For Quick Alerts
ALLOW NOTIFICATIONS  
For Daily Alerts

ಈ ಐದು ರಾಶಿಯವರು ಮತ್ತೊಬ್ಬರ ರಹಸ್ಯ ತಿಳಿಯುವುದರಲ್ಲಿ ಎತ್ತಿದಕೈ!

|

ರಾಶಿಚಕ್ರಗಳು ನಮ್ಮ ವರ್ತನೆ, ಗುಣಸ್ವಭಾವಗಳ ಬಗ್ಗೆ ಸಾಕಷ್ಟು ಮಾಹಿತಿಯನ್ನು ನಮಗೆ ತಿಳಿಸಿಕೊಡುತ್ತದೆ. ರಾಶಿಚಕ್ರಗಳನ್ನು ಆಧರಿಸಿಯೇ ಇತರರ ಗುಣಾವಗುಣಗಳನ್ನು ನಾವು ತಿಳಿಯಬಹುದು ಎನ್ನಲು ಮೂಲ ಕಾರಣ ಜ್ಯೋತಿಶಾಸ್ತ್ರ. ಈ ಹಿಂದಿನ ಲೇಖನಗಳಲ್ಲಿ ರಾಶಿಚಕ್ರಗಳ ವಿವಿಧ ಗುಣಗಳ ಬಗ್ಗೆ ಚರ್ಚಿಸಿದ್ದೇವೆ. ಆದರೆ, ಯಾವ ರಾಶಿಗಳು ಗೂಢಚರ್ಯೆಯ ಗುಣವನ್ನು ಹೊಂದಿದೆ, ಯಾವೆಲ್ಲಾ ರಾಶಿಗಳು ರಹಸ್ಯಗಳನ್ನು ಸುಲಭವಾಗಿ ಚಾಕಚಕ್ಯತೆಯಿಂದ ಭೇದಿಸುತ್ತದೆ ಎಂಬುದರ ಬಗ್ಗೆ ನಿಮಗೆ ಗೊತ್ತೆ?, ಈ ಬಗ್ಗೆ ತಿಳಿಯುವ ಕುತೂಹಲವೇ, ಬನ್ನಿ ಈ ಲೇಖನದ ಮೂಲಕ ಯಾವ ರಾಶಿ ರಹಸ್ಯ ಪತ್ತೆ ಮಾಡುವುದರಲ್ಲಿ ಎತ್ತಿದಕೈ ಎಂಬ ರಹಸ್ಯವನ್ನು ತಿಳಿಯೋಣ.

1. ಧನು ರಾಶಿ

1. ಧನು ರಾಶಿ

ಧನು ರಾಶಿಯವರು ತಮ್ಮ ಗೂಢಚರ್ಯೆಗೆ ಬಳಸುವ ಚಿಂತನೆ ಹಾಗೂ ಸಿದ್ಧಾಂತಗಳು ಅವರದ್ದೇ ಆದ ರೀತಿ ಭಿನ್ನವಾಗಿ ಮತ್ತು ಸ್ವಂತಿಕೆಯಿಂದ ಇರುತ್ತದೆ. ಇವರು ಒಂದು ಸತ್ಯವನ್ನು ಹೊರಗೆಳೆಯಬೇಕು ಎಂದು ಬಯಸಿದರೆ ಹಿಂದಿನ ಎಲ್ಲವನ್ನು ಸದ್ದಿಲ್ಲದೇ ಕೆದಕಿ, ಹಗಲು-ರಾತ್ರಿ ಕೆಲಸ ಮಾಡಿ ಎಲ್ಲಾ ಮಾಹಿತಿಯನ್ನು ಕಲೆಹಾಕುತ್ತಾರೆ. ಇವರು ತಮ್ಮ ಯಾವುದೇ ಆಲೋಚನೆಯನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳುವ ಮೊದಲು ಈ ಹಿಂದೆ ಸಾಕಷ್ಟು ದಿನ, ತಿಂಗಳು ಅಥವಾ ವರ್ಷಗಳವರೆಗೆ ಚಿಂತನೆ ಮಾಡಿ, ಹೇಳುವುದು ಸರಿಯೇ ಎಂದು ಎಲ್ಲಾ ರೀತಿಯಲ್ಲೂ ಲೆಕ್ಕ ಹಾಕಿ ನಂತರ ಬಹಿರಂಗ ಪಡಿಸುತ್ತಾರೆ. ಇನ್ನೂ ವಿಶೇಷವೆಂದರೆ ಇವರು ರಹಸ್ಯ ಪತ್ತೆ ಮಾಡುತ್ತಿದ್ದಾರೆ ಎಂದು ಯಾರಿಗೂ, ಯಾವ ಸಂದರ್ಭದಲ್ಲೂ ಬಿಟ್ಟಕೊಡದಂತೆ ಕೆಲಸ ಮಾಡುತ್ತಾರೆ ಮತ್ತು ಈ ಪ್ರಕ್ರಿಯೆಯನ್ನು ಇವರು ಇಷ್ಟಪಡುತ್ತಾರೆ.

