For Quick Alerts
ALLOW NOTIFICATIONS  
For Daily Alerts

ವಾರ ಭವಿಷ್ಯ- ಸೆಪ್ಟೆಂಬರ್ 15ರಿಂದ 21ರ ತನಕ

|
ದಿನ ಭವಿಷ್ಯ - Astrology 16-09-2019 - Your Day Today

ಸಮಯ ಎನ್ನುವುದು ನಮ್ಮ ಬದುಕಿನ ಪಾಠವನ್ನು ಕಲಿಸುತ್ತದೆ. ಸಮಯಕ್ಕೆ ತಕ್ಕಂತೆ ನಾವು ನಮ್ಮನ್ನು ಬದಲಿಸಿಕೊಳ್ಳುವ ಕೌಶಲ್ಯವನ್ನು ಕಲಿತಿರಬೇಕು. ಇಲ್ಲವಾದರೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುವುದು. ಬದಲಾವಣೆ ಎನ್ನುವುದು ನಿರಂತರವಾಗಿ ಹರಿಯುವ ನದಿಯಂತೆ ಅದು ಹೇಗೆ ಬರುತ್ತದೆಯೋ ಹಾಗೆ ನಾವು ಸ್ವೀಕರಿಸಬೇಕಾಗುವುದು.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ವಾರ ಸಾಕಷ್ಟು ಗ್ರಹಗಳ ಬದಲಾವಣೆಗಳು ಉಂಟಾಗುವುದು ಅವುಗಳ ಪ್ರಭಾವ ರಾಶಿಚಕ್ರಗಳ ಮೇಲೆ ಗಣನೀಯವಾಗಿರುತ್ತವೆ. ಆ ಬದಲಾವಣೆಗಳು ನಿಮ್ಮ ಜೀವನದಲ್ಲಿ ಹೇಗಿರುತ್ತದೆ ಎನ್ನುವುದನ್ನು ತಿಳಿಯಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ.

ಮೇಷ 21 ಮಾರ್ಚ್ - 19 ಏಪ್ರಿಲ್

ಮೇಷ 21 ಮಾರ್ಚ್ - 19 ಏಪ್ರಿಲ್

ಆರೋಗ್ಯದ ದೃಷ್ಟಿಯಿಂದ ಏರುಪೇರು ಉಂಟಾಗುವ ಸಾಧ್ಯತೆ. ಆರಂಭದಲ್ಲಿ ಕಿರಿಕಿರಿ ಅನುಭವಿಸಬಹುದು. ಸಣ್ಣ ವಿವಾದಗಳು ಬಗೆಹರಿಯಲು ಸಮಯ ತೆಗೆದುಕೊಳ್ಳುವ ಕಾರಣ ಕುಟುಂಬ ವಿಚಾರದಲ್ಲಿ ಒತ್ತಡದ ವಾರವಾಗಿರುತ್ತದೆ. ವಾರದ ಮಧ್ಯಭಾಗದಲ್ಲಿ ವಿಷಯಗಳು ಸುಧಾರಿಸುತ್ತವೆ ಮತ್ತು ಆತ್ಮೀಯರ ಜತೆಗಿನ ನಿಮ್ಮ ಸಂಬಂಧಗಳು ಚೇತರಿಸಿಕೊಳ್ಳುವುದರಿಂದ ನೆಮ್ಮದಿ ಸಿಗಲಿದೆ. ಜನರನ್ನು ಕೆಣಕುವ ನಿಮ್ಮ ಅಭ್ಯಾಸವನ್ನು ವೃತ್ತಿಪರ ಮತ್ತು ನಿಮ್ಮ ಆತ್ಮೀಯರು ಸಹಿಸುವುದಿಲ್ಲ. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ವಿದ್ಯಾರ್ಥಿಗಳಿಗೆ ಅವರ ಶೈಕ್ಷಣಿಕ ಸಾಧನೆ ಅತ್ಯುತ್ತಮವಾಗಿರುವುದರಿಂದ, ಅವರಿಗೆ ಅತ್ಯುತ್ತಮ ವಾರವಾಗಿರುತ್ತದೆ. ಹಣಕಾಸಿನ ವಿಷಯದಲ್ಲಿ ಲಾಭವು ಶುಭ ಸೂಚನೆಗಳಿವೆ ಮತ್ತು ಪ್ರಮುಖ ಸಮಸ್ಯೆಗಳಿಂದ ದೂರವಿರುತ್ತೀರಿ. ನಿಮ್ಮ ಆಶಯಕ್ಕೆ ವಿರುದ್ಧವಾಗಿ ವಿಷಯಗಳು ಹೋಗುವುದರಿಂದ ನೀವು ಗೊಂದಲಕ್ಕೊಳಗಾಗಬಹುದು. ಒಂದು ತೀರ್ಮಾನಕ್ಕೆ ಬರುವ ಮೊದಲು ಎರಡು ಬಾರಿ ಯೋಚಿಸಿ, ವಿಶೇಷವಾಗಿ ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ. ಹೂಡಿಕೆ ಮಾಡುವುದನ್ನು ತಪ್ಪಿಸಿ. ಕೆಲಸದಲ್ಲಿ ಎಂದಿನಂತೆ ಸಾಮಾನ್ಯ ವಾರವಾಗಿರುತ್ತದೆ. ವಾರದ ಕೊನೆಯಲ್ಲಿ ಉದ್ಯಮಿಗಳು ನಷ್ಟವನ್ನು ಅನುಭವಿಸಬಹುದು, ಆದರೆ ವಾರದ ಮಧ್ಯದ ವ್ಯಾಪಾರ ಪ್ರವಾಸವು ನಿಮ್ಮನ್ನು ಆಕ್ರಮಿಸಿಕೊಂಡಿರುತ್ತದೆ. ಆರೋಗ್ಯದಲ್ಲಿನ ಏರಿಳಿತ ಉಂಟಾಗುವ ಕಾರಣ ಕಿರಿಕಿರಿ ಅನುಭವಿಸಬಹುದು.

