For Quick Alerts
ALLOW NOTIFICATIONS  
For Daily Alerts

ಇಂದು ವಿಶ್ವ ಸೊಳ್ಳೆ ದಿನ: ಈ ಆಚರಣೆಯ ಇತಿಹಾಸ, ಮಹತ್ವದ ಬಗ್ಗೆ ನಿಮಗೆಷ್ಟು ಗೊತ್ತು?

|

ವಿಶ್ವದೆಲ್ಲೆಡೆಯಲ್ಲಿ ಇಂದಿನ ದಿನಗಳಲ್ಲಿ ಪ್ರಾಣಿಗಳಿಂದ ಹಿಡಿದು ಮನುಷ್ಯರ ತನಕ ಪ್ರತಿಯೊಂದಕ್ಕೂ ವಿಶೇಷ ದಿನಗಳು ಎನ್ನುವುದು ಇದೆ. ಕೆಲವೊಂದು ದಿನಗಳಿಗೆ ವಿಶೇಷವಾದ ಪ್ರಾಮುಖ್ಯತೆ ಇದ್ದರೆ, ಇನ್ನು ಕೆಲವು ಹಾಗೆ ಆಚರಿಸಲ್ಪಡುತ್ತದೆ. ನೀವು ಸೊಳ್ಳೆಗಳ ದಿನದ ಬಗ್ಗೆ ಕೇಳಿದ್ದೀರಾ? ಹಾಗಾದರೆ ಈ ಲೇಖನ ಆ ಸೊಳ್ಳೆಗಳ ದಿನ ಆಚರಣೆ ಬಗ್ಗೆ ಆಗಿರುವುದು.

ಇತಿಹಾಸ

ಇತಿಹಾಸ

ವಿಶ್ವ ಸೊಳ್ಳೆಗಳ ದಿನವನ್ನು ಸರ್ ಡೊನಾಲ್ಡ್ ರೊಸ್ ಅವರು 1897ರಲ್ಲಿ ಸೊಳ್ಳೆಗಳು ಮತ್ತು ಮಲೇರಿಯಾ ನಡುವಿನ ಸಂಬಂಧವನ್ನು ಕಂಡುಹಿಡಿದಿರುವುದಕ್ಕಾಗಿ ಪ್ರತಿ ವರ್ಷ ಆಗಸ್ಟ 20ರಂದು ಆಚರಿಸಲಾಗುತ್ತದೆ. ರೊಸ್ ಅವರು ಮಾರಣಾಂತಿಕ ಮಲೇರಿಯಾ ಕಾಯಿಲೆಯನ್ನು ಹೆಣ್ಣು ಅನಾಫಿಲೀಸ್ ಸೊಳ್ಳೆ ಹರಡುತ್ತದೆ ಎಂಬುದನ್ನು ಮೊದಲ ಬಾರಿಗೆ ಪತ್ತೆ ಮಾಡಿದರು. ಇದೊಂದು ಪ್ರಾಣಾಂತಿಕ ಕಾಯಿಲೆಯಾಗಿದ್ದು, ಇದನ್ನು ನಿರ್ಮೂಲನೆ ಜತೆಗೆ ಈ ಕುರಿತು ಜನರಿಗೆ ಅರಿವು ಮೂಡಿಸಬೇಕು ಎಂದು ವಿಶ್ವಕ್ಕೆ ಸಂದೇಶ ನೀಡಿದರು. ಇದರ ಸ್ಮರಣಾರ್ಥ ಇಂದು ವಿಶ್ವ ಸೊಳ್ಳೆ ದಿನವನ್ನು ಆಚರಿಸಲಾಗುತ್ತದೆ.

