For Quick Alerts
ALLOW NOTIFICATIONS  
For Daily Alerts

2021ರ ಬೇಸಿಗೆ ಅಯನ ಸಂಕ್ರಾಂತಿ: ರಾಶಿಚಕ್ರದ ಮೇಲೆ ಈ ಸುದೀರ್ಘ ದಿನದ ಪರಿಣಾಮ

|

ಈ ವರ್ಷದಲ್ಲಿ ಅಂದರೆ 2021ರಲ್ಲಿ ಸೂರ್ಯ ಅತೀ ಹೆಚ್ಚು ಸಮಯವಿರುವ ಅಥವಾ ಭೂಮಿಯ ಒಂದು ಗೋಳಾರ್ಧಕ್ಕೆ ಅತಿ ಹೆಚ್ಚು ಸಮಯ ಬೆಳಕು ನೀಡುವ 'ಬೇಸಿಗೆ ಆಯನ ಸಂಕ್ರಾಂತಿ' ಜೂನ್‌ 21ರಂದು ಸೋಮವಾರ ಘಟಿಸುತ್ತಿದೆ. ಮತ್ತೊಂದು ಅರ್ಥದಲ್ಲಿ ಹೇಳಬೇಕೆಂದರೆ, ಬೇಸಿಗೆಯ ಅಯನ ಸಂಕ್ರಾಂತಿಯನ್ನು ವರ್ಷದ ಅತಿ ಉದ್ದದ ದಿನ ಎಂದೂ ಕರೆಯುತ್ತಾರೆ.

ವರ್ಷದಲ್ಲಿ ಎರಡು ಅಯನ ಸಂಕ್ರಾಂತಿಗಳಿವೆ. ಜೂನ್‌ ಮತ್ತು ಡಿಸೆಂಬರ್‌ ಮಾಸಗಳಲ್ಲಿ ಈ ಆಯನ ಸಂಕ್ರಾಂತಿಗಳು ನಡೆಯುತ್ತದೆ. ಜೂನ್‌ನಲ್ಲಿ ಬೇಸಿಗೆ ಆಯನ ಸಂಕ್ರಾಂತಿ ಮತ್ತು ಡಿಸೆಂಬರ್‌ನಲ್ಲಿ ಚಳಿಗಾಲದ ಆಯನ ಸಂಕ್ರಾಂತಿ ಎಂದು ಹೇಳಲಾಗುತ್ತದೆ. ಭೂಮಿಯ ಒಂದು ಗೋಳಾರ್ಧ ಅಂದರೆ ಭಾರತ ಸೇರಿದಂತೆ ಯುಕೆ, ಅಮೆರಿಕಾ, ಕೆನಡಾ, ರಷ್ಯಾ ಮತ್ತು ಚೀನಾ ದೇಶಗಳಲ್ಲಿ ಅತೀ ದೀರ್ಘವಾದ ದಿನ ಅಥವಾ ಬೇಸಿಗೆ ಆಯನ ಸಂಕ್ರಾಂತಿ ಘಟಿಸಲಿದೆ.

2021ರ ಬೇಸಿಗೆ ಆಯನ ಸಂಕ್ರಾಂತಿಯಂದು ಕರ್ಕ ರಾಶಿಯಲ್ಲಿ ಸೂರ್ಯ ಮತ್ತು ಮೀನ ರಾಶಿಯಲ್ಲಿ ಗುರು ಗ್ರಹ ಬರಲಿದ್ದಾನೆ. ಬೇಸಿಗೆ ಆಯನ ಸಂಕ್ರಾಂತಿಯಂದು ನಿಮ್ಮ ರಾಶಿಯಲ್ಲಿ ಬದಲಾಗಲಿರುವ ಗ್ರಹಗಳ ಸ್ಥಾನವು ನಿಮಗೆ ಯಾವ ರೀತಿ ಪರಿಣಾಮ ಬೀರಲಿದೆ, ಇದು ನಿಮ್ಮ ಮೇಲೆ ಹೇಗೆ ಪರಿಣಾಮ ಬೀರಲಿದೆ ಮುಂದೆ ನೋಡೋಣ:

