For Quick Alerts
ALLOW NOTIFICATIONS  
For Daily Alerts

ರಾಶಿಚಕ್ರದ ಪ್ರಕಾರ, ನೀವು ಭಯ ಪಡುವುದು ಇದೇ ವಿಚಾರಕ್ಕಂತೆ!

|

ನಾವೆಲ್ಲರೂ ಒಂದಲ್ಲ ಒಂದು ವಿಷಯಕ್ಕೆ ಹೆದರುತ್ತೇವೆ. ಭಯ ಇಲ್ಲದವರಂತೆ ತೋರ್ಪಡಿಸಿಕೊಳ್ಳುವುದು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ಆದರೆ, ನಮ್ಮ ಭಯವನ್ನು ಒಪ್ಪಿಕೊಂಡು, ಅವುಗಳನ್ನು ಜಯಿಸಲು ಒಂದು ಹೆಜ್ಜೆ ಇಡುವುದು ನಿಮ್ಮನ್ನು ಬಲಪಡಿಸುತ್ತದೆ. ಆದ್ದರಿಂದ ನಮ್ಮ ಅಭದ್ರತೆಗಳು ಮತ್ತು ಭಯಗಳನ್ನು ಅರ್ಥಮಾಡಿಕೊಳ್ಳುವುದು ಅತ್ಯಗತ್ಯ. ಅದಕ್ಕಾಗ ನಾವಿಂದು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿಯೊಂದು ರಾಶಿ ಚಕ್ರಗಳು ಯಾವ ವಿಷಯಕ್ಕೆ ಭಯ ಪಡುತ್ತವೆ ಎಂಬುದನ್ನು ವಿವರಿಸಲಿದ್ದೇವೆ.

ಪ್ರತಿಯೊಂದು ರಾಶಿಚಕ್ರಗಳು ಭಯ ಪಡುವ ವಿಚಾರಗಳಾವುವು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಮೇಷ ರಾಶಿ:

ಮೇಷ ರಾಶಿ:

ಈ ರಾಶಿಚಕ್ರದವರು ಜನರ ಮೇಲೆ ತನ್ನ ನಿಯಂತ್ರಣವನ್ನು ಕಳೆದುಕೊಳ್ಳುವ ದೊಡ್ಡ ಭಯವನ್ನು ಹೊಂದಿರುತ್ತಾರೆ. ಇವರಿಗೆ ಎಲ್ಲರನ್ನು ಹತ್ತಿರ ಮಾಡಿಕೊಳ್ಳುವುದು ಇಷ್ಟ, ಆದರೆ, ಅವರ ಮಾತನ್ನು ಕೇಳದ ಜನರ ಭಯವು ಅವರನ್ನು ಹೆಚ್ಚು ಕಾಡುತ್ತದೆ. ಜೊತೆಗೆ ಯಾರಿಂದಲೂ ಗುರುತಿಸಲ್ಪಡದೇ, ಎಲ್ಲಿ ಏಕಾಂಗಿಯಾಗಿ ಬಿಡುತ್ತೇನೋ ಎಂಬ ಭಯ ಇವರಲ್ಲಿದೆ.

ವೃಷಭ ರಾಶಿ:

ವೃಷಭ ರಾಶಿ:

ಇವರು ಐಷಾರಾಮಿ ಜೀವನವನ್ನು ನಡೆಸಲು ಬಯಸುತ್ತಾರೆ, ಆದ್ದರಿಂದ ಅದರಿಂದ ಕೆಳಗೆ ವಾಸಿಸುವುದು ಅವರನ್ನು ಸಂಪೂರ್ಣವಾಗಿ ಅಲ್ಲಾಡಿಸುತ್ತದೆ. ತಮ್ಮ ಪ್ರೀತಿಪಾತ್ರರಿಗೆ ಬೇಕಾಗಿರುವುದನ್ನು ಒದಗಿಸಲು ಸಾಧ್ಯವಾಗದಿರುವುದು ಅವರ ದೊಡ್ಡ ಭಯ. ವೃಷಭ ರಾಶಿಯವರು ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಾರೆ, ಆದ್ದರಿಂದ ಅವರಿಗೆ ಅರ್ಹವಾದುದು ಸಿಗದೇ ಇದ್ದಾಗ ಅವರನ್ನು ನಿರಾಶೆಗೊಳಿಸುತ್ತದೆ.

