For Quick Alerts
ALLOW NOTIFICATIONS  
For Daily Alerts

ಜಾತಕದಲ್ಲಿ ಕೇತುವಿನ ಅಶುಭ ಫಲವಿದ್ದರೆ ಪರಿಹಾರವೇನು?

|

ಹಿಂದೂ ಧರ್ಮದಲ್ಲಿ ನವಗ್ರಹಗಳಲ್ಲಿ ರಾಹು ಮತ್ತು ಕೇತು ಗ್ರಹಗಳನ್ನು ಪಾಪ ಗ್ರಹಗಳೆಂದು ಪರಿಗಣಿಸಲಾಗಿದೆ. ಪೌರಾಣಿಕ ಕತೆಯಲ್ಲಿ ಕೇತುವನ್ನು ರಾಹು ಗ್ರಹದ ಶರೀರವೆಂದು ಹೇಳಲಾಗಿದೆ. ರಾಹು-ಕೇತು ಗ್ರಹಗಳನ್ನು ಛಾಯಾ ಗ್ರಹಗಳು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಈ ಗ್ರಹಗಳು ದೈಹಿಕವಾಗಿ ಅಸ್ತಿತ್ವದಲ್ಲಿ ಇಲ್ಲದಿದ್ದರೂ ಅವುಗಳ ಪ್ರಭಾವ ಮನುಷ್ಯರ ಮೇಲಿರುತ್ತದೆ ಎಂದು ಹೇಳಲಾಗುವುದು.

ಜಾತಕದಲ್ಲಿ ಕೇತುವಿನ ಋಣಾತ್ಮಕ ಪ್ರಭಾವವಿದ್ದರೆ ಇದರಿಂದಾಗಿ ಜೀವನದಲ್ಲಿ ಹಲವು ರೀತಿಯ ಕಷ್ಟಗಳು, ಸವಾಲುಗಳು ಎದುರಾಗುವುದು ಎಂದು ಹೇಳಲಾಗುವುದು. ಹಾಗಾದರೆ ಕೇತುವಿನ ಅಶುಭ ಪ್ರಭಾವಕ್ಕೆ ಪರಿಹಾರವಿದೆಯೇ ಎಂದು ನೋಡುವಾಗ ಜ್ಯೋತಿಷ್ಯದಲ್ಲಿ ಅದಕ್ಕೂ ಪರಿಹಾರ ಇದೆ.

ಕೇತುವಿನ ಕೆಟ್ಟ ಪ್ರಭಾವವಿದ್ದರೆ ಅದು ಹೋಗಲು ಏನು ಮಾಡಬೇಕೆಂದು ಹೇಳಲಾಗಿದೆ ನೋಡಿ:

ಗಣಪತಿ ಪೂಜೆ

ಗಣಪತಿ ಪೂಜೆ

ಎಲ್ಲಾ ವಿಘ್ನಗಳನ್ನು ತೊಡೆದು ಹಾಕಲು ಗಣೇಶನನ್ನು ಪೂಜಿಸಲಾಗುವುದು. ಕೇತು ನೀಡುವ ಕಷ್ಟದಿಂದ ಪಾರಾಗಲು ಕೂಡ ಗಣಪತಿಯನ್ನು ಪೂಜೆ ಮಾಡಿ. ಬುಧವಾರ ಗಣಪತಿಯ ಅಥರ್ವಶಿರ್ಷ ಪಠಿಸಿದರೆ ಶುಭ ಫಲಿತಾಂಶ ದೊರೆಯುವುದು.

ಕಪ್ಪು ಹಸು ದಾನ ಮಾಡಿ ಅಥವಾ ಗೋಶಾಲೆಗೆ ಮೇವನ್ನು ದಾನ ಮಾಡಿ

ಕಪ್ಪು ಹಸು ದಾನ ಮಾಡಿ ಅಥವಾ ಗೋಶಾಲೆಗೆ ಮೇವನ್ನು ದಾನ ಮಾಡಿ

ಬ್ರಾಹ್ಮಣರಿಗೆ ಹಸುವನ್ನು ದಾನ ಮಾಡಿ ಇಲ್ಲದಿದ್ದರೆ ಗೋಶಾಲೆಗೆ ಅಕ್ಕಿ-ಬೆಲ್ಲ ದಾನ ಮಾಡಿ.