2. ಮೇಷ ರಾಶಿ

2. ಮೇಷ ರಾಶಿ

ರಸಹ್ಯಗಳನ್ನು ಕಂಡುಹಿಡಿಯುವುದು ಮೇಷ ರಾಶಿಯವರಿಗೆ ಮೋಜಿನ ಒಂದು ಭಾಗ ಮಾತ್ರ. ನಿಮ್ಮನ್ನು ಕೆದಕಿರುವ ಹಾಗೂ ನಿಮ್ಮ ಹೃದಯದ ಬಡಿತವನ್ನು ಹೆಚ್ಚಿಸುವ ಯಾವುದೇ ವಿಷಯವನ್ನು ತಿಳಿಯಲು ಮೊದಲಿಗರಾಗಿರುತ್ತಾರೆ. ಇಂಥ ವಿಷಯಗಳಲ್ಲಿ ಸವಾಲು ಎದುರಾದರೆ ಸತ್ಯ ಎಂಥಾ ಆಳದಲ್ಲಿದ್ದರೂ ಅದನ್ನು ಎಷ್ಟೇ ಕಷ್ಟವಾದರೂ ಸರಿಯೇ ತಿಳಿಯಲು ಸಿದ್ಧರಿರುತ್ತೀರಿ. ನೀವು ಯೋಚಿಸುವುದನ್ನು ಮತ್ತು ಒಳ್ಳೆಯ ರಹಸ್ಯಗಳನ್ನು ತಿಳಿಯಲು ಇಷ್ಟಡುತ್ತೀರಿ. ಯಾವಾಗ ಇದು ಸಾಧ್ಯವಾಗುವುದಿಲ್ಲ ಅದು ನಿಮ್ಮನ್ನು ತಲ್ಲಣಗೊಳಿಸುತ್ತದೆ. ಆದರೆ, ಕೊನೆಗೂ ನೀವು ಗೆದ್ದೇ ಗೆಲ್ಲುತ್ತೀರಿ ಎಂಬ ನಂಬಿಕೆ ನಿಮ್ಮಲ್ಲಿರುತ್ತದೆ.

3. ಕನ್ಯಾ ರಾಶಿ

3. ಕನ್ಯಾ ರಾಶಿ

ಕನ್ಯಾರಾಶಿಯವರಿಗೆ ಸತ್ಯಸಂಗತಿಗಳನ್ನು ತಿಳಿಯುವುದು ಕಷ್ಟವೇನಲ್ಲ, ಆದರೆ ಇವರ ಕಲ್ಪನಾಲಹರಿಯನ್ನು ಭಿನ್ನಗೊಳಿಸಿ ಮತ್ತು ಪರ್ಯಾಯ ಯೋಚನೆಗಳನ್ನು ಮಾಡಲು ಪ್ರಯತ್ನಿಸಬೇಕಷ್ಟೇ. ಒಮ್ಮೆ ನೀವು ನಿಮ್ಮ ಪತ್ತೆಕಾರ್ಯ ಅಥವಾ ಒಳಸಂಚಿನ ಸಿದ್ಧಾಂತಕ್ಕೆ ಒಪ್ಪಿಕೊಂಡರೆ ಕಾರ್ಯಸಿದ್ಧಿ ಮಾಡುವವರೆಗೂ ಎಂದಿಗೂ ಹಿಂದೆ ಸರಿಯುವುದಿಲ್ಲ. ಏಕೆಂದರೆ ನೀವು ಈವರೆಗೂ ಮಾಡಿರುವ ಯಾವುದೇ ಕಾರ್ಯವು ಎಂದಿಗೂ ನಿಮಗೆ ತಪ್ಪಾಗಿಯೇ ಕಂಡಿಲ್ಲ. ಆದ್ದರಿಂದಲೇ ಈ ಕೆಲಸ ನಿಮಗೆ ಚೆನ್ನಾಗಿ ಒಪ್ಪುತ್ತದೆ. ಆದರೆ ನೀವು ಯಾರಾದರೂ ನಿಮ್ಮ ಕೆಲಸ ಅಥವಾ ಫಲಿತಾಂಶದ ಬಗ್ಗೆ ಸವಾಲು ಹಾಕಿದರೆ ಅದಕ್ಕೆ ಉತ್ತರ ಕೊಡುವುದು ಅವಮಾನ ಎಂದುಕೊಳ್ಳುತ್ತೀರಿ. ನಿಮ್ಮ ದೌರ್ಬಲ್ಯವೆಂದರೆ ನೀವು ಎದುರುತ್ತರ ಅಷ್ಟು ಧೈರ್ಯವಾಗಿ ಮುಂದೆ ಬರುವುದಿಲ್ಲ ಹಾಗೂ ವಿವರಿಸುವ ವಿಷಯದಲ್ಲಿ ನಿಮಗೆ ಉತ್ಸಾಹವೆ ಇರುವುದಿಲ್ಲ.

