For Quick Alerts
ALLOW NOTIFICATIONS  
For Daily Alerts

ರಾಶಿಚಕ್ರದ ಪ್ರಕಾರ ಈ ಗುಣಗಳನ್ನು ಸಂಗಾತಿ ನಿಮ್ಮಿಂದ ಬಯಸುತ್ತಾರೆ

|

ಪ್ರತಿಯೊಂದು ರಾಶಿಚಕ್ರದವರಲ್ಲೂ ವಿಭಿನ್ನ ಸ್ವಭಾವ, ವರ್ತನೆ, ಹಾಸ್ಯಪ್ರಜ್ಞೆ, ಆಕರ್ಷಣೀಯ ಗುಣಗಳು, ಪ್ರೀತಿ ತೋರ್ಪಡಿಸುವ ರೀತಿ ಭಿನ್ನವಾಗಿರುತ್ತದೆ ಎಂದು ಜ್ಯೋತಿಶಾಸ್ತ್ರಜ್ಞರು ಹೇಳುತ್ತಾರೆ.

What attracts you the most in a partner: as per your zodiac sign

ಅದರಂತೆ ಪ್ರತಿ ರಾಶಿಚಕ್ರದವರಲ್ಲೂ ಒಂದೊಂದು ಅಂಶ ತನ್ನ ಸಂಗಾತಿಯ ಮನಸೂರೆಗೊಂಡಿರುತ್ತದೆ, ಅವರ ಹೃದಯವನ್ನು ಗೆದ್ದಿರುತ್ತದೆ, ಅಲ್ಲದೇ ಇದು ಪ್ರತಿ ರಾಶಿಚಕ್ರದವರಲ್ಲೂ ಭಿನ್ನವಾಗಿರುತ್ತದೆ ಸಹ. ಹಾಗಿದ್ದರೆ ನಿಮ್ಮ ರಾಶಿಯ ಪ್ರಕಾರ ಯಾವ ಗುಣ ನಿಮ್ಮ ಸಂಗಾತಿಯಲ್ಲಿ ಆಕರ್ಷಿಸಿದೆ, ನೀವು ಅವರನ್ನು ಹೆಚ್ಚು ಪ್ರೇಮಿಸುವಂತೆ ಮಾಡಿದೆ ಎಂದು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ.

ಮೇಷ ರಾಶಿ

ಮೇಷ ರಾಶಿ

ಮೇಷ ರಾಶಿಯವರು ಸಾಹಸ ಮತ್ತು ಉತ್ಸಾಹದಂಥ ಕಲ್ಪನೆಯನ್ನು ಇಷ್ಟಪಡುತ್ತೀರಿ. ನೀವು ಯಾವುದನ್ನೇ ಆಗಲಿ ಬೆನ್ನಟ್ಟುವವರಾಗಿದ್ದೀರಿ ಮತ್ತು ನೀವು ಇರುವರೀತಿಯನ್ನೇ ಇಷ್ಟಪಡುತ್ತೀರಿ. ಇನ್ನು ನಿಮ್ಮ ಸಂಗಾತಿಯ ವಿಷಯಕ್ಕೆ ಬಂದರೆ, ಅವರಲ್ಲಿನ ಶಾಂತ ಮತ್ತು ಸಂಯೋಜಿತ ಸ್ವಭಾವ ನಿಮ್ಮನ್ನು ಮೊದಲು ಆಕರ್ಷಿಸಿದೆ. ಆದರೆ, ನೀವು ಅವರ ಕೋಪದ ಸ್ವಭಾವವನ್ನು ಇಷ್ಪಪಡದ ವ್ಯಕ್ತಿಯಾಗಿದ್ದರೂ, ನಿಮ್ಮ ಮಾನಸಿಕ ಶಾಂತಿಯನ್ನು ಕಂಡುಕೊಳ್ಳುವಲ್ಲಿ ನಿಮ್ಮ ಸಂಗಾತಿ ನಿಮಗೆ ಸಹಾಯ ಮಾಡುವರು, ಈ ಗುಣ ನಿಮಗೆ ತುಂಬಾ ಇಷ್ಟವಾಗುತ್ತದೆ.

