For Quick Alerts
ALLOW NOTIFICATIONS  
For Daily Alerts

ಯಾವ ರಾಶಿಗೆ ಯಾವ ರಾಶಿಯವರು ಒಳ್ಳೆಯ ಜೋಡಿ

|

ಜೀವನದಲ್ಲಿ ನಿತ್ಯ ಪ್ರತಿಯೊಬ್ಬರೂ ಎಷ್ಟೋ ಜನರನ್ನು ಭೇಟಿಯಾಗುತ್ತಾರೆ. ಯಾವ್ಯಾವುದೋ ಕಾರಣಕ್ಕೆ ಯಾರ್ಯಾರನ್ನೋ ಭೇಟಿ ಮಾಡುವ ಸಂದರ್ಭ ಎದುರಾಗುತ್ತದೆ. ಆದರೆ ಅದರಲ್ಲಿ ಎಲ್ಲರೂ ಪರಸ್ಪರ ಮಿತ್ರರಾಗುವುದಿಲ್ಲ. ಹಾಗೆಯೇ ಅವರೆಲ್ಲರೂ ಸಂಗಾತಿಗಳೂ ಆಗುವುದಿಲ್ಲ.

ಬಾಂಧ್ಯವ್ಯಕ್ಕೆ ಋಣಾನುಬಂಧವೂ ಬೇಕು!
ಇಬ್ಬರು ವ್ಯಕ್ತಿಗಳು ಮಿತ್ರರಾಗಲು ಅಥವಾ ಜೀವನ ಸಂಗಾತಿಗಳಾಗಬೇಕಾದರೆ ಅದಕ್ಕೆ ಋಣಾನುಬಂಧವೂ ಕೂಡಿ ಬರಬೇಕಾಗುತ್ತದೆ. ಇನ್ನು ಮಿತ್ರರಾದವರು ಹಾಗೂ ಸಂಗಾತಿಗಳಾದವರು ಸಹ ಜೀವನಪೂರ್ತಿ ಹಾಗೆಯೇ ಬಾಂಧವ್ಯ ಉಳಿಸಿಕೊಂಡಿರುತ್ತಾರೆ ಎಂದೂ ಹೇಳಲಾಗದು. ಇದೆಲ್ಲದಕ್ಕೂ ಅವರ ರಾಶಿ, ಗ್ರಹಗತಿಗಳು ಕೂಡ ಹೊಂದಾಣಿಕೆಯಾಗಬೇಕಾಗುತ್ತದೆ ಎಂಬುದು ಕೂಡ ಸತ್ಯ.

ಹಾಗಾದರೆ ಯಾವ ರಾಶಿಯವರು ಪರಸ್ಪರ ಸಂಗಾತಿಗಳಾದರೆ ಅವರ ಬಾಂಧವ್ಯ ಅತ್ಯಂತ ಸುಮಧುರವಾಗಿರುತ್ತದೆ, ಯಾವ ರಾಶಿಯ ಸಂಗಾತಿ ಸೂಕ್ತ ಎಂಬುದನ್ನು ತಿಳಿಯೋಣ ಬನ್ನಿ...

ಮೇಷ-ಮಿಥುನ

ಮೇಷ-ಮಿಥುನ

ಮೇಷ ರಾಶಿಯವರು ಸ್ವಾಭಾವಿಕವಾಗಿಯೇ ಅತ್ಯಂತ ಕ್ರಿಯಾಶೀಲರಾಗಿರುತ್ತಾರೆ. ಯಾವಾಗಲೂ ಅದಮ್ಯ ಉತ್ಸಾಹದಿಂದ ಇವರು ಪುಟಿಯುತ್ತಿರುತ್ತಾರೆ. ಇವರನ್ನು ನೀವು ಮೆಚ್ಚಬಹುದು ಅಥವಾ ಮೆಚ್ಚದಿರಬಹುದು. ಆದರೆ ಈ ರಾಶಿಯವರನ್ನು ನೀವು ನಿರ್ಲಕ್ಷಿಸಲಾಗದು. ಅಂಥ ಆಕರ್ಷಕ ವ್ಯಕ್ತಿತ್ವ ಇವರದಾಗಿರುತ್ತದೆ. ಈ ರಾಶಿಯವರ ಗುಣವಿಶೇಷಗಳು ಮಿಥುನ ರಾಶಿಯವರೊಂದಿಗೆ ತುಂಬಾ ಹೊಂದಾಣಿಕೆಯಾಗುತ್ತವೆ. ಈ ಎರಡೂ ರಾಶಿಯವರು ಸ್ವತಂತ್ರ ಮನೋಭಾವದವರಾಗಿದ್ದು, ಪರಸ್ಪರರ ಭಾವನೆಗಳನ್ನು ಗೌರವಿಸುವಂಥವರಾಗಿರುತ್ತಾರೆ. ವೈಯಕ್ತಿಕ ಅಥವಾ ವೃತ್ತಿ ಜೀವನ ಎರಡರಲ್ಲೂ ಒಪ್ಪಿತ ನಿರ್ಧಾರಗಳನ್ನು ಕೈಗೊಳ್ಳುವುದು ಇವರ ವಿಶೇಷತೆಯಾಗಿದೆ. ಹೀಗಾಗಿ ಮೇಷ ಹಾಗೂ ಮಿಥುನ ರಾಶಿಯವರು ಸಂಗಾತಿಗಳಾದರೆ ಆ ಜೋಡಿಯ ಜೀವನ ನೆಮ್ಮದಿಯಿಂದ ಕೂಡಿರುತ್ತದೆ.