ಅದೃಷ್ಟ ಬಣ್ಣ: ರಕ್ತ ಕೆಂಪು

ಅದೃಷ್ಟ ಸಂಖ್ಯೆ: 11

ಅದೃಷ್ಟ ದಿನ: ಮಂಗಳವಾರ

ವೃಷಭ 20 ಏಪ್ರಿಲ್ - 20 ಮೇ

ವೃಷಭ 20 ಏಪ್ರಿಲ್ - 20 ಮೇ

ವೃತ್ತಿಪರ ಬದ್ಧತೆಯ ದೃಷ್ಟಿಯಿಂದ ಅನುಕೂಲಕರ ವಾರವಾಗಿರುತ್ತದೆ. ವಾರದ ಮಧ್ಯದಲ್ಲಿ ನಿಮ್ಮ ಸಹೋದ್ಯೋಗಿಗಳ ಜತೆಯನ್ನು ಆನಂದಿಸುವ ಸಾಧ್ಯತೆಯಿದೆ. ವೈಯಕ್ತಿಕ ದೃಷ್ಟಿಯಿಂದ ಸಂತೋಷದಾಯಕ ವಾರವಾಗಲಿದ್ದು, ಎಲ್ಲರ ನಡುವೆ ಪ್ರೀತಿ ಮತ್ತು ಸಹಕಾರ ಇರುತ್ತದೆ. ಒಡಹುಟ್ಟಿದವರು ನಿಮ್ಮ ಪರವಾಗಿರುತ್ತಾರೆ, ಆದರೆ ವಾರದ ಮಧ್ಯದಲ್ಲಿ ಸಣ್ಣ ವಾದವು ಉದ್ಭವಿಸಬಹುದು. ಭಾರವಾದ ಜವಾಬ್ದಾರಿಯನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ, ಏಕೆಂದರೆ ನೀವು ಹೊರೆಯನ್ನು ಹೊರಲು ಸಾಧ್ಯವಾಗುವುದಿಲ್ಲ. ನಿಮ್ಮ ಪಾಲುದಾರರ ಸಲಹೆಯನ್ನು ಕಡೆಗಣಿಸಬೇಡಿ. ಇದು ಅದೃಷ್ಟದ ವಾರವಾಗಲಿದೆ. ಪೋಷಕರು ನಿಮ್ಮೊಂದಿಗೆ ಅವರ ಸಮಸ್ಯೆಯನ್ನು ಹಂಚಿಕೊಳ್ಳಬಹುದು. ನಿಮ್ಮ ಜಾಣ್ಮೆಯಿಂದ ಸಂಗಾತಿಯೊಂದಿಗಿನ ಸಣ್ಣ ವಾದಗಳನ್ನು ಚೆನ್ನಾಗಿ ಎದುರಿಸುತ್ತೀರಿ. ಹಬ್ಬದ ಋತುವಿನಲ್ಲಿ ಕುಟುಂಬಕ್ಕೆ ಸಮೃದ್ಧ ಪ್ರಾಪ್ತಿಯಾಗಲಿದೆ. ಮಕ್ಕಳಿಗೆ ಉತ್ತಮ ಮಾರ್ಗದರ್ಶನ ನೀಡುವ ಕಾರಣ ಅವರಲ್ಲಿ ಸಕಾರಾತ್ಮಕ ಬದಲಾವಣೆಯನ್ನು ನೀವು ಗಮನಿಸಬಹುದು. ಸಾರ್ವಜನಿಕ ವಲಯದಲ್ಲಿರುವವರಿಗೆ ಏರುಪೇರಿನ ವಾರವಾಗಲಿದೆ ಮತ್ತು ಕೆಲವು ವಿಷಯಗಳು ನಿಮ್ಮನ್ನು ಕಾಡಬಹುದು. ನಿಮ್ಮ ಕೋಪದ ಬಗ್ಗೆ ಗಮನವಿರಲಿ, ನಿಮ್ಮ ತಾಳ್ಮೆ ವಾದ ಮಧ್ಯೆ ನಿಮಗೆ ನೆಮ್ಮದಿ ನೀಡುತ್ತದೆ. ಶೀಘ್ರದಲ್ಲೇ ಹಣಕಾಸಿನ ಬಿಕ್ಕಟ್ಟನ್ನು ಎದುರಿಸಬೇಕಾಗಿರುವುದರಿಂದ ಹೆಚ್ಚು ಖರ್ಚು ಮಾಡುವುದನ್ನು ತಪ್ಪಿಸಿ. ಆಪ್ತ ಸ್ನೇಹಿತರು ಅಥವಾ ಸಂಬಂಧಿಕರಿಂದ ಪ್ರಮುಖ ಸಹಾಯವನ್ನು ಕೇಳುವ ಪರಿಸ್ಥಿತಿ ಬರಬಹುದು. ವಾರದ ಕೊನೆಯಲ್ಲಿ ಆರೋಗ್ಯ ಸುಧಾರಿಸಲಿದೆ ಮತ್ತು ಕುಟುಂಬದೊಂದಿಗೆ ಸಣ್ಣ ಪ್ರವಾಸ ಕೈಗೊಳ್ಳಿ.