ವೃಷಭ ರಾಶಿ

ವೃಷಭ ರಾಶಿ

ವೃಷಭ ರಾಶಿಯವರು ನಿಮ್ಮ ಸಂಗಾತಿಯ ಬಳಿ ಅತ್ಯಂತ ನಿಷ್ಠರಾಗಿರುವವರಾಗಿದ್ದೀರಿ ಮತ್ತು ನಿಮ್ಮ ಪ್ರೀತಿಯನ್ನು ಅವರು ಗಳಿಸಲು ಸಾಕಷ್ಟು ಸಮಯ ತೆಗೆದುಕೊಂಡಿರಬಹುದು. ನಿಮ್ಮ ಸಂಗಾತಿಯಲ್ಲಿ ನಿಮಗೆ ಹೆಚ್ಚು ಆಕರ್ಷಿಸಿದ ಸಂಗತಿಯೆಂದರೆ ಅವರ ಸ್ಥಿರತೆ ಮತ್ತು ಸಮತೋಲನ. ನೀವು ಸ್ಥಿರ ಸಂಬಂಧವನ್ನು ಪ್ರೀತಿಸುವವರು, ನಿಮ್ಮ ಸಂಗಾತಿ ಒಂದೇ ವಿಷಯವನ್ನು ಬಯಸುತ್ತಾರೆ ಎಂಬ ಅವರಲ್ಲಿರುವ ಗುಣ ನಿಮ್ಮನ್ನು ಹೆಚ್ಚು ಆಕರ್ಷಿಸಿದೆ.

ಮಿಥುನ ರಾಶಿ

ಮಿಥುನ ರಾಶಿ

ಮಿಥುನ ರಾಶಿಯವರು ವಿನೋದದ ಸ್ವಭಾವದವರು ಮತ್ತು ಸುಲಭವಾಗಿ, ಜಾಲಿಯಿಂದ ಜೀವನ ನಡೆಸುವವರು. ಆದ್ದರಿಂದ ಇವರು ತಮ್ಮ ಸಂಗಾತಿಯಲ್ಲಿ ಹೆಚ್ಚು ಇಷ್ಟಪಡುವ ಅಥವಾ ಆಕರ್ಷಿಸುವ ವಿಷಯವೆಂದರೆ ಅವರ ಮನಸ್ಸಿನಲ್ಲಿ ನಿಮಗೆ ನೀಡುವ ಸ್ಥಾನಮಾನ ಮತ್ತು ಅವರು ನಿಮಗೆ ನೀಡುವ ಸ್ವಾತಂತ್ರ್ಯ.

ಕರ್ಕ ರಾಶಿ

ಕರ್ಕ ರಾಶಿ

ನೀವು ಕರ್ಕ ರಾಶಿಯವರಾಗಿದ್ದರೆ ಭಾವನಾತ್ಮಕ ಬೆಂಬಲವು ನಿಮಗೆ ಮುಖ್ಯವಾಗಿದೆ. ನೀವು ಸೂಕ್ಷ್ಮವಾಗಿರುವುದರಿಂದ ಮತ್ತು ನಿಮ್ಮ ಹೆಚ್ಚಿನ ನಿರ್ಧಾರಗಳನ್ನು ಹೃದಯದಿಂದ ತೆಗೆದುಕೊಳ್ಳತ್ತೀರಿ ಮತ್ತು ನಿಮ್ಮ ಸಂಗಾತಿಯಿಂದಲೂ ನೀವು ಅದನ್ನೇ ನಿರೀಕ್ಷಿಸುತ್ತೀರಿ. ಆದ್ದರಿಂದ, ಕರ್ಕ ರಾಶಿಯವರು ಭಾವನಾತ್ಮಕ ಸುರಕ್ಷತೆಯ ಭಾವವನ್ನು ನೀಡುವ ಸಂಗಾತಿಯನ್ನು ಪ್ರೀತಿಸುತ್ತಾರೆ.