ವೃಷಭ-ಮಕರ

ವೃಷಭ-ಮಕರ

ವೃಷಭ ರಾಶಿಯವರು ಹಟವಾದಿಗಳು ಹಾಗೂ ಎಲ್ಲ ಕೆಲಸಗಳನ್ನು ಕರಾರುವಾಕ್ಕಾಗಿ ಮಾಡುವಂಥವರು. ಈ ರಾಶಿಯವರ ಗುಣಗಳು ಮಕರ ರಾಶಿಯೊಂದಿಗೆ ಸೂಕ್ತವಾಗಿ ತಾಳೆಯಾಗುತ್ತವೆ. ಮಕರ ರಾಶಿಯವರಿಗೆ ಅವರು ಯಾವಾಗಲೂ ಸುರಕ್ಷಿತವಾಗಿರುವ ಭಾವನೆಯನ್ನು ವೃಷಭ ರಾಶಿಯವರು ಮೂಡಿಸಬಲ್ಲರು. ಅಲ್ಲದೆ ಮಕರ ರಾಶಿಯವರ ಮನದಾಳವನ್ನು ವೃಷಭ ರಾಶಿಯವರು ಬಹು ಸುಲಭವಾಗಿ ತಿಳಿಯಬಲ್ಲರು. ಒಟ್ಟಾರೆಯಾಗಿ ವೃಷಭ ಹಾಗೂ ಮಕರ ರಾಶಿಯವರ ಜೋಡಿ ಸಕತ್ ಆಗಿರುತ್ತದೆ.

ಕರ್ಕ-ವೃಶ್ಚಿಕ

ಕರ್ಕ-ವೃಶ್ಚಿಕ

ಕರ್ಕ ರಾಶಿಯವರು ತುಂಬಾ ಸೂಕ್ಷ್ಮ ಮನಸ್ಥಿತಿಯವರು ಹಾಗೂ ತೀರಾ ಸಂವೇದನಾಶೀಲರು. ಸಂಬಂಧದಲ್ಲಿ ಭಾವನಾತ್ಮಕ ಸುರಕ್ಷತೆಯು ಇವರ ಪ್ರಥಮ ಆದ್ಯತೆಯಾಗಿರುತ್ತದೆ. ಹೀಗಾಗಿ ಇವರಂತೆಯೇ ಮತ್ತೊಂದು ಜಲಮೂಲದ ರಾಶಿ ವೃಶ್ಚಿಕದೊಂದಿಗೆ ಅವರ ಸಾಂಗತ್ಯ ಉತ್ತಮವಾಗಿರಬಲ್ಲದು. ಭಾವನೆಗಳನ್ನು ಸೂಕ್ಷ್ಮವಾಗಿ ಅರ್ಥ ಮಾಡಿಕೊಳ್ಳಬಲ್ಲ ವೃಶ್ಚಿಕ ರಾಶಿಯವರು ಕರ್ಕ ರಾಶಿಯ ವ್ಯಕ್ತಿಗೆ ಸೂಕ್ತ ಸಂಗಾತಿ ಎನಿಸಿದ್ದಾರೆ. ಒಂದು ಮಾತನ್ನೂ ಆಡದೇ ಕರ್ಕ ರಾಶಿಯ ಮನದಾಳವನ್ನು ಇವರು ಅರಿಯಬಲ್ಲರು. ಹೀಗಾಗಿಯೇ ಈ ಎರಡು ರಾಶಿಯವರು ಸಂಗಾತಿಗಳಾದಲ್ಲಿ ಅವರ ಜೀವನ ಹಾಲು-ಜೇನಿನಂತೆ ಸುಮಧುರವಾಗಿರುತ್ತದೆ.