ಮೇಷ ರಾಶಿ

ಮೇಷ ರಾಶಿ

ಮೇಷ ರಾಶಿಯವರು 2021ರ ಬೇಸಿಗೆಯ ಅಯನ ಸಂಕ್ರಾಂತಿಯ ಸಮಯದಲ್ಲಿ ಮನೆಯ ಮೇಲೆ ಕೇಂದ್ರೀಕರಿಸಲು ಉತ್ತಮ ಸಮಯವಾಗಿದೆ. ನೀವು ಹೆತ್ತವರು, ಕುಟುಂಬದ ಸದಸ್ಯರನ್ನು ಗೌರವಿಸಿ ಅಥವಾ ಮನೆಯ ಯೋಜನೆಗಳಿಗೆ ಕೈಜೋಡಿಸಿ. ನಿಮ್ಮ ಆರೈಕೆ ಮಾಡಿಕೊಳ್ಳಲು ಇದು ಉತ್ತಮ ಸಮಯ ಮತ್ತು ದ್ವೇಷ ಹೋಗಲಾಡಿಸಿ. ಆ ನಕಾರಾತ್ಮಕ ವೈನ್ಸ್‌ಗಳಿಂದ ದೂರವಿರಿ ಮತ್ತು ಮುಂದಿನ ದಿನಗಳಲ್ಲಿ ನಿಮಗೆ ಒಳ್ಳೆಯ ದಿನಗಳಿವೆ.

ವೃಷಭ ರಾಶಿ

ವೃಷಭ ರಾಶಿ

ಕೊರೊನಾ ಸಾಂಕ್ರಾಮಿಕದ ಸುದೀರ್ಘ ಹಾಗೂ ವಿಲಕ್ಷಣ ವರ್ಷದ ನಂತರ ಶುಕ್ರನ ಆಳ್ವಿಕೆಯಲ್ಲಿರುವ ವೃಷಭ ರಾಶಿಯು ಸೂರ್ಯನ ಅಯನ ಸಂಕ್ರಾಂತಿಯ ಸಮಯದಲ್ಲಿ ಜನರೊಂದಿಗೆ ಮತ್ತೆ ಮನಃಪೂರ್ವಕವಾಗಿ ಸಂಪರ್ಕ ಸಾಧಿಸುತ್ತಾರೆ. ಸ್ನೇಹಿತರು, ಸಂಬಂಧಿಕರು ಮತ್ತು ಸಾಮಾಜಿಕವಾಗಿಯೂ ಸಾಕಷ್ಟು ಸುದ್ದಿಯಲ್ಲಿರುತ್ತಾರೆ. ಆದರೆ ಮಾತನಾಡುವಾಗ ಜಾಗರೂಕರಾಗಿರಿ, ನಿಮ್ಮ ತಪ್ಪು ಮಾತುಗಳು ಸಮಸ್ಯೆ ಉಂಟುಮಾಡಬಹುದು.

ಮಿಥುನ ರಾಶಿ

ಮಿಥುನ ರಾಶಿ

ಮಿಥುನ ರಾಶಿಯವರು ವೃತ್ತಿ ಜೀವನವನ್ನು ಬದಲಿಸುವ ಮನಸ್ಸು ಹೊಂದಿದ್ದರೆ ಇದು ಉತ್ತಮ ಸಮಯ. ದಿನನಿತ್ಯದ ಕೆಲಸವನ್ನು ಮೀರಿ ನಿಮ್ಮ ನಿಷ್ಠೆಯನ್ನು ಸಾಬೀತುಪಡಿಸಿ. ನಿಮ್ಮ ಬಗ್ಗೆ ಒಳ್ಳೆಯ ಅನಿಸಿಕೆ ಮೂಡುವಂತೆ ಮಾಡಿ. ಮಿಥುನ ರಾಶಿಯವರು ಕೆಲಸದಲ್ಲಿ ನಾಯಕತ್ವವನ್ನು ವಹಿಸಿಕೊಳ್ಳುವ ಬಗ್ಗೆ ಹೆಚ್ಚು ಕಾತುರರಾಗಿರುತ್ತಾರೆ. ಆದರೂ, ಆತುರದ ನಿರ್ಧಾರಗಳನ್ನು ತಪ್ಪಿಸಬೇಕು ಮತ್ತು ಮುಂದಿನ ಯೋಚನೆ ಮಾಡಿ ಮುಂದಿನ ಹೆಜ್ಜೆ ಇಡಬೇಕು. ಬುಧ ಗ್ರಹವು ಮಿಥುನರಾಶಿಯನ್ನು ಆಳುತ್ತಿರುವುದರಿಂದ ಇದು ಕಷ್ಟವೇನೂ ಆಗುವುದಿಲ್ಲ.