ಅದೃಷ್ಟ ಬಣ್ಣ: ನೇರಳೆ

ಅದೃಷ್ಟ ಸಂಖ್ಯೆ: 16

ಅದೃಷ್ಟ ದಿನ: ಸೋಮವಾರ

ಮಿಥುನ 21 ಮೇ - 20 ಜೂನ್

ಮಿಥುನ 21 ಮೇ - 20 ಜೂನ್

ಏರುಪೇರು ನಿರೀಕ್ಷಿಸಬಹುದಾದ ವಾರವಾಗಲಿದೆ, ಗೊಂದಲಕ್ಕೊಳಗಾಗಬಹುದು. ಕೆಲವು ತೊಂದರೆಗೊಳಿಸುವ ಅಂಶಗಳು ನಿಮಗೆ ಎದುರಾಗಬಹುದು, ವಾರ ಪೂರ್ತಿ ನೀವು ಚಡಪಡಿಸುತ್ತೀರಿ. ನಿಮ್ಮ ಭಾವನೆಗಳನ್ನು ಇತರರು ದುರುಪಯೋಗಪಡಿಸಿಕೊಳ್ಳುವುದರಿಂದ ಅದನ್ನು ವ್ಯಕ್ತಪಡಿಸುವುದನ್ನು ತಪ್ಪಿಸಿ. ಹೆಚ್ಚಿನ ಹೂಡಿಕೆಗಾಗಿ ಯೋಜಿಸುತ್ತೀರುವ ನಿಮಗೆ ಸಂಬಳ ಹೆಚ್ಚಳವು ಸಂತೋಷ ಉಂಟುಮಾಡಲಿದೆ. ಕೆಲಸದ ನಿಮಿತ್ತ ವ್ಯಾಪಾರಸ್ಥರು ವಾರದ ಮಧ್ಯದಲ್ಲಿ ಪ್ರಯಾಣಿಸಲು ಯೋಜಿಸುತ್ತಾರೆ. ಜಂಟಿ ವ್ಯವಹಾರದಲ್ಲಿರುವವರು ತಮ್ಮ ಯೋಜನೆಯನ್ನು ವಿಸ್ತರಿಸಬಹುದು. ಹಣಕಾಸಿನ ವಿಷಯದಲ್ಲಿ ಇದು ಆರಂಭದಲ್ಲಿ ನಿಧಾನವಾದ ವಾರವಾಗಿರುತ್ತದೆ, ಆದರೆ ವಾರದ ಮಧ್ಯಭಾಗದಲ್ಲಿ ಸರಿಯಾಗಲಿದೆ. ಹೃದಯ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಆರೋಗ್ಯದಲ್ಲಿ ಸುಧಾರಣೆ ಕಾಣಬಹುದು. ಬಹಳ ಸಮಯದ ನಂತರ ಒತ್ತಡದಿಂದ ಮುಕ್ತರಾಗುತ್ತೀರಿ ಮತ್ತು ನಿಮ್ಮ ಪ್ರೀತಿಪಾತ್ರರ ಜೊತೆ ಸಮಯ ಕಳೆಯುವುದನ್ನು ಇಷ್ಟಪಡುತ್ತೀರಿ. ತಂದೆಯ ಆರೋಗ್ಯದಲ್ಲಿನ ಸುಧಾರಣೆಯಾಗಲಿದೆ. ಕೆಲಸದ ಬದ್ಧತೆಗಳು ನಿಮ್ಮನ್ನು ಆಕ್ರಮಿಸಿಕೊಂಡಿರುವುದರಿಂದ ನೀವು ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಗುವುದಿಲ್ಲ. ನಿಮ್ಮ ಸಂಗಾತಿಯೊಂದಿಗೆ ಪ್ರೀತಿಯ ಕ್ಷಣಗಳನ್ನು ಕಳೆಯುವುದನ್ನು ಸಂತೋಷಪಡುತ್ತೀರಿ ಮತ್ತು ಸಮಯವನ್ನು ಬಹಳವಾಗಿ ಪ್ರೀತಿಸುತ್ತೀರಿ. ಒಟ್ಟಾರೆ ಕೆಲವು ಅಂಶಗಳಲ್ಲಿ ಇದು ಅನುಕೂಲಕರ ವಾರವಾಗಿರುತ್ತದೆ.

ಅದೃಷ್ಟ ಬಣ್ಣ: ಆಕಾಶ ನೀಲಿ.

ಅದೃಷ್ಟ ಸಂಖ್ಯೆ: 41

ಅದೃಷ್ಟ ದಿನ: ಭಾನುವಾರ

ಕರ್ಕ 21 ಜೂನ್ - 22 ಜುಲೈ

ಕರ್ಕ 21 ಜೂನ್ - 22 ಜುಲೈ

ಪ್ರೀತಿಪಾತ್ರರ ಆಶ್ಚರ್ಯಗಳಿಂದ ನಿಮ್ಮ ವಾರವು ರೋಮಾಂಚಕಾರಿಯಾಗಿರುತ್ತದೆ. ವೈಯಕ್ತಿಕವಾಗಿ ಈ ವಾರ ಕೆಲವು ಸಮಸ್ಯೆಗಳು ಕಾಡುಲಿದೆ. ನಿಮ್ಮ ಸಂಗಾತಿ ವಿಷಯಗಳನ್ನು ಸರಳೀಕರಿಸಲು ಪ್ರಯತ್ನಿಸುತ್ತಾರೆ, ಆದರೆ ಅದು ಸುಲಭದ ಕೆಲಸವಲ್ಲ. ಕುಟುಂಬದ ಕಾರ್ಯಗಳು ಮತ್ತು ನಿಕಟ ಸದಸ್ಯರ ಇತರ ಕೆಲಸಗಳು ನಿಮ್ಮನ್ನು ಆಕ್ರಮಿಸಿಕೊಳ್ಳಲಿದೆ. ನಿಮ್ಮ ವಾದದ ಸ್ವರೂಪವನ್ನು ಯಾರೂ ಒಪ್ಪುವುದಿಲ್ಲ ಮತ್ತು ಜನರು ನಿಮ್ಮಿಂದ ದೂರವನ್ನು ಕಾಯ್ದುಕೊಳ್ಳುತ್ತಾರೆ. ಕೆಲವು ಸಮಸ್ಯೆಗಳ ಬಗ್ಗೆ ನೀವು ಅಸಮಾಧಾನಗೊಳ್ಳಬಹುದು. ವಾರದ ಮಧ್ಯದಲ್ಲಿ ಕೆಲವು ಸಮಸ್ಯೆಗಳು ಇತ್ಯರ್ಥಗೊಳ್ಳುವ ನಿರೀಕ್ಷೆಯಿದೆ, ಆದರೆ ಹೆಚ್ಚಿನ ವಿಷಯಗಳು ಉತ್ತಮವಾಗಿರುವುದಿಲ್ಲ. ನೀವು ಕುಟುಂಬದೊಂದಿಗೆ ಇರುವುದನ್ನು ತಪ್ಪಿಸುತ್ತೀರಿ, ಅದನ್ನು ಹಿರಿಯರು ಗಮನಿಸುತ್ತಾರೆ. ಹಣಕಾಸಿನ ವಿಷಯದಲ್ಲಿ ಇದು ಸಾಮಾನ್ಯ ವಾರವಾಗಿರುತ್ತದೆ. ನಿಕಟ ಸಂಬಂಧಿ / ಸ್ನೇಹಿತ ಆರ್ಥಿಕ ಸಹಾಯವನ್ನು ಪಡೆಯಬಹುದು. ಆಗಾಗ್ಗೆ ಪ್ರಯಾಣಿಸುವ ಕಾರಣ ಇದು ಕೆಲಸದಲ್ಲಿ ಬಿಡುವಿಲ್ಲದ ವಾರವಾಗಿರುತ್ತದೆ. ಮಕ್ಕಳು ತಮ್ಮ ಗುರಿಗಳನ್ನು ಸಾಧಿಸುವುದರಿಂದ ಅವರಿಗೆ ಅನುಕೂಲಕರ ವಾರವಾಗಿರುತ್ತದೆ.