ಸಿಂಹ ರಾಶಿ

ಸಿಂಹ ರಾಶಿ

ಸಿಂಹ ರಾಶಿಯವರು ಜನಪ್ರಿಯರು ಹಾಗೂ ಗಮನ ಸೆಳೆಯುವವರು. ಅವರು ನಾಟಕವಿಲ್ಲದೆ ಏನ್ನೂ ಮಾಡಲು ಸಾಧ್ಯವಿಲ್ಲ ಎನ್ನಬಹುದು. ಹೇಗಾದರೂ, ಇವರ ಸಂಗಾತಿಯ ವಿಷಯಕ್ಕೆ ಬಂದಾಗ, ತಮ್ಮ ಪ್ರೀತಿ ಅಥವಾ ಕಾಳಜಿಯನ್ನು ಅತ್ಯಂತ ಸ್ಪಷ್ಟವಾಗಿ ತೋರುವ ಬದಲು, ಅದನ್ನು ಸಮಾಧಾನದಿಂದ ಮತ್ತು ಜಾಣತನದಿಂದ ತಮ್ಮ ಹೃದಯದಲ್ಲಿ ಮೋಡಿ ಮಾಡುವ ವ್ಯಕ್ತಿಯನ್ನು ಹುಡುಕುತ್ತಾರೆ.

ಕನ್ಯಾ ರಾಶಿ

ಕನ್ಯಾ ರಾಶಿ

ಕನ್ಯಾ ರಾಶಿಯವರು ಮೂಕ ಹೋರಾಟಗಾರರಾಗಿದ್ದು, ಅವರು ಪ್ರತಿ ಜವಾಬ್ದಾರಿಯನ್ನು ತಮ್ಮ ಮೇಲೆ ತೆಗೆದುಕೊಳ್ಳಲು ಇಷ್ಟಪಡುತ್ತಾರೆ. ಅದು ಪ್ರಭಾವಶಾಲಿಯಾಗಿ ಕಾಣಿಸಬಹುದು ಆದರೆ ಎಲ್ಲಾ ಹೊರೆಯಿಂದಾಗಿ ಅವರು ಎಷ್ಟು ಒತ್ತಡಕ್ಕೊಳಗಾಗಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳುತ್ತಾರೆ. ಆದ್ದರಿಂದ, ಕನ್ಯಾರಾಶಿಯವರು ಈ ಎಲ್ಲಾ ಜವಾಬ್ದಾರಿಗಳನ್ನು ತಾನುಹೊತ್ತುಕೊಂಡರೂ ಅಂತಿಮವಾಗಿ ತಮ್ಮ ಪಾಲುದಾರರಿಂದ ಸಂತಸಗೊಳ್ಳಲು ಬಯಸುತ್ತಾರೆ. ಅವರು ಸಂಗಾತಿಗೆ ಒಂದು ಮಟ್ಟದ ಕಾಳಜಿಯನ್ನು ತೋರಿಸಿದರೆ ಮತ್ತು ಸಂಗಾತಿಯಿಂದ ಅಗತ್ಯವಾದ ಬೆಂಬಲವನ್ನು ಮಾತ್ರ ಅಪೇಕ್ಷಿಸುತ್ತಾರೆ.