ಕರ್ಕ ರಾಶಿ

ಕರ್ಕ ರಾಶಿ

ಇದು ಸೂರ್ಯನ ಸಮಯ ಅಂದರೆ, ನಿಮ್ಮ ದಿನ. ಕರ್ಕ ರಾಶಿಯವರು ಈ ಸಮಯದಲ್ಲಿ ಇತರರ ಬಗ್ಗೆ ಸಾಕಷ್ಟು ಕಾಳಜಿ ಮಾಡುತ್ತಾರೆ ಮತ್ತು ಇವರ ಕ್ರಿಯೆಗೆ ಅಕ್ಷರಶಃ ಬದ್ಧರಾಗಿರುತ್ತಾರೆ. ಸೂರ್ಯನು ಒಂದು ತಿಂಗಳ ಕಾಲ ಕರ್ಕ ರಾಶಿಗೆ ಚಲಿಸುತ್ತಿದ್ದಾನೆ, ಈ ಅಯನ ಸಂಕ್ರಾಂತಿಯು ಕರ್ಕ ರಾಶಿಯವರ ಯಶಸ್ಸಿಗೆ ಸೂಕ್ತ ಸಮಯವಾಗಿದೆ. ಯಾವುದಾದರೂ ಒಳ್ಳೆಯ ಕೆಲಸ, ನಿಮಗಾಗಿ ಏನನ್ನಾದರೂ ಮಾಡಲು ಬಯಸಿದರೆ ಅಥವಾ ಯಾವುದೇ ಅಪಾಯ ತೆಗೆದುಕೊಳ್ಳಲು ಇದು ನಿಮ್ಮ ಸಮಯ, ಅದನ್ನು ತಡೆಯಬೇಡಿ. ಇದು ನಿಮ್ಮ ಅದೃಷ್ಟದ ಸಮಯ, ನಿಧಾನ ಬೇಡ ತ್ವರಿತವಾಗಿ ಮುನ್ನುಗ್ಗಿ ನಿಮ್ಮ ಗುರಿಯನ್ನು ಸಾಧಿಸಿ.

ಸಿಂಹ ರಾಶಿ

ಸಿಂಹ ರಾಶಿ

ಈ ಸಾಲಿನ ಬೇಸಿಗೆಯ ಅಯನ ಸಂಕ್ರಾಂತಿಯ ಸಮಯದಲ್ಲಿ ಸಿಂಹ ರಾಶಿಯವರು ಯಾವುದೇ ಕೆಲಸವನ್ನು ದೊಡ್ಡದಾಗಿ ಮಾಡಲು ಬಯಸುತ್ತಾರೆ. ಆದರೆ ಇದನ್ನು ತಡೆದು ನಿಮಗೆ ನೀವೆ ಮಿತಿ ಅಥವಾ ಬಲವಾದ ಗಡಿಗಳನ್ನು ರಚಿಸಬೇಕು. ಸಿಂಹ ರಾಶಿಯವರು ಹುಟ್ಟುನಾಯಕರು ಆಗಿದ್ದರಿಂದ ಅವರ ಹುಮ್ಮಸ್ಸನ್ನು ಅಥವಾ ಬಯಕೆಗಳನ್ನು ತಡೆಯುವುದು ಒಂದು ಸವಾಲಾಗಿರಬಹುದು. ಸಿಂಹ ರಾಶಿಯವರಿಗೆ ಈ ಸಮಯದಲ್ಲಿ ಮಾರ್ಗದರ್ಶನದ ಅವಶ್ಯಕತೆ ಇದೆ. ತಾವು ಬಯಸಿದಂತೆ ಆಗದಿದ್ದರೆ ಬಹಳ ನಿರಾಶೆ ಹೊಂದಬಹುದು, ಇವರ ದುಃಖ, ನೋವು ಅಥವಾ ಯಾವುದೇ ಅನಾನುಕೂಲ ಭಾವನೆಗಳನ್ನು ತಿಳಿಸಲು ಸರಿಯಾದ ವ್ಯಕ್ತಿಯು ಅವರಿಗೆ ಸಹಾಯ ಮಾಡಬಹುದು. ಒತ್ತಡ ಹೇರಬೇಡಿ, ಉತ್ತಮ ಆರೋಗ್ಯಕ್ಕಾಗಿ ವ್ಯಾಯಾಮ ಮಾಡಿ.

