For Quick Alerts
ALLOW NOTIFICATIONS  
For Daily Alerts

ಅಡುಗೆ ಮನೆಯಲ್ಲಿ ಔಷಧಿಯಿಟ್ಟರೆ ನಿಮ್ಮ ಆರೋಗ್ಯ ಕೈ ಕೊಡುವುದರಲ್ಲಿ ಸಂಶಯವಿಲ್ಲ!

|

ಮನೆ ಎಂಬುದು ನಾವೆಲ್ಲರೂ ಜೀವನ ಮಾಡುವಂತಹ ಜಾಗ. ಇಲ್ಲಿ ಸಕಾರಾತ್ಮಕಕ್ತೆ ತುಂಬಿರುವುದು ಬಹಳ ಮುಖ್ಯ. ಆದರೆ ನಾವು ಪ್ರತಿನಿತ್ಯ ಮಾಡುವ ಸಣ್ಣಪುಟ್ಟ ತಪ್ಪುಗಳು ನಮ್ಮ ಮನೆ-ಮನವನ್ನು ಹಾಳುಮಾಡುವಂತಹ ಕಾರ್ಯ ಮಾಡಿಬಿಡುತ್ತವೆ. ಇದು ಹೆಚ್ಚಾಗಿ ಗೊತ್ತಿದ್ದು ಗೊತ್ತಿದ್ದೂ ಮಾಡುವ ತಪ್ಪೇ ಆಗಿರುತ್ತದೆ. ಅದು ಮನೆಮುಂದೆ ಬಿಡುವ ಶೂಗಳು ಆಗಿರಬಹುದು ಅಥವಾ ಅಡುಗೆ ಮನೆ ಅಸ್ತವ್ಯಸ್ತವಾಗಿರುವುದು ಆಗಿರಬಹುದು. ಇವುಗಳ ಕುರಿತು ನಮಗೆ ಅರಿವಿದ್ದರೆ ಆ ಕೆಲಸ ಮಾಡಲು ಮುಂದಾಗುವುದಿಲ್ಲ. ಆದ್ದರಿಂದ ನಿಮ್ಮ ಮನೆ ಸುಖ-ಶಾಂತಿ-ನೆಮ್ಮದಿಯಿಂದ ಕೂಡಿರಲು ವಾಸ್ತು ಶಾಸ್ತ್ರವು ಅತ್ಯಗತ್ಯವಾಗಿರುತ್ತದೆ.
ವಾಸ್ತು ಮಾರ್ಗದರ್ಶನವು ಮನೆಯ ನಿರ್ಮಾಣವನ್ನು ಪ್ರಾರಂಭಿಸುವ ಸಮಯದಲ್ಲಿಯೇ ಪ್ರಾರಂಭವಾಗುತ್ತದೆಯಾದರೂ, ಈಗಾಗಲೇ ನಿರ್ಮಿಸಿದ ಮನೆಯಲ್ಲಿ ವಾಸ್ತುವನ್ನು ಪಾಲಿಸಲು ಬಯಸುವವರಿಗೆ, ಅದನ್ನು ಈ ಕೆಳಗಿನ 10 ವಿಧಾನಗಳಲ್ಲಿ ಮಾಡಬಹುದು:

ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಉತ್ತೇಜಿಸುವ ಸಂಗತಿಗಳು:

1. ವಾಸ್ತು ಸ್ನೇಹಿ ಸಸ್ಯಗಳು:

1. ವಾಸ್ತು ಸ್ನೇಹಿ ಸಸ್ಯಗಳು:

ಮನೆಯ ವಾಸ್ತು ಹೆಚ್ಚಿಸಲು ಕೆಲವು ರೀತಿಯ ಗಿಡಗಳಿವೆ. ಇವುಗಳಲ್ಲಿ ವ್ಯಾಪಕವಾಗಿ ಕಂಡುಬರುವ ಅತ್ಯಂತ ಜನಪ್ರಿಯವಾದದ್ದು ಅಂದ್ರೆ ಮನಿ ಪ್ಲಾಂಟ್. ಮನಿ ಪ್ಲಾಂಟ್ ಮನೆಯಲ್ಲಿ ಸಂಪತ್ತು ಮತ್ತು ಸಮೃದ್ಧಿಯನ್ನು ಉತ್ತೇಜಿಸುವ ಶಕ್ತಿಯನ್ನು ಆಕರ್ಷಿಸುತ್ತದೆ. ಆದ್ದರಿಂದ ನಿಮ್ಮ ಮನೆಯ ಎದುರು ಈ ಗಿಡವನ್ನು ನೆಡುವುದು ಉತ್ತಮವಾಗಿದೆ.

