For Quick Alerts
ALLOW NOTIFICATIONS  
For Daily Alerts

ಸೌರಮಾನ ಯುಗಾದಿಯಂದು ಈ ಸಮಯ ತುಂಬಾ ಪವಿತ್ರವಾದದ್ದು

|

ವಿಷು ಕೇರಳದ ಪ್ರಮುಖ ಹಬ್ಬವಾದರೂ ನಮ್ಮ ಕರ್ನಾಟಕದಲ್ಲೂ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುವುದು. ಮಂಗಳೂರಿನಲ್ಲಿ ಇದನ್ನು ಬಿಷು ಹಬ್ಬವೆಂದು ಆಚರಿಸಲಾಗುವುದು.

Vishu 2021 date

ನಮಗೆ ಯುಗಾದಿ ಹೊಸ ವರ್ಷವಾದರೆ ಕೇರಳಿಗರು ವಿಷುವನ್ನು ಹೊಸ ವರ್ಷವೆಂದು ಆಚರಿಸಲಾಗುವುದು. ಈ ವರ್ಷ ವಿಷುವನ್ನು ಏಪ್ರಿಲ್ 14, ಬುಧವಾರದಂದು ಆಚರಿಸಲಾಗುವುದು. ಇದನ್ನು ಸೌರಮಾನ ಯುಗಾದಿ ಎಂದು ಕೂಡ ಕರೆಯಲಾಗುವುದು.

ಸೌರಮಾನ ಯುಗಾದಿಯ ಮಹತ್ವ

ಸೌರಮಾನ ಯುಗಾದಿಯ ಮಹತ್ವ

ಜನವರಿ, ಫೆಬ್ರವರಿ ಎನ್ನುವುದು ಇಂಗ್ಲಿಷ್‌ ತಿಂಗಳ ಲೆಕ್ಕಾಚಾರವಾದರೆ ಪಂಚಾಂಗದ ಪ್ರಕಾರ ಮೀನ, ಮೇಷ ನಮ್ಮ ತಿಂಗಳುಗಳಾಗಿವೆ. ನಾವು ಆಚರಿಸುವ ಹಬ್ಬಗಳು, ಸಂಪ್ರದಾಯ ಎಲ್ಲವೂ ಈ ತಿಂಗಳುಗಳ ಆಧಾರದ ಮೇಲೆ ನಡೆಯುವುದು. ಸೌರಮಾನ ಯುಗಾದಿ ಎಂಬುವುದು ಹೊಸ ವರ್ಷದ ಆರಂಭವಾಗಿದೆ.

ಪ್ರತೀ ತಿಂಗಳು ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚಾರಿಸುತ್ತಾನೆ, ಇದನ್ನು ವೈದಿಕ ಭಾಷೆಯಲ್ಲಿ ಸೂರ್ಯ ಸಂಚಾರ ಎಂದು ಕರೆಯಲಾಗುವುದು.

ಸೌರಮಾನ ಯುಗಾದಿಗೆ ಸೂರ್ಯನು ಮೀನ ರಾಶಿಯಿಂದ ಮೇಷ ರಾಶಿಗೆ ಪ್ರವೇಶಿಸುತ್ತಾನೆ. ಸೂರ್ಯ ಮೇಷ ರಾಶಿಯಿಂದ ಸಂಚಾರ ಪ್ರಾರಂಭಿಸುವುದರಿಂದ ಸೌರಮಾನ ಯುಗಾದಿಯನ್ನು ಹೊಸ ವರ್ಷವೆಂದು ಪರಿಗಣಿಸಲಾಗಿದೆ.

ಸೌರಮಾನ ಯುಗಾದಿಯ ಈ ಸಮಯ ತುಂಬಾ ಪವಿತ್ರವಾದದ್ದು

ಸೌರಮಾನ ಯುಗಾದಿಯ ಈ ಸಮಯ ತುಂಬಾ ಪವಿತ್ರವಾದದ್ದು

ಸೌರಮಾನ ಯುಗಾದಿಯ ಸಂಕ್ರಾಂತಿಯ ಸಮಯ ತುಂಬಾ ಪವಿತ್ರ ಎಂದು ಪರಿಗಣಿಸಲಾಗುವುದು. ಸಂಕ್ರಾಂತಿ ಸಮಯದ 10 ನಿಮಿಷಕ್ಕೆ ಮುಂಚೆ ಹಾಗೂ ಸಂಕ್ರಾಂತಿ ಸಮಯದ ನಂತರ 10 ನಿಮಿಷವನ್ನು ಅತ್ಯಂತ ಪವಿತ್ರ ಸಮಯವೆಂದು ಹೇಳಲಾಗುವುದು. ಈ ಸಮಯದಲ್ಲಿ ಗೃಹ ಪ್ರವೇಶ ಮುಂತಾದ ಶುಭ ಕಾರ್ಯಕ್ಕೆ ತುಂಬಾ ಯೋಗ್ಯವಾದ ಸಮಯವೆಂದು ಪರಿಗಣಿಸಲಾಗಿದೆ.

