Just In
Don't Miss
- Movies
ದರ್ಶನ್, ರಾಕ್ಲೈನ್ ಬಿಟ್ಟು 'ಮದಕರಿ ನಾಯಕ' ಚಿತ್ರಕ್ಕೆ ಶಕ್ತಿ ತುಂಬಿದ್ದು ಆ 'ನಾಲ್ವರು'
- Finance
ಡಿಸೆಂಬರ್ 7ರ ಚಿನ್ನ- ಬೆಳ್ಳಿ ದರ ಹೀಗಿದೆ
- News
ತೆಲಂಗಾಣ ಎನ್ಕೌಂಟರ್ ಬಗ್ಗೆ ಸುಪ್ರೀಂಕೋರ್ಟ್ ಸಿಜೆಐ ಹೇಳಿದ್ದೇನು?
- Automobiles
ಗ್ರಾಹಕರ ಬೇಡಿಕೆಯೆಂತೆ 6, 7, 8 ಸೀಟರ್ ಸೌಲಭ್ಯದೊಂದಿಗೆ ಬರಲಿದೆ ಕಿಯಾ ಕಾರ್ನಿವಾಲ್
- Sports
ಭಾರತ vs ವಿಂಡೀಸ್: ಟೀಮ್ ಇಂಡಿಯಾದ ಮೇಲೆ ಗುಡುಗಿದ ಯುವರಾಜ!
- Technology
ಫೋಕಸ್ ಮೂಡ್ ಆಯ್ಕೆ ಪರಿಚಯಿಸಿದ ಗೂಗಲ್!
- Education
ರೆಪ್ಕೊ ಬ್ಯಾಂಕ್ ನಲ್ಲಿ 15 ಹುದ್ದೆಗಳ ನೇಮಕಾತಿ
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ಸೆಪ್ಟೆಂಬರ್ ನಲ್ಲಿ ಜನಿಸಿದವರು ಎಷ್ಟೆಲ್ಲಾ ವಿಶೇಷತೆಗಳನ್ನು ಹೊಂದಿದ್ದಾರೆ ಗೊತ್ತೇ?
ಸೆಪ್ಟೆಂಬರ್ ಮಾಸ ಎಂದಿಗೂ ವಿಶೇಷ. ಹಿಂದುಗಳಿಗೆ ಇದು ಹಬ್ಬಗಳ ಮಾಸವಾದರೆ, ವಿದೇಶಿಗರಿಗೆ ಈ ಮಾಸದಲ್ಲಿ ಮಟ ಮಟ ಬೇಸಿಗೆ ಮುಗಿದು ಇಡೀ ವಾತಾವರಣವನ್ನೇ ತಂಪಾಗಿಸುವಂಥ ಮಾಸ ಎಂಬ ವಿಶೇಷಣವನ್ನು ಸೆಪ್ಟೆಂಬರ್ ಪಡೆದಿದೆ.
ಅಲ್ಲದೇ ಇನ್ನೂ ವಿಶೇಷವೆಂದರೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಸೆರೆನಾ ವಿಲಿಯಮ್ಸ್, ನಟ ವಿಲ್ ಸ್ಮಿತ್, ಗಾಯಕ ನಿಕ್ ಜಾನ್, ಶಿಕ್ಷಣ ತಜ್ಞ ಸರ್ವಪಳ್ಳಿ ರಾಧಾಕೃಷ್ಣನ್ ಸೇರಿದಂತೆ ಮಹಾನ್ ಸಾಧಕರು ಜನಿಸಿದ ಮಾಸ ಎಂಬ ಬಿರುದು ಸಹ ಈ ಮಾಸಕ್ಕಿದೆ.
ಅಂತೆಯೇ, ವೈಜ್ಞಾನಿಕವಾಗಿ ಸೆಪ್ಟೆಂಬರ್ ಮಾಸದಲ್ಲಿ ಜನಿಸಿದವರು ಬಹುತೇಕ ಪ್ರಖ್ಯಾತಿ ಗಳಿಸುವವರಾಗಿರುತ್ತಾರೆ ಎನ್ನಲಾಗಿದೆ. ಯಾವುದೇ ಪೂರ್ವಗ್ರಹಿಕೆ ಇಲ್ಲದೆ 'ನ್ಯಾಷನಲ್ ಬ್ಯೂರೋ ಆಫ್ ಎಕಾನಾಮಿಕ್ ರಿಸರ್ಚ್' ನಡೆಸಿದ ಸಂಶೋಧನೆಯ ವರದಿ ಆಧರಿಸಿ ಸೆಪ್ಟೆಂಬರ್ ಮಾಸದಲ್ಲಿ ಜನಿಸಿದ ಮಕ್ಕಳು ಹೇಗೆ ವಿಭಿನ್ನರು ಎಂಬುದನ್ನು ಈ ಲೇಖನದಲ್ಲಿ ಹೇಳಲಿದ್ದೇವೆ.