ನೀರಿಗೆ ಇದ್ದಿಲು ಹಾಕಿ

ನೀರಿಗೆ ಇದ್ದಿಲು ಹಾಕಿ

ಕೇತುವಿನ ಅಶುಭ ಫಲದಿಂದ ಮುಕ್ತಿ ಪಡೆಯಲು ಇದ್ದಿಲನ್ನು 8 ಭಾಗಗಳನ್ನಾಗಿ ಮಾಡಿ ಹರಿಯುವ ನೀರಿನಲ್ಲಿ ಬಿಡಬೇಕು. ಕೆಂಪು ಇರುವೆಗೆ ಆಹಾರ ನೀಡಬೇಕು. ಅಂಗವಿಕಲರಿಗೆ ಬಣ್ಣದ ವಸ್ತ್ರಗಳನ್ನು ದಾನ ಮಾಡಬೇಕು.

ಕಪ್ಪು ನಾಯಿಗೆ ಆಹಾರ ನೋಡಿ

ಕಪ್ಪು ನಾಯಿಗೆ ಆಹಾರ ನೋಡಿ

ಕಪ್ಪು ನಾಯಿಗೆ ಆಹಾರವನ್ನು ನೀಡಬೇಕು ಅಲ್ಲದೆ ಕಪ್ಪು ಹಾಗೂ ಬಿಳಿ ಎಳ್ಳನ್ನು ನೀರಿನಲ್ಲಿ ಬಿಡಿ. ಮೀನುಗಳಿಗೆ ಹಿಟ್ಟಿನಿಂದ ತಯಾರಿಸಿದ ಉಂಡೆಗಳನ್ನು ಹಾಕಿ.

ತುಪ್ಪದ ದೀಪ ಹಚ್ಚಿ

ತುಪ್ಪದ ದೀಪ ಹಚ್ಚಿ

ಜಾತಕದಲ್ಲಿ ಕೇತು ದೋಷವಿದ್ದವರು ದೇವಾಲಯಕ್ಕೆ ಹೋಗಿ ತುಪ್ಪದ ದೀಪ ಹಚ್ಚಬೇಕು.

ಲೋಹ, ಎಳ್ಳು, ತೆಂಗಿನಕಾಯಿ, ಉದ್ದು, ಗೋವು ಇವುಳನ್ನು ದಾನ ಮಾಡಿ..

ಕೇತುವಿನ ಕೆಟ್ಟ ಪ್ರಭಾವ ತಗ್ಗಲು ಮಂತ್ರ ಪಠಿಸಿ:

ಕೇತುವಿನ ಕೆಟ್ಟ ಪ್ರಭಾವ ತಗ್ಗಲು ಮಂತ್ರ ಪಠಿಸಿ:

ಕೇತು ವೈದಿಕ ಮಂತ್ರ

ಓಂ ಕೇತು ಕೃಣ್ವನ್ನಕೆತವೇ ಪೇಷೋ ಮರ್ಯಾ ಅಪೇಶ ಸೆ. ಸುಮುಷದ್ಭಿರಜಾಯತಃ

ಕೇತು ತಾಂತ್ರಿಕ ಮಂತ್ರ

ಓಂ ಸ್ತ್ರಂ ಸ್ತ್ರಿಂ ಸ್ತ್ರೌಂ ಸಃ ಕೆತವೇನಮಃ

ಕೇತು ಏಕಾಕ್ಷರಿ ಮಂತ್ರ

ಓಂ ಕೆತವೇನಮಃ

English summary

What To Do When Ketu Gives Bad Effect In Your Horoscope in Kannada

What to do when ketu gives bad effect in your horoscope in Kannada
X
Desktop Bottom Promotion