For Quick Alerts
ALLOW NOTIFICATIONS  
For Daily Alerts

ನಿಮ್ಮ ರಾಶಿಚಕ್ರಕ್ಕೆ ಹೊಂದುವ ಬಣ್ಣದಿಂದ ನಿಮ್ಮ ಅದೃಷ್ಟ ಬದಲಾಗತ್ತೆ ನೋಡಿ

|

ಎಷ್ಟೊಂದು ಬಣ್ಣಗಳಿವೆ. ಒಂದೊಂದು ಬಣ್ಣಕ್ಕೂ ಒಂದೊಂದು ಅರ್ಥ, ಒಂದೊಂದು ಬಣ್ಣವೂ ಒಂದೊಂದು ಭಾವನೆಗಳನ್ನು ವ್ಯಕ್ತಪಡಿಸುತ್ತದೆ ಎನ್ನುತ್ತಾರೆ ಮನೋವೈದ್ಯರು. ಪ್ರತಿಯೊಬ್ಬರಿಗೂ ತಮ್ಮದೇ ಆದ ಇಷ್ಟದ, ಅದೃಷ್ಟದ ಬಣ್ಣಗಳಿರುತ್ತದೆ. ಈ ಬಣ್ಣದ ಬಟ್ಟೆ ಧರಿಸಿದರೆ ಆವರಿಗೆ ಆ ದಿನ ಎಲ್ಲಾ ಶುಭ ಸುದ್ದಿಯೇ ಸಿಗುತ್ತದೆ ಹೀಗೆಲ್ಲಾ ನಂಬುವವರು ಹಲವರು ಇದ್ದಾರೆ.

Power Colour Of Your Zodiac Sign And How

ಆದರೆ ಈ ಬಣ್ಣಕ್ಕೂ, ಜ್ಯೋತಿಶಾಸ್ತ್ರಕ್ಕೂ ಹಾಗೂ ನಮ್ಮ ರಾಶಿಚಕ್ರಕ್ಕೂ ಒಂದು ನಂಟಿದೆ ಎಂಬುದು ನಿಮಗೆ ಗೊತ್ತೆ. ಹೌದು ಜ್ಯೋತಿಶಾಸ್ತ್ರದ ಪ್ರಕಾರ ಪ್ರತಿಯೊಂದು ರಾಶಿಚಕ್ರಕ್ಕೂ ಒಂದೊಂದು ಬಣ್ಣಗಳಿಗೆ, ಆ ಬಣ್ಣವೇ ಅವರಿಗೆ ಅದೃಷ್ಟ ಮತ್ತು ಶಕ್ತಿಯನ್ನು ತರುತ್ತದೆ ಮತ್ತು ಆ ರಾಶಿಚಕ್ರದವರ ಗುಣ ಸ್ವಭಾವವನ್ನು ಸಹ ಹೇಳುತ್ತದೆ.

ಹಾಗಿದ್ದರೆ 12 ರಾಶಿಚಕ್ರಗಳ ಅದೃಷ್ಟದ ಬಣ್ಣಗಳು ಯಾವುವು, ಅದು ಹೇಗೆ ಆ ರಾಶಿಚಕ್ರಕ್ಕೆ ಶಕ್ತಿಯನ್ನು ತುಂಬುತ್ತದೆ ಎಂದು ಮುಂದೆ ತಿಳಿಯೋಣ ಬನ್ನಿ:

ಮೇಷ ರಾಶಿ

ಮೇಷ ರಾಶಿ

ಮೇಷ ರಾಶಿಯವರಿಗೆ ಶಕ್ತಿಯ ಬಣ್ಣ ಕೆಂಪು.