ಮಹತ್ವ

ಮಹತ್ವ

ಮಾರಕ ಕೀಟವಾಗಿರುವಂತಹ ಸೊಳ್ಳೆಯಿಂದ ಹರಡುವಂತಹ ಮಲೇರಿಯಾ ಮತ್ತು ಇತರ ಪ್ರಾಣಾಂತಿಕ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸುವುದೇ ಈ ದಿನದ ಉದ್ದೇಶವಾಗಿದೆ. ದ ಲಂಡನ್ ಸ್ಕೂಲ್ ಆಫ್ ಹೈಜಿನ್ ಆಂಡ್ ಟ್ರಾಪಿಕಲ್ ಮೆಡಿಸನ್ ಈ ದಿನವನ್ನು ಆಚರಣೆ ಮಾಡುತ್ತದೆ. ಮಲೇರಿಯಾ ಹರಡುವ ಮತ್ತು ಅದು ಬರದಂತೆ ತಡೆಯುವ ಬಗ್ಗೆ ಇಲ್ಲಿ ಅಭಿಯಾನ ಮತ್ತು ಪ್ರದರ್ಶನಗಳು ನಡೆಯುತ್ತದೆ. ಮಲೇರಿಯಾವು ಸೊಳ್ಳೆಯಿಂದ ಹರಡುವುದು ಎಂದು ಪತ್ತೆ ಮಾಡಿದಂತಹ ಸರ್ ರೋಸ್ ಮತ್ತು ಈ ಬಗ್ಗೆ ಕೆಲಸ ಮಾಡಿದಂತಹ ಹಲವಾರು ವಿಜ್ಞಾನಿಗಳಿಗೆ ಇಲ್ಲಿ ಗೌರವ ಸಲ್ಲಿಸಲಾಗುತ್ತದೆ. ಅಲ್ಲದೇ ವಿಶ್ವದ ಹಲವು ದೇಶಗಳಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ.

ಮಾರಣಾಂತಿಕ ಈ ಸೊಳ್ಳೆ

ಮಾರಣಾಂತಿಕ ಈ ಸೊಳ್ಳೆ

ಮಲೇರಿಯಾ ಎನ್ನುವ ಮಾರಣಾಂತಿಕ ಜ್ವರದಿಂದಾಗಿ ಪ್ರತೀ ವರ್ಷ ಲಕ್ಷಾಂತರ ಜನರು ಪ್ರಾಣ ಕಳೆದುಕೊಳ್ಳುತ್ತಾರೆ. ಮಲೇರಿಯಾದಿಂದಾಗಿಯೇ ಪ್ರತೀ ದಶಕದಲ್ಲಿ ಸುಮಾರು ಆರು ಮಿಲಿಯನ್ ಸಾವುಗಳು ಸಂಭವಿಸುವುದು. ಪ್ರಪಂಚದಲ್ಲಿ ಹಲವು ಪ್ರಭೇಧದ ಸೊಳ್ಳೆಗಳಿದ್ದು, ಇವುಗಳಿಂದ ಕೆಲವೊಂದು ಕಾಯಿಲೆಗಳು ಹರಡುತ್ತಿದೆ. ಏಡಿಸ್, ಅನಾಫಿಲೀಸ್, ಕುಲೆಕ್ಸ್ ಸೊಳ್ಳೆಗಳು ಕಾಯಿಲೆಗಳನ್ನು ಹರಡುವ ವಾಹಕಗಳಾಗಿ (ಸೋಂಕಿತ ಕಾಯಿಲೆಯನ್ನು ಮನುಷ್ಯರಿಂದ ಮನುಷ್ಯರಿಗೆ ಅಥವಾ ಪ್ರಾಣಿಗಳಿಂದ ಮನುಷ್ಯರಿಗೆ ಹರಡುವುದು) ಕಾರ್ಯನಿರ್ವಹಿಸುವುದು.