ಸಿಂಹ-ಧನು

ಸಿಂಹ-ಧನು

ಸಿಂಹವು ಸಹಜವಾಗಿಯೇ ನಾಯಕ ಗುಣವುಳ್ಳದ್ದು. ಸೂರ್ಯದೇವನಿಂದ ಪ್ರಭಾವಿತವಾಗಿರುವ ಸಿಂಹ ರಾಶಿಯವರು ಸಕಾರಾತ್ಮಕ ಮನಸ್ಥಿತಿಯವರು ಹಾಗೂ ಶಿಸ್ತು ಬದ್ಧ ಜೀವಿಗಳಾಗಿರುತ್ತಾರೆ. ಇವರು ಇರುವಲ್ಲಿ ಒಂದು ರೀತಿಯ ತೇಜೋ ವಲಯವನ್ನು ಇವರು ಸೃಷ್ಟಿಸುತ್ತಾರೆ. ಇನ್ನು ಧನು ರಾಶಿಯವರು ಸಹ ಇವರಂತೆಯೇ ತೇಜೋಮಯ ಗುಣಗಳನ್ನೇ ಹೊಂದಿರುವುದರಿಂದ ಇಬ್ಬರ ಮಧ್ಯೆ ಸಾಂಗತ್ಯ ಸೇರಿದಲ್ಲಿ ಅದು ಅನುರೂಪ ಜೋಡಿಯಾಗಿರುತ್ತದೆ. ಇಬ್ಬರೂ ಸ್ವತಂತ್ರವಾಗಿ ಆಲೋಚನೆ ಮಾಡಬಲ್ಲರು ಹಾಗೂ ಒಬ್ಬರಿಗೊಬ್ಬರು ಗೌರವದಿಂದ ಬದುಕಬಲ್ಲರು. ಸಿಂಹ ರಾಶಿಯ ಸಂಗಾತಿಯು ಯಾವುದೇ ಸಮಯದಲ್ಲಿ ಸಮಸ್ಯೆಯ ಸುಳಿಯಲ್ಲಿದ್ದರೆ ಧನು ರಾಶಿಯವರು ಇವರನ್ನು ತಕ್ಷಣ ಸಮಸ್ಯೆಯಿಂದ ಪಾರು ಮಾಡಬಲ್ಲರು. ಇಬ್ಬರ ಜೋಡಿ ಸೇರಿದಲ್ಲಿ ಜೀವನ ಸುಖಮಯವಾಗಿರುತ್ತದೆ.

ಕನ್ಯಾ-ಮಕರ ಹಾಗೂ ಕನ್ಯಾ-ವೃಷಭ

ಕನ್ಯಾ-ಮಕರ ಹಾಗೂ ಕನ್ಯಾ-ವೃಷಭ

ಕನ್ಯಾ ಇದು ಭೂಮಿಯ ರಾಶಿಯಾಗಿರುವುದರಿಂದ ಅದೇ ರೀತಿಯ ಇತರ ರಾಶಿಗಳಾದ ಮಕರ ಹಾಗೂ ವೃಷಭಗಳೊಂದಿಗೆ ಸೂಕ್ತವಾಗಿ ಹೊಂದಾಣಿಕೆಯಾಗುತ್ತದೆ. ಮಕರ, ವೃಷಭ ರಾಶಿಯವರು ಹಾಗೂ ಕನ್ಯಾ ರಾಶಿಯವರು ಪರಸ್ಪರರ ಭಾವನೆಗಳನ್ನು ಸುಲಭವಾಗಿ ಗ್ರಹಿಸಬಲ್ಲರು. ಅಲ್ಲದೆ ವಾಸ್ತವಿಕ ನೆಲೆಗಟ್ಟಿನಲ್ಲಿ ಅರ್ಥ ಮಾಡಿಕೊಳ್ಳಬಲ್ಲರು. ಹೀಗಾಗಿ ಈ ರಾಶಿಗಳವರು ಸಂಗಾತಿಗಳಾದಲ್ಲಿ ಅವರ ಜೀವನ ಸುಂದರವಾಗಿರುತ್ತದೆ.