ಕೆಂಪು ಬಣ್ಣವು ಉತ್ಸಾಹದ ಮನಸ್ಥಿತಿಯನ್ನು ಸೃಷ್ಟಿಸುತ್ತದೆ, ಇದು ಬೆಂಕಿಯ ಚಿಹ್ನೆಯಾಗಿದೆ. ಕೆಂಪು ಬಣ್ಣದ ಉಡುಪುಗಳನ್ನು ಧರಿಸುವುದರಿಂದ ನಿಮಗೆ ಅಭಿವೃದ್ಧಿ ಉತ್ತಮವಾಗಿ ಆಗುತ್ತದೆ. ನಿಮ್ಮ ಕೋಣೆಯಲ್ಲಿ ಕೆಂಪು ಬಣ್ಣದ ಕರ್ಟನ್‌ ಅಥವಾ ಗೋಡೆಗಳಿಗೆ ಕೆಂಪು ಬಣ್ಣ ಹಾಕುವುದರಿಂದ ನೀವು ಮತ್ತು ನಿಮ್ಮ ಸಂಗಾತಿ ನಿಕಟ ಹಾಗೂ ಪ್ರೀತಿಯ ಕ್ಷಣಗಳನ್ನು ಅನುಭವಿಸಬಹುದು. ನಿಮಗೆ ಸಂದರ್ಶನ ಅಥವ ವಿಶೇಷ ಸಂದರ್ಭಗಳಲ್ಲಿ ಕೆಂಪು ಧರಿಸಿದರೆ ಶುಭ ಸುದ್ದಿ ನಿಮ್ಮದಾಗಲಿದೆ.

ವೃಷಭ ರಾಶಿ

ವೃಷಭ ರಾಶಿ

ವೃಷಭ ರಾಶಿಯ ಶಕ್ತಿಯ ಬಣ್ಣ ಹಸಿರು.

ಹಸಿರು ಬಣ್ಣವು ಪ್ರಕೃತಿಗೆ ಸಾಂಕೇತಿಕವಾಗಿದೆ ಮತ್ತು ವೃಷಭ ರಾಶಿಯ ಸಂಕೇತವು ಭೂಮಿಯ ಚಿಹ್ನೆಯಾಗಿರುವುದರಿಂದ ಈ ಬಣ್ಣ ಸಹ ನಿಮಗೆ ಅತೀ ಸೂಕ್ತವಾಗಿದೆ. ಪ್ರಕೃತಿಯಂತೆಯೇ ನೀವು ಸಹ ಸ್ಥಿರ, ತಾಳ್ಮೆ ಮತ್ತು ಯಾವಾಗಲೂ ಬೆಳೆಯುತ್ತಿರುವಿರಿ. ಸ್ಥಿರ ಮತ್ತು ಪ್ರಗತಿಶೀಲತೆಯನ್ನು ಅನುಭವಿಸಲು ಹೆಚ್ಚಾಗಿ ಹಸಿರೇ ನಿಮ್ಮ ಆಯ್ಕೆ ಆಗಿರಲಿ.

ಮಿಥುನ ರಾಶಿ

ಮಿಥುನ ರಾಶಿ

ಮಿಥುನ ರಾಶಿಯ ಶಕ್ತಿಯ ಬಣ್ಣ ಹಳದಿ.

ಹಳದಿ ಬಣ್ಣವು ನಿಮ್ಮಂತೆಯೇ ಬಹಳ ರೋಮಾಂಚಕವಾಗಿರುತ್ತದೆ. ನಿಮ್ಮ ಕುತೂಹಲಕಾರಿ ಸ್ವಭಾವ ಮತ್ತು ಇತರರನ್ನು ಪ್ರೇರೇಪಿಸುವ ನಿಮ್ಮ ಸಾಮರ್ಥ್ಯ ಬಹಳ ಮುಖ್ಯವಾದ ಅಂಶವಾಗಿರುತ್ತದೆ. ನೀವು ಸೂರ್ಯನ ವ್ಯಕ್ತಿಗತ ಆವೃತ್ತಿಯಾಗಿದ್ದೀರಿ, ಸೂರ್ಯನನ್ನು ಸಂತೋಷದ ಮೂಲ ಎಂದು ಭಾವಿಸುತ್ತಾರೆ. ನಿಮ್ಮ ಆಲೋಚನಾ ಪ್ರಕ್ರಿಯೆ ಇನ್ನಷ್ಟು ಉತ್ತಮವಾಗಲು ಹಳದಿ ಬಣ್ಣವನ್ನು ಧರಿಸಿ.