ಕನ್ಯಾ ರಾಶಿ

ಕನ್ಯಾ ರಾಶಿ

ಕನ್ಯಾ ರಾಶಿಯವರು ಯಾವಾಗಲೂ ಇತರರಿಗೆ ಸಹಾಯ ಮಾಡಲು ಉತ್ಸುಕನಾಗಿರಬಹುದು, ಆದರೆ ನಿಜವಾದ ಅಥವಾ ಅರ್ಥಪೂರ್ಣ ವ್ಯಕ್ತಿಗಳಿಗೆ ಸಹಾಯ ಮಾಡುವುದು ಮುಖ್ಯವಾಗುತ್ತದೆ. ಗುಂಪಿನ ಪ್ರಯತ್ನಗಳಲ್ಲಿ ತೊಡಗಿಸಿಕೊಳ್ಳಲು ಸ್ನೇಹಿತರ ಸಹಾಯ ಪಡೆಯಿರಿ. ನೀವು ಇಷ್ಟಪಡುವ ಕೆಲಸಕ್ಕೆ ಅರ್ಹತೆ ಇಲ್ಲದ ಜನರನ್ನು ಸೇರಿಸುವ ತಪ್ಪು ಮಾಡಬೇಡಿ, ಏಕೆಂದರೆ ಇದು ತಂಡದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಕನ್ಯಾ ರಾಶಿ ಅತ್ಯಂತ ವಿಶ್ವಾಸಾರ್ಹ ಚಿಹ್ನೆಗಳಲ್ಲಿ ಒಂದಾಗಿದೆ.

ತುಲಾ ರಾಶಿ

ತುಲಾ ರಾಶಿ

ವರ್ಷದ ಅತಿ ದೀರ್ಘ ದಿನವಾದಂದು ತುಲಾ ರಾಶಿಯವರು ತಮ್ಮ ಕೆಲವು ಗುರಿಗಳನ್ನು ತಲುಪಲು ಸೂಕ್ತ ಸಮಯ. ಕೆಲಸದಲ್ಲಿ ಒತ್ತಡವನ್ನು ಕಡಿಮೆ ಮಾಡಲು ಸೃಜನಶೀಲ ಮಾರ್ಗಗಳನ್ನು ಕಂಡುಕೊಳ್ಳಿ, ಸ್ವಾಸ್ಥ್ಯವೇ ನಿಮ್ಮ ಗುರಿಯಾಗಿರಲಿ. ತುಲಾ ರಾಶಿಯವರು ಗುಂಪುಗಳಿಗೆ ಸೇರಲು ಅಥವಾ ಅವರು ಕೆಲಸ ಮಾಡುತ್ತಿರುವ ವಿಷಯಗಳ ಸುತ್ತ ಸಾಮಾಜಿಕ ಜೀವನವನ್ನು ಸಂಘಟಿಸಲು ಇದು ಉತ್ತಮ ಸಮಯ. ಈ ಸಮಯದಲ್ಲಿ ಸೆಪ್ಟೆಂಬರ್‌ನಲ್ಲಿ ಜನಿಸಿದ ಜನರು ಯಶಸ್ವಿಯಾಗುವ ಸಾಧ್ಯತೆ ಹೆಚ್ಚು ಇದೆ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ಬೇಸಿಗೆ ಆಯನವು ವೃಶ್ಚಿಕ ರಾಶಿಯವರಿಗೆ ಜೋರಾಗಿ ಮತ್ತು ಹೆಮ್ಮೆ ಪಡುವಂತೆ ಇರುತ್ತದೆ. ಮೂಡಿ ಮತ್ತು ನಿಗೂಢ ಸ್ವಭಾವದ ವೃಶ್ಚಿಕ ರಾಶಿಯವರು ಈ ಸಮಯದಲ್ಲಿ ಸ್ವಲ್ಪ ಕಡಿಮೆ ಮೂಡಿ ಮತ್ತು ನಿಗೂಢ ಸ್ವಭಾವದವರಾಗಬೇಕು ಮತ್ತು ತಾವು ಏನು ಕೆಲಸ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಇನ್ನಷ್ಟು ಕಾಳಜಿ ವಹಿಸಬೇಕು. ನಂತರ ಅವರು ಆ ಸಾಧನೆಗಳನ್ನು ತಮ್ಮ ಬಾಸ್‌ಗೆ ಅರ್ಥವಾಗುವ ರೀತಿಯಲ್ಲಿ ತೋರಿಸಬೇಕು. ಫ್ಲುಟೋ ಆಳ್ವಿಕೆಯಲ್ಲಿರುವ ವೃಶ್ಚಿಕ ರಾಶಿಯವರು ಒಬ್ಬಂಟಿಯಾಗಿದ್ದರೆ ಮದುವೆ ಆಗುವ ಸಾಧ್ಯತೆ ಇದೆ, ಉತ್ತಮ ಆಯ್ಕೆಯನ್ನು ಈ ಸಮಯದಲ್ಲಿ ಒಪ್ಪಿಕೊಳ್ಳಿ. ಅಕ್ಟೋಬರ್ ಜನ್ಮದಿನ ಹೊಂದಿರುವವರಿಗೆ ಇನ್ನಷ್ಟು ಒಳ್ಳೆಯ ಸುದ್ದಿ ಸಿಗಲಿದೆ.