ಅದೃಷ್ಟ ಬಣ್ಣ: ನೀಲಿ

ಅದೃಷ್ಟ ಸಂಖ್ಯೆ: 15

ಅದೃಷ್ಟ ದಿನ: ಗುರುವಾರ

ಸಿಂಹ 23 ಜುಲೈ - 22 ಆಗಸ್ಟ್

ಸಿಂಹ 23 ಜುಲೈ - 22 ಆಗಸ್ಟ್

ಆರಂಭಿಕ ವಾರದಲ್ಲಿ ಒಂದು ಸಣ್ಣ ಪ್ರವಾಸವು ನಿಮ್ಮನ್ನು ಕಾರ್ಯನಿರತಗೊಳಿಸಬಹುದು. ನಿಮಗೆ ಮಾರ್ಗದರ್ಶನ ನೀಡುವ ಪ್ರಭಾವಿ ವ್ಯಕ್ತಿಗಳನ್ನು ನೀವು ಕಾಣಬಹುದು ಎಂಬ ಕಾರಣಕ್ಕೆ ಈ ವಾರ ಹಣಕಾಸಿನ ವಿಷಯದಲ್ಲಿ ಮಹತ್ವದ್ದಾಗಿದೆ. ಕಡಿಮೆ ಸಮಯದಲ್ಲಿ ಹೆಚ್ಚಿನದನ್ನು ಸಾಧಿಸುವ ಗುರಿಯನ್ನು ಹೊಂದಿರುವ ಕಾರಣ ಯಶಸ್ಸು ಶೀಘ್ರದಲ್ಲೇ ನಿಮ್ಮನ್ನು ಅನುಸರಿಸುತ್ತದೆ. ಉತ್ತಮ ಮಾರ್ಗದರ್ಶನಕ್ಕಾಗಿ ಹಿರಿಯರು ಅಥವಾ ಇತರ ಅನುಭವಿ ಜನರ ಸಹಾಯವನ್ನು ಪಡೆಯುವುದು ಉತ್ತಮ. ಉದ್ಯಮಿಗಳು ಅನುಕೂಲಕರ ಮತ್ತು ಲಾಭದಾಯಕ ವಾರವನ್ನು ಹೊಂದಿರುತ್ತಾರೆ ಮತ್ತು ಉತ್ತಮವಾದದ್ದನ್ನು ಯೋಜಿಸುತ್ತಾರೆ. ಜನರು ನಿಮ್ಮನ್ನು ಗಮನಿಸುವುದರಿಂದ ಸಾರ್ವಜನಿಕವಾಗಿ ನಿಮ್ಮ ಮಾತುಗಳ ಬಗ್ಗೆ ಎಚ್ಚರದಿಂದಿರಿ. ವೃತ್ತಿಪರ ಮುಖ್ಯಸ್ಥರ ವಿಷಯದಲ್ಲಿ ಇದು ಬಿಡುವಿಲ್ಲದ ವಾರವಾಗಿರುತ್ತದೆ. ನಿರ್ಧಾರ ತೆಗೆದುಕೊಳ್ಳುವಾಗ ನೀವು ಜಾಗರೂಕರಾಗಿರಬೇಕು ಮತ್ತು ತೀರ್ಮಾನಕ್ಕೆ ಬರುವ ಮೊದಲು ನಿಮ್ಮ ತಂಡವನ್ನು ಸಂಪರ್ಕಿಸಿ. ಹಣಕಾಸಿನಲ್ಲಿ ಅನುಕೂಲಕರ. ಹತ್ತಿರವಿರುವ ಯಾರಾದರೂ ನಿಮಗೆ ಅನಿರೀಕ್ಷಿತವಾಗಿ ಸಹಾಯ ಮಾಡುತ್ತಾರೆ ಮತ್ತು ನೀವು ಕೃತಜ್ಞರಾಗಿರುತ್ತೀರಿ. ನಿಮ್ಮ ಪ್ರಿಯರಿಗೆ ನೀವು ಆಶ್ಚರ್ಯವನ್ನುಂಟುಮಾಡುತ್ತೀರಿ, ಅವರಿಗೆ ವಿಶೇಷ ಭಾವನೆ ಮೂಡಿಸುತ್ತದೆ. ವಾರಾಂತ್ಯದಲ್ಲಿ ದೀರ್ಘ ವಿಶ್ರಾಂತಿ ಸಿಗಲಿದೆ. ನೀವು ಕುಟುಂಬದೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವ ನಿರೀಕ್ಷೆಯಿದೆ. ಕೆಲವು ವಿಷಯಗಳಿಗಾಗಿ ನೀವು ವೈದ್ಯರನ್ನು ಸಂಪರ್ಕಿಸಬೇಕು. ಆಹ್ಲಾದಕರ ಹವಾಮಾನವು ಆರೋಗ್ಯದ ಸುಧಾರಣೆಗೆ ಒಂದು ಕಾರಣವಾಗಿರುತ್ತದೆ.