ತುಲಾ ರಾಶಿ

ತುಲಾ ರಾಶಿ

ತುಲಾ ರಾಶಿಯವರು ನಿಮ್ಮ ಜೀವನದ ಎಲ್ಲಾ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂದು ಬಯಸುವವರು ಹಾಗೂ ಇಂಥಾ ಜೀವನಶೈಲಿಗೆ ಹೆಚ್ಚು ಇಷ್ಟಪಡುವವರು. ನಿಮ್ಮ ಸಂಗಾತಿಯೊಂದಿಗೆ ಸಮತೋಲಿತ ಮತ್ತು ಆರೋಗ್ಯಕರ ಸಂಬಂಧವನ್ನು ಕಾಪಾಡಿಕೊಳ್ಳಲು ನೀವು ಪ್ರಯತ್ನಿಸುತ್ತಿರುವಾಗ, ನಿಮ್ಮ ಸಂಬಂಧದಲ್ಲಿನ ಪ್ರತಿಯೊಂದು ಸಣ್ಣ ಸಮಸ್ಯೆಯ ಬಗ್ಗೆ ನೀವು ಸಾಕಷ್ಟು ಒತ್ತು ನೀಡುತ್ತೀರಿ. ಅದಕ್ಕಾಗಿಯೇ ನೀವು ನಿರ್ಣಾಯಕ, ಜವಾಬ್ದಾರಿಗಳನ್ನು ತೆಗೆದುಕೊಳ್ಳುವ ಮತ್ತು ತೊಂದರೆಗೊಳಗಾದ ಸಂದರ್ಭಗಳನ್ನು ನಿಭಾಯಿಸುವ ದೃಢ ನಿಶ್ಚಯವನ್ನು ತೋರಿಸುವ ವ್ಯಕ್ತಿಗೆ ಒಲವು ತೋರುತ್ತೀರಿ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ಆಕರ್ಷಣೆಯ ವಿಷಯಕ್ಕೆ ಬಂದಾಗ, ವೃಶ್ಚಿಕ ರಾಶಿಯವರು ತಮ್ಮ ಸ್ವಾತಂತ್ರ್ಯ ಮತ್ತು ವೈಯಕ್ತಿಕ ಸ್ಥಳದ ಅಗತ್ಯತೆಗಳನ್ನು ಅರ್ಥಮಾಡಿಕೊಳ್ಳುವ ಮತ್ತು ಗೌರವಿಸುವ ಸಾಮರ್ಥ್ಯಕ್ಕಾಗಿ ತಮ್ಮ ಸಂಗಾತಿಯನ್ನು ಪ್ರೀತಿಸುತ್ತಾರೆ. ವೃಶ್ಚಿಕ ರಾಶಿಯವರು ತಮ್ಮ ಯಾವುದೇ ರಸಹ್ಯಗಳನ್ನು ಬಹಿರಂಗಪಡಿಸಲು ನಿಮ್ಮನ್ನು ಒತ್ತಾಯಿಸದ ವ್ಯಕ್ತಿಯನ್ನು ಹೆಚ್ಚು ಇಷ್ಟಪಡುತ್ತೀರ.

ಧನು ರಾಶಿ

ಧನು ರಾಶಿ

ನೀವು ಧನು ರಾಶಿಯಾಗಿದ್ದರೆ ನಿಮ್ಮ ಪ್ರೀತಿ ಮತ್ತು ಸಾಹಸದ ಉತ್ಸಾಹವನ್ನು ಗೌರವಿಸುತ್ತೀರಿ. ನೀವು ಪರಿಶೋಧನೆಯ ಕಲ್ಪನೆಯನ್ನು ಪ್ರೀತಿಸುತ್ತೀರಿ ಮತ್ತು ಸ್ವಾತಂತ್ರ್ಯದ ಕ್ಷಣಕ್ಕಾಗಿ ಬದುಕುತ್ತೀರಿ. ಆದ್ದರಿಂದ, ಯಾವುದಾದರೂ ವ್ಯಕ್ತಿಯತ್ತ ಆಕರ್ಷಿತರಾಗಿದ್ದರೆ, ಅವರಲ್ಲಿನ ಸಾಹಸ ಮತ್ತು ಕ್ರೀಡಾ ಪ್ರವೃತ್ತಿ ನಿಮಗೆ ಹೆಚ್ಚು ಇಷ್ಟವಾಗಿರುತ್ತದೆ.