ತುಲಾ-ಕುಂಭ

ತುಲಾ-ಕುಂಭ

ತುಲಾ ರಾಶಿಯವರು ಸಹಜವಾಗಿಯೇ ಸಂತೋಷ ಸ್ವಭಾವದವರಾಗಿರುವುದರಿಂದ ಇವರು ಯಾವ ರಾಶಿಯವರೊಂದಿಗಾದರೂ ಹೊಂದಿಕೊಳ್ಳಬಲ್ಲರು. ಆದರೂ ಯಾವಾಗಲೂ ಹೊಸ ವಿಷಯಗಳನ್ನು ಹೇಳುವ, ಕುತೂಹಲ ಹುಟ್ಟಿಸುವ ಕುಂಭ ರಾಶಿಯವರೊಂದಿಗೆ ಇವರ ಜೋಡಿ ಸೂಕ್ತವಾಗಿರುತ್ತದೆ. ಈ ರಾಶಿಗಳವರು ಸಂಗಾತಿಗಳಾದಲ್ಲಿ ತಮ್ಮ ಮನದಾಳದ ಆಸೆ ಆಕಾಂಕ್ಷೆಗಳನ್ನು ಸುಲಭವಾಗಿ ಅರ್ಥೈಸಿಕೊಂಡು ಅವುಗಳನ್ನು ಪೂರೈಸಿಕೊಳ್ಳುವರು.

ಮೀನ-ಕರ್ಕ ಹಾಗೂ ಮೀನ-ವೃಶ್ಚಿಕ

ಮೀನ-ಕರ್ಕ ಹಾಗೂ ಮೀನ-ವೃಶ್ಚಿಕ

ಮೀನ ಇದು ಜಲಮೂಲದ ರಾಶಿಯಾಗಿದೆ. ಹೀಗಾಗಿ ಇನ್ನೆರಡು ಅಂಥವೇ ರಾಶಿಗಳಾದ ಕರ್ಕ ಹಾಗೂ ವೃಶ್ಚಿಕ ರಾಶಿಯವರೊಡನೆ ಇವರ ಜೋಡಿ ಚೆನ್ನಾಗಿರುತ್ತದೆ. ಮೀನ ರಾಶಿಯವರು ಕನಸು ಕಾಣುವ ಪ್ರವೃತ್ತಿಯವರಾಗಿದ್ದು, ಉತ್ಕಟ ಪ್ರೇಮಿಗಳಾಗಿರುತ್ತಾರೆ. ಇವರು ಎಷ್ಟು ಭಾವನಾತ್ಮಕವೋ ಅಷ್ಟೇ ಕ್ರಿಯಾಶೀಲರೂ ಹೌದು. ಮೀನ ಹಾಗೂ ವೃಶ್ಚಿಕ ರಾಶಿಯವರ ಸಾಂಗತ್ಯ ಬಹು ಚೆನ್ನಾಗಿರುತ್ತದೆ.

ಮಕರ-ವೃಶ್ಚಿಕ

ಮಕರ-ವೃಶ್ಚಿಕ

ಮಕರ ಹಾಗೂ ವೃಶ್ಚಿಕ ರಾಶಿಯವರ ಜೋಡಿ ಸಹಜವಾಗಿಯೇ ತುಂಬಾ ಉತ್ತಮವಾಗಿರುತ್ತದೆ ಎನ್ನಲಾಗಿದೆ. ಯಾರನ್ನೇ ಆದರೂ ನಂಬಲು ಈ ಇಬ್ಬರೂ ತುಂಬಾ ಸಮಯ ತೆಗದುಕೊಳ್ಳುತ್ತಾರೆ. ಹೀಗಾಗಿ ಇವರಿಬ್ಬರು ಪರಸ್ಪರ ಉತ್ತಮವಾಗಿ ಅರ್ಥ ಮಾಡಿಕೊಳ್ಳಬಲ್ಲರು. ಮಕರ ರಾಶಿಯವರಿಗೆ ದುಡ್ಡು, ಆಸ್ತಿ ಎಲ್ಲಕ್ಕಿಂತಲೂ ಸಂಬಂಧವೇ ದೊಡ್ಡದು. ಇನ್ನು ವೃಶ್ಚಿಕ ರಾಶಿಯವರು ಒಮ್ಮೆ ಬೆಳೆಸಿದ ಸಂಬಂಧವನ್ನು ಎಂದಿಗೂ ಕಡಿದುಕೊಳ್ಳಲು ಇಷ್ಟಪಡಲಾರರು. ಈ ಇಬ್ಬರೂ ತಮ್ಮ ಸಂಗಾತಿಯಿಂದ ನಿಷ್ಠೆಯನ್ನು ಬಯಸುವವರಾಗಿರುತ್ತಾರೆ ಹಾಗೂ ಅದೇ ರೀತಿ ನಡೆದುಕೊಳ್ಳುತ್ತಾರೆ ಕೂಡ. ಹೀಗಾಗಿಯೇ ಇವರಿಬ್ಬರ ಜೋಡಿಯು ಹೇಳಿ ಮಾಡಿಸಿದಂತಿರುತ್ತದೆ.

English summary

Who Is Your Ideal Partner Based on Your Zodiac Sign

who is your ideal partner based on your zodiac sign, read on...
X
Desktop Bottom Promotion