಸರಿಯೋ ತಪ್ಪೋ ಎಂದು ಪರೀಕ್ಷಿಸುವುದೂ ಕೂಡ ಇಲ್ಲ, ಕಣ್ಮುಚ್ಚಿ ಎಲ್ಲವನ್ನು ನಂಬಿ ಬಿಡುತ್ತಾರೆ. ಕುಂಭ ರಾಶಿಯವರೇ ಬೇರೆಯವರು ನಿಮ್ಮನ್ನು ಮಿಸ್‌ಯೂಸ್ ಮಾಡಿಕೊಳ್ಳದಂತೆ ತುಂಬಾನೇ ಹುಷಾರಾಗಿರಿ, ಯಾವುದನ್ನೂ, ಯಾರನ್ನೂ ಕಣ್ಮುಚ್ಚಿ ನಂಬಬೇಡಿ.

ವೃಶ್ಚಿಕ ರಾಶಿ
ಈ ರಾಶಿಯವರಿಗೆ ಮೈಂಡ್ ಗೇಮ್ ಆಡೋಕೆ ಬರಲ್ಲ, ಆಡೋವರರನ್ನು ಗುರುತಿಸುವುದೂ ಇಲ್ಲ, ಇವರು ಕೂಡ ಅಷ್ಟೇ ಅಂಥವರನ್ನು ಸುಲಭವಾಗಿ ನಂಬಿ ಮೋಸ ಹೋಗುತ್ತಾರೆ. ಇವರು ಯಾರನ್ನೂ ಸುಲಭದಲ್ಲಿ ನಂಬಲು ಮೊದಲು ತಯಾರು ಇರುವುದಿಲ್ಲ, ಆದರೆ ನಂಬಿ ಬಿಟ್ಟರೆ ಪೂರ್ಣವಾಗಿ ನಂಬಿ ಬಿಡುತ್ತಾರೆ. ಇದರಿಂದಾಗಿ ಮೋಸ ಹೋಗುವ ಸಾಧ್ಯತೆ ಇದೆ. ವೃಶ್ಚಿಕ ರಾಶಿಯವರೇ ಸುಲಭವಾಗಿ ಮೋಸ ಹೋಗದಂತೆ ಸ್ವಲ್ಪ ಎಚ್ಚರವಹಿಸಿ....

ಕರ್ಕ ರಾಶಿ
ಕರ್ಕ ರಾಶಿಯವರನ್ನು ಯಾರು ಬೇಕಾದರೂ ಸುಲಭವಾಗಿ ಮೋಸಬಹುದು. ಬರೀ ಶತ್ರುಗಳಷ್ಟೇ ಅಲ್ಲ ಕೆಲವೊಮ್ಮೆ ಇವರು ಸ್ನೇಹಿತರಿಂದಲೇ ಮೋಸಗೊಳಗಾಗುತ್ತಾರೆ. ಕರ್ಕ ರಾಶಿಯವರು ತುಂಬಾ ಸೆನ್ಸಿಟಿವ್ ಸ್ವಭಾವದವರು, ಎಲ್ಲರನ್ನೂ ಸುಲಭವಾಗಿ ನಂಬುತ್ತಾರೆ, ಈ ಸ್ವಭಾವದಿಂದಲೇ ಮೋಸಗೊಳಗಾಗುತ್ತಾರೆ.

ಧನು ರಾಶಿ
ಧನು ರಾಶಿಯವರು ಸಂಬಂಧಕ್ಕೆ ತುಂಬಾ ಪ್ರಾಮುಖ್ಯತೆ ನೀಡುತ್ತಾರೆ, ಅವರ ಭಾವನೆಗಳನ್ನು ಗೌರವಿಸುತ್ತಾರೆ, ಆದರೆ ಇವರನ್ನು ಟೇಕನ್ ಫಾರ್ ಗ್ರಾಂಟೆಡ್ ಎಂಬಂತೆ ತೆಗೆದುಕೊಳ್ಳುವವರೇ ಅಧಿಕ. ಕುಟುಂಬಕ್ಕಾಗಿ, ಸ್ನೇಹಿತರಿಗಾಗಿ ಏನು ಬೇಕಾದರೂ ಮಾಡಲು ಸಿದ್ಧರಾಗಿರುತ್ತಾರೆ. ಆದರೆ ಅವರಿಂದ ಕೊನೆಗೆ ಇವರಿಗೆ ನೋವು ಉಂಟಾಗುವುದು. ಬೇರೆಯವರ ಕುತಂತ್ರ ಇವರು ಗುರುತಿಸುವುದೇ ಇಲ್ಲ ಈ ಕಾರಣಕ್ಕಾಗಿ ಬೇಗನೆ ಮೋಸಗೊಳಗಾಗುತ್ತಾರೆ...