ಅದೃಷ್ಟ ಬಣ್ಣ: ಕೆಂಪು

ಅದೃಷ್ಟ ಸಂಖ್ಯೆ: 21

ಅದೃಷ್ಟ ದಿನ: ಬುಧವಾರ

ಕನ್ಯಾ 23 ಆಗಸ್ಟ್ - 22 ಸೆಪ್ಟೆಂಬರ್

ಕನ್ಯಾ 23 ಆಗಸ್ಟ್ - 22 ಸೆಪ್ಟೆಂಬರ್

ಈ ವಾರ ಸುಗಮವಾಗಿರಲಿದೆ. ಶೀಘ್ರದಲ್ಲೇ ಅನೇಕ ಅಪೂರ್ಣ ಕಾರ್ಯಗಳನ್ನು ಸಾಧಿಸುವಿರಿ, ವಾರದ ಮಧ್ಯಭಾಗದಲ್ಲಿ ನಿಮಗೆ ನಿರಾಳತೆ ಸಿಗಲಿದೆ. ಉತ್ಸಾಹ ಮತ್ತು ಸಾಹಸದಿಂದ ತುಂಬಿದ ವಾರವಾಗಿರುತ್ತದೆ. ನಿಮ್ಮ ಗುರಿಯ ಮೇಲೆ ಗಮನ ಹರಿಸುತ್ತೀರಿ. ಶಿಕ್ಷಣ ತಜ್ಞರಿಗೆ ಉತ್ತಮ ವಾರ. ಕಾರ್ಪೊರೇಟ್ ವಲಯದವರು ಉದ್ಯೋಗ ಬದಲಾವಣೆಗೆ ಯೋಜಿಸುತ್ತಾರೆ ಮತ್ತು ಗುರಿಗಳನ್ನು ಪೂರೈಸುವಲ್ಲಿ ಯಶಸ್ವಿಯಾಗುತ್ತಾರೆ. ಉದ್ಯಮಿಗಳಿಗೆ ಬಿಡುವಿಲ್ಲದ ವಾರವಾಗುವುದರಿಂದ ಅವರು ಕೆಲಸಕ್ಕೆ ಸಂಬಂಧಿಸಿದ ಜನರನ್ನು ಭೇಟಿಯಾಗುವುದರಲ್ಲಿ ನಿರತರಾಗಿರುತ್ತಾರೆ. ರಿಯಲ್ ಎಸ್ಟೇಟ್ ನಲ್ಲಿರುವವರು ಮುಂಬರುವ ಯೋಜನೆಗಾಗಿ ಯೋಜಿಸುತ್ತಾರೆ ಮತ್ತು ವಾರದ ಅಂತ್ಯವು ಅವರಿಗೆ ಪ್ರಯೋಜನಕಾರಿಯಾಗಿದೆ. ಕಚೇರಿಯಲ್ಲಿ ಬಾಕಿ ಇರುವ ಕಾರ್ಯಗಳಿಂದ ದೂರವಿರುತ್ತೀರಿ ಮತ್ತು ಹೊಸ ನಿಯೋಜನೆಗಾಗಿ ಯೋಜಿಸುತ್ತೀರಿ. ಹೊಸ ಆಲೋಚನೆಗಳು ನಿಮ್ಮನ್ನು ವಿಭಿನ್ನವಾಗಿ ಯೋಚಿಸುವಂತೆ ಮಾಡುತ್ತದೆ. ಆರೋಗ್ಯದ ದೃಷ್ಟಿಯಿಂದ ಇದು ಅನುಕೂಲಕರ ವಾರವಾಗಿರುತ್ತದೆ. ದೂರದಲ್ಲಿರುವವರು ಬಹಳ ಸಮಯದ ನಂತರ ತಮ್ಮ ಪ್ರಿಯರನ್ನು ಭೇಟಿಯಾಗಲು ಯೋಜಿಸುತ್ತಾರೆ. ವಾರದ ಅಂತ್ಯದ ವೇಳೆಗೆ ವಿಷಯಗಳು ವಿಶೇಷವಾಗಿರುತ್ತದೆ. ನಿಮ್ಮ ಕಠಿಣ ಪರಿಶ್ರಮದಿಂದಾಗಿ ಹಣಕಾಸಿನ ವಿಷಯದಲ್ಲಿ ಸುಧಾರಣೆಯಾಗಲಿದೆ ಮತ್ತು ಹಿಂದಿನ ಪಾವತಿಗಳನ್ನು ಪಡೆಯುತ್ತೀರಿ. ನಿಮ್ಮ ಯೋಗ ಮತ್ತು ಧ್ಯಾನದ ಅಭ್ಯಾಸವು ಸಹಾಯಕವಾಗಿರುತ್ತದೆ ಮತ್ತು ನೀವು ಕ್ಷಣವನ್ನು ಆನಂದಿಸುವವವರಾಗಿರುತ್ತೀರಿ.

ಅದೃಷ್ಟ ಬಣ್ಣ: ಸಾಸಿವೆ

ಅದೃಷ್ಟ ಸಂಖ್ಯೆ: 12

ಅದೃಷ್ಟ ದಿನ: ಸೋಮವಾರ

ತುಲಾ 23 ಸೆಪ್ಟೆಂಬರ್ - 22 ಅಕ್ಟೋಬರ್

ತುಲಾ 23 ಸೆಪ್ಟೆಂಬರ್ - 22 ಅಕ್ಟೋಬರ್

ಏರುಪೇರು ಇರುವ ಮಿಶ್ರ ವಾರವಾಗಿದ್ದು, ವಾರದ ಮಧ್ಯದಲ್ಲಿ ನಷ್ಟ ಅನುಭವಿಸಬಹುದು. ಹಣಕಾಸಿನ ವಿಷಯಗಳು ಕಠಿಣವಾಗುತ್ತವೆ. ಸಮಸ್ಯೆಯನ್ನು ಎದುರಿಸಬಹುದು. ಸಾಲದ ವಿಷಯದಲ್ಲಿ ನಿಮ್ಮಲ್ಲಿ ಕೆಲವರು ನಿಮಗೆ ಒತ್ತಡ ಉಂಟುಮಾಡುತ್ತಾರೆ. ಕೆಲವು ನಿರೀಕ್ಷೆಗಳನ್ನು ಪೂರೈಸಲು ನಿಮಗೆ ಸಾಧ್ಯವಾಗದ ಕಾರಣ ಕುಟುಂಬದಲ್ಲಿ ಒತ್ತಡದ ಸಮಯವಾಗಿರುತ್ತದೆ. ಕೃಷಿಕರು ಹೊಸ ಕಾರ್ಯಗಳಲ್ಲಿ ನಿರತರಾಗಿರುತ್ತಾರೆ. ನಿಮ್ಮ ಅಹಂ ಕಾರಣ ನೀವು ಸಂಬಂಧವನ್ನು ಕಳೆದುಕೊಳ್ಳುವ ನಿರೀಕ್ಷೆಯಿದೆ. ಸಂಬಂಧಗಳನ್ನು ಮೌಲ್ಯೀಕರಿಸುವುದು ಬಹಳ ಮುಖ್ಯ, ಏಕೆಂದರೆ ನಿಮಗೆ ಹೆಚ್ಚು ಅಗತ್ಯವಿದೆ. ನಿಮ್ಮ ಸಂಗಾತಿ ನಿಮಗೆ ಬೆಂಬಲ ನೀಡುತ್ತಾರೆ. ವಾರದ ಕೊನೆಯಲ್ಲಿ ಲಾಭದಾಯಕವಾಗುತ್ತವೆ. ಆರೋಗ್ಯವು ಸಾಮಾನ್ಯವಾಗಿರುತ್ತದೆ ಮತ್ತು ಹಳೆಯ ಕಾಯಿಲೆಯಿಂದ ಚೇತರಿಸಿಕೊಳ್ಳುತ್ತೀರಿ. ನಿಮ್ಮ ಪ್ರೀತಿಪಾತ್ರರ ಜೊತೆ ಸಮಯ ಕಳೆಯುವುದು ಖುಷಿ ನೀಡುತ್ತದೆ. ಹಳೆಯ ಸ್ನೇಹಿತನೊಂದಿಗೆ ಸಂಪರ್ಕ ಸಾಧಿಸುವುದು ನಿಮಗೆ ಹಳೆಯ ಸಮಯವನ್ನು ಪುನರುಜ್ಜೀವನಗೊಳಿಸುತ್ತದೆ. ಇತರರ ಸಂಬಂಧವನ್ನು ನೋಡುವ ಬದಲು ನಿಮ್ಮ ಜೀವನದಲ್ಲಿ ಗಮನಹರಿಸಲು ನೀವು ಕಲಿಯಬೇಕು.