ಧನು ರಾಶಿ

ಧನು ರಾಶಿ

ಬೇಸಿಗೆಯ ಅಯನ ಸಂಕ್ರಾಂತಿಯ ಸಮಯದಲ್ಲಿ ಧನು ರಾಶಿಯವರನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಇದು ಧನು ರಾಶಿಯವರ ಯೋಗ್ಯತೆಯನ್ನು ತಿಳಿದುಕೊಳ್ಳುವ ಸಮಯವಾಗಿದೆ. ಉತ್ತಮ ಕೊಡುಗೆ ಬರುವವರೆಗೆ ಕಾಯಿರಿ, ಮಾತುಕತೆಯನ್ನು ಜಾಣತನದಿಂದ ಮಾಡಿ. ಇದು ಒಮ್ಮೆ-ಜೀವಿತಾವಧಿಯ ಕೊಡುಗೆಯಾಗಿರಬಹುದು. ಇದು ನಿಮ್ಮ ಜೀವನದಲ್ಲಿ ಮುಂದೆ ಬರಲು, ಸಾಧನೆ ಮಾಡಲು ಬರುವ ಕೊನೆಯ ಅವಕಾಶವಾಗಿರಬಹುದು, ಆದ್ದರಿಂದ ಇದನ್ನು ಧನು ರಾಶಿಯವರು ಯಾವುದೇ ಕಾರಣಕ್ಕೂ ಕಳೆದುಕೊಳ್ಳಬಾರದು. ಭವಿಷ್ಯದ ಬಗ್ಗೆ ಚಿಂತಿಸದೆ ಬಂದ ಅವಕಾಶವನ್ನು ಬಳಸಿಕೊಳ್ಳಿ.

ಮಕರ ರಾಶಿ

ಮಕರ ರಾಶಿ

ಮಕರ ರಾಶಿಯವರಿಗೆ ಈ ಸಮಯವು ಸಂಬಂಧದ ವಿಚಾರದಲ್ಲಿ ಉತ್ತಮವಾಗಿದೆ, ಆದ್ದರಿಂದ ಸಂಬಂಧವನ್ನು ಉಳಿಸಿಕೊಳ್ಳಲು ಅಥವಾ ಹೊಸ ಸಂಬಂಧವನ್ನು ಬಯಸುವವರಿಗೆ ಮತ್ತು ವ್ಯವಹಾರಕ್ಕೆ ಇದು ಉತ್ತಮ ಸಮಯ. ಎಲ್ಲ ಸ್ನೇಹಿತರು ಸಂಬಂಧಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿ, ಅವರ ಮೇಲೆ ನಿಮಗೆ ಆಸಕ್ತಿ ಇದೆ ಎಂಬುದನ್ನು ಅರ್ಥೈಸಿ. ಎಲ್ಲಕ್ಕೂ ಮುಖ್ಯವಾಗಿ ನಿಮ್ಮನ್ನು ಪ್ರೀತಿಸುವವರಿಗಾಗಿ ನಿಮ್ಮ ಸಮಯವನ್ನು ಮೀಸಲಿಡಿ.