ಬಹುತೇಕರು ಸಾಧಕರಾಗುತ್ತಾರೆ
ನಿಮ್ಮ ಹುಟ್ಟಿದ ಮಾಸ ಸಹ ನಿಮ್ಮ ಗೆಲುವನ್ನು ನಿರ್ಧರಿಸುವ ಒಂದು ಅಂಶವಾಗಬಹುದು. ಸೆಪ್ಟೆಂಬರ್ ಮಾಸದಲ್ಲಿ ಹುಟ್ಟಿದವರು ಬಹಳ ಸಣ್ಣ ವಯಸ್ಸಿನಲ್ಲೇ ಸಾಧನೆ ಮಾಡುವವರಾಗಿರುತ್ತಾರೆ. ಶಾಲೆಯಲ್ಲಿ ತನ್ನ ಇತರ ಗೆಳೆಯರಿಗಿಂತ ಈ ಮಾಸದಲ್ಲಿ ಹುಟ್ಟಿದ ಮಕ್ಕಳು ಶೀಕ್ಷಣ, ಕ್ರೀಡೆ, ಚಟುವಟಿಕೆ ಎಲ್ಲದರಲ್ಲೂ ಮುಂದಿರುತ್ತಾರೆ, ಇವರು ಏನೇ ಮಾಡಿದರು ವೃತ್ತಿಪರರಂತೆ ಮಾಡುತ್ತಾರೆ ಎನ್ನಲಾಗಿದೆ.

ದೀರ್ಘಾಯುಷಿಗಳು
ಸೆಪ್ಟೆಂಬರ್ ಹಾಗೂ ನವೆಂಬರ್ ಮಾಸದ ನಡುವೆ ಹುಟ್ಟಿದ ಮಕ್ಕಳು ಹೆಚ್ಚಾಗಿ ದೀರ್ಘಾಯುಷಿಗಳಾಗಿರುತ್ತಾರೆ. 100 ವರ್ಷಗಳನ್ನೂ ದಾಟಿ ಶತಾಯುಷಿಗಳು ಸಹ ಆಗಬಹುದು. ಇದಕ್ಕೆ ವೈಜ್ಞಾನಿಕ ಕಾರಣವೆಂದರೆ ಈ ಮಾಸದಲ್ಲಿ ಹುಟ್ಟಿನ ಮಕ್ಕಳು ಕಾಲಿಕವಾಗಿ ಬರುವ ರೋಗಗಳು, ಅಲರ್ಜಿ ಮತ್ತು ಸೋಂಕನ್ನು ತಡೆಯುವ ಸಾಮರ್ಥ್ಯ, ರೋಗನಿರೋಧಕ ಶಕ್ತಿಯನ್ನು ಹೊಂದಿರುತ್ತಾರೆ. ಇದು ಅವರ ದೀರ್ಘಾಯುಷ್ಯದ ರಹಸ್ಯವಾಗಿದೆ.

ಕಾಳಜಿಯುಳ್ಳವರು ಹಾಗೂ ಚಿಂತನಶೀಲರು
ಸೆಪ್ಟೆಂಬರ್ ಮಾಸದಲ್ಲಿ ಜನಿದವರು ನಿಮ್ಮ ಸ್ನೇಹಿತರಾಗಿದ್ದರೆ ನಿಮಗೂ ಇದರ ಅನುಭವವಾಗಿರುತ್ತದೆ. ಸೆಪ್ಟೆಂಬರ್ ಮಾಸದಲ್ಲಿ ಜನಿಸಿದವರು ಅಥವಾ ಕನ್ಯಾ, ತುಲಾ ರಾಶಿಯವರು ಬಹಳ ಪ್ರಾಯೋಗಿಕ, ಕಾಳಜಿಯುಳ್ಳವರು ಹಾಗೂ ಕ್ರಿಯಾಶೀಲ ಜೀವನವನ್ನು ನಡೆಸುವವರಾಗಿರುತ್ತಾರೆ. ಇವರು ಬಹಳ ಸ್ನೇಹಪರ, ಸಾಮರಸ್ಯ ಹಾಗೂ ಪ್ರೇಮ ಮನೋಭಾವ ಉಳ್ಳವರಾಗಿರುತ್ತಾರೆ. ಅಗತ್ಯವಿರುವವರಿಗೆ ಸಹಾಯ ಮಾಡುವ ಮನಸ್ಸನ್ನು ಹೊಂದಿರುತ್ತಾರೆ.