ಮೇಷ ಸಂಕ್ರಾಂತಿ ಪುಣ್ಯ ಕಾಲ: ಬೆಳಗ್ಗೆ 05:46ರಿಂದ ಮಧ್ಯಾಹ್ನ 12:07ರವರೆಗೆ

ಮೇಷ ಸಂಕ್ರಾಂತಿ ಮಹಾ ಪುಣ್ಯಕಾಲ: ಬೆಳಗ್ಗೆ 05:46ರಿಂದ 07:53ರವರೆಗೆ

ವಿಷು ಕಣಿ

ವಿಷು ಕಣಿ

ಇನ್ನು ಕೇರಳದಲ್ಲಿ ಈ ದಿನ ವಿಷು ಕಣಿ ಇಡಲಾಗುವುದು. ಸೌರಮಾನ ಯುಗಾದಿ ಎಂದರೆ ಹೊಸ ವರ್ಷ, ಈ ಹೊಸ ವರ್ಷದಂದು ಶುಭ ಹಾಗೂ ಅದೃಷ್ಟದ ವಸ್ತುಗಳನ್ನು ಮೊದಲು ನೋಡಬೇಕು, ಇದರಿಂದ ವರ್ಷ ಪೂರ್ತಿ ಸಂಪತ್ತು, ಸಮೃದ್ಧಿ, ಖುಷಿ ಇರುತ್ತದೆ ಎಂಬ ನಂಬಿಕೆ.

ಈ ದಿನ ರಾತ್ರಿಯೇ ಮನೆಯಲ್ಲಿ ಅಮ್ಮ ಒಂದು ಹಿತ್ತಾಳೆ ಪಾತ್ರೆಯಲ್ಲಿ ಆರಗು ಹೂ ಇಟ್ಟು (golden shower tree) ಅದರಲ್ಲಿ ಹೊಸ ಫಲ ಅಂದ್ರೆ ಮಾವು, ಹಲಸು, ಹಣ್ಣುಗಳು, ಹೊಸ ತರಕಾರಿ ಎಲ್ಲವನ್ನು ಇಟ್ಟು, ಹೊಸ ಬಟ್ಟೆ, ಚಿನ್ನ, ಬೆಳ್ಳಿ, ಹಣ ಎಲ್ಲವನ್ನು ಕೃಷ್ಣ ವಿಗ್ರಹ ಮುಂದೆ ಇಡಲಾಗುವುದು.

ಬೆಳಗ್ಗೆ ಬೇಗನೆ ಎದ್ದ ದೀಪವನ್ನು ಹಚ್ಚಿ, ಮನೆ ಮಂದಿಯ ಕಣ್ಣು ಮುಚ್ಚಿ ಆ ವಿಷು ಕಣಿ ಮುಂದೆ ತಂದು ಅವರನ್ನು ಬಿಡಲಾಗುವುದು. ಅವರು ಕಣ್ಣು ಬಿಟ್ಟ ತಕ್ಷಣ ಕಾಣುವುದು ವಿಷು ಕಣಿ. ಈ ದರ್ಶನ ಕಾಣುವುದರಿಂದ ವರ್ಷ ಪೂರ್ತಿ ಒಳ್ಳೆಯದಾಗುತ್ತದೆ ಎಂಬ ನಂಬಿಕೆ.

ನಂತರ ಈ ದಿನ ವಿವಿಧ ಭಕ್ಷ್ಯ ಮಾಡಿ ಮನೆ ಮಂದಿಯೆಲ್ಲಾ ಸೇರಿ ಸವಿಯಲಾಗುವುದು.

English summary

Vishu 2021 Date, Rituals and Customs of Vishu Festival

Here are Vishu 2021 date, rituals and customs of Vishu festival, Read on...
X
Desktop Bottom Promotion