ಮಿಥುನ ರಾಶಿ:

ಮಿಥುನ ರಾಶಿ:

ಜೀವನದಲ್ಲಿ ಉತ್ಸಾಹ, ಮೋಜು ಮತ್ತು ಮಸ್ತಿ ಮಾತ್ರ ಅವರಿಗೆ ತಿಳಿದಿದ್ದು, ಬೋರಿಂಗ್ ಜೀವನಕ್ಕೆ ಭಯಪಡುತ್ತಾರೆ. ಯಾವುದೋ ನೀರಸ ಕೆಲಸಕ್ಕೆ ಇವರನ್ನು ನೇಮಿಸಿದರೆ ಅಥವಾ ಮೋಜಿನಿಂದ ಮೂಲೆಗುಂಪು ಮಾಡಿದರೆ, ಇವರ ಹೃದಯ ಒಡೆಯುವುದು.

ಕರ್ಕ ರಾಶಿ:

ಕರ್ಕ ರಾಶಿ:

ಇವರು ಯಾವುದಾದರೂ ಜಗಳ ಅಥವಾ ವಾದಗಳ ಬಗ್ಗೆ ಮುಖಾಮುಖಿಯಾಗಲು ಇಷ್ಟಪಡುವುದಿಲ್ಲ. ಜೊತೆಗೆ ಇವರು ಬಹಳಷ್ಟು ಆತಂಕದ ಸಮಸ್ಯೆಗಳನ್ನು ಹೊಂದಿದ್ದು, ತಮ್ಮ ಕುಟುಂಬ ಮತ್ತು ಪ್ರೀತಿಪಾತ್ರರನ್ನು ಕಳೆದುಕೊಳ್ಳುವ ಭಯದಲ್ಲಿರುತ್ತಾರೆ.

ಸಿಂಹ ರಾಶಿ:

ಸಿಂಹ ರಾಶಿ:

ಇವರು ಕುಖ್ಯಾತರು ಆದರೆ ಇವರಿಗೆ ನಿರಾಕರಣೆಯ ಭಯ ಹೆಚ್ಚು. ಅವರಿಗೆ, ತಮ್ಮ ಶಕ್ತಿಯನ್ನು ತೋರಿಸುವುದು ಅತ್ಯಗತ್ಯ. ಇವರಿಂದ ಏಕಾಂಗಿಯಾಗಿ ಬದುಕಲು ಸಾಧ್ಯವಿಲ್ಲ. ಏಕಾಂಗಿಯಾಗಿ ಬದುಕಲು ಮತ್ತು ನೋವಿನಲ್ಲಿ ಜೀವನವನ್ನು ನಡೆಸಲು ಹೆದರುತ್ತಾರೆ.

ಕನ್ಯಾರಾಶಿ:

ಕನ್ಯಾರಾಶಿ:

ಅವರು ನಿಯಂತ್ರಣವನ್ನು ಕಳೆದುಕೊಳ್ಳುವ ಭಯದಲ್ಲಿರುತ್ತಾರೆ. ಜೊತೆಗೆ ಹಣದ ನಷ್ಟದ ನಿರಂತರ ಭಯವನ್ನು ಎದುರಿಸುತ್ತಾರೆ. ಬಡತನದ ಆಲೋಚನೆ ಅವರ ಜೀವನದುದ್ದಕ್ಕೂ ಅವರನ್ನು ಕಾಡುತ್ತದೆ. ಅವರು ತಮ್ಮ ಸಂತೋಷವನ್ನು ಕಸಿದುಕೊಳ್ಳುವ ಆರ್ಥಿಕ ನಿರ್ಬಂಧಗಳೊಂದಿಗೆ ಜೀವನವನ್ನು ನಡೆಸಲು ಹೆದರುತ್ತಾರೆ.

ತುಲಾ ರಾಶಿ:

ತುಲಾ ರಾಶಿ:

ಈ ರಾಶಿಯವರು ಹಣವನ್ನು ಕಳೆದುಕೊಳ್ಳುವ ಭಯದಲ್ಲಿರುತ್ತಾರೆ ಜೊತೆಗೆ ಇವರಿಗೆ ಐಷಾರಾಮಿಗಳಿಲ್ಲದ ಜೀವನವನ್ನು ಕಲ್ಪಿಸಿಕೊಳ್ಳಲಾಗುವುದಿಲ್ಲ. ಅವರು ತಮ್ಮ ವಿಷಯವನ್ನು ಹಂಚಿಕೊಳ್ಳಲು ಭಯಪಡುತ್ತಾರೆ. ಅವರು ತಮ್ಮ ವಸ್ತುಗಳನ್ನು ಬಹಳ ವ್ಯವಸ್ಥಿತವಾಗಿ ಮತ್ತು ಅಚ್ಚುಕಟ್ಟಾಗಿ ಇರಿಸುತ್ತಾರೆ. ಆ ವಸ್ತುಗಳ ಬಗ್ಗೆ ಬಹಳ ಎಚ್ಚರಿಕೆಯಿಂದ ಇರುತ್ತಾರೆ.