ಕರ್ಕ ರಾಶಿ

ಕರ್ಕ ರಾಶಿ

ಕರ್ಕ ರಾಶಿಯ ಶಕ್ತಿ ಅಥವಾ ಅದೃಷ್ಟ ಬಣ್ಣ ಬಿಳಿ ಅಥವಾ ಬೆಳ್ಳಿ.

ಬಿಳಿ ಬಣ್ಣವು ಪಾರಿವಾಳದ ರೆಕ್ಕೆಗಳಂತೆ ಅಲೌಕಿಕ. ನೀರಿನ ಮೇಲ್ಮೈಯಲ್ಲಿ ಬೆಳ್ಳಿ ಚಂದ್ರನ ಪ್ರತಿಬಿಂಬದಂತೆ ನೀವು ಹೊಂದಿರುವ ಆಕರ್ಷಕತೆಯನ್ನು ಬಿಳಿ ಬಣ್ಣ ಪ್ರತಿನಿಧಿಸುತ್ತದೆ.

ನಿಮ್ಮಲ್ಲಿ ತಿಳುವಳಿಕೆ ಮತ್ತು ಸ್ವೀಕಾರ ಸ್ವಭಾವವನ್ನು ಹೊಂದಿದ್ದೀರಿ. ಯಾರನ್ನಾದರೂ ನಿಮ್ಮ ತೋಳುಗಳಲ್ಲಿ ಸ್ಥಾನ ಪಡೆದದ್ದೇ ಆದರೆ ಅವರೇ ಅದೃಷ್ಟವಂತರು, ಏಕೆಂದರೆ ನಿಮ್ಮ ಆಶ್ರಯವು ಸ್ವತಃ ದೇವತೆಯೇ ಹಿಡಿದಿಟ್ಟುಕೊಳ್ಳುವಂತೆ. ಕರ್ಕ ರಾಶಿಯವರು ಪ್ರೀತಿಯ ಪರಿಕಲ್ಪನೆಯನ್ನು ಪ್ರತಿನಿಧಿಸುತ್ತಾರೆ ಮತ್ತು ಬಿಳಿಯ ಬಣ್ಣ ಪ್ರೀತಿಯ ಹರಿವು ಮತ್ತು ಸಾಮರ್ಥ್ಯವನ್ನು ಹೆಚ್ಚಿಸಲು ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ತಿಳುವಳಿಕೆ ಮತ್ತು ಸೂಕ್ಷ್ಮತೆಯನ್ನು ಹೆಚ್ಚಿಸಲು ಬಿಳಿ ಅಥವಾ ಬೆಳ್ಳಿಯನ್ನು ಹೆಚ್ಚು ಧರಿಸಿ.

ಸಿಂಹ ರಾಶಿ

ಸಿಂಹ ರಾಶಿ

ಸಿಂಹ ರಾಶಿಯವರ ಶಕ್ತಿಯ ಬಣ್ಣ ಚಿನ್ನವಾಗಿದೆ.

ರಾಜ ಅಥವಾ ರಾಣಿಯಂತೆ ಚಿನ್ನವನ್ನು ಧರಿಸುವುದರಿಂದ ನಿಮಲ್ಲಿ ಶಕ್ತಿ ಮತ್ತು ಸಕಾರಾತ್ಮಕತೆ ಹೆಚ್ಚುತ್ತದೆ. ನೀವು ಧರಿಸಿರುವ ಚಿನ್ನದ ಆಭರಣ ನಿಮ್ಮನ್ನು ಸಶಕ್ತಗೊಳಿಸುತ್ತದೆ ಮತ್ತು ನೀವು ಈಗ ಇರುವುದಕ್ಕಿಂತಲೂ ಹೆಚ್ಚು ಉಗ್ರರಾಗುವಂತೆ ಮಾಡಬಹುದು.