ಅದೃಷ್ಟ ಬಣ್ಣ: ಕ್ರೀಮ್

ಅದೃಷ್ಟ ಸಂಖ್ಯೆ: 2

ಅದೃಷ್ಟ ದಿನ: ಸೋಮವಾರ

ವೃಶ್ಚಿಕ 23 ಅಕ್ಟೋಬರ್ - 21 ನವೆಂಬರ್

ವೃಶ್ಚಿಕ 23 ಅಕ್ಟೋಬರ್ - 21 ನವೆಂಬರ್

ಈ ವಾರ ನಿಮಗೆ ಹೆಚ್ಚಿನ ಆನಂದದಾಯಕ ವಾರವಾಗಿರುತ್ತದೆ ಮತ್ತು ನೀವು ಸಮಯವನ್ನು ಉತ್ತಮವಾಗಿ ಬಳಸಿಕೊಳ್ಳುತ್ತೀರಿ. ಕೆಲಸದಲ್ಲಿ ಶಾಂತಿಯುತ ವಾರವಾಗಿರುತ್ತದೆ. ವಾರದ ಆರಂಭವು ವೇತನ ಹೆಚ್ಚಳ ಮತ್ತು ಬಡ್ತಿಗೆ ಸಂಬಂಧಿಸಿದ ಒಳ್ಳೆಯ ಸುದ್ದಿಯನ್ನು ತರುತ್ತದೆ. ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಯಶಸ್ಸನ್ನು ಸಾಧಿಸುತ್ತಾರೆ. ವಿಶೇಷವಾಗಿ ಪರೀಕ್ಷೆ ತಯಾರಿ ನಡೆಸುವರು. ನಿಮ್ಮ ವ್ಯವಹಾರಕ್ಕೆ ಸಮಯ ಮತ್ತು ಶ್ರಮ ಬೇಕಾಗುತ್ತದೆ ಮತ್ತು ಅದಕ್ಕಾಗಿ ನೀವು ಗಂಭೀರವಾಗಿರಬೇಕು. ಜಂಟಿ ವ್ಯವಹಾರದಲ್ಲಿರುವವರು ಜಾಗರೂಕರಾಗಿರಬೇಕು. ಹಣಕಾಸಿನ ವಿಷಯಗಳು ನೆಲೆಗೊಳ್ಳಬಹುದು. ಕುಟುಂಬದೊಂದಿಗೆ ವಿನೋದದಿಂದ ತುಂಬಿದ ವಾರವಾಗಿರುತ್ತದೆ. ತವರೂರಿಗೆ ಭೇಟಿ ನೀಡಿ ಹಿರಿಯರಿಗೆ ಆಶ್ಚರ್ಯವಾಗುತ್ತದೆ. ವೃತ್ತಿಪರ ಸ್ಪರ್ಧೆಯಲ್ಲಿ ನಿಮ್ಮ ಪ್ರತಿಸ್ಪರ್ಧಿಯನ್ನು ಸೋಲಿಸಲು ನಿಮಗೆ ಸಾಧ್ಯವಾಗುವುದರಿಂದ ಇದು ಅನುಕೂಲಕರ ಸಮಯ. ಸಂತೋಷ ಮತ್ತು ತೃಪ್ತಿ ಹೊಂದಲು ಈ ಕ್ಷಣವನ್ನು ಪೂರ್ಣವಾಗಿ ಬದುಕಲು ಪ್ರಯತ್ನಿಸಿ.