ಸೊಳ್ಳೆಗಳ ಸಂತಾನೋತ್ಪತಿ, ಸೋಂಕು ಹರಡುವ ವಿಧಾನ

ಸೊಳ್ಳೆಗಳ ಸಂತಾನೋತ್ಪತಿ, ಸೋಂಕು ಹರಡುವ ವಿಧಾನ

ಅನಾಫಿಲೀಸ್(ಮಲೇರಿಯಾ ವಾಹಕ) ಮಳೆ ನೀರು ನಿಂತ ಹೊಂಡ ಮತ್ತು ಕೊಚ್ಚೆ ಗುಂಡಿಗಳು, ಭತ್ತದ ಗದ್ದೆ, ಬಾವಿ, ಕೆರೆಗಳು ಮತ್ತಿತ್ತರ ಕಡೆಗಳಲ್ಲಿ ಸಂತಾನೋತ್ಪತ್ತಿ ಮಾಡುವುದು. ಅನಾಫಿಲೀಸ್ ಸೊಳ್ಳೆಯು ಹೆಚ್ಚಾಗಿ ಮುಸ್ಸಂಜೆ ಹಾಗೂ ಮುಂಜಾನೆ ವೇಳೆಯಲ್ಲಿ ಕಚ್ಚುವುದು. ಏಡೀಸ್ ಈಜಿಪ್ಟಿ ಸೊಳ್ಳೆಯು ಯಾವುದೇ ರೀತಿಯ ನೀರಿನ ಸಂಗ್ರಹಾಗಾರದಲ್ಲಿ ಅಥವಾ ಸಣ್ಣ ಮಟ್ಟದ ನೀರಿನಲ್ಲೂ ತನ್ನ ಸಂತಾನೋತ್ಪತ್ತಿ ಮಾಡಬಲ್ಲದು. ಹೆಣ್ಣು ಏಡೀಸ್ ಈಜಿಪ್ಟಿ ಸೊಳ್ಳೆಯು ಡೆಂಗ್ಯೂ, ಚಿಕನ್ ಗುನ್ಯಾ, ಜಿಕಾ ಮತ್ತು ಹಳದಿ ಜ್ವರನವನ್ನು ಮನುಷ್ಯರಿಗೆ ಹರಡುವುದು. ಏಡೀಸ್ ಈಜಿಪ್ಟಿ ಸೊಳ್ಳೆಯು ಹೆಚ್ಚಾಗಿ ಹಗಲಿನ ವೇಳೆ ಕಚ್ಚುತ್ತದೆ. ಗಂಡು ಸೊಳ್ಳೆಗಳು ಕಚ್ಚುವುದಿಲ್ಲ ಮತ್ತು ಇದು ಹೂ ಹಾಗೂ ಇತರ ಕಡೆಗಳಿಂದ ಮಕರಂದ ಹೀರಿ ಬದುಕಬಲ್ಲದು.

ಸೊಳ್ಳೆಗಳು ಹರಡುವ ಕಾಯಿಲೆಗಳು

ಸೊಳ್ಳೆಗಳು ಹರಡುವ ಕಾಯಿಲೆಗಳು

ಏಡಿಸ್ ಸೊಳ್ಳೆ ಚಿಕನ್ ಗುನ್ಯಾ, ಡೆಂಗ್ಯೂ, ದುಗ್ಧರಸ ಫೈಲೇರಿಯಾಸಿಸ್, ರಿಫ್ಟ್ ವ್ಯಾಲಿ ಜ್ವರ, ಹಳದಿ ಜ್ವರ, ಜಿಕಾನಂಥ ಕಾಯಿಲೆಗಳನ್ನು, ಅನಾಫಿಲೀಸ್ ಸೊಳ್ಳೆ ಮಲೇರಿಯಾ, ದುಗ್ಧರಸ ಫೈಲೇರಿಯಾಸಿಸ್ ನಂಥ ಕಾಯಿಲೆಗಳನ್ನು ಹಾಗೂ ಕುಲೆಕ್ಸ್ ಎಂಬ ಸೊಳ್ಳೆ ಜಪಾನೀಸ್ ಎನ್ಸೆಫಾಲಿಟಿಸ್, ದುಗ್ಧರಸ ಫೈಲೇರಿಯಾಸಿಸ್, ವೆಸ್ಟ್ ನೈಲ್ ಜ್ವರವನ್ನು ಹರಡುತ್ತದೆ. ಅದರಲ್ಲೂ ಹೆಣ್ಣು ಅನಾಫಿಲೀಸ್ ಸೊಳ್ಳೆಯು ಮಲೇರಿಯಾ ಕಾಯಿಲೆ ಹರಡುವ ಪ್ರಮುಖ ಕೀಟವಾಗಿದೆ.

English summary

World Mosquito Day 2019: History, Significance and Facts

World Mosquito Day is observed on 20 August every year to raise awareness about the cause of diseases born due to mosquito and how it can be prevented. Let us read more about World Mosquito Day, why it is observed on 20 August and some facts about mosquito.
X
Desktop Bottom Promotion