ಎತ್ತರವಾಗಿರುತ್ತಾರೆ ಹಾಗೂ ಕ್ರೀಡಾಳುವಾಗಿರುತ್ತಾರೆ
ನಿಮ್ಮ ಮಗು ಬಾಲ್ಯದಲ್ಲೇ ಕ್ರೀಡಾಳುವಾಗಬೇಕೆಂದು ಬಯಸುತ್ತೀರಾ, ಹಾಗಿದ್ದರೆ ಸೆಪ್ಟೆಂಬರ್ ನಲ್ಲಿ ಮಗು ಜನಿಸಿದರೆ ಒಳ್ಳೆಯದು. ಏಕೆಂದರೆ ಸೆಪ್ಟೆಂಬರ್ ನಲ್ಲಿ ಜನಿಸುವ ಮಕ್ಕಳ ಮಾಂಸಖಂಡಗಳು ಉತ್ತಮ ಶಕ್ತಿ ಸಾಮಾರ್ಥ್ಯವನ್ನು ಹೊಂದದಿರುತ್ತದೆ, ಆದ್ದರಿಂದ ಅವರು ಹೆಚ್ಚು ದೈಹಿಕ ಶ್ರಮಕ್ಕೆ ಒತ್ತು ನೀಡುತ್ತಾರೆ. ಇಂತಹ ಅಭ್ಯಾಸಗಳು ಅವರ ಮುಂದಿನ ಜೀವನಕ್ಕೂ ಸಹ ಸಹಕಾರಿಯಾಗಲಿದೆ. ಅಲ್ಲದೆ ಇವರು ಇತರ ಸಹಪಾಠಿ, ಸಹೋದರಿ/ರರಿಗಿಂತ ಹೆಚ್ಚು ಎತ್ತರವಿರುತ್ತಾರೆ.

ಹೆಚ್ಚು ಸಮಸ್ಯೆಗಳಿಗೆ ಸಿಲುಕಿಕೊಳ್ಳುದಿಲ್ಲ
ಇದು ಪೋಷಕರಿಗೆ ಬಹಳ ಒಳ್ಳೆಯ ಅಂಶವಾಗಲಿದೆ. ಸಾಮಾನ್ಯವಾಗಿ ಸೆಪ್ಟೆಂಬರ್ ಮಾಸದ್ಲಲಿ ಜನಿಸುವ ಮಕ್ಕಳು ಹೆಚ್ಚು ಸಮಸ್ಯೆ, ಗೊಂದಲಗಳಿಗೆ ಸಿಲುಕಿಕೊಳ್ಳುವುದಿಲ್ಲ. ಶಾಲೆಯಲ್ಲಿ ಒಳ್ಳೆಯ ಮಕ್ಕಳಾಗಿರುತ್ತಾರೆ ಹಾಗೂ ಅಪರಾಧ, ಕಳ್ಳತನದಂಥ ಕೃತ್ಯಗಳು, ಬಾಲಾಪರಾಧಿಯಾಗುವಂಥ ಕೆಲಸಗಳಲ್ಲಿ ಇವರು ಹೆಚ್ಚಾಗಿ ಭಾಗಿಯಾಗುವುದಿಲ್ಲ.

ಖಿನ್ನತೆಗೆ ಒಳಗಾಗುವುದಿಲ್ಲ
ಸೆಪ್ಟೆಂಬರ್ ಮಾಸದಲ್ಲಿ ಹುಟ್ಟಿನ ಎಲ್ಲರ ವಿಷಯದಲ್ಲೂ ಇದು ಸತ್ಯವಲ್ಲದಿದ್ದರೂ, ಬಹುತೇಕರು ಮಾಸಿಕ ಖಿನ್ನತೆಗೆ ಒಳಗಾಗುವುದಿಲ್ಲ. ಅಲ್ಲದೇ ಇವರು ಸಾಕಷ್ಟು ಪೀಡಿಸುವ ಸ್ವಭಾವದವರೂ ಆಗಿರುತ್ತಾರೆ.

ಅವಧಿಗೂ ಮುನ್ನ ಹುಟ್ಟಾತ್ತಾರೆ
ಸೆಪ್ಟೆಂಬರ್ ಮಾಸದ್ಲಲಿ ಹುಟ್ಟುಯವವರು ಸಾಮಾನ್ಯವಾಗಿ ಅವಧಿಗೂ ಮುನ್ನ ಹುಟ್ಟುತ್ತಾರೆ ಎಂದೂ ಹೇಳಲಾಗಿದೆ. ಇತರೆ ಮಾಸಗಳಲ್ಲಿ ಜನಿಸುವವರಿಗಿಂತ ಕನಿಷ್ಠ ಒಂದು ವಾರ ಮುಂಚೆ ಈ ಮಕ್ಕಳು ಹುಟ್ಟುತ್ತಾರೆ ಎಂದು ಸಂಶೋಧನೆ ಹೇಳುತ್ತದೆ.