ಅದೃಷ್ಟ ಬಣ್ಣ: ಹಳದಿ

ಅದೃಷ್ಟ ಸಂಖ್ಯೆ: 45

ಅದೃಷ್ಟ ದಿನ: ಶನಿವಾರ

ಧನಸ್ಸು 22 ನವೆಂಬರ್ - 21 ಡಿಸೆಂಬರ್

ಧನಸ್ಸು 22 ನವೆಂಬರ್ - 21 ಡಿಸೆಂಬರ್

ಹಣಕಾಸಿನ ವಿಷಯದಲ್ಲಿ ಲಾಭದಾಯಕ ವಾರವಾಗುವುದರಿಂದ ಆರಾಮವಾಗಿ ಖರ್ಚು ನಿಭಾಯಿಸುತ್ತೀರಿ. ತುರ್ತು ಪರಿಸ್ಥಿತಿಗಳನ್ನು ನೋಡಿಕೊಳ್ಳಲು ನಿಮ್ಮ ಉಳಿತಾಯವು ಸಾಕಾಗುತ್ತದೆ; ಒಡಹುಟ್ಟಿದವರು ಬೆಂಬಲ ನೀಡುತ್ತಾರೆ. ಸಮಯವು ಸಂಬಂಧದ ಮಹತ್ವವನ್ನು ಅರಿತುಕೊಳ್ಳುವಂತೆ ಮಾಡುತ್ತದೆ. ಅಮೂಲ್ಯವಾದ ಪಾಠಕ್ಕಾಗಿ ನೀವು ಹಿರಿಯರಿಗೆ ಕೃತಜ್ಞರಾಗಿರುತ್ತೀರಿ. ನಿಯೋಜಿಸಲಾದ ಕಾರ್ಯವನ್ನು ನೀವು ಆನಂದಿಸುವ ಕಾರಣ ವೃತ್ತಿಯಲ್ಲಿ ಬಿಡುವಿಲ್ಲದ ವಾರವಾಗಿರುತ್ತದೆ. ಜನರು ನಿಮ್ಮ ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕ ಸ್ವಭಾವವನ್ನು ಗೌರವಿಸುತ್ತಾರೆ. ನಿಮ್ಮ ಸಂಗಾತಿ ಹೆಮ್ಮೆ ಪಡುತ್ತಾರೆ ಮತ್ತು ವಾರದ ಅಂತ್ಯದ ವೇಳೆಗೆ ನಿಮ್ಮನ್ನು ಆಶ್ಚರ್ಯಗೊಳಿಸುತ್ತಾರೆ. ನಿಮ್ಮ ಪ್ರೀತಿಪಾತ್ರರ ಜತೆ ಸಣ್ಣ ವಾದಗಳನ್ನು ಅನುಭವಿಸಬಹುದು. ನವವಿವಾಹಿತ ದಂಪತಿಗಳು ಸಂಬಂಧದಲ್ಲಿ ಅಸ್ಥಿರತೆಯನ್ನು ಎದುರಿಸಬೇಕಾಗುತ್ತದೆ, ಆದರೆ ವಾರದ ಅಂತ್ಯದ ವೇಳೆಗೆ ವಿಷಯಗಳು ಸುಧಾರಿಸುತ್ತವೆ. ನಿಮ್ಮ ಮಕ್ಕಳಿಂದ ನಿಮಗೆ ಒಳ್ಳೆಯ ಸುದ್ದಿ ಬರಬಹುದು. ನಿಮ್ಮ ಶತ್ರುಗಳು ನಿಮ್ಮ ವಿರುದ್ಧ ಚುರುಕಾದ ಕೃತ್ಯವನ್ನು ರೂಪಿಸುವ ಕಾರಣ ಜಾಗರೂಕರಾಗಿರಿ.

ಅದೃಷ್ಟ ಬಣ್ಣ: ಕೆನ್ನೇರಳೆ ಬಣ್ಣ

ಅದೃಷ್ಟ ಸಂಖ್ಯೆ: 12

ಅದೃಷ್ಟ ದಿನ: ಶುಕ್ರವಾರ

ಮಕರ 22 ಡಿಸೆಂಬರ್ - 19 ಜನವರಿ

ಮಕರ 22 ಡಿಸೆಂಬರ್ - 19 ಜನವರಿ

ಕಚೇರಿಯಲ್ಲಿನ ಸ್ನೇಹಪರ ವಾತಾವರಣವು ನಿಮಗೆ ನಿರಾಳತೆಯನ್ನು ನೀಡುತ್ತದೆ. ನೀವು ಹೊಸ ಸಹೋದ್ಯೋಗಿಯೊಂದಿಗೆ ಉತ್ತಮ ಸಂಬಂಧವನ್ನು ಹಂಚಿಕೊಳ್ಳುತ್ತೀರಿ. ಹೊಸ ವಿಷಯಗಳನ್ನು ಕಲಿಯುವ ಬಗ್ಗೆ ನಿಮ್ಮ ವರ್ತನೆ ನಿಮ್ಮನ್ನು ಯಶಸ್ವಿಗೊಳಿಸುತ್ತದೆ. ಜನರಿಗೆ ಮನವರಿಕೆಯಾಗುವ ಕಾರಣ ನೀವು ಕುಟುಂಬದಲ್ಲಿ ಪ್ರಮುಖ ನಿಲುವನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ. ನಿಮ್ಮ ಬಗ್ಗೆ ಇತರರ ಭಾವನೆಯನ್ನು ನೀವು ಗೌರವಿಸುತ್ತೀರಿ, ಅದು ನಿಮಗೆ ಪ್ರಾಮುಖ್ಯತೆಯನ್ನು ನೀಡುತ್ತದೆ. ಜನರು ನಿಮ್ಮನ್ನು ಸಕಾರಾತ್ಮಕ ಭರವಸೆಯಿಂದ ನೋಡುತ್ತಾರೆ ಮತ್ತು ಯುವಕರಿಗೆ ಸ್ಫೂರ್ತಿ ನೀಡುತ್ತೀರಿ. ನಿಮ್ಮ ತಾಳ್ಮೆ ಪ್ರತಿಫಲವನ್ನು ನೀಡುವ ಕಾರಣ ವಾರದ ಮಧ್ಯಭಾಗದಲ್ಲಿ ವಿತ್ತೀಯ ವಿಷಯದಲ್ಲಿ ವಿಷಯಗಳು ಉತ್ತಮಗೊಳ್ಳುತ್ತವೆ. ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ಹೋಗಲು ಇದು ಸೂಕ್ತ ಸಮಯ. ನೀವು ಬುದ್ಧಿವಂತಿಕೆಯಿಂದ ನಿರ್ಧಾರ ತೆಗೆದುಕೊಳ್ಳುತ್ತೀರಿ.