ಮಕರ ರಾಶಿ

ಮಕರ ರಾಶಿ

ಮಕರ ರಾಶಿಯವರು ಹೃದಯದ ವಿಷಯಗಳಲ್ಲಿ ಜೂಜಾಟ ನಡೆಸದವರು. ತಾರ್ಕಿಕ ಮತ್ತು ತರ್ಕಬದ್ಧವಾಗಿ ಅವರು ತಮ್ಮ ವೃತ್ತಿಪರ ಜೀವನದ ಬಗ್ಗೆ ಅಂತೆಯೇ ತಮ್ಮ ಪಾಲುದಾರರ ಕಡೆಗೆ ಹೆಚ್ಚು ಸಮರ್ಪಿತರಾಗಿರುತ್ತಾರೆ. ಹೇಳಬೇಕೆಂದರೆ ಮಕರ ರಾಶಿಯವರು ಎಂದರೆ ಜವಾಬ್ದಾರಿ, ಶಿಸ್ತು ಮತ್ತು ಸ್ವಯಂ ನಿಯಂತ್ರಣ ಅವರನ್ನು ಹೆಚ್ಚು ಆಕರ್ಷಿಸುತ್ತದೆ. ಅಲ್ಲದೆ, ಸಂಗಾತಿಯಿಂದ ಮನೆ ಮತ್ತು ಸುರಕ್ಷತೆಯ ಪ್ರಜ್ಞೆಯನ್ನು ಅಪೇಕ್ಷಿಸುತ್ತಾರೆ.

ಕುಂಭ ರಾಶಿ

ಕುಂಭ ರಾಶಿ

ಕುಂಭ ರಾಶಿಯವರು ತಮ್ಮ ಸ್ವಂತ ಸ್ವಾತಂತ್ರ್ಯವನ್ನು ಗೌರವಿಸುವುದಲ್ಲದೆ ಅದನ್ನು ಇತರರಿಗೆ ದಯಪಾಲಿಸುವ ಜನರನ್ನು ಪ್ರೀತಿಸುತ್ತಾರೆ. ಅದಕ್ಕಾಗಿಯೇ ನೀವು ನಿಮ್ಮಂತೆಯೇ ನಂಬಿಕೆಗಳನ್ನು ಹೊಂದಿರುವ ಜನರಿಗೆ ಆಕರ್ಷಿತರಾಗುತ್ತೀರಿ, ಇದರಲ್ಲಿ ಯಾವುದೇ ಅಚ್ಚರಿಯಿಲ್ಲ.

ಮೀನ ರಾಶಿ

ಮೀನ ರಾಶಿ

ಮೀನ ರಾಶಿ ಎಂಬುದು ಸ್ವಪ್ನಮಯ ವ್ಯಕ್ತಿತ್ವಗಳು. ಅಂತೆಯೇ ಅವರ ನಿರೀಕ್ಷೆಗಳು ಅವರ ಹೃದಯ ನೋವಾಗಲು ಕಾರಣವಾಗುತ್ತದೆ. ಆದ್ದರಿಂದ, ಸಂಗಾತಿಯ ವಿವೇಕ ಪ್ರಜ್ಞೆ ಮತ್ತು ಅವರ ಜೀವನದ ಬಗೆಗಿನ ವಾಸ್ತವಿಕ ಮನೋಭಾವಕ್ಕಿಂತ ಹೆಚ್ಚು ಬೇರೇನೂ ಆಕರ್ಷಕವಾದ ವಿಷಯ ಇಲ್ಲ.

English summary

What attracts you the most in a partner: as per your zodiac sign

Here we are discussing about What attracts you the most in a partner: as per your zodiac sign. To help you find out what it was, here are the things that attract you the most in a partner, according to your zodiac sign.Read more.
Story first published: Saturday, September 5, 2020, 13:08 [IST]
X
Desktop Bottom Promotion