ನೀವು ಧರಿಸುವ ಚಿನ್ನದ ಆಭರಣಗಳ ಹೊಳಪು ನಿಮ್ಮ ಗಮನ ಕೇಂದ್ರೀಕರಣವನ್ನು ಮಾತ್ರ ಮಾಡುವುದಿಲ್ಲ, ಬದಲಾಗಿ ನಿಮ್ಮನ್ನು ರಾಯಧನದಂತೆ ಕಾಣುವಂತೆ ಮಾಡುತ್ತದೆ. ಆದ್ದರಿಂದ ಹೆಚ್ಚು ಚಿನ್ನ ಧರಿಸಿ ನಿಮಗೆ ಶಕ್ತಿಯ ಪ್ರಜ್ಞೆಯನ್ನು ನೀಡುತ್ತದೆ.

ಕನ್ಯಾ ರಾಶಿ

ಕನ್ಯಾ ರಾಶಿ

ಕನ್ಯಾ ರಾಶಿಯ ಅದೃಷ್ಟ ಹಾಗೂ ಶಕ್ತಿಯ ಬಣ್ಣ ಹಸಿರು ಅಥವಾ ಕಂದು ಬಣ್ಣವಾಗಿದೆ.

ಕಾಡಿನಂತೆಯೇ ನೀವು ಸಹ ತುಂಬು ಜೀವನದಿಂದ ತುಂಬಿರುತ್ತೀರಿ. ನೀವು ಬಹಳ ಎಚ್ಚರಿಕೆಯಿಂದ ಇರುತ್ತೀರಿ ಅಲ್ಲದೇ, ವಿಶ್ಲೇಷಣಾತ್ಮಕವಾಗಿಯೂ ಇರುವಿರಿ. ಹಸಿರು ಮತ್ತು ಕಂದು ಬಣ್ಣಗಳು ಸ್ಥಿರತೆ ಮತ್ತು ಬೆಳವಣಿಗೆಯನ್ನು ಪ್ರತಿನಿಧಿಸುತ್ತವೆ. ನಿಮ್ಮನ್ನು ನೀವು ಅಭಿವೃದ್ಧಿಗೊಳಿಸಿಕೊಳ್ಳುವುದಕ್ಕೆ ಗಮನಹರಿಸಿ ಮತ್ತು ಬೆಳವಣಿಗೆ ನಿಮಗೆ ಬಹಳ ಮುಖ್ಯವಾಗಿದೆ. ಕೆಲವು ವಿಷಯಗಳಲ್ಲಿ ನಿಮ್ಮ ಸ್ವಯಂ ಸುಧಾರಣೆಯತ್ತ ಗಮನ ಹರಿಸಬೇಕಾದರೆ ಈ ಬಣ್ಣದ ವಸ್ತ್ರಗಳನ್ನು ಧರಿಸಿ.

ತುಲಾ ರಾಶಿ

ತುಲಾ ರಾಶಿ

ತುಲಾ ರಾಶಿಯ ಶಕ್ತಿಯ ಬಣ್ಣ ಪಿಂಕ್‌ ಅಥವಾ ನೀಲಿ.

ಈ ಬಣ್ಣಗಳು ನಿಮ್ಮ ಆಕರ್ಷಕ ವ್ಯಕ್ತಿತ್ವವನ್ನು ಮೃದು ಅಥವಾ ನಯಗೊಳಿಸಲು ಸಹಾಯ ಮಾಡುತ್ತದೆ. ಈ ಬಣ್ಣಗಳು ನೀವು ಇನ್ನಷ್ಟು ಸ್ನೇಹಪರವಾಗಿ ಕಾಣಿಸಲು ಸಹಾಯ ಮಾಡುತ್ತದೆ. ನೀಲಿ ಬಣ್ಣವು ಶಾಂತತೆಯ ಸಾರವನ್ನು ಹೇಳುತ್ತದೆ, ಆದರೆ ಗುಲಾಬಿ ನೀವು ಎಷ್ಟು ಪ್ರೀತಿಯಿಂದ ಮತ್ತು ಕಾಳಜಿಯಿಂದಿರುವಿರಿ ಎಂಬುದನ್ನು ತೋರಿಸುತ್ತದೆ.

ನೀವು ಹೆಚ್ಚು ಸ್ನೇಹಿತರನ್ನು ಬಯಸಿದರೆ ಈ ಬಣ್ಣಗಳನ್ನು ಧರಿಸಲು ಮರೆಯದಿರಿ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯ ಶಕ್ತಿಯ ಬಣ್ಣ ಕಪ್ಪು.