ಅದೃಷ್ಟ ಬಣ್ಣ: ಕೆಂಪು

ಅದೃಷ್ಟ ಸಂಖ್ಯೆ: 34

ಅದೃಷ್ಟ ದಿನ: ಮಂಗಳವಾರ

ಕುಂಭ 20 ಜನವರಿ - 18 ಫೆಬ್ರವರಿ

ಕುಂಭ 20 ಜನವರಿ - 18 ಫೆಬ್ರವರಿ

ನಿಯೋಜಿಸಲಾದ ಯೋಜನೆಯ ಬಗ್ಗೆ ನೀವು ಅತೃಪ್ತರಾಗಿರುವುದರಿಂದ ಕೆಲಸದಲ್ಲಿ ನಿಧಾನಗತಿಯ ವಾರವಾಗಿರುತ್ತದೆ. ನೀವು ಸ್ಮಾರ್ಟ್ ಆಗಿ ಕಾರ್ಯನಿರ್ವಹಿಸಲು ಪ್ರಯತ್ನಿಸಬಹುದು ಅಥವಾ ನಿಮ್ಮ ಕೆಲಸವನ್ನು ಸಹೋದ್ಯೋಗಿಗೆ ನಿಯೋಜಿಸಬಹುದು, ಆದರೆ ಇದು ಬಾಸ್ ಅನ್ನು ಅನುಮಾನಾಸ್ಪದವಾಗಿಸುತ್ತದೆ. ನಿಮ್ಮ ಸಮಯವನ್ನು ವ್ಯರ್ಥ ಮಾಡುವುದನ್ನು ತಪ್ಪಿಸಿ. ಒಂದು ನಿರ್ದಿಷ್ಟ ಮಟ್ಟವನ್ನು ಸಾಧಿಸಲು ನೀವು ಶ್ರಮಿಸಬೇಕು. ವಾರದ ಮಧ್ಯಭಾಗದಲ್ಲಿ ವಿಷಯಗಳು ಸುಧಾರಿಸುವ ನಿರೀಕ್ಷೆಯಿದೆ. ನಿಮ್ಮ ಆದಾಯ ಅಥವಾ ಉಳಿತಾಯಕ್ಕಿಂತ ಹೆಚ್ಚಿನದನ್ನು ನೀವು ಖರ್ಚು ಮಾಡುತ್ತಿದ್ದರೂ ಇದು ಹಣಕಾಸಿನಲ್ಲಿ ಸಾಮಾನ್ಯ ವಾರವಾಗಿರುತ್ತದೆ. ನಿಮ್ಮ ಸಂಗಾತಿಯೊಂದಿಗೆ ನೀವು ಭಿನ್ನಾಭಿಪ್ರಾಯವನ್ನು ಹೊಂದಿರುವುದರಿಂದ ಕೆಲಸದಲ್ಲಿ ಕಠಿಣವಾಗಿರುತ್ತವೆ. ವಾರದ ಮಧ್ಯಭಾಗದಲ್ಲಿ ಆರೋಗ್ಯದಲ್ಲಿ ಸುಧಾರಣೆ ವಿಶ್ರಾಂತಿ ಸಿಗಲಿದೆ. ವಾರದ ಕೊನೆಯಲ್ಲಿ ಉದ್ಯಮಿಗಳು ಕೆಲವು ನಿರಾಶೆಯನ್ನು ಎದುರಿಸಬೇಕಾಗುತ್ತದೆ. ಜನರನ್ನು ಕುರುಡಾಗಿ ನಂಬಬೇಡಿ.

ಅದೃಷ್ಟ ಬಣ್ಣ: ಬಿಳಿ

ಅದೃಷ್ಟ ಸಂಖ್ಯೆ: 18

ಅದೃಷ್ಟ ದಿನ: ಭಾನುವಾರ

ಮೀನ: 19 ಫೆಬ್ರವರಿ - 20 ಮಾರ್ಚ್

ಮೀನ: 19 ಫೆಬ್ರವರಿ - 20 ಮಾರ್ಚ್

ವ್ಯವಹಾರವನ್ನು ಪ್ರಾರಂಭಿಸಬಹುದಾದ್ದರಿಂದ ಹಣಕಾಸಿನ ವಿಷಯದಲ್ಲಿ ಅನುಕೂಲಕರ ವಾರವಾಗಿರುತ್ತದೆ. ನಿಮ್ಮ ಸಾಲ ಮುಕ್ತರಾಗುತ್ತೀರಿ. ವೈಯಕ್ತಿಕ ವಿಷಯದಲ್ಲಿ ಸುಗಮವಾಗಿರುತ್ತವೆ. ನಿಮ್ಮ ಸಂಗಾತಿಯು ಪ್ರಬುದ್ಧವಾಗಿ ವರ್ತಿಸುತ್ತಾರೆ ಮತ್ತು ಬುದ್ಧಿವಂತಿಕೆಯಿಂದ ಮಾರ್ಗದರ್ಶನ ನೀಡುತ್ತಾರೆ. ವಿಷಯಗಳು ಪ್ರತಿಕೂಲವಾಗಬಹುದು ಎಂಬ ಕಾರಣ ಅತಿಯಾದ ಆತ್ಮವಿಶ್ವಾಸ ಬೇಡ. ನಿಮ್ಮ ಆಪ್ತ ಸಂಬಂಧಿ ಅಥವಾ ಸ್ನೇಹಿತ ಪ್ರಮುಖ ಕಾರ್ಯಗಳಲ್ಲಿ ಸಹಾಯ ಮಾಡುತ್ತಾರೆ. ಕೆಲಸದಲ್ಲಿ ನೀವು ಕಿರಿಕಿರಿ ಅನುಭವಿಸಬಹುದು. ವಾರದ ಮಧ್ಯದಲ್ಲಿ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ. ನೀವು ಕುಟುಂಬ ಮತ್ತು ಮಕ್ಕಳೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವುದರಿಂದ ವಾರದ ಕೊನೆಯಲ್ಲಿ ನಿಮಗೆ ಪರಿಹಾರ ಸಿಗುತ್ತದೆ. ವಿಷಯಗಳು ಪ್ರಯೋಜನಕಾರಿಯಾಗುವುದರಿಂದ ಯಶಸ್ಸು ಮತ್ತು ಒಳ್ಳೆಯ ಸುದ್ದಿ ನಿಮ್ಮ ದಾರಿಯಲ್ಲಿದೆ.

ಅದೃಷ್ಟ ಬಣ್ಣ: ನೇರಳೆ

ಅದೃಷ್ಟ ಸಂಖ್ಯೆ: 48

ಅದೃಷ್ಟ ದಿನ: ಶನಿವಾರ

English summary

Weekly Rashi Bhavishya for September 15th to September 21st

Horoscope is an astrological chart or diagram representing the positions of the Sun, Moon, planets, astrological aspects and sensitive angles at the time of an event, such as the moment of a person's birth. The word horoscope is derived from Greek words "wpa" and scopos meaning "time" and "observer".
Story first published: Sunday, September 15, 2019, 7:00 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more