4. ವೃಶ್ಚಿಕ ರಾಶಿ

4. ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರಿಗೆ ಆಳವಾದ ಆಲೋಚನೆಯೇ ಅವರ ಅಸ್ತ್ರ. ಅಲ್ಲದೇ ಅತಿಯಾಗಿ ಯೋಚನೆ ಮಾಡುವುದು ನಿಮಗೇನು ತಪ್ಪು ಎಂದು ಎನಿಸುವುದಿಲ್ಲ. ನಿಜ ಹೇಳಬೇಕೆಂದರೆ, ನೀವು ಆಳವಾದ ಚಿಂತನೆಯನ್ನು ಬಹಳ ಹಂಬಲಿಸುತ್ತಾರೆ. ವೃಶ್ಚಿಕ ರಾಶಿಯವರು ಕೆಲವರಂತೆ ಕೇವಲ ಒಂದು ಹರಿವಿನೊಂದಿಗೆ ಹೋಗಲು ಇಷ್ಟಪಡುವುದಿಲ್ಲ, ಯಾವುದೇ ವಿಷಯವಾಗಲಿ ಕೆದಕುವ ಮನಸ್ಥಿತಿ ಇವರದ್ದಾಗಿದೆ. ನೀವು ಕೇವಲ ಒಂದು ಸತ್ಯವನ್ನು ಮಾತ್ರ ಬಯಸುವುದಿಲ್ಲ, ನೀವು ಎಲ್ಲಾ ಸತ್ಯಗಳನ್ನು ತಿಳಿಯಲು ಬಯಸುತ್ತೀರಿ. ನೀವು ಅತ್ಯವನ್ನು ತಿಳಿಯಬೇಕು ಎಂಬ ನಿಮ್ಮ ಸಿದ್ಧಾಂತಕ್ಕೆ ಸಾಕಷ್ಟು ಒಲವು ತೋರುತ್ತೀರಿ ಮತ್ತು ನೀವು ಎಂದಿಗೂ ನಿಜವಾದ ರಹಸ್ಯವನ್ನು ತಿಳಿಯುವುದರಿಂದ ಹಿಂದೆ ಸರಿಯುವುದಿಲ್ಲ.

5. ಕುಂಭ ರಾಶಿ

5. ಕುಂಭ ರಾಶಿ

ಯಾವುದಾದರೂ ಘಟನೆ ಅವಶ್ಯವಲ್ಲದಿದ್ದರೂ ಘಟಿಸಿದ್ದರೆ ಆ ಸಂದರ್ಭದಲ್ಲಿ ನಿಮ್ಮ ವಾದ ಹೇಗಿರುತ್ತದೆ ಎಂದರೆ ಇಲ್ಲ ಇದು ಅವಶ್ಯವಿತ್ತು ಎಂದೇ ಕುಂಭ ರಾಶಿಯವರು ಪ್ರತಿಕ್ರಿಯಿಸುತ್ತಾರೆ. ವಿಭಿನ್ನ ದೃಷ್ಟಿಕೋನದಿಂದ ವಿಷಯಗಳನ್ನು ನೋಡುವುದರಲ್ಲಿ ನೀವು ತುಂಬಾ ಬುದ್ಧಿವಂತರು, ಇನ್ನು ವಿಶೇಷವಾಗಿ ನಿಮ್ಮ ಚಾಕಚಕ್ಯತೆ ಎಂದರೆ, ನಿಮ್ಮ ರಹಸ್ಯ ಪತ್ತೆ ಬಗ್ಗೆ ಯಾರಿಗಾದರೂ ವಿವರಿಸುವುದರಲ್ಲಿ ಸಹ ನಿಪುಣರು, ಈ ವಿಷಯದಲ್ಲಿ ಅವರ ಮನವೊಲಿಸುವಲ್ಲಿ ಯಶಸ್ವಿಯಾಗುತ್ತೀರಿ. ನಿಮ್ಮ ಆಕರ್ಷಕ ಮಾರ್ಗಗಳ ಮೂಲಕವೇ ನೀವು ಸಾಧಿಸಬೇಕಿರುವ ಗುರಿಯನ್ನು ಸಾಧಿಸುವಲ್ಲಿ ನೀವು ಯಶಸ್ವಿಯಾಗುತ್ತೀರಿ. ಆದರೂ ಜನರು ನಿಮ್ಮನ್ನು ಪ್ರತಿ ಬಾರಿಯೂ ನಂಬುವಂತೆ ಮಾಡುವುದು ಅಷ್ಟು ಸುಲಭವಲ್ಲ.

English summary

Zodiac Signs Who Are Into Spying Characteristics

Being a spy may not match the glamorous and flashy images from movies and television. Spying is often a low-key, under the radar, tireless and thankless endeavor. here more intrestingly few of zodiac signs are has nature of spying. so here we are discussing about zodiac signs who are into spying and conspiracy characteristics in nature. Take a look.
Story first published: Wednesday, December 4, 2019, 18:30 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more