ಕುಂಭ ರಾಶಿ

ಕುಂಭ ರಾಶಿ

ಈ ಸಮಯದಲ್ಲಿ ನಿಮ್ಮ ಆರೋಗ್ಯದ ವಿಷಯಗಳು ಉತ್ತಮವಾಗಿರುತ್ತದೆ. ಕುಂಭ ರಾಶಿಯವರು ಅಯನ ಸಂಕ್ರಾಂತಿಯ ಮೊದಲು ಒಂದು ತಿಂಗಳು ಭೋಗವನ್ನು ಅನುಭವಿಸುವರು. ಆರೋಗ್ಯಕರ ಜೀವನಶೈಲಿಗೆ ಮತ್ತು ಸದೃಢವಾಗಿರಲು ಆರೋಗ್ಯಕರ ಆಹಾರ, ನಿದ್ರೆ ಮತ್ತು ವ್ಯಾಯಾಮದ ದಿನಚರಿಗಳನ್ನು ಪ್ರಾರಂಭಿಸಿ. ನೀವು ಯಾವುದೇ ರೀತಿಯ ನೋವುಗಳನ್ನು ಸಹಿಸಿಕೊಳ್ಳಲು ಸಿದ್ಧರಿರಬೇಕು ಅಗತ್ಯವಾದಲ್ಲಿ ವೈದ್ಯರನ್ನು ಸಂಪರ್ಕಿಸಿ.

ಮೀನ ರಾಶಿ

ಮೀನ ರಾಶಿ

ಬೇಸಿಗೆಯ ಅಯನ ಸಂಕ್ರಾಂತಿಯು ಮೀನ ರಾಶಿಯವರಿಗೆ ಅತ್ಯುತ್ತಮ ಸಮಯವಾಗಲಿದೆ. ಮತ್ತೊಂದು ವಿಶೇಷವೆಂದರೆ ಗುರು ಗ್ರಹವು ಈಗ ಮೀನ ರಾಶಿಯಲ್ಲಿದ್ದಾನೆ, ಆದ್ದರಿಂದ ಇಂದು ನಿಮಗೆ ಮತ್ತಷ್ಟು ಪ್ರಬಲ ದಿನವನ್ನಾಗಿ ಮಾಡುತ್ತದೆ. ನಿಮ್ಮನ್ನು ಬಲವಾಗಿ ಮತ್ತು ನಾಟಕೀಯವಾಗಿ ವ್ಯಕ್ತಪಡಿಸಿ. ನೀವು ಪ್ರೀತಿಸುವವರಿಗೆ ನಿಮ್ಮ ಪ್ರೀತಿಯನ್ನು ಮುಕ್ತವಾಗಿ ಹೇಳಿ. ರಹಸ್ಯವಾಗಿಡಬೇಡಿ ಅಥವಾ ಅಸ್ಪಷ್ಟವಾಗಿರಬೇಡಿ, ನಿಮ್ಮ ಭಾವನೆಯನ್ನು ತಿಳಿಸಿ. ನಿಮ್ಮ ಭಯವನ್ನು ಮೀರಿ ನಿಮಗೆ ಬೇಕಾದ ಮತ್ತು ಅಮೂಲ್ಯವಾದವರನ್ನು ಪಡೆದುಕೊಳ್ಳಲು ಮುನ್ನುಗ್ಗಿ.

English summary

What does the 2021 summer solstice mean for your Zodiac Sign in Kannada

Here we are discussing about What does the 2021 summer solstice mean for your Zodiac Sign in Kannada. Read more.
X
Desktop Bottom Promotion