2. ಮರದ ಸೂರ್ಯ:

2. ಮರದ ಸೂರ್ಯ:

ನಿಮ್ಮ ಮನೆಯ ಪೂರ್ವ ಗೋಡೆಯ ಮೇಲೆ ಸೂರ್ಯನನ್ನು ಪ್ರತಿನಿಧಿಸುವ ಮರದ ಕಲಾಕೃತಿಗಳನ್ನು ಇಡುವುದರಿಂದ, ನಿಮ್ಮ ಮನೆಯಲ್ಲಿ ಗುಣಪಡಿಸುವ ಶಕ್ತಿಯನ್ನು ಹೆಚ್ಚಾಗುತ್ತದೆ. ಆದ್ದರಿಂದ ನಿಮ್ಮ ಮನೆಯ ಒಳಗೆ ಸೂರ್ಯನ ಕಲಾಕೃತಿಯನ್ನು ಇರಿಸಿ.

3. ನೀರೊಳಗೆ ಜೀವವನ್ನು ಸಾಕಿ:

3. ನೀರೊಳಗೆ ಜೀವವನ್ನು ಸಾಕಿ:

ಮೀನುಗಳು ಮತ್ತು ಆಮೆಗಳು ನಿಮ್ಮ ಮನೆಯಲ್ಲಿರುವ ಕೆಲವು ನಕಾರಾತ್ಮಕ ಶಕ್ತಿಯನ್ನು ಹೊರಹಾಕುತ್ತವೆ ಎಂದು ಹೇಳಲಾಗುತ್ತದೆ. ಆದ್ದರಿಂದ, ನಿಮ್ಮ ಮನೆಯಲ್ಲಿ ಅಕ್ವೇರಿಯಂ ಇಡುವುದು ಖಂಡಿತ ಒಳ್ಳೆಯದು. ನಿಮ್ಮ ಶಕ್ತಿಗನುಸಾರವಾಗಿ ಅಕ್ವೇರಿಯಂ ಇಡುವುದು ಉತ್ತಮ.

4. ಗಾಳಿಯಿಂದ ಅದೃಷ್ಟ:

4. ಗಾಳಿಯಿಂದ ಅದೃಷ್ಟ:

ಮನೆಗೆ ಬರುವ ಗಾಳಿಯು ಅದೃಷ್ಟವನ್ನು ತರುತ್ತದೆ. ಅದು ಒಳ್ಳೆಯದು ಇರಬಹುದು ಮತ್ತು ಕೆಟ್ಟದು ಇರಬಹುದು. ಆದರೂ ಕೆಲವು "ವಿಂಡ್ ಚೈಮ್ಸ್" ಅನ್ನು ತೆರೆದ ಸ್ಥಳದಲ್ಲಿ ಇಡುವುದರಿಂದ ನಿಮ್ಮ ಮನೆಗೆ ಗಾಳಿಯ ಮೂಲಕ ಅದೃಷ್ಟ ಬರುತ್ತದೆ. ಈ ವಿಂಡ್ ಚೈನ್ ಸಕಾರಾತ್ಮಕ ಶಕ್ತಿಯನ್ನು ಮಾತ್ರ ಆಕರ್ಷಿಸುತ್ತದೆ.

5. ಸಮೃದ್ಧ ಸುರಕ್ಷಿತ ತಿಜೋರಿ

5. ಸಮೃದ್ಧ ಸುರಕ್ಷಿತ ತಿಜೋರಿ

ಸಂಪತ್ತು ಮತ್ತು ಸಮೃದ್ಧಿಯನ್ನು ಆಕರ್ಷಿಸಲು ಸ್ವರ್ಗದ ಖಜಾಂಚಿಯಾಗಿರುವ ಕುಬೇರ ದೇವನ ವಿಗ್ರಹವನ್ನು ನಿಮ್ಮ ತಿಜೋರಿಯಲ್ಲಿ ಇರಿಸಿ. ಇದರಿಂದ ನಿಮ್ಮ ಮನೆಗೆ ಸಮೃದ್ಧತೆಯನ್ನು ಸ್ವಾಗತಿಸುತ್ತದೆ.

6. ಸ್ವಚ್ಛ ಮನೆ:

6. ಸ್ವಚ್ಛ ಮನೆ:

ಸ್ವಚ್ಛ ಮತ್ತು ಗೊಂದಲವಿಲ್ಲದ ಮನೆ ಮಾತ್ರ ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಅಸ್ತವ್ಯಸ್ತತೆ ಮತ್ತು ಕಾರ್ಯನಿರ್ವಹಿಸದ ಎಲೆಕ್ಟ್ರಾನಿಕ್ ವಸ್ತುಗಳನ್ನು ಹೊಂದಿರುವ ಮನೆ ದುರುದ್ದೇಶಪೂರಿತ ಶಕ್ತಿಯನ್ನು ಹೊಂದಿದೆ, ಅದು ಸಮೃದ್ಧಿಗೆ ಹಾನಿಕಾರಕವಾಗಿದೆ. ಆದ್ದರಿಂದ ಹಾಳಾದ ಕೆಟ್ಟುಹೋಗಿರುವ ಎಲೆಕ್ಟ್ರಾನಿಕ್ ವಸ್ತುಗಳನ್ನು ಮನೆಯಿಂದ ಹೊರಗೆ ಹಾಕಿ.

 7. ಶೂಗಳನ್ನು ಮನೆ ಹೊರಗೆ ಇರಿಸಿ:

7. ಶೂಗಳನ್ನು ಮನೆ ಹೊರಗೆ ಇರಿಸಿ:

ನಿಮ್ಮ ಮನೆಯ ಮುಂದೆ ಶೂ ಅಥವಾ ಚಪ್ಪಲಿ ತರದಿರಲು ಪ್ರಯತ್ನಿಸಿ, ಏಕೆಂದರೆ ಇವುಗಳು ಶನಿಯ ಶಕ್ತಿಯನ್ನು ಹೊಂದಿರುತ್ತವೆ. ಶೂಗಳನ್ನು ಮನೆಯ ಒಳಗೆ ತಂದರೆ ನಿಮ್ಮ ಜೀವನದಲ್ಲಿ ಮತ್ತು ಮನೆಯವರಿಗೆ ಯಶಸ್ಸು ದೊರೆಯುವುದು ವಿಳಂಬವಾಗಬಹುದು.

8. ಆರೋಗ್ಯಕರ ಅಡುಗೆಮನೆ ನಿರ್ವಹಿಸಿ:

8. ಆರೋಗ್ಯಕರ ಅಡುಗೆಮನೆ ನಿರ್ವಹಿಸಿ:

ಕಿಚನ್ ಎನ್ನುವುದು ಆಹಾರವನ್ನು ತಯಾರಿಸುವ ಸ್ಥಳವಾಗಿದ್ದು ಅದು ನಮಗೆ ಪೋಷಣೆಯನ್ನು ನೀಡುತ್ತದೆ. ಅಡುಗೆಮನೆಯಲ್ಲಿ ಯಾವುದೇ ಔಷಧಿಗಳಿಲ್ಲ ಎಂದು ಖಚಿತಪಡಿಸಿಕೊಳ್ಳಿ, ಇಲ್ಲದಿದ್ದರೆ ಅದು ನಿಮ್ಮ ಮನೆಯಲ್ಲಿರುವ ಕುಟುಂಬ ಸದಸ್ಯರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

9. ಕನ್ನಡಿಗಳು:

9. ಕನ್ನಡಿಗಳು:

ಮಲಗುವ ಕೋಣೆಯಲ್ಲಿನ ಕನ್ನಡಿಗಳು ದಂಪತಿಯ ನಡುವೆ ಗಲಾಟೆ ಉಂಟುಮಾಡುತ್ತವೆ. ಸಾಮರಸ್ಯವನ್ನು ಹಾಳುಮಾಡುವುದರಿಂದ ಕನ್ನಡಿಗಳನ್ನು ಸ್ನಾನಗೃಹದಲ್ಲಿ ಅಥವಾ ಮಲಗುವ ಕೋಣೆಯ ಹೊರಗೆ ಇಡಬೇಕು.

10. ಗೋಡೆಯ ಬಣ್ಣಗಳು:

10. ಗೋಡೆಯ ಬಣ್ಣಗಳು:

ನಿಮ್ಮ ಮನೆಯಲ್ಲಿ ಮಾನಸಿಕ ಶಾಂತಿ ಮತ್ತು ಆಧ್ಯಾತ್ಮಿಕ ಸಂತೋಷವನ್ನು ಉತ್ತೇಜಿಸಲು ಗಾಡವಾದ ಬಣ್ಣಗಳಿಗಿಂತ ಲೈಟ್ ಬಣ್ಣಗಳನ್ನು ಬಳಸುವುದು ಉತ್ತಮ. ನಿಮ್ಮ ಮನೆಯಲ್ಲಿ ವಾಸ್ತುವಿನ ಸಕಾರಾತ್ಮಕ ಪರಿಣಾಮಗಳನ್ನು ಸಂಯೋಜಿಸಲು ಇವು ಸಾಮಾನ್ಯವಾಗಿ ವಾಸ್ತು ಶಾಸ್ತ್ರದ ಸಲಹೆಗಳಾಗಿವೆ.

English summary

Ways To Make Your Home Vastu-Friendly In Kannada

Here we told about Ways to Make Your Home Vastu-Friendly in Kannada, red on
X
Desktop Bottom Promotion