ವೃಶ್ಚಿಕ ರಾಶಿ:

ವೃಶ್ಚಿಕ ರಾಶಿ:

ಇವರು ಎಲ್ಲರ ಮುಂದೆ ಬಹಿರಂಗಗೊಳ್ಳಲು ಭಯಪಡುತ್ತಾರೆ.ಇವರು ನಿಜವಾಗಿಯೂ ಯಾರಿಗೂ ಬೇಗನೆ ತೆರೆದುಕೊಳ್ಳುವುದಿಲ್ಲ. ಜೊತೆಗೆ ಹೊಸ ಜನರನ್ನು ಪರಿಚಯ ಮಾಡಿಕೊಳ್ಳಲು ಹೆದರುತ್ತಾರೆ, ಏಕೆಂದರೆ ಅವರು ಸೀಮಿತ ವಲಯಕ್ಕೆ ಸೀಮಿತವಾಗಿರಲು ಬಯಸುತ್ತಾರೆ.

ಧನು ರಾಶಿ:

ಧನು ರಾಶಿ:

ಇವರು ತುಂಬಾ ಆತಂಕದ ಸ್ವಭಾವವನ್ನು ಹೊಂದಿದ್ದು, ವಿವಿಧ ರೀತಿಯ ಫೋಬಿಯಾಗಳಿಗೆ ಹೆಚ್ಚಾಗಿ ಗುರಿಯಾಗುತ್ತಾರೆ. ಮುಖ್ಯವಾಗಿ ಮುಚ್ಚಿದ ಸ್ಥಳಗಳ ಫೋಬಿಯಾ. ಅವರು ತಮ್ಮ ದೌರ್ಬಲ್ಯಗಳನ್ನು ಬಹಿರಂಗಪಡಿಸಲು ತುಂಬಾ ಹೆದರುತ್ತಾರೆ.

ಮಕರ ರಾಶಿ:

ಮಕರ ರಾಶಿ:

ಇವರು ಹುಟ್ಟು ವಿಜೇತರಾಗಿರುವುದರಿಂದ ಉನ್ನತ ಸ್ಥಾನವನ್ನು ತಲುಪಲು ಸಾಧ್ಯವಿಲ್ಲ ಎಂದು ಭಯಪಡುತ್ತಾರೆ. ಅವರು ಕಳೆದುಕೊಳ್ಳುವ ಭಯದಲ್ಲಿರುತ್ತಾರೆ. ಇವರನ್ನು ಎಲ್ಲಕ್ಕಿಂತ ಹೆಚ್ಚು ಅಂತರ್ಮುಖಿ ಮತ್ತು ನಾಚಿಕೆ ಸ್ವಭಾವದವರು ಎಂದು ಸಹ ಕರೆಯುತ್ತಾರೆ.

ಕುಂಭ ರಾಶಿ:

ಕುಂಭ ರಾಶಿ:

ಇವರು ತುಂಬಾ ಆರಾಮದಾಯಕವಾಗಿ ಬದುಕಿರುವುದರಿಂದ ಅಪಾಯಗಳನ್ನು ತೆಗೆದುಕೊಳ್ಳಲು ಹೆದರುತ್ತಾರೆ. ಕೆಲಸದ ಸ್ಥಳಕ್ಕೆ ಬಂದಾಗ, ಅವರು ಎರಡನೇ ಸ್ಥಾನದಲ್ಲಿರಲು ಮತ್ತು ತಮ್ಮ ಸಹೋದ್ಯೋಗಿಗೆ ಅಧೀನರಾಗಲು ಹೆದರುತ್ತಾರೆ.

ಮೀನ ರಾಶಿ:

ಮೀನ ರಾಶಿ:

ಇವರು ಪ್ರೀತಿಗಾಗಿ ಏನು ಬೇಕಾದರೂ ಮಾಡುವ ನಿಷ್ಠಾವಂತ ಜನರು. ಇವರಿಗೆ ನಿರಾಕರಣೆಯನ್ನು ಎದುರಿಸಲು ಸಾಧ್ಯವಿಲ್ಲ ಏಕೆಂದರೆ ಅದು ಅವರ ಹೃದಯವನ್ನು ಘಾಸಿ ಮಾಡುತ್ತದೆ. ಇವರು ಬಹಳ ಸಂವೇದನಾಶೀಲರಾಗಿದ್ದು, ರಹಸ್ಯವಾಗಿ ಕುಶಲತೆಯಿಂದ ಮತ್ತು ನಿಯಂತ್ರಿಸುವ ವ್ಯಕ್ತಿಯನ್ನು ಭೇಟಿಯಾಗುವುದು ಭಯ ಉಂಟುಮಾಡುತ್ತದೆ.

English summary

What Each Zodiac Sign Fears About The Most in Kannada

Here we talking about What Each Zodiac Sign Fears About The Most in Kannada, read on
Story first published: Thursday, November 18, 2021, 15:12 [IST]
X
Desktop Bottom Promotion