ಕಪ್ಪು ಬಣ್ಣವು ನಿಮ್ಮ ಉಪಸ್ಥಿತಿ ಎಷ್ಟು ಶಕ್ತಿಯುತವಾಗಿದೆ ಎಂಬುದನ್ನು ತಿಳಿಸಲು ಸಹಾಯ ಮಾಡುತ್ತದೆ. ನೀವು ಈಗಾಗಲೇ ನಿಗೂಢ ಸ್ವಭಾವವನ್ನು ಹೊಂದಿದ್ದೀರಿ ಎಂಬುದನ್ನು ಸಹ ಈ ಬಣ್ಣ ತಿಳಿಸುತ್ತದೆ. ಕಪ್ಪು ನಿಮ್ಮ ಆತ್ಮವು ಎಷ್ಟು ಆಳವಾಗಿದೆ ಎಂಬುದನ್ನು ಮರೆಮಾಡುತ್ತದೆ ಮತ್ತು ನಿಮ್ಮನ್ನು ಗೂಢಚಾರಿಕೆಯ ಕಣ್ಣುಗಳಿಂದ ರಕ್ಷಿಸುತ್ತದೆ.

ನಿಮ್ಮಲ್ಲಿರುವ ನಿಗೂಢೆಯನ್ನು ಹೆಚ್ಚಿಸಲು ಮತ್ತು ಅನುಮಾನಗಳಿಗೆ ತಾರ್ಕಿಕತ ಉತ್ತರ ಪಡೆಯಲು ಬಯಸುವುದಾದರೆ ಅಂಥಾ ಸಂದರ್ಭಗಳಲ್ಲಿ ಕಪ್ಪು ವಸ್ತ್ರ ಧರಿಸಿ.

ಧನು ರಾಶಿ

ಧನು ರಾಶಿ

ಧನು ರಾಶಿಯ ಶಕ್ತಿಯ ಬಣ್ಣ ನೇರಳೆ.

ನಿಮ್ಮಂಥವರು ಮುಕ್ತ ಮನಸ್ಸನ್ನು ಹೊಂದಿರುವುದು ಮುಖ್ಯ. ನೇರಳೆ ಬಣ್ಣವು ಮುಕ್ತ ಮನಸ್ಸುಗಳನ್ನು ಸುಧಾರಿಸುತ್ತದೆ ಮತ್ತು ನಿಮ್ಮ ಜೀವನ ಕುರಿತ ಅರಿವನ್ನು ಸಹ ಈ ಬಣ್ಣ ನಿಮಗೆ ಅರ್ಥೈಸುತ್ತದೆ. ನಿಮಗೆ ಜೀವನವು ಅನೇಕ ದೃಷ್ಟಿಕೋನಗಳನ್ನು ಹೊಂದಿದೆ ಮತ್ತು ಅಭಿಪ್ರಾಯಗಳನ್ನು ತರುತ್ತದೆ ಎಂಬುದು ಚೆನ್ನಾಗಿ ತಿಳಿದಿದೆ, ಆದ್ದರಿಂದ ಈ ಎಲ್ಲ ವ್ಯತ್ಯಾಸಗಳನ್ನು ಅರ್ಥ ಮಾಡಿಕೊಳ್ಳಲು ಮತ್ತು ಅದರಿಂದ ತಿಳುವಳಿಕೆಯನ್ನು ಪಡೆಯಲು ಸಾಧ್ಯವಾಗುವುದು ನಿಮ್ಮ ಲಕ್ಷಣವಾಗಿದೆ.

ನಿಮ್ಮ ಮುಕ್ತ ಮನಸ್ಸನ್ನು ಇನ್ನಷ್ಟು ವಿಸ್ತರಿಸಲು ಸಹಾಯಕ್ಕೆ ನೇರಳೆ ಬಣ್ಣ ಧರಿಸಿ.

ಮಕರ ರಾಶಿ

ಮಕರ ರಾಶಿ

ಮಕರ ರಾಶಿಯ ಶಕ್ತಿಯ ಬಣ್ಣ ಕಂದು ಅಥವಾ ಬೂದು.

ಸಂಪ್ರದಾಯ ಮತ್ತು ಸರಳತೆ ನಿಮ್ಮ ಜೀವನಶೈಲಿಯ ಪ್ರಮುಖ ಅಂಶಗಳಾಗಿವೆ. ಈ ಬಣ್ಣಗಳು ನೀರಸವಲ್ಲ, ಸಮರ್ಥ ಪರಿಣಾಮಕಾರಿ ಮತ್ತು ಯಾವುದೇ ಬದಲಾವಣೆಗೆ ಸ್ವೀಕಾರಾರ್ಹ. ಈ ಬಣ್ಣಗಳು ಅಸಂಬದ್ಧ ಜೀವನಶೈಲಿಯನ್ನು ಬಯಸದ ಅಥವಾ ಒಪ್ಪಿಕೊಳ್ಳುವುದಿಲ್ಲ.

ದೃಢವಾಗಿ ಮತ್ತು ಪ್ರಾಯೋಗಿಕವಾಗಿರಲು ಕಂದು ಮತ್ತು ಬೂದು ಬಣ್ಣಗಳನ್ನು ಧರಿಸಿ.

ಕುಂಭ ರಾಶಿ

ಕುಂಭ ರಾಶಿ

ಕುಂಭ ರಾಶಿಯ ಶಕ್ತಿಯ ಬಣ್ಣ ನೀಲಿ.

ಕುಂಭ ರಾಶಿಯವರಿಗೆ ಒಂದು ಆಲೋಚನೆಯ ಮೇಲೆ ಕೇಂದ್ರೀಕರಿಸಲು ಸಾಧ್ಯವಾಗುವುದು ತುಂಬಾ ಕಷ್ಟ. ಆದರೆ ನೀಲಿ ಬಣ್ಣವು ಅಂಥಾ ಪ್ರಕ್ಷುಬ್ಧ ಶಕ್ತಿಯನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ.

ನಿಮ್ಮ ಸೃಜನಶೀಲತೆಯನ್ನು ಒಂದು ಮಾರ್ಗದಲ್ಲಿ ಕೊಂಡೊಯ್ಯಲು ನೀಲಿ ಬಣ್ಣ ನಿಮಗೆ ಸಹಾಯ ಮಾಡಲಿದೆ.

ಮೀನ ರಾಶಿ

ಮೀನ ರಾಶಿ

ಮೀನ ರಾಶಿಯ ಶಕ್ತಿಯ ಬಣ್ಣ ತಿಳಿ ಹಸಿರು.

ನೀವು ನೈಸರ್ಗಿಕವಾಗಿಯೇ ಸಹಜ ಸ್ವಭಾವದವರು. ತಿಳಿ ಹಸಿರು ನಿಮ್ಮ ನೈಸರ್ಗಿಕ ಪ್ರತಿಭೆಯನ್ನು ಸುಧಾರಿಸುತ್ತದೆ. ವಿವಿಧ ಹಸಿರು ಬಣ್ಣಗಳು ನಿಮ್ಮಲ್ಲಿರುವ ಗುಣಪಡಿಸುವ ಶಕ್ತಿ ಮತ್ತು ಸ್ಫೂರ್ತಿ ನೀಡುವ ಸಾಮರ್ಥ್ಯವನ್ನು ಹೊರತರುವಲ್ಲಿ ಸಹಾಯ ಮಾಡುತ್ತದೆ.

ನೀವು ಯಾವುದನ್ನಾದರೂ ಶಮನಗೊಳಿಸಲು ಮತ್ತು ಇತರರಿಗೆ ಶಾಂತಿಯನ್ನು ತರಲು ಸಹಾಯ ಮಾಡಬೇಕಾದರೆ ತಿಳಿ ಹಸಿರು ಧರಿಸುವುದು ಉತ್ತಮ.

English summary

Your Zodiac Sign's Power Color, According To Astrology

Here we are discussing about Power Colour Of Your Zodiac Sign And How. Power colors are also made for zodiac signs, too. Zodiac colors help enhance your sign’s best qualities. Read more.
Story first published: Wednesday, August 19, 2020, 17:48 [IST]
X
Desktop Bottom Promotion