Just In
- 23 min ago
World Thyroid Day: ಥೈರಾಯ್ಡ್ ಬಗ್ಗೆ ಇರುವ ತಪ್ಪು ಕಲ್ಪನೆಗಳಿವು, ಹಾಗಾದರೆ ಸತ್ಯಾಂಶಗಳೇನು ಗೊತ್ತಾ?
- 2 hrs ago
ಈ ಪ್ರಾಯಾಣಾಮ ತಪ್ಪದೇ ಮಾಡಿದರೆ ಸಾಕು, ಅಧಿಕ ರಕ್ತದೊತ್ತಡಕ್ಕೆ ಬೈಬೈ ಹೇಳಬಹುದು..!
- 4 hrs ago
ಒಂದೇ ದಿನದಲ್ಲಿ ಬಂದಿದೆ ವಟ ಸಾವಿತ್ರಿ ವ್ರತ ಹಾಗೂ ಶನಿ ಜಯಂತಿ: ಈ ಕಾಕತಾಳೀಯಗಳು ಸಂಭವಿಸಲಿದೆ
- 6 hrs ago
ಇತ್ತೀಚೆಗಷ್ಟೇ ಟೈಪ್ 2 ಮಧುಮೇಹ ಕಾಣಿಸಿಕೊಂಡಿದ್ದರೆ ಗುಣಪಡಿಸುವುದು ಹೇಗೆ?
Don't Miss
- News
ವಿದೇಶಿ ಕರೆನ್ಸಿ ಆಸೆಗೆ 1 ಲಕ್ಷ ಕಳೆದುಕೊಂಡ ಉದ್ಯಮಿ
- Sports
LSG vs RCB: ಕೊನೆಯ ಬಾರಿಗೆ ಶತಕ ಗಳಿಸಿದ್ದ ಈಡನ್ ಗಾರ್ಡನ್ಸ್ಗೆ ಮರಳಿದ ವಿರಾಟ್ ಕೊಹ್ಲಿ!
- Movies
ಕರಣ್ ಜೋಹರ್ ಬರ್ತ್ ಡೇ: ರಶ್ಮಿಕಾ, ಯಶ್ ಮತ್ತು ಸೌತ್ ಸ್ಟಾರ್ಸ್ ಭಾಗಿ!
- Technology
ಐಫೋನ್ನಲ್ಲಿ ಸ್ಟೋರೇಜ್ ಸ್ಪೇಸ್ ಫ್ರೀ ಮಾಡಲು ಹೀಗೆ ಮಾಡಿ?
- Automobiles
ಹೊಸ ಇವಿ ನೀತಿ: ರಾಜಸ್ತಾನದಲ್ಲಿ ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಭರ್ಜರಿ ಸಬ್ಸಡಿ!
- Education
KLE Society Recruitment 2022 : 14 ಪ್ರಾಧ್ಯಾಪಕ ಮತ್ತು ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ದಾವೋಸ್: ರೆನ್ಯೂ ಪವರ್ನಿಂದ ರಾಜ್ಯದಲ್ಲಿ 50 ಸಾವಿರ ಕೋಟಿ ರೂ. ಹೂಡಿಕೆ ಒಪ್ಪಂದ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಈ ರಾಶಿಚಕ್ರಗಳಿಗೆ ಚಳಿಗಾಲ ಎಂದರೆ ಬಹಳ ಇಷ್ಟವಂತೆ!
ಪ್ರತಿಯೊಂದು ಋತುಮಾನವೂ ತನ್ನದೇ ಆದಾತಾವರಣ ವಿಶಿಷ್ಟತೆಯಿಂದ ಕೂಡಿರುತ್ತದೆ. ಎಲ್ಲಾ ಕಾಲಮಾನವನ್ನೂ ಅದಿ ಇರುವಂತೆ ಅನುಭವಿಸುವ ಜನರು ಒಂದೆಡೆಯಾದರೆ, ಕೆಲವು ಋತುಮಾನವನ್ನು ಮಾತ್ರ ಇಷ್ಟಪಡುವ ಜನರು ಹಲವರಿದ್ದಾರೆ. ಕೆಲವರಿಗೆ ಬೇಸಿಗೆ, ಕೆಲವರಿಗೆ ಮಳೆಗಾಲ ಇನ್ನೂ ಕೆಲವರಿಗೆ ಚಳಿಗಾಲ.
ಚಳಿಗಾಲವನ್ನು ಇಷ್ಟಪಡುವವರ ಸಂಖ್ಯೆ ತುಸು ಹೆಚ್ಚೇ ಎಂದು ಹೇಳಬಹುದು. ಏಕೆಂದರೆ ಕೆಲವು ಆರಾಮದಾಯಕ ಸಮಯವನ್ನು ಮನೆಯ ಒಳಗಡೆಯೇ ಕಳೆಯಬಹುದು, ಮನೆಯವರ ಜೊತೆ ಹೆಚ್ಚಿನ ಸಮಯ ಕಳೆಯಲು ಪರೋಕ್ಷವಾಗಿ ಚಳಿಗಾಲ ಸಮಯ ಮಾಡಿಕೊಡುತ್ತದೆ.
ಆದರೆ ನಿಮಗೆ ಗೊತ್ತೆ ಜ್ಯೋತಿಶಾಸ್ತ್ರದ ಪ್ರಕಾರ ಈ ರಾಶಿಯವರು ಚಳಿಗಾಲವನ್ನು ತುಂಬಾ ಇಷ್ಟಪಡುತ್ತಾರೆ ಹಾಗೂ ಅನುಭವಿಸುತ್ತಾರಂತೆ, ಯಾವೆಲ್ಲಾ ಮುಂದೆ ತಿಳಿಯೋಣ:

ವೃಷಭ ರಾಶಿ
ನಿಮ್ಮ ವ್ಯಕ್ತಿತ್ವವು ಚಳಿಗಾಲದಲ್ಲಿ ಹೆಚ್ಚಾಗಿ ಚಟುವಟಿಕೆಯಿಂದ ಇರುತ್ತದೆ, ನೀವು ಶಾಂತ ಮತ್ತು ತಂಪಾದ ಮನಸ್ಸನ್ನು ಹೊಂದಿದ್ದೀರಿ. ನೀವು ಎಲ್ಲಕ್ಕಿಂತ ಹೆಚ್ಚಾಗಿ ಆರಾಮವನ್ನು ಪ್ರೀತಿಸುವ ಗುಣವನ್ನು ಹೊಂದಿರುವುದರಿಂದ, ಚಳಿಗಾಲದಲ್ಲಿ ಆರಾಮದಾಯಕವಾಗಿ ಕಂಬಳಿಗಳ ಒಳಗೆ ನುಸುಳಲು ಇವರು ತುಂಬಾ ಇಷ್ಟಪಡುತ್ತಾರೆ. ಆರಾಮವನ್ನು ಹೆಚ್ಚು ಇಷ್ಟಪಡುವ ಇವರು ಖಂಡಿತವಾಗಿಯೂ ಚಳಿಗಾಲವನ್ನು ಅನುಭವಿಸುತ್ತಾರೆ. ಅದಕ್ಕೆ ಆದ್ಯತೆ ನೀಡುತ್ತಾರೆ. ಈ ಋತು ಯಾವಾಗಲೂ ನೀವು ಶಾಂತವಾಗಿರಲು ಸಹಾಯ ಮಾಡುತ್ತದೆ.

ಕರ್ಕ ರಾಶಿ
ಚಳಿಗಾಲದಲ್ಲಿ ಚಳಿಯ ಹಿತವನ್ನು ಮನೆಯಲ್ಲಿ ಸಮಯವನ್ನು ಕಳೆಯಲು, ರುಚಿಕರ ತಿಂಡಿಗಳನ್ನು ಸವಿಯಲು, ನೆಚ್ಚಿನ ಸಿನಿಮಾ ನೋಡುತ್ತಾ ಎಂಜಾಯ್ ಮಾಡಲು ಬಯಸುವವರು ಕರ್ಕ ರಾಶಿಯವರು. ಇವರಿಗೆ ಇದಕ್ಕಿಂತ ಹೆಚ್ಚೇನೂ ಆನಂದ ನೀಡುವುದಿಲ್ಲ. ನೀವು ಚಳಿಗಾಲವನ್ನು ಸಂಪೂರ್ಣವಾಗಿ ಆರಾಧಿಸುತ್ತೀರಿ ಏಕೆಂದರೆ ನೀವು ಮನೆಯಲ್ಲಿ ನಿಮ್ಮ ಪ್ರೀತಿಪಾತ್ರರ ಜೊತೆ ಸಮಯ ಕಳೆಯಬಹುದು, ಚಳಿಯನ್ನು ಹೊರಗಡೆ ಹೋಗಿ ಸವಿಯುವುದಕ್ಕಿಂತ ಮನೆಯಲ್ಲೆ ಇದ್ದು ಅನುಭವಿಸಲು ಇಷ್ಟಪಡುವವರು ಕರ್ಕ ರಾಶಿಯವರು.

ಕನ್ಯಾ ರಾಶಿ
ಚಳಿಗಾಲದಲ್ಲಿ ನಿಮ್ಮ ಅತ್ಯುತ್ತಮ ಕಲೆ, ಕುಶಲತೆಗಳು ಮೊಳಕೆಯೊಡೆಯುವ ಕಾಲವಾಗಿದೆ. ನೀವು ಈ ಕಾಲಮಾನವನ್ನು ನಿಮ್ಮ ಕ್ರಿಯಾತ್ಮಕ ಕೆಲಸಗಳನ್ನು ಮಾಡಲು ಇಷ್ಟಪಡುತ್ತೀರಿ, ಆದ್ದರಿಂದಲೇ ನೀವು ಚಳಿಗಾಲವನ್ನು ಹೆಚ್ಚು ಇಷ್ಟಪಡುತ್ತೀರಿ. ಏಕೆಂದರೆ ನೀವು ಇತರರೊಂದಿಗೆ ಬೆರೆಯಲು ಹೊರಡುವ ಬದಲು ನಿಮಗಾಗಿ ಎಲ್ಲಾ ಸಮಯವನ್ನು ಹೊಂದಲು ಬಯಸುತ್ತೀರಿ. ತಂಪಾದ ಗಾಳಿಯು ನಿಮಗೆ ಮನೆತನದ ಘಮಲನ್ನು ಅನುಭವಿಸಲು ಪ್ರೇರೇಪಿಸುತ್ತದೆ.

ವೃಶ್ಚಿಕ ರಾಶಿ
ಚಳಿಗಾಲದ ಅವಧಿಯಲ್ಲಿ ನಿಮ್ಮ ಸಂಗಾತಿಯೊಂದಿಗೆ ಮೋಜಿನ ಸಮಯ ಕಳೆಯುವುದು ನಿಮ್ಮ ಸಾರ್ವಕಾಲಿಕ ನೆಚ್ಚಿನ ಚಟುವಟಿಕೆಯಾಗಿದೆ. ನೆನಪುಗಳು, ನಗು ಮತ್ತು ಉಲ್ಲಾಸದಿಂದ ತುಂಬಿರುವ ಬೆಚ್ಚಗಿನ ಸಂಜೆಗಾಗಿ ಎಲ್ಲರೂ ಒಟ್ಟುಗೂಡಿದಾಗ ನೀವು ಅದನ್ನು ಬಹಳ ಇಷ್ಟಪಡುತ್ತೀರಿ. ನೀವು ನಂಬಿಕೆಯ ಪ್ರಕಾರ, ಚಳಿಗಾಲವು ಮಾತ್ರ ಈ ಒಗ್ಗಟ್ಟನ್ನು ತರುತ್ತದೆ, ಆದ್ದರಿಂದ ಚಳಿಗಾಲವು ನಿಮಗಾಗಿಯೇ ಆಗಿರುತ್ತದೆ. ಪ್ರತಿ ಚಳಿಗಾಲಕ್ಕಾಗಿ ತುಂಬಾ ಹಾತೊರೆಯುತ್ತೀರಿ.

ಮಕರ ರಾಶಿ
ಶೀತ ಋತುವು ಕಳೆದ ವರ್ಷವನ್ನು ಪ್ರತಿಬಿಂಬಿಸುವ, ಕಳೆದ ವರ್ಷ ಮಾಡಿದ ತಪ್ಪುಗಳು, ಮಾಡಬೇಕಾದ ಸರಿಗಳ ಲೆಕ್ಕಾಚಾರ ಹಾಕುವ ಸಮಯ ಮಕರ ರಾಶಿಯವರಿಗೆ. ಮನೆಯಲ್ಲಿ ಉಳಿಯುವ ಮೂಲಕ ನಿಮ್ಮ ಜೀವನದಲ್ಲಿ ಮಹತ್ವದ ಪಾತ್ರವನ್ನು ವಹಿಸಿರುವ ಪ್ರಸ್ತುತ ವರ್ಷದ ಗುರಿಗಳು, ನಿರ್ಧಾರಗಳು ಮತ್ತು ಘಟನೆಗಳ ಬಗ್ಗೆ ನೀವು ಯೋಚಿಸಲು ಈ ಸಮಯವನ್ನು ಸದುಪಯೋಗಪಡಿಸಿ ಕೊಳ್ಳುತ್ತೀರಿ. ನೀವು ಏಳಿಗೆಗಾಗಿ ಈ ಋತುವನ್ನು ಬುದ್ಧಿವಂತಿಕೆಯಿಂದ ಬಳಸುತ್ತೀರಿ ಮತ್ತು ನಿಮ್ಮ ಜೀವನದಲ್ಲಿ ನೀವು ಮುಂದೆ ಏನು ಮಾಡಬಹುದು ಎಂಬುದರ ಕುರಿತು ಯೋಚಿಸುತ್ತೀರಿ. ಆದ್ದರಿಂದ ಈ ಕಾಲವನ್ನು ನೀವು ಇಷ್ಟಪಡುತ